in

ಈ ರಾಹು ಕೇತು ಯಾರು? ರಾಹು ಕಾಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಏಕೆ ?

ಈ ರಾಹು ಕೇತು ಯಾರು? ರಾಹು ಕಾಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಏಕೆ ?

ರಾಹು ಅತೀ ಕುಟಿಲ ಸ್ವಭಾವದವನು ಎಂದು ತಿಳಿಸುತ್ತದೆ ಪುರಾಣ. ಜಾತಕದಲ್ಲಿ ರಾಹುದೋಷ ಎಂದ ಕ್ಷಣ ಒಂದು ಸಲಕ್ಕೆ ಭಯ ಪಡುವ ಸಂದರ್ಭ ಖಂಡಿತಾ ಬರುತ್ತದೆ. ಅತೀ ಸುಲಭವಾಗಿ ಎಂತಹ ಶಕ್ತಿಯನ್ನಾದಾರು ತನ್ನ ಪ್ರಭಾವಕ್ಕೆ ಒಳಪಡಿಸುವ ತಾಕತ್ತು ರಾಹುಗಿದೆ. ಹಾಗಾದರೆ ಈ ರಾಹು ಯಾರು? ಮೊದಲು ರಾಹು ಒಬ್ಬನೇ ಇದ್ದವನು ,ಹೇಗೆ ರಾಹು ಕೇತು ಎಂದು ಕೂಡಿಸಿ ಕರೆಯುತ್ತೇವೆ? ಇದಕ್ಕೆ ಕೂಡ ಒಂದು ಪುರಾಣದ ಕಥೆ ಇದೆ.
ಹಿಂದೂ ನಂಬಿಕೆಯ ಪ್ರಕಾರ, ರಾಹು ಎಂಬುದು ಸೂರ್ಯ ಅಥವಾ ಚಂದ್ರನನ್ನು ನುಂಗಿ ಗ್ರಹಣಗಳನ್ನು ಉಂಟುಮಾಡುವ ಒಂದು ಹಾವು. ರಾಹುವನ್ನು, ಎಂಟು ಕಪ್ಪು ಕುದುರೆಗಳ ರಥವನ್ನು ಓಡಿಸುತ್ತಿರುವ, ದೇಹವಿಲ್ಲದ ಒಂದು ಡ್ರ್ಯಾಗನ್ ಆಗಿ ಚಿತ್ರಕಲೆಯಲ್ಲಿ ಮೂಡಿಸಲಾಗಿದೆ. ವೇದ ಜ್ಯೋತಿಶ್ಶಾಸ್ತ್ರದಲ್ಲಿ ರಾಹು ನವಗ್ರಹಗಳಲ್ಲಿ(ಒಂಬತ್ತು ಗ್ರಹಗಳು) ಒಂದಾಗಿದೆ. ರಾಹು ಕಾಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಈ ರಾಹು ಕೇತು ಯಾರು? ರಾಹು ಕಾಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ ಏಕೆ ?
ರಾಹು ಕೇತು

ಮೊದಲೇ ಹೇಳಿದ ಹಾಗೆ ರಾಹುವನ್ನು, ಮೋಸ ಪ್ರವೃತ್ತಿಯ ಒಬ್ಬ ಪೌರಾಣಿಕ ನಾಯಕನೆಂದು ಪರಿಗಣಿಸಲಾಗಿದೆ. ಈತ ಮೋಸ ಮಾಡುವವರು, ಕೇವಲ ಸಂತೋಷವನ್ನು ಅರಸುವವರು, ಪರಕೀಯರ ಭೂಮಿಯನ್ನು ಕಬಳಿಸುವವರು, ಮಾದಕದ್ರವ್ಯಗಳ ಮಾರಾಟಗಾರರು, ವಿಷವನ್ನು ಮಾರಾಟ ಮಾಡುವವರು, ಅಪ್ರಾಮಾಣಿಕರು ಮತ್ತು ಅನೈತಿಕ ಚಟುವಟಿಕೆಗಳನ್ನು ನಡೆಸುವವರು ಮುಂತಾದವರನ್ನು ಈತ ಪ್ರತಿನಿಧಿಸುತ್ತಾನೆ. ಈತ ಅಧರ್ಮೀಯ, ಬಹಿಷ್ಕೃತ, ಕಠಿಣ ಮಾತು, ಭ್ರಾಂತಿಕಾರಕತೆ, ಅಸತ್ಯ, ಅಶುಚಿತ್ವ, ಹೊಟ್ಟೆಯ ಹುಣ್ಣುಗಳು, ಮೂಳೆಗಳು, ಹಾಗು ದೇಹಾಂತರ ವೇಷಧಾರಿ ರೂಪವನ್ನು ಸೂಚಿಸುತ್ತಾನೆ. ರಾಹು, ಬೇರೊಬ್ಬರ ಶಕ್ತಿಯನ್ನು ಬಲಪಡಿಸುವಲ್ಲಿ ಹಾಗು ಒಬ್ಬ ಸ್ನೇಹಿತನನ್ನು ಶತ್ರುವನ್ನಾಗಿ ಬದಲಿಸಲು ಕಾರಣೀಭೂತವಾಗಿದ್ದಾನೆ. ವಿಷಕಾರಿ ಹಾವು ಕಡಿತಗಳನ್ನು ರಾಹುವಿನ ಕೃಪೆಯಿಂದ ಗುಣಪಡಿಸಬಹುದು. ಬೌದ್ಧಧರ್ಮದಲ್ಲಿ, ರಾಹು ಕ್ರೋಧದೇವತೆಗಳಲ್ಲಿ ಒಂದೆನಿಸಿದೆ.

