in

ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು ಪುಟ್ಟಣ್ಣ ಕಣಗಾಲ್

ಪುಟ್ಟಣ್ಣ ಕಣಗಾಲ್
ಪುಟ್ಟಣ್ಣ ಕಣಗಾಲ್

ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗ ಕಂಡ ಅತ್ಯಂತ ಸೃಜನಶೀಲ ನಿರ್ದೇಶಕ ಮತ್ತು ನಿರ್ಮಾಪಕ. ತಮ್ಮ ವಿಭಿನ್ನ ಕಾದಂಬರಿ ಆಧಾರಿತ ಸಂದೇಶಭರಿತ ಚಿತ್ರಗಳಿಂದಲೇ ಪ್ರಸಿದ್ಧರಾಗಿರುವ ಇವರು ಕನ್ನಡ ಚಿತ್ರರಂಗದಲ್ಲಿ ಚಿತ್ರಬ್ರಹ್ಮನೆಂದೇ ಕರೆಸಿಕೊಳ್ಳುತ್ತಾರೆ.

ಎಸ್.ಆರ್.ಪುಟ್ಟಣ್ಣ ಕಣಗಾಲ್ ಕಾಲ ಡಿಸೆಂಬರ್ ೧, ೧೯೩೩ – ಜೂನ್ ೫, ೧೯೮೫. ಕನ್ನಡ ಚಿತ್ರರಂಗದ ಪ್ರಸಿದ್ಧ ಹಾಗು ಸೃಜನಶೀಲ ನಿರ್ದೇಶಕರಲ್ಲಿ ಒಬ್ಬರು. ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು. ನಿರ್ದೇಶಕರಲ್ಲದೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸಹ ಬರೆಯುತ್ತಿದ್ದರು. ಹಿಂದಿ, ಮಲಯಾಳಂ ಭಾಷೆಗಳ ಕೆಲವು ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಇವರ ಚಿತ್ರಗಳು ಅತ್ಯಂತ ಉತ್ಕೃಷ್ಟ ಮಟ್ಟದ್ದೆಂದು ಹಲವು ಕನ್ನಡಿಗರು ಅಭಿಪ್ರಾಯ ಪಡುತ್ತಾರೆ. ಸಾಮಾನ್ಯವಾಗಿ ಕಲೆ, ಭಾವನಾತ್ಮಕತೆಯಿಂದ ಕೂಡಿದ ಚಿತ್ರಗಳನ್ನು ನಿರ್ದೇಶಿಸುತ್ತಿದ್ದ ಕಣಗಾಲ್, ಕನ್ನಡ ಸಿನಿಮಾಕ್ಕೆ ಹೊಸ ರೂಪ ತಂದವರು. ಮೈಸೂರಿನ ಯುವ ಸಾಹಿತಿ ವಿ.ಶ್ರೀಧರ ಅವರು ಪುಟ್ಟಣ್ಣಕಣಗಾಲರ ಚಲನಚಿತ್ರಗಳ ವಿಮರ್ಶೆಯನ್ನು ಕುರಿತ ಕೃತಿ ‘ಕನ್ನಡ ಚಲನಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲರ ಕೊಡುಗೆ’ ಎಂಬ ಕೃತಿಯನ್ನು ಹೊರತಂದಿರುವುದನ್ನು ಕಾಣಬಹುದು.

ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು ಪುಟ್ಟಣ್ಣ ಕಣಗಾಲ್
ಪುಟ್ಟಣ್ಣ ಕಣಗಾಲ್

ಕರ್ನಾಟಕದ ಪುಟ್ಟಣ್ಣ ರವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲ್ ಗ್ರಾಮದಲ್ಲಿ. ಇವರ ಮೊದಲ ಹೆಸರು “ಶುಬ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮ” ಮುಂದೆ ಆದದ್ದು ಎಸ್‌.ಆರ್‌.ಪುಟ್ಟಣ್ಣ ಕಣಗಾಲ್‌. ಕನ್ನಡ ಚಿತ್ರರಂಗದ ಚಿತ್ರಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿ ಇವರ ಸಹೋದರರು.

