in

ಪರಶುರಾಮ ಯಾರು? ಪರಶುರಾಮ ಅವತಾರದ ಕಥೆ

ಪರಶುರಾಮರ ಜನ್ಮಸ್ಥಳ ರೇಣುಕಾತೀರ್ಥ. ಈಗಿನ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮನ ಗುಡ್ಡದಬಳಿಯ ಪರಶುಘಡ. ಆಧುನಿಕ ಮಹೇಶ್ವರದಲ್ಲಿ ಅವರ ವಂಶಾವಳಿ ನಡೆಯಿತು ಎಂಬುದಾಗಿ ಪ್ರಸ್ತಾಪಿಸಲಾಗಿದೆ. ಅವರ ತಂದೆ ಋಷಿ ಜಮದಗ್ನಿ ಬ್ರಹ್ಮದೇವರ ತಲೆಮಾರಿನವರಾಗಿದ್ದರು.

ಮಹಾವಿಷ್ಣು ಲೋಕಕಲ್ಯಾಣಕ್ಕಾಗಿ ಎತ್ತಿದ ಒಂದೊಂದು ಅವತಾರವೂ ಅತ್ಯಂತ ರೋಚಕ. ಶ್ರೀಮನ್ನಾರಾಯಣನ ಆರನೇ ಅವತಾರವೇ ಪರಶುರಾಮ. ಅತ್ಯಂತ ಬಲಿಷ್ಠನೂ, ವಿನಯಶಾಲಿಯೂ ಆಗಿದ್ದ ಪರಶುರಾಮ ಭ್ರಷ್ಟ ಕ್ಷತ್ರಿಯರನ್ನೆಲ್ಲಾ ಸದೆಬಡಿವ ಉದ್ದೇಶದಿಂದ ತ್ರೇತಾಯುಗದಲ್ಲಿ ಜನಿಸಿದ ಅಂತ ಪುರಾಣಗಳು ಹೇಳುತ್ತವೆ. ಏಳು ಜನ ಚಿರಂಜೀವಿಗಳ ಪೈಕಿ ಪರಶುರಾಮರೂ ಸಹ ಒಬ್ಬರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹುಟ್ಟುವಾಗಲೇ ಬ್ರಾಹ್ಮಣರಾಗಿದ್ದರೂ, ಕ್ಷತ್ರಿಯರ ಆಕ್ರಮಶೀಲತೆ ಮತ್ತು ಧೈರ್ಯ ಪರಶುರಾಮನಿಗೆ ಇದ್ದುದರಿಂದ ಬ್ರಹ್ಮ ಕ್ಷತ್ರಿಯನೆಂಬ ಹೆಸರನ್ನೂ ಪರಶುರಾಮ ಪಡೆದುಕೊಂಡಿದ್ದಾರೆ. ಯುದ್ಧ, ವಿದ್ಯಾ ಪರಿಣಿತನಾಗಿದ್ದ ಪರಶುರಾಮ ಭ್ರಷ್ಟ ಯೋಧರಿಗೆ ಸಿಂಹಸ್ವಪ್ನ ಎಂದೆನಿಸಿದ್ದರು. ತಮ್ಮ ದಾರಿಗೆ ಅಡ್ಡ ಬರುವಂತಹ ಕ್ಷತ್ರಿಯ ರಾಜರನ್ನು ಕೊಲ್ಲುತ್ತಾ ಹೊರಟ ಪರಶುರಾಮ ಏಕೈಕ ರಾಜನನ್ನೂ ಬಿಟ್ಟಿಲ್ಲ ಎಂಬುದಾಗಿ ಪುರಾಣ ಹೇಳುತ್ತದೆ. ಇದರಿಂದಾಗಿ ಬ್ರಾಹ್ಮಣ ಜೀವನ ಶೈಲಿಯನ್ನು ಅವರು ಉಲ್ಲಂಘಿಸಿದ್ದರೆಂದು ಕೊಲೆಗಳಿಂದ ಅವರು ಕಳಂಕಿತರಾಗಿದ್ದರೆಂದು, ಇತರೆ ಬ್ರಾಹ್ಮಣರು ಅವರನ್ನು ದೂರವಿರಿಸಿದ್ದರು.