ಸಮುದ್ರ ಮಂಥನದಿಂದ ಬಂದ ಅಮೃತ

rahu
ರಾಹು

ಅಸುರರ ಕೈಗೆ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, ದೇವತೆಗಳು ವಿಷ್ಣುವಿಗೆ ಮನವಿ ಮಾಡಿದರು,ವಿಷ್ಣು ಮೋಹಿನಿ ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು . ರಾಹು ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸ್ಸಿನಿಂದ, ಸೂರ್ಯ ಹಾಗು ಚಂದ್ರ ಇದನ್ನು ಗಮನಿಸಿ, ಮೋಹಿನಿಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, ಮೋಹಿನಿಯು ಸುದರ್ಶನ ಚಕ್ರದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ.

ಖಗೋಳ ವಿಜ್ಞಾನ ರೀತ್ಯಾ, ರಾಹು ಹಾಗು ಕೇತು, ಸೂರ್ಯ ಹಾಗು ಚಂದ್ರರು ಖಗೋಳಕ್ಕೆ ನೀಲಾಕಾಶ ಪರಿಧಿಯಲ್ಲಿ ಚಲಿಸುವಾಗ ಅವರ ಮಾರ್ಗಗಳಲ್ಲಿ ಉಂಟಾಗುವ ಎರಡು ಛೇದಕ ಬಿಂದುಗಳನ್ನು ಸೂಚಿಸುತ್ತವೆ. ಹೀಗಾಗಿ, ರಾಹು ಹಾಗು ಕೇತುವನ್ನು ಕ್ರಮವಾಗಿ ಉತ್ತರ ಹಾಗು ದಕ್ಷಿಣ ಚಾಂದ್ರ ಸಂಪಾತಗಳೆಂದು ಕರೆಯಲಾಗುತ್ತದೆ. ಸೂರ್ಯ ಹಾಗು ಚಂದ್ರರು ಈ ಎರಡರಲ್ಲಿ ಒಂದು ಬಿಂದುವಿನಲ್ಲಿದ್ದಾಗಿ ಗ್ರಹಣಗಳು ಉಂಟಾಗುತ್ತದೆಂಬ ವಾಸ್ತವವು, ಸೂರ್ಯನು ಹಾವಿನಿಂದ ನುಂಗಲ್ಪಟ್ಟನೆಂಬ ಪುರಾಣದ ಉಗಮಕ್ಕೆ ದಾರಿ ಮಾಡಿಕೊಟ್ಟಿದೆ.

