in

ಏಡ್ಸ್‌ ರೋಗ ಲಕ್ಷಣಗಳು

ಏಡ್ಸ್‌ ರೋಗ ಲಕ್ಷಣಗಳು
ಏಡ್ಸ್‌ ರೋಗ ಲಕ್ಷಣಗಳು

ಹೆಚ್ಐವಿ:ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ಎಂಬ ವೈರಸ್ ಏಡ್ಸ್‌ಗೆ ಕಾರಣ ಎಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ. ಈ ವೈರಸ್‌ನಲ್ಲಿ ಎರಡು ಮುಖ್ಯ ಪ್ರಕಾರಗಳಿವೆ. ಅವುಗಳೆಂದರೆ ಹೆಚ್ಐವಿ-1 ಮತ್ತು – ಹೆಚ್ಐವಿ-2. ಅವುಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಪ್ರಕಾರವೆಂದರೆ ಹೆಚ್ಐವಿ-1. ಹೆಚ್ಐವಿಯು ಲೆಂಟಿವೈರಸ್ (ರೆಟ್ರೋವೈರಸ್ ಕುಟುಂಬಕ್ಕೆ ಸೇರಿದ) ಜಾತಿಯ ಒಂದು ವೈರಸ್ ಆಗಿದೆ.

ಹೆಚ್ಐವಿಯು ಪ್ರಮುಖವಾಗಿ ಬಿಳಿ ರಕ್ತ ಕಣಗಳ ಒಂದು ವಿಧಗಳಾಗಿರುವ ಸಿಡಿ4+ ಟಿ ಜೀವಕಣಗಳ ಮೇಲೆ ದಾಳಿಮಾಡುತ್ತದೆ. ಸಿಡಿ4+ ಟಿ ಜೀವಕಣಗಳನ್ನು ಕೆಲವೊಮ್ಮೆ ಸಹಾಯಕ ಟಿ ಜೀವಕಣಗಳು ಎಂದು ಸಹ ಕರೆಯಲಾಗುತ್ತದೆ. ಸಿಡಿ4+ ಟಿ ಜೀವಕಣಗಳು ಮಾನವನ ದೇಹದಲ್ಲಿನ ರಕ್ಷಣಾ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಹೆಚ್ಐವಿಯು ಮುಖ್ಯವಾಗಿ ಅವುಗಳ ಮೇಲೆಯೇ ದಾಳಿಮಾಡಿ ಅವುಗಳನ್ನು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ನಾಶಪಡಿಸುತ್ತದೆ. ಹೀಗೆ ಬಹಳಷ್ಟು ಪ್ರಮಾಣದಲ್ಲಿ ಸಿಡಿ4+ ಟಿ ಜೀವಕಣಗಳು ನಾಶವಾಗುವುದರಿಂದ ದೇಹದ ರಕ್ಷಣಾ ವ್ಯವಸ್ಥೆಯು ದುರ್ಬಲವಾಗುತ್ತದೆ. ಇದರಿಂದಾಗಿ ಹಲವು ಅವಕಾಶವಾದಿ ಸೋಂಕುಗಳು ಹಾಗು ರೋಗಗಳು ಉಂಟಾಗುವುದರೊಂದಿಗೆ ಏಡ್ಸ್‌ಗೆ ಕಾರಣವಾಗುತ್ತದೆ.

ಏಡ್ಸ್ , ಅಕ್ವೈರ್ಡ್ ಇಮ್ಯೂನ್ ಡಿಫಿಷಿಯನ್ಸಿ ಸಿಂಡ್ರೊಮ್ ಅಥವಾ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್. ಎಚ್‍ಐವಿ ಎಂಬ ವೈರಸ್ ಉಂಟಾಗುವ ಲಕ್ಷಣವಾಗಿದ್ದು ಇದು. ಅನಾರೋಗ್ಯ, ನಿರೋಧಕ ವ್ಯವಸ್ಥೆಯ ಬದಲಾಯಿಸುತ್ತದೆ ಹೆಚ್ಚು ದುರ್ಬಲ ಸೋಂಕುಗಳು ಮತ್ತು ರೋಗಗಳಿಗೆ ಜನರು ಮಾಡುವ. ಸಿಂಡ್ರೋಮ್ ಮುಂದುವರೆದಂತೆ ಈ ಪ್ರಭಾವಕ್ಕೆ ಹಾಳಾಗುತ್ತದೆ. ಎಚ್‍ಐವಿ ಸೋಂಕಿತ ವ್ಯಕ್ತಿಯನ್ನು ವೀರ್ಯ ಮತ್ತು ಯೋನಿ ದ್ರವಗಳು, ರಕ್ತ ಮತ್ತು ಎದೆ ಹಾಲು ಮುಂತಾದ ದೇಹದ ದ್ರವಗಳು ಕಂಡುಬರುತ್ತದೆ. ವೈರಸ್ ರಕ್ತ ಮತ್ತು ಲೈಂಗಿಕ ಸಂಪರ್ಕದ ಮೂಲಕ ಮತ್ತೊಂದು ವ್ಯಕ್ತಿಯಿಂದ ರವಾನಿಸಲಾಗಿದೆ. ಜೊತೆಗೆ, ಸೋಂಕಿತ ಗರ್ಭಿಣಿಯರಿಗೆ, ಗರ್ಭಾವಸ್ಥೆಯಲ್ಲಿ ತಮ್ಮ ಮಕ್ಕಳಿಗೆ ಎಚ್‍ಐವಿ ರವಾನಿಸಬಹುದು ಹೆರಿಗೆಯಲ್ಲಿ ಮಗು ನೀಡಲು ಹಾಗೂ ಸ್ತನ್ಯ ಮೂಲಕ. ಎಚ್‍ಐವಿ ಯೋನಿ, ಮುಖ ಮೈಥುನ, ಗುದ ಸಂಭೋಗ, ರಕ್ತ, ಮತ್ತು ಕಲುಷಿತ ಚರ್ಮದಡಿಯಲ್ಲಿ ಸೂಜಿಗಳು ಅನೇಕ ರೀತಿಯಲ್ಲಿ, ಹರಡಬಹುದಾದ. ವೈರಸ್ ಮತ್ತು ಸಿಂಡ್ರೋಮ್ ಎರಡೂ ಸಾಮಾನ್ಯವಾಗಿ ಎಚ್