ತಂದೆಯ ಆಜ್ಞೆಯ ಮೇರೆಗೆ ಹೆತ್ತತಾಯಿಯ ಶಿರವನ್ನೇ ಕಡಿದ:

ಪರಶುರಾಮ ಯಾರು? ಪರಶುರಾಮ ಅವತಾರದ ಕಥೆ

ಒಂದಾನೊಂದು ಕಾಲದಲ್ಲಿ ಜಮದಗ್ನಿ ಎಂಬ ಮಹಾನ್ ಋಷಿಗಳಿದ್ದರು. ತಮ್ಮ ಭಕ್ತಿಸೇವೆಯಿಂದ ಭಗವಂತನ ಕೃಪೆಗೆ ಪಾತ್ರರಾಗಿದ್ದರು. ಅವರ ಪತ್ನಿ ರೇಣುಕಾ. ಅವರಿಗೆ ಅನೇಕ ಮಕ್ಕಳು. ಪರಶುರಾಮ ಕೊನೆಯ ಮಗ ಹಾಗೂ ಮಹಾ ವೀರ. ಒಮ್ಮೆ ಪರಶುರಾಮನ ತಾಯಿ ರೇಣುಕಾ ನೀರು ತರಲು ನದಿಗೆ ಹೋಗುತ್ತಾಳೆ ಅಲ್ಲಿ ಚಿತ್ರರಥನೆಂಬ ಗಂಧರ್ವನನ್ನು ನೋಡಿ ವ್ಯಾಮೋಹಗೊಂಡು ತಡವಾಗಿ ಆಶ್ರಮಕ್ಕೆ ಬಂದಳು. ಇದನ್ನು ಕಂಡ ತಂದೆ ಜಮದಗ್ನಿ ಅವಳ ಕತ್ತನ್ನು ಕತ್ತರಿಸಲು ಮಕ್ಕಳಿಗೆ ಆಜ್ಞಾಪಿಸಿದ. ನಾಲ್ವರು ಮಕ್ಕಳು ನಿರಾಕರಿಸಿದಾಗ ಪರಶುರಾಮ ತಂದೆಯ ಅಜ್ಞೆಯನ್ನು ನೆರವೇರಿಸಿದ. ತಂದೆ ಆ ನಾಲ್ವರಿಗೆ ಶಾಪವಿತ್ತು ಪರಶುರಾಮನಿಗೆ ವರ ಬೇಡುವಂತೆ ಕೇಳಿದ. ಕೂಡಲೆ ಈತ ತನ್ನ ತಾಯಿ ರೇಣುಕೆ ಬದುಕುವಂತೆಯೂ ಆಕೆಗೆ ಈ ಘಟನೆ ನೆನಪಿನಲ್ಲಿ ಉಳಿಯದಂತೆಯೂ ತನ್ನ ನಾಲ್ವರು ಅಣ್ಣಂದಿರು ಮೊದಲಿನ ಸ್ಥಿತಿಯನ್ನೇ ಪಡೆಯುವಂತೆಯೂ ಆಗಲೆಂದು ಕೇಳಿಕೊಂಡ. ಕೋಪವನ್ನು ಬಿಡಬೇಕೆಂದು ತಂದೆಯನ್ನು ಬೇಡಿಕೊಂಡ ತಂದೆ ಹಾಗೆಯೇ ಅನುಗ್ರಹಿಸಿದ.

ಅಶ್ವಮೇಧಯಾಗಮಾಡಿ ಗೆದ್ದ ಭೂಮಿಯನ್ನೆಲ್ಲಾ ಕಶ್ಯಪನಿಗೆ ದಾನ ಮಾಡಿದ. ತಂದೆಯ ಸಾವಿನಿಂದ ಅತ್ಯಂತ ದುಃಖಿತನಾದ ಪರಶುರಾಮ, ಶಿವನನ್ನು ಕುರಿತು ತಪಸ್ಸು ಮಾಡಿ  ತಾನು ಮಾಡಿದ ಪಾಪಗಳು ಪರಿಹಾರವಾಗಬೇಕು, ತನಗೆ ಸಾವು ಬರಬಾರದು ಎಂದು ಶಿವನಿಂದ ಅನುಗ್ರಹ ಪಡೆದ. ತಪಸ್ಸು ಮಾಡುತ್ತ ಈತ ಈಗಲೂ ಮಹೇಂದ್ರ ಪರ್ವತದಲ್ಲಿ ಇದ್ದಾನೆಂದು ನಂಬಿಕೆ.