ಶಿವ ಹಾಗೂ ರಾಹುವಿನ ಪುರಾಣ

ದೈತ್ಯ ರಾಜ ಜಲಂಧರನ ಪೌರಾಣಿಕ ಕಥೆಯಲ್ಲಿ ಬರುವಂತೆ, ಜಲಂಧರನು ರಾಹುವನ್ನು ಶಿವನ ಬಳಿಗೆ ಕಳುಹಿಸಿ, ಆತನ ಮೂಲಕ ಪಾರ್ವತಿಯನ್ನು ಜಲಂಧರನಿಗೆ ಒಪ್ಪಿಸಬೇಕೆಂಬ ಸಂದೇಶ ನೀಡುತ್ತಾನೆ. ಈ ಸಂದೇಶದಿಂದ ಶಿವನು ಕೊಪೋದ್ರಿಕ್ತನಾಗುತ್ತಾನೆ, ಆಗ ಕೋಪವು ಆತನ ಲಲಾಟದಿಂದ(ಹಣೆಯಿಂದ) ಹುಟ್ಟಿಕೊಂಡ ಒಂದು ಭಯಾನಕ ಜೀವಿಯ ರೂಪವನ್ನು ತಾಳುತ್ತದೆ. ಇದು ಸಿಂಹದ ಮುಖವನ್ನು, ಉರಿಯುತ್ತಿರುವ ಕಣ್ಣುಗಳು, ಸ್ಪರ್ಶಿಸಲು ಒರಟಾಗಿದ್ದ ಶುಷ್ಕವಾದ ದೇಹ, ಉದ್ದನೆಯ ತೋಳುಗಳು ಹಾಗು ಕೋಪದಿಂದ ಜೋಲುಬೀಳುತ್ತಿದ್ದ ನಾಲಗೆಯನ್ನು ಹೊಂದಿತ್ತು. ಈ ಭಯಾನಕ ಜೀವಿಯು ರಾಹುವಿನೆಡೆಗೆ ನುಗ್ಗಿ ಬರುವುದರ ಜೊತೆಗೆ ಆತನನ್ನು ನುಂಗಲು ತಯಾರಾಯಿತು. “ನಾವು ದೂತರನ್ನು ಕೊಲ್ಲುವುದಿಲ್ಲ” ಎಂಬ ಶಿವನ ಸ್ಪಷ್ಟ ನುಡಿಗಳನ್ನು ಕೇಳಿದ ನಂತರ ಗಣವು ಶಿವನನ್ನು ಪ್ರಾರ್ಥಿಸಿ, ಅದು ಹಸಿವೆಯಿಂದ ಯಾತನೆಯನ್ನು ಅನುಭವಿಸುತ್ತಿದೆಯೆಂದು ಹೇಳಿತು. ಗಣಕ್ಕೆ ಶಿವನು, ಆ ಜೀವಿಯು ಅಷ್ಟೊಂದು ಹಸಿವೆಯಿಂದ ಬಳಲುತ್ತಿದ್ದರೆ, ಅದು ತನ್ನದೇ ಆದ ಮಾಂಸವನ್ನು ಭಕ್ಷಿಸಬೇಕೆಂದು ಹೇಳುತ್ತಾನೆ. ಆತನ ಮಾತುಗಳಂತೆ ಗಣವು ನಡೆದುಕೊಂಡಿತು, ಅದು ತಲೆ ಭಾಗವನ್ನು ಬಿಟ್ಟು ಬೇರೆಲ್ಲವನ್ನು ನುಂಗಿ ಹಾಕಿತು. ಇದರ ಭಕ್ತಿಗೆ ಮೆಚ್ಚಿದ ಶಿವನು, ಇದನ್ನು ತನ್ನ ದ್ವಾರಪಾಲಕನನ್ನಾಗಿ ನೇಮಿಸಿ, ಎಲ್ಲ ಕ್ರೂರ ಜನರಿಗೆ ಭಯವನ್ನು ಉಂಟುಮಾಡಬೇಕೆಂದು ಆದೇಶಿಸಿದ. ಶಿವನು ತನ್ನನ್ನು ಪೂಜಿಸುವುದರೊಂದಿಗೆ ಗಣವನ್ನು ಆರಾಧಿಸಬೇಕೆಂದು ಕಟ್ಟಳೆ ಹಾಕುವುದರ ಜೊತೆಗೆ ಅದಕ್ಕೆ ಕೀರ್ತಿಮುಖ ಎಂಬ ಹೆಸರನ್ನು ನೀಡಿದ.

ಹನುಮಾನ್ ಹಾಗೂ ರಾಹು
ಹನುಮಾನ್ ತನ್ನ ಬಾಲ್ಯದಲ್ಲಿ, ಸೂರ್ಯನು ಒಂದು ದೊಡ್ಡ ಹಣ್ಣೆಂಬ ಭ್ರಮೆಯಿಂದ ಆತನೆಡೆಗೆ ನೆಗೆದು ಹಿಡಿಯಲು ಪ್ರಯತ್ನಿಸಿದ್ದ. ಆ ದಿವಸ ಸೂರ್ಯ ಗ್ರಹಣವಾದ್ದರಿಂದ, ರಾಹು ಸೂರ್ಯನನ್ನು ನುಂಗಬೇಕಿತ್ತು. ಹನುಮಂತನು ಸೂರ್ಯನನ್ನು ನುಂಗಲು ಪ್ರಯತ್ನಿಸುತ್ತಿದ್ದುದನ್ನು ರಾಹು ನೋಡುತ್ತಾನೆ. ರಾಹುವನ್ನು ನೋಡಿದ ಬಾಲಕ ಹನುಮಂತ, ಅದರ ಪ್ರತ್ಯೇಕಗೊಂಡ ತಲೆ ಕಂಡು ಕುತೂಹಲದಿಂದ ಆಕರ್ಷಿತನಾಗಿ, ರಾಹುವನ್ನು ಹಿಡಿದುಕೊಳ್ಳುತ್ತಾನೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

23 Comments

  1. Link pyramid, tier 1, tier 2, tier 3
    Tier 1 – 500 references with integration inside articles on content platforms

    Secondary – 3000 web address +Redirect links

    Tertiary – 20000 hyperlinks mix, posts, posts

    Utilizing a link hierarchy is beneficial for online directories.

