in

ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರಗಳನ್ನು ನಿರ್ವಹಿಸಿದ ಮಿನುಗು ತಾರೆ ಕಲ್ಪನಾ

ಮಿನುಗು ತಾರೆ ಕಲ್ಪನಾ
ಮಿನುಗು ತಾರೆ ಕಲ್ಪನಾ

ಮಿನುಗುತಾರೆ ಕಲ್ಪನಾ ಎನಿಸಿ ಚಿತ್ರ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆಯ ಉತ್ತುಂಗಕ್ಕೇರಿದ, ನಟಿ ಕಲ್ಪನಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನವರು. ಚಿತ್ರರಂಗವನ್ನು ಪ್ರವೇಶಿಸುವ ಮೊದಲು ಅವರ ಹೆಸರು ‘ಶರತ್ ಲತಾ’. 1943 ಜುಲೈ 18ರ ಮಧ್ಯಾಹ್ನ 3ಗಂಟೆಗೆ ಶ್ರೀಯುತ ಎನ್.ಎಸ್.ಕೃಷ್ಣಮೂರ್ತಿ ಮತ್ತು ಎಂ.ಜಾನಕಮ್ಮನವರ ಪುತ್ರಿಯಾಗಿ ಮಂಗಳೂರಿನ ವೆನ್ ಲ್ಯಾಕ್ ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದರು. 1963ರಲ್ಲಿ ಪಂತುಲುರವರ ‘ಸಾಕುಮಗಳು’ ಚಿತ್ರದಿಂದ ಆರಂಭವಾದ ಸಿನಿಮಾ ಪಯಣ 1978ರ ಶ್ರೀಯುತ ಜ್ಞಾನಪೀಠಿ ಶಿವರಾಮ ಕಾರಂತರ ನಿರ್ದೇಶನದ ‘ಮಲೆಯಮಕ್ಕಳು’ ರವರೆಗೂ 78 ಸಿನಿಮಾಗಳಲ್ಲಿ ಅಭಿನಯಿಸುವಂತೆ ಮಾಡಿತು. ಅಂತಹ ಒಬ್ಬ ಮಹಾನ್ ತಾರೆ ಕಲ್ಪನಾ ರವರ ಬಗ್ಗೆ ಮೈಸೂರಿನ ಯುವ ಸಾಹಿತಿ ವಿ.ಶ್ರೀಧರ ಸುಮಾರು 1114ಪುಟಗಳ “ರಜತರಂಗದ ಧ್ರುವತಾರೆ” ಬೃಹತ್ ಸಂಸ್ಮರಣ ಗ್ರಂಥವನ್ನು ತಂದಿರುವುದು ಕಲ್ಪನಾರಿಗೆ ನೀಡಿರುವ ಬಹು ದೊಡ್ಡ ಗೌರವ.

ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರಗಳನ್ನು ನಿರ್ವಹಿಸಿದ ಮಿನುಗು ತಾರೆ ಕಲ್ಪನಾ
ಮಿನುಗು ತಾರೆ ಕಲ್ಪನಾ