ಕಾರ್ತವೀರ್ಯಾರ್ಜುನ ಜಮದಗ್ನಿಯ ಆಶ್ರಮಕ್ಕೆ ಬಂದು ಅತಿಥಿಸತ್ಕಾರ ಪಡೆದು ಅಲ್ಲಿದ್ದ ಕಪಿಲೆಯನ್ನು ತನಗೆ ಕೊಡಬೇಕೆಂದು ಬೇಡಿದ. ಜಮದಗ್ನಿ ಕೊಡಲು ನಿರಾಕರಿಸಿದ, ಯುದ್ಧ ಮಾಡಿ ಜಮದಗ್ನಿಯನ್ನು ಕೊಂದ ಕಾರ್ತವೀರ್ಯಾರ್ಜುನ. ಈ ವಿಷಯ ತಿಳಿದ ಪರುಶರಾಮ ಕೋಪಡಿಂದ ಕೂಡಲೆ ಮಾಹೀಷ್ಮತೀ ನಗರಕ್ಕೆ ಹೋಗಿ ಕಾರ್ತವೀರ್ಯಾರ್ಜುನನ ಸಾವಿರ ತೋಳುಗಳನ್ನು ಕತ್ತರಿಸಿ ಹಾಕಿದ. ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನೆಲ್ಲಾ ಕೊಂದು ಅವರ ರಕ್ತದಿಂದ ಪಿತೃತರ್ಪಣ ಕೊಟ್ಟ. ವಿವಾಹ ಮಾಡಿಕೊಂಡು ಹಿಂದಿರುಗುತ್ತಿದ್ದ ಶ್ರೀರಾಮನೊಡನೆ ಸೆಣಸಿ ಸೋತು ತನ್ನಲ್ಲಿದ್ದ ವೈಷ್ಣವ ಧನುಸ್ಸನ್ನು ಆತನಿಗೆ ಕೊಟ್ಟ.

ಮಹಾಭಾರತದಲ್ಲಿ ಪರಶುರಾಮರ ಪಾತ್ರ

ಪರಶುರಾಮ ಯಾರು? ಪರಶುರಾಮ ಅವತಾರದ ಕಥೆ

ಪಾಂಡವರೊಡನೆ ಕಾಳಗಕ್ಕೆ ಇಳಿಯದೆ ಸಂಧಿ ಮಾಡಿಕೊಳ್ಳಲು ದುರ್ಯೋಧನನಿಗೆ ಭೋದಿಸಿದ. ಅಂಬೆ ಪ್ರಕರಣದಲ್ಲಿ ಭೀಷ್ಮನೊಂದಿಗೆ ಘೋರ ಕಾಳಗ ಮಾಡಿದ. ಬ್ರಾಹ್ಮಣನ ವೇಷದಲ್ಲಿ ಬಂದು ಶಸ್ತ್ರಭ್ಯಾಸ ಮಾಡಿದ ಕರ್ಣನ ಮೋಸ ಗೊತ್ತಾದಾಗ ತಾನು ಕೊಟ್ಟ ಅಸ್ತ್ರಗಳು ಯುದ್ಧದಲ್ಲಿ ಫಲಿಸದಂತೆ ಶಾಪ ಕೊಟ್ಟ.  ದ್ರೋಣರ ಗುರುವಾಗಿದ್ದರು ಪರಶುರಾಮರು.