    Need:

    One link to the site.

    Key Phrases.

    Valid when 1 key phrase from the website topic.

    Highlight the additional service!

    Vital! Primary references do not intersect with Secondary and Tertiary-level hyperlinks

    A link hierarchy is a device for boosting the circulation and backlink portfolio of a internet domain or social network

  2. Refillable cosmetic packaging can help companies reduce their impact and is a great way to engage with customers and build value for the product. It allows companies to drastically cut down the impact of plastics while encouraging customers to continue returning to and reusing the product.  Inspired by global trends for naturally derived and sustainable personal care formulations, texturpure sa-1 delivers a smooth, viscous texture with a clean break on pouring, and suspension of oils and actives in shampoos and cleansing systems. Spin the Globe Project Hi! I’m a blogger, wife, coffee lover, and dog mama from Milwaukee, Wisconsin. I’m passionate about clean beauty, natural skincare, sustainable living, and holistic health. Welcome! Many consumers value ethical businesses that are committed to preserving the environment, and the cosmetics industry is no exception. When it comes to skincare and beauty products, customers are increasingly looking for eco-friendly cosmetic packaging that uses sustainable materials to protect the planet.
    https://juliet-wiki.win/index.php?title=Loreal_hydrofuge_telescopic_mascara
    Creator Brush Series Make Up For Ever ₨ 1,999.00 ₨ 1,499.00 This is the rounded end of the Huda Beauty Build and Buff Foundation Brush, which is known as being the ‘Buff’ Brush, which features a rounded brush head with a flat surface and rounded edges. It has densely-packed bristles that make for optimal application for seamless buffing and blending. The Huda Beauty Build and Buff Foundation Brush launched back in October, alongside the Water Jelly Primer and #FauxFilter Foundation Sticks, both of which I’ve already reviewed here on my blog. This brush was created to work seamlessly with their new foundation sticks, and it’s an amazing two in one makeup brush. Creator Brush Series Makeup brings out the beauty of your facial features while concealing imperfections, so you can put your best face forward. Walgreens can help you select the right cosmetics to flatter your skin tone and eye and hair color, so you can create gorgeous finishes for day or night.

  3. Bet Zula, canl? bahis konusunda benzersiz secenekler sunar. en heyecanl? maclar icin en h?zl? sekilde kazanma sans?n?z? art?rabilirsiniz.

    Betzula’n?n h?zl? odeme yontemleri, kullan?c?lar?na her zaman kolayl?k saglar. Betzula Twitter hesab?n? takip ederek ozel promosyonlardan haberdar olabilirsiniz.

    en onemli spor etkinliklerinin en iyi oranlarla kazanc saglayabilirsiniz.

    Ayr?ca, Betzula guncel giris adresi, kesintisiz bahis deneyimi sunar. Ozel olarak, [url=https://antalyanotebookservis.net/]fenerbahce galatasaray betzula[/url], tum bahis severler icin en iyi cozum.

    Betzula, spor bahislerinden canl? casino oyunlar?na kadar en iyi deneyimi yasatmay? amaclar. favori tak?m?n?z?n galibiyetini kutlamak icin Betzula ile kazanmaya baslay?n!
    371212+

ತುಳುನಾಡಿನಲ್ಲಿ ಬಲೀಂದ್ರ ಕರೆಯುವ ಪದ್ಧತಿ ಇದೆ

ತುಳುನಾಡಿನಲ್ಲಿ ಬಲೀಂದ್ರ ಕರೆಯುವ ಪದ್ಧತಿ ಇದೆ

ಪಾಂಚಾಲ ದೇಶದ ರಾಜಕುಮಾರಿ, ಪಂಚ ಪಾಂಡವರ ಪತ್ನಿ ದ್ರೌಪದಿ

ಪಾಂಚಾಲ ದೇಶದ ರಾಜಕುಮಾರಿ, ಪಂಚ ಪಾಂಡವರ ಪತ್ನಿ ದ್ರೌಪದಿ