ಹುಟ್ಟಿದ್ದು ೧೯೪೩ರ ಜುಲೈ ೧೮ ರಂದು. ಇವರ ಮಾತೃ ಭಾಷೆ ತುಳು. ತಂದೆ ಕೃಷ್ಣಮೂರ್ತಿ, ತಾಯಿ ಜಾನಕಮ್ಮ. ಕಲ್ಪನಾ ಬಾಲ್ಯದಲ್ಲೇ ಕಲಾವಿದೆಯಾಗುವ ಕನಸು ಕಂಡವರು. ಅವರ ಕುಟುಂಬದಲ್ಲಿ ಯಾರೂ ಕಲಾವಿದರಿರಲಿಲ್ಲ. ಅಂತಹ ಕನಸಿಗೆ ಇಂಬು ನೀಡವವರೂ ಇರಲಿಲ್ಲ. ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ನಾಟಕ ಮಂಡಳಿಯ ಮೂಲಕ ರಂಗಭೂಮಿ ಪ್ರವೇಶಿಸಿ ಚಿತ್ರರಂಗದ ಮಿನುಗುತಾರೆ ಎನಿಸಿದ್ದ ಕಲ್ಪನಾ ಅಭಿನಯದ ಮೊದಲ ಕನ್ನಡ ಚಲನಚಿತ್ರ ಬಿ.ಆರ್. ಪಂತುಲು ನಿರ್ದೇಶನದಲ್ಲಿ ಬಂದ ಸಾಕು ಮಗಳು. *೧೯೬೭ರಲ್ಲಿ ಬಿಡುಗಡೆಯಾದ ಚಿತ್ರ ಬೆಳ್ಳಿಮೋಡ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಬೆಳ್ಳಿ ಮೋಡ, ಗೆಜ್ಜೆ ಪೂಜೆ, ಶರಪಂಜರ, ಎರಡು ಕನಸು, ಗಂಧದ ಗುಡಿ ಮೊದಲಾದ ಚಲನಚಿತ್ರಗಳಲ್ಲಿ ಕಲ್ಪನಾ ಅತ್ಯಂತ ಉತ್ತಮವಾಗಿ ಅಭಿನಯಿಸಿದ್ದಾ ರೆ.
ಕಲ್ಪನಾಗೆ, ಹೈಸ್ಕೂಲಿನಲ್ಲಿದ್ದಾಗಲೇ ನಾಟಕಗಳತ್ತ ಆಸಕ್ತಿ. ಮುಖಕ್ಕೆ ಬಣ್ಣ ಬಳಿಸಿಕೊಳ್ಳುವ ಹಂಬಲ. ಬೆಳ್ಳಿಮೋಡ ಚಿತ್ರದ “ಬೆಳ್ಳಿಮೋಡದ ಅಂಚಿನಿಂದಾ ಓಡಿಬಂದಾ ಮಿನುಗುತಾರೆ” ಎಂಬ ಹಾಡೇ ನಟಿ ಕಲ್ಪನಾರವರಿಗೆ ‘ಮಿನುಗುತಾರೆ’ ಎಂಬ ಬಿರುದನ್ನು ನೀಡಿದ್ದು.
ಕನ್ನಡದ ೬೫ ಚಿತ್ರಗಳೂ ಸೇರಿದಂತೆ ಒಟ್ಟು ೭೪ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಕಲ್ಪನಾ. ಕಲ್ಯಾಣಕುಮಾರ್ ನಿರ್ಮಾಣದ “ಪೋಲೀಸನ ಮಗಳು” ಚಿತ್ರವು ಅರ್ಧದಲ್ಲಿಯೇ ಉಳಿಯಿತು,”ಬೆಳ್ಳಿಮೋಡ”, “ಹಣ್ಣೆಲೆ ಚಿಗುರಿದಾಗ”, “ಶರಪಂಜರ” ಚಲನ ಈ ಚಿತ್ರಗಳಲ್ಲಿನ ಅಭಿನಯಕ್ಕೆ ೩ ಸಲ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದ ಕಲ್ಪನಾಗೆ ಪುಸ್ತಕ ಓದುವ ಹವ್ಯಾಸವೂ ಇತ್ತು. ಈಕೆಯ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ಮಾತುಗಳೂ ಇದ್ದವು. ವಾಸ್ತವವಾಗಿ ಕಲ್ಪನಾಳಿಗೆ ಹತ್ತಿರವಿರುವವರು ಹೇಳುವ ಮಾಹಿತಿಯಂತೆ ಕಲ್ಪನಾರಿಗೆ ಚರ್ಮದ ಸಮಸ್ಯೆ ಇತ್ತು. ಚರ್ಮ ಪೊರೆ ಬಿಟ್ಟಂತಾಗುತ್ತಿತ್ತು ಚಿತ್ರಗಳಲ್ಲಿ ಅರ್ಧ ತೋಳು ತೊಟ್ಟು ಅಭಿನಯಿಸಬೇಕಾದ ಸನ್ನಿವೇಶ ಗಳೆಲ್ಲಾ ಬಹಳ ಹಿಂಸೆ. ಗ್ಲ್ಯಾಮರ್ ನಟಿಗೆ, ಇದರ ಬಗ್ಗೆ ದುಃಖವೂ ಇತ್ತು. ಎಷ್ಟೋ ಬಾರಿ ಅತ್ತಿದ್ದೂ ಉಂಟು. ಅದಕ್ಕೇ, ಹೆಚ್ಚು ಚಿತ್ರಗಳಲ್ಲಿ ತುಂಬು ತೋಳಿನ ಅಂಗಿಯನ್ನೇ ಧರಿಸಿದ್ದಾರೆ.
ಎಷ್ಟು ಮೇಕಪ್ ಮಾಡಿಕೊಂಡರೂ ಆ ತೊಂದರೆ ಹೋಗುತ್ತಿರಲಿಲ್ಲ. ಆದರೆ ಕಲ್ಪನಾರಿಗೆ, ಆ ಸತ್ಯವನ್ನು ಹೇಳಲಾಗದೇ ನುಂಗಿಕೊಳ್ಳುವ ಅನಿವಾರ್ಯತೆ ಬದುಕಿಗಿತ್ತು. ಒಮ್ಮೆ ಈ ಸಂಗತಿ ಬಯಲಾದರೆ ತನ್ನ ತಾರಾಮೌಲ್ಯಕ್ಕೆ ಧಕ್ಕೆಯಾದೀತೆಂಬ ಭಯ. ಎಲ್ಲವೂ ಒಟ್ಟಾಗಿ ಅವರ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ವದಂತಿಗೆ ಕಾರಣವಾಗಿತ್ತು

ಸುಮಾರು ಇಪ್ಪತ್ತೇಳು ಕನ್ನಡ ಚಿತ್ರಗಳಲ್ಲಿ ಬಹುಮುಖ ಪ್ರತಿಭೆಯಾಗಿ ಮಿಂಚಿದ ಮಿನುಗುತಾರೆ ತಮಿಳು ಭಾಷೆಯಲ್ಲೂ ಕಂಡರು ಅದರಲ್ಲಿ ಮುಖ್ಯವಾಗಿ “ಮಡ್ರಾಸ್ ಟು ಪಾಂಡಿಚರಿ” ಚಿತ್ರವು ಕಲ್ಪನಾ ಅವರನ್ನು ಯಶಸ್ಸಿನ ಶಿಖರವನ್ನೇರಿಸಿತು ಆ ಚಿತ್ರ ಹಿಂದಿ ಭಾಷೆಗೂ ರಿಮೇಕ್ ಆಗಿ ಅಮಿತಾಬ್ , ಅರುಣಾ ಇರಾನಿ ಮುಖ್ಯಭೂಮಿಕೆಯಲ್ಲಿ ತೆರೆಕಂಡು ಯಶಸ್ಸು ಗಳಿಸಿತು.
ಇಡೀ ಚಿತ್ರೋಧ್ಯಮದಲ್ಲಿ ಅತ್ಯುತ್ತಮ ಪ್ರತಿಭೆಯಾಗಿ, ಅವರ ಮಾತಿನ ಶೈಲಿ, ಚುರುಕು ಚಟುವಟಿಕೆ, ಅಸಾಂಪ್ರದಾಯಿಕ ಜೀವನ ಶೈಲಿ, ಅವರ ಉಡುಗೆ ತೊಡುಗೆ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟವು. ಆ ಕಾಲದ (೧೯೬೫ -೭೫)ಮಾಡ್ರನ್‍ ಉಡುಗೆಯನ್ನು ತೊಟ್ಟು ತನ್ನದೇ ಆದ ಟ್ರೆಂಡ್ ಹುಟ್ಟು ಹಾಕಿಕೊಂಡಾಕೆ , ದೊಡ್ಡ ದೊಡ್ಡ ಓಲೆಗಳು ಅದಕ್ಕೆ ಒಪ್ಪುವಂತಹ ದೊಡ್ಡ ದೊಡ್ಡ ಉಂಗುರಗಳು, ಗಿಡ್ಡ ಸೆರಗು, ಹಾರದಂತಹ ಸರಗಳು, ಗಿಡ್ಡ ಗಿಡ್ಡ ತೋಳಿನ ಬೌಸುಗಳನ್ನು ಧರಿಸಿ ತಮ್ಮದೇ ಆದ ಟ್ರೆಂಡ್ ಪ್ರಾರಂಭಿಸಿದರು.
ಈ ಚೆಲುವೆಯ ಅಭಿನಯ ಕಂಡು ಬೆರಗಾಗದವರಿಲ್ಲ. ಹಣ್ಣೆಲೆ ಚಿಗುರಿದಾಗ , ಶರಪಂಜರ , ಬೆಳ್ಳಿಮೋಡ ಚಿತ್ರಗಳಲ್ಲಿ ಅತ್ಯದ್ಭುತ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡು ಕನ್ನಡ ಚಿತ್ರೋಧ್ಯಮದಲ್ಲಿ ರಾಣಿಯಂತೆ ಶೋಭಿಸಿದ ಕಲ್ಪನಾ ಬಣ್ಣದ ಜಗತ್ತಿನಲ್ಲಿ ತಮ್ಮ ಚಿನ್ನದಂತಹ ಜೀವನವನ್ನು ತಮ್ಮ ಕೈಯಾರ ಹಾಳುಮಾಡಿಕೊಂಡರು ಮಿನುಗು ತಾರೆ ಅಂದಿಗು,ಇಂದಿಗು,ಎಂದೆಂದಿಗೂ ಮಿನುಗು ತಾರೆಗೆ ಸರಿ ಸಾಟಿಯಾರಿಲ್ಲ. ಮಿನುಗುತಾರೆ ಆಕಾಶದಲ್ಲೆಂದೆದೂ ಮಿನುಗುತ್ತಿರುತ್ತಾರೆ. “ಕಲ್ಪನಾ ವಿಲಾಸ” ಎಂಬ ಹೆಸರಿನ ನಟಿ ಕಲ್ಪನಾರ ಜೀವನ ಚರಿತ್ರೆಯ ಪುಸ್ತಕವೊಂದಿದೆ. ಜೊತೆಗೆ ಮೈಸೂರಿನ ಯುವ ಸಾಹಿತಿ ವಿ.ಶ್ರೀಧರ್ ಸುಮಾರು 1114ಪುಟಗಳ “ರಜತರಂಗದ ಧ್ರುವತಾರೆ”(ಮಿನುಗುತಾರೆ ಕಲ್ಪನಾರ ಸಂಸ್ಮರಣ ಗ್ರಂಥ) ಬೃಹತ್ ಸಂಸ್ಮರಣ ಗ್ರಂಥವನ್ನು ತಂದಿರುವುದು ವಿಶೇಷ. ಸೆಪ್ಟೆಂಬರ್ ೨೦ ೨೦೦೯ರಲ್ಲಿ ಬೆಂಗಳೂರು ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಗುಡಗೇರಿ ಬಸವರಾಜ್ ಅವರು ಭಾಗವಹಿಸಿ ಮಾತನಾಡುತ್ತಾ- ಒಂದು ವೇಳೆ ಮಿನುಗುತಾರೆ ಕಲ್ಪನಾ ಇಂದು ಬದುಕಿದ್ದಿದ್ದರೆ ನಾನು ಮತ್ತು ಆಕೆ ರಂಗಭೂಮಿಯ ‘ಧ್ರುವತಾರಾ ದಂಪತಿ’ಗಳಾಗಿರುತ್ತಿದ್ದೆವು. ಆಕೆಯ ವಿಷಯದಲ್ಲಿ ನಾನು ನಿರಪರಾಧಿ. ಆಕೆ ತುಂಬಾ ದುಡುಕಿನ ನಿರ್ಧಾರ ತೆಗೆದುಕೊಂಡರು ಎಂದು ಹೇಳಿದ್ದಾರೆ.

ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರಗಳನ್ನು ನಿರ್ವಹಿಸಿದ ಮಿನುಗು ತಾರೆ ಕಲ್ಪನಾ
ಮಿನುಗು ತಾರೆ ಕಲ್ಪನಾ

೩-೫-೧೯೭೯ ರಂದು ಕಲ್ಪನಾ ಆತ್ಮ ಹತ್ಯೆ ಮಾಡಿಕೊಂಡರು. ಕಲ್ಪನಾ ಆತ್ಮಹತ್ಯೆ ಮಾಡಿಕೊಂಡ ರಾತ್ರಿ ಸುಮಾರು ೨-೩೦ರ ವೇಳಗೆ ಸಂಕೇಶ್ವರದಲ್ಲಿ ‘ಕುಮಾರ ರಾಮ’ ನಾಟಕ ನಡೆದಿತ್ತು. ಅದರಲ್ಲಿ ಗುಡಗೇರಿ ಬಸವರಾಜು ಕುಮಾರ ರಾಮನಾಗಿದ್ದರೆ ಕಲ್ಪನಾ ಮಲತಾಯಿಯ ಪಾತ್ರದಲ್ಲಿದ್ದರು. ನಾಟಕದಲ್ಲಿ ಭಾಗವಹಿಸುವಾಗಲೇ ಕಲ್ಪನಾ ಅನ್ಯಮನಸ್ಕರಾಗಿದ್ದರು. ನಾಟಕದಲ್ಲಿ ಕುಮಾರ ರಾಮ ತನಗೆ ‘ಹಸಿವಾಗಿದೆ’ ಎಂದಾಗ ‘ರೊಟ್ಟಿ ತಿನ್ನು’ ಎಂದು ಹೇಳುವ ಬದಲು ‘ಹುಲ್ಲು ತಿನ್ನು’ ಎಂದು ಹೇಳಿದ್ದರು. ಜನ ಬಿದ್ದು ಬಿದ್ದು ನಕ್ಕರು. ಇದರಿಂದ ಅವಮಾನಿತನಾದ ಬಸವರಾಜ ‘ ಹೌದು ನಾನು ಹಸು, ಹಲ್ಲು ಕೊಡು’ ಎಂದು ಹೇಳುತ್ತಾ ವೇದಿಕೆಯ ತುಂಬಾ ಓಡಾಡಲು ಆರಂಭಿಸಿದರು. ಜನ ಇನ್ನಷ್ಟು ಕೇಕೆ ಹಾಕಲು ಆರಂಭಿಸಿದಾಗ ಅಪಮಾನಗೊಂಡ ಬಸವರಾಜ್ ನಾಟಕವನ್ನು ಅಲ್ಲಿಗೇ ನಿಲ್ಲಿಸಿದರು. ಪರದೆ ಬಿದ್ದ ನಂತರ ನೇರವಾಗಿ ಕಲ್ಪನಾರ ಕಡೆ ಧಾವಿಸಿ ಕೆನ್ನೆಗೆ ಹೊಡೆದರು. ಇದರಿಂದ ವಿಚಲಿತರಾದ ಅವರು ವೇಷ ಕೂಡ ಬದಲಾಯಿಸದೆ ನೇರವಾಗಿ ಗೋಟೂರು ಪ್ರವಾಸಿ ಧಾಮಕ್ಕೆ ಬಂದು ಆತ್ಮ ಹತ್ಯೆ ಮಾಡಿಕೊಂಡರು ಎಂದು ಒಂದೆಡೆ ಬರೆಯುತ್ತಾರೆ.
ಸಿನಿಮಾ ಕುರಿತ ಸಂವೇದನಾಶೀಲ ಬರಹಗಾರ ಎನ್.ಎಸ್. ಶ್ರೀಧರಮೂರ್ತಿಯವರು. ಪೋಸ್ಟ್ ಮಾರ್ಟಂ ವರದಿ ಪ್ರಕಾರ ಕಲ್ಪನಾ ೫೬ ನಿದ್ದೆ ಮಾತ್ರೆಗಳನ್ನು ನುಂಗಿದ್ದರು. ಮಾನಸಿಕವಾಗಿ ವಿಚಲಿತರಾದಾಗಲೆಲ್ಲ ನಿದ್ದೆ ಮಾತ್ರೆ ನುಂಗುವ ಹವ್ಯಾಸ ಅವರಿಗಿತ್ತು. ಹಿಂದೆ ಎರಡು ಮೂರು ಬಾರಿ ಹೀಗೆ ಸಾವಿನ ಅಂಚನ್ನು ಮುಟ್ಟಿ ಬಂದಿದ್ದರು. ಈ ಸಲ ನಿದ್ರಾ ಮಾತ್ರೆಗಳ ಪ್ರಮಾಣ ಅವರನ್ನು ಸೀದಾ ಯುಮಪುರಿಗೇ ಕರೆದುಕೊಂಡು ಹೋಗಿತ್ತು.

ಕಲ್ಪನಾ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಒಲವನ್ನು ಇಟ್ಟು ಕೊಂಡಿದ್ದರು. ಪುಸ್ತಕ ಪ್ರೇಮಿಯಾಗಿದ್ದರು. ಒಳ್ಳೆಯ ಕವಿತೆಗಳನ್ನು ಬರೆದಿದ್ದರು. ಅಂಕಣಗಳನ್ನು ಬರೆದಿದ್ದರು. ‘ಯಾವ ಜನ್ಮದ ಮೈತ್ರಿ’ ಚಿತ್ರದ ಪಾತ್ರ ವಿವಾದಕ್ಕೆ ಸಿಲುಕಿದಾಗ ದಾಖಲೆಗಳೊಂದಿಗೆ ತಾವೇ ಸಮರ್ಥಿಸಿಕೊಂಡಿದ್ದರು ಮೊದಲಾದ ಹಲವು ಅಂಶಗಳು ಚರಿತ್ರೆಯಲ್ಲಿ ದಾಖಲಾಗಲಿಲ್ಲ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪುಟ್ಟಣ್ಣ ಮಕ್ಕಳು ಸೀರಿಯಲ್ ಸಹನಾ ಪಾತ್ರ ಮಾಡಿರುವ ನಟಿ ನಿಜಕ್ಕೂ ಯಾರು ಗೊತ್ತಾ.

ಪುಟ್ಟಣ್ಣ ಮಕ್ಕಳು ಸೀರಿಯಲ್ ಸಹನಾ ಪಾತ್ರ ಮಾಡಿರುವ ನಟಿ ನಿಜಕ್ಕೂ ಯಾರು ಗೊತ್ತಾ.

ರಾಹುಲ್ ದ್ರಾವಿಡ್

ನಮ್ಮದೇ ಕನ್ನಡಿಗರು ಆದ ರಾಹುಲ್ ದ್ರಾವಿಡ್