ಪುಟ್ಟಣ್ಣರವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದವರು ಪುಟ್ಟಣ್ಣರವರು ಚಿತ್ರರಂಗಕ್ಕೆ ಬರುವ ಮುನ್ನ ಇವರು ಹಲವು ನೆಲೆಗಳಲ್ಲಿ ದುಡಿದಿದ್ದರು. ನಾಟಕ ಕಂಪೆನಿ,ಡ್ರೈವರ್, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ನಿರ್ಮಾಪಕರಲ್ಲೊಬ್ಬರಾದ ಬಿ.ಆರ್. ಪಂತುಲು ಅವರ ಬಳಿ ೧೯೫೪ರಲ್ಲಿ ಡೈಲಾಗ್ ಕೋಚ್ ಆಗಿ ಸೇರಿದ ಪುಟ್ಟಣ್ಣ ನಂತರದ ದಿನಗಳಲ್ಲಿ ” ಪದ್ಮಿನಿ ಪಿಕ್ಚರ್ಸ್”ನ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದರು.
ಕಾದಂಬರಿ ಆಧಾರಿತ ಚಿತ್ರಗಳಿಗೆ ಹೆಚ್ಚು ಒತ್ತು ಕೊಟ್ಟಿದ್ದರು. ಪುಟ್ಟಣ್ಣನವರ ವೃತ್ತಿ ಜೀವನದ ಮೊದಲ ಚಿತ್ರ’ಸ್ಕೂಲ್‍ಮಾಸ್ಟರ್’ (೧೯೬೪). ಪುಟ್ಟಣ್ಣನವರು ರಷ್ಯಾ ಪ್ರವಾಸ ಮಾಡಿ ಸಾಕಷ್ಟು ದೇಶಗಳನ್ನು ಸುತ್ತಿ ಕೋಶಗಳನ್ನು ಓದಿ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪುಟ್ಟಣ್ಣನವರ ಚಿತ್ರಗಳ ಮೂಲಕ ಬೆಳಕಿಗೆ ಬಂದ, ಪ್ರಸಿದ್ಧರಾದ ಚಿತ್ರಕಲಾವಿದರು ಅನೇಕ. ಆ ಪೈಕಿ ನಾಯಕಿ ನಟಿಯರಲ್ಲಿ ಕಲ್ಪನಾ, ಆರತಿ, ಪದ್ಮಾ ವಾಸಂತಿ ಹಾಗೂ ಅಪರ್ಣಾ ಪ್ರಮುಖರು. ನಾಯಕ ನಟರಲ್ಲಿ ವಿಷ್ಣುವರ್ಧನ್, ರಾಮಕೃಷ್ಣ, ಜೈಜಗದೀಶ್, ಅಂಬರೀಶ್, ಶ್ರೀನಾಥ್ ಶ್ರೀಧರ್ ಮೊದಲಾದವರು ಇದ್ದಾರೆ.

ಕಣಗಲ್ ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು,ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದರು. ಕರ್ನಾಟಕ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯವು ಚಲನಚಿತ್ರ ನಿರ್ದೇಶಕರು ಮತ್ತು ವಿವಿಧ ವ್ಯಕ್ತಿಗಳನ್ನು ಪುಟ್ಟಣ್ಣ ಕಣಗಲ್ ಪ್ರಶಸ್ತಿ ನೀಡಿ ಗೌರವಿಸುತ್ತದೆ.