ಪರಶುರಾಮ ಮತ್ತು ಪಶ್ಚಿಮ ಕರಾವಳಿಯ ಸಂಬಂಧ:

ಪಶ್ಚಿಮ ಕರಾವಳಿಯ ಮೂಲವನ್ನು ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಿರ್ವಹಿಸುವ ದಂತಕಥೆಗಳಿವೆ. ಅಂತಹ ಒಂದು ದಂತಕಥೆಯೆಂದರೆ ಪಶ್ಚಿಮ ಕರಾವಳಿಯನ್ನು ಸಮುದ್ರದಿಂದ ಹಿಂಪಡೆಯುವುದು, ಪರಶುರಾಮನು ತನ್ನ ಯುದ್ಧ ಕೊಡಲಿಯನ್ನು ಸಮುದ್ರಕ್ಕೆ ಎಸೆದನೆಂದು ಅದು ಘೋಷಿಸುತ್ತದೆ. ಇದರ ಪರಿಣಾಮವಾಗಿ, ಪಾಶ್ಚಿಮಾತ್ಯ ಕರಾವಳಿಯ ಭೂಮಿ ಹುಟ್ಟಿಕೊಂಡಿತು. ಕರಾವಳಿ ಭಾಗವನ್ನು  ಪರಶುರಾಮ ಸೃಷ್ಟಿ ಎಂದು ಕರೆಯುತ್ತಾರೆ. ಈಗಲೂ ಆ ಕೊಡಲಿಯ ಹೊಂಡ ಅಥವಾ ಕೊಡಲಿಯ ಕಡೆಯ ಭಾಗ ಕಾಣಬಹುದು.

ಪರಶುರಾಮನನ್ನು ಮಹಾಭಾರತದ ಕೆಲವು ಆವೃತ್ತಿಗಳಲ್ಲಿ ಕೋಪಗೊಂಡ ಬ್ರಾಹ್ಮಣ ಎಂದು ವಿವರಿಸಲಾಗಿದೆ, ಅವರು ತಮ್ಮ ಕೊಡಲಿಯಿಂದ ಅಪಾರ ಸಂಖ್ಯೆಯ ಕ್ಷತ್ರಿಯ ಯೋಧರನ್ನು ಸೋಲಿಸಿದರು ಏಕೆಂದರೆ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರು. ಅವನು ತನ್ನ ತಾಯಿಯನ್ನು ಕೊಲ್ಲುತ್ತಾನೆ . ಪರಶುರಾಮನು ತನ್ನ ತಾಯಿಯನ್ನು ಕೊಲ್ಲುವ ತಂದೆಯ ಆದೇಶವನ್ನು ಪಾಲಿಸಿದ ನಂತರ, ಅವನ ತಂದೆ ಅವನಿಗೆ ವರವನ್ನು ನೀಡುತ್ತಾನೆ. ಪರಶುರಾಮನು ತನ್ನ ತಾಯಿಯನ್ನು ಮತ್ತೆ ಜೀವಕ್ಕೆ ತರುವ ಪ್ರತಿಫಲವನ್ನು ಕೇಳುತ್ತಾನೆ, ಮತ್ತು ಅವಳು ಜೀವಕ್ಕೆ ಮರಳುತ್ತಾಳೆ.  ಪರಶುರಾಮ ಹಿಂಸಾಚಾರದ ನಂತರ ದುಃಖದಿಂದ ತುಂಬಿರುತ್ತಾನೆ, ಪಶ್ಚಾತ್ತಾಪ ಪಡುತ್ತಾನೆ ಮತ್ತು ಅವನ ಪಾಪವನ್ನು ಶಿವನಿಂದ ವರ ಪಡೆದು ಮುಕ್ತಾಯಗೊಳಿಸುತ್ತಾನೆ.  ಅವನ ತಾಯಿ ಮತ್ತೆ ಜೀವಕ್ಕೆ ಬಂದ ನಂತರ, ಅವನು ರಕ್ತದ ಕೊಡಲಿಯನ್ನು ಸ್ವಚ್ಚಗೊಳಿಸಲು ಪ್ರಯತ್ನಿಸುತ್ತಾನೆ ಆದರೆ ಅವನು ಸ್ವಚ್ಚಗೊಳಿಸಲು ಸಾಧ್ಯವಾಗದ ಒಂದು ಹನಿ ರಕ್ತವನ್ನು ವಿವಿಧ ನದಿಗಳಲ್ಲಿ  ಸ್ವಚ್ಚಗೊಳಿಸಲು ಪ್ರಯತ್ನಿಸುತ್ತಾನೆ. ಅವನು ತನ್ನ ಕೊಡಲಿಯನ್ನು ಸ್ವಚ್ಛಗೊಳಿಸಬಲ್ಲ ಪವಿತ್ರ ನದಿಯನ್ನು ಹುಡುಕುತ್ತಾ ಭಾರತದ ದಕ್ಷಿಣದ ಕಡೆಗೆ ಚಲಿಸಿದಾಗ, ಅಂತಿಮವಾಗಿ, ಕರ್ನಾಟಕದ ಶಿವಮೊಗ್ಗದಲ್ಲಿರುವ ತೀರ್ಥಹಳ್ಳಿ ಗ್ರಾಮವನ್ನು ತಲುಪಿ ಕೊಡಲಿಯನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಾನೆ. ಈ ಬಾರಿ ಕೊಡಲಿ ತುಂಗಾ ಎಂಬ ನದಿಯ ಪವಿತ್ರ ನೀರಿನಿಂದ ಸ್ವಚ್ಛಗೊಳ್ಳುತ್ತದೆ. ಪವಿತ್ರ ನದಿಯ ಕಡೆಗೆ ಗೌರವದಿಂದ, ಅವರು ಶಿವಲಿಂಗವನ್ನು ನಿರ್ಮಿಸಿ ಪೂಜೆಯನ್ನು ಮಾಡುತ್ತಾರೆ ಮತ್ತು ಆ ದೇವಾಲಯಕ್ಕೆ ರಾಮೇಶ್ವರ ದೇವಸ್ಥಾನ ಎಂದು ಹೆಸರಿಡಲಾಗಿದೆ. ಭಗವಾನ್ ಪರಶುರಾಮನು ತನ್ನ ಕೊಡಲಿಯನ್ನು ಸ್ವಚ್ಛಗೊಳಿಸಿದ ಸ್ಥಳವನ್ನು ರಾಮಕುಂಡ ಎಂದು ಕರೆಯಲಾಗುತ್ತದೆ.