ಪ್ರಚಾರದ ಹುಡುಗನಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಕಣಗಲ್, ರಂಗಭೂಮಿಯಲ್ಲಿ ಕೆಲಸ ಮಾಡಿದ ನಂತರ ಸ್ವತಂತ್ರ ಚಲನಚಿತ್ರ ನಿರ್ಮಾಣಕ್ಕೆ ಆಕರ್ಷಿತರಾದರು ಮತ್ತು ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಬಿ. ಆರ್. ಪಂತುಲು ಅವರ ಸಹಾಯಕರಾಗಿ ಕೆಲಸ ಮಾಡಿದರು.
ಕಣಗಲ್ ಅವರು ಮೊದಲು ನಿರ್ದೇಶಿಸಿದ ಸಿನೆಮಾ ೧೯೬೪ರ ಮಲಯಾಳಂ ಚಲನಚಿತ್ರ ಸ್ಕೂಲ್ ಮಾಸ್ಟರ್. ಅದು ಅವರ ಮಾರ್ಗದರ್ಶಕ ಬಿ.ಆರ್.ಪಂತುಲು ಅವರ ಸಿನೆಮಾದ ರಿಮೇಕ್. ನಂತರ ಅವರು ತ್ರಿವೇಣಿಯವರ ಕನ್ನಡ ಕಾದಂಬರಿ ಬೆಕ್ಕಿನ ಕಣ್ಣು ಆಧಾರಿತ ಎಂಬ ಮತ್ತೊಂದು ಮಲಯಾಳಂ ಚಿತ್ರ ಪೂಚಕ್ಕನ್ನಿ ಅನ್ನು ನಿರ್ದೇಶಿಸಿದರು. ನಿರ್ದೇಶಕರಾಗಿ ಪುಟ್ಟಣ್ಣ ಅವರ ಮೊದಲ ಕನ್ನಡ ಚಿತ್ರ ೧೯೬೭ ರಲ್ಲಿ ಮೂಡಿಬಂದ ಬೆಳ್ಳಿಮೋಡ, ಗೆಜ್ಜೆ ಪೂಜೆ, ಶರಪಂಜರ, ನಾಗರಹಾವು ಮುಂತಾದ ಅನೇಕ ಮೇರುಕೃತಿಗಳನ್ನು ಅವರು ನಿರ್ದೇಶಿಸಿದರು. ಅವರ ಕೊನೆಯ ಚಿತ್ರ ಸಾವಿರ ಮೆಟ್ಟಿಲು, ಇದು ಅವರ ಜೀವಿತಾವಧಿಯಲ್ಲಿ ಬಿಡುಗಡೆಯಾಗಲಿಲ್ಲ.

ಕನ್ನಡ ಚಿತ್ರರಂಗ ಕಂಡ ಅದ್ವಿತೀಯ ನಿರ್ದೇಶಕರು ಪುಟ್ಟಣ್ಣ ಕಣಗಾಲ್
ಶರಪಂಜರ ಚಿತ್ರ

ಮಸಣದ ಹೂವು ಚಿತ್ರವು ತಯಾರಿಕೆ ಹಂತದಲ್ಲಿದ್ದಾಗ ಜೂನ್ ೫, ೧೯೮೫ ರಂದು ಚೆನ್ನೈ ನಲ್ಲಿ ನಿಧನರಾದರು. ಅರ್ಧ ಚಿತ್ರೀಕರಣಗೊಂಡಿದ್ದ ಮಸಣದ ಹೂವು ಚಿತ್ರದ ಉಳಿದ ಭಾಗವನ್ನು ಪುಟ್ಟಣ್ಣನವರ ಶಿಷ್ಯರಾದ ಕೆ.ಎಸ್.ಎಲ್.ಸ್ವಾಮಿಯವರು ಪೂರ್ತಿಗೊಳಿಸಿದರು. ಎಪ್ಪತ್ತರ ದಶಕದಲ್ಲಿ ಅವರು ತೊಡಗಿಸಿಕೊಂಡಿದ್ದ “ಸಾವಿರ ಮೆಟ್ಟಿಲು”ಚಿತ್ರವನ್ನು ಅದರ ನಿರ್ಮಾಪಕರಾದ ಡಿ.ಬಿ. ಬಸವೇಗೌಡರು ಪೂರ್ಣಗೊಳಿಸಿ ಬಿಡುಗಡೆ ಮಾಡಿದರು.

ಒಬ್ಬ ನಿರ್ದೇಶಕನ ಎರಡು ಅಪೂರ್ಣ ಚಿತ್ರಗಳು ಅವರ ನಿಧನಾ ನಂತರ ಪೂರ್ಣಗೊಂಡಿದ್ದು ಒಂದು ದಾಖಲೆಯೇ. ಪುಟ್ಟಣ್ಣ ಕಣಗಾಲ್ ಅವರ ಹೆಸರಿನಲ್ಲಿ ಜಯನಗರದಲ್ಲಿ ಸ್ಥಾಪಿಸಲಾಗಿದ್ದ ಪುಟ್ಟಣ್ಣ ಥಿಯೇಟರ್ ನವೀಕರಣದ ಹೆಸರಿನಲ್ಲಿ ೨೦೦೪ ರಿಂದ ಈ ಥಿಯೇಟರ್ ಬಾಗಿಲು ಹಾಕಿಕೊಂಡಿದ್ದ ಈ ಥಿಯೇಟರ್‌ನ ಜಾಗದಲ್ಲಿ ಈಗ ಕಾಂಪ್ಲೆಕ್ಸ್ ಒಂದು ತಲೆಯೆತ್ತಿ ನಿಂತಿದೆ. ಪುಟ್ಟಣ್ಣ ಪುತ್ರ ರಾಮು ಕಣಗಾಲ್ ರವರು “ಕಣಗಾಲ್ ನೃತ್ಯಾಲಯ” ಎನ್ನುವ ಹೆಸರಿನಲ್ಲಿ ನಾಟ್ಯ ಶಾಲೆ ನಡೆಸುತ್ತಿದ್ದಾರೆ.

ಕರ್ನಾಟಕ ಸರಕಾರವು ಪ್ರತಿ ವರ್ಷವೂ ಚಿತ್ರ ರಂಗದಲ್ಲಿ ಹೆಸರು ಮಾಡಿದವರಿಗೆ ಪುಟ್ಟಣ್ಣರ ಹೆಸರಿನಲ್ಲಿ “ಪುಟ್ಟಣ್ಣ ಕಣಗಾಲ್” ಪ್ರಶಸ್ತಿ ನೀಡಲಾಗುತ್ತಿದೆ. ಪುಟ್ಟಣ್ಣನವರ ಜೀವನ ಚರಿತ್ರೆಯ ‘ಬೆಳ್ಳಿ ತೆರೆ ಭಾವಶಿಲ್ಪಿಯಲ್ಲಿ’ಎಂಬ ಪುಸ್ತಕವನ್ನು ಡಿ.ಬಿ.ಬಸವೇಗೌಡ ಬರೆದಿದ್ದಾರೆ. ಕನ್ನಡದ ಖ್ಯಾತ ಕಾದಂಬರಿಕಾರ್ತಿ ದಿ. ಎಂ.ಕೆ. ಇಂದಿರಾ ರವರು “ಚಿತ್ರ ಶಿಲ್ಪಿ ಪುಟ್ಟಣ್ಣ ಕಣಗಾಲ್” ಎಂಬ ಪುಸ್ತಕ ಬರೆದಿದ್ದಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕೊಡಂದೆರ ಮಾದಪ್ಪ ಕಾರಿಯಪ್ಪ

ಫೀಲ್ಡ್ ಮಾರ್ಷಲ್, ಭಾರತ ಸೇನೆಯ ಮೊದಲ ಮಹಾದಂಡನಾಯಕ ಕೊಡಂದೆರ ಮಾದಪ್ಪ ಕಾರಿಯಪ್ಪ

ಅಂಬೆ, ಅಂಬಾಲಿಕ, ಅಂಬಿಕಾ

ಅಂಬೆ, ಅಂಬಾಲಿಕ, ಅಂಬಿಕಾ ಎಂಬ ಮೂವರು ರಾಜಕುವರಿಯರು ಮಹಾಭಾರತದಲ್ಲಿ ಬರುವ ಪಾತ್ರಗಳು