ಪರಶುರಾಮನ ಧ್ಯೇಯವು ಭಕ್ತರನ್ನು ಕಾಪಾಡುವುದು. ಪಾಪಿಷ್ಠರನ್ನು ನಾಶ ಪಡಿಸುವುದು. ವಿಷ್ಣುವು ಪರಶುರಾಮನ ಅವತಾರದಲ್ಲಿ ೨೧ ಬಾರಿ ಕ್ಷತ್ರಿಯರನ್ನು ಕೊಲ್ಲುತ್ತಾನೆ. ಏಕೆಂದರೆ ಅವರೆಲ್ಲ ಬ್ರಾಹ್ಮಣ ಸಂಸ್ಕೃತಿಗೆ ಅವಿಧೇಯರಾಗಿರುತ್ತಾರೆ. ಅವನು ಬ್ರಾಹ್ಮಣ ವರ್ಣಕ್ಕೆ ಸೇರಿದ್ದರೂ ಸನ್ನಿವೇಶ ಕಾರಣ ಕ್ಷತ್ರಿಯನಂತೆ ಕೆಲಸ ಮಾಡಬೇಕಾಗುತ್ತದೆ. ಆ ಕರ್ತವ್ಯ ಮುಗಿದ ಮೇಲೆ ಅವನು ಪುನಃ ಬ್ರಾಹ್ಮಣನಾಗಿ ಮಹೇಂದ್ರ ಗಿರಿಗೆ ಹೋಗಿ ತಪಸ್ಸಿನಲ್ಲಿ ತೊಡಗುತ್ತಾನೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಸಹಜ ಹೆರಿಗೆ(ನಾರ್ಮಲ್ ಡೆಲಿವರಿ) ಮತ್ತು ಶಸ್ತ್ರ ಚಿಕಿತ್ಸೆಯ (ಸಿ ಸೆಕ್ಷನ್) ಯಾವುದು ನಿಮಗೆ ಸರಿ?

ಚೌತಿಯ ದಿನ ಚಂದ್ರನನ್ನು ನೋಡಿದರೆ ಆಪತ್ತು ತಪ್ಪಿದ್ದಲ್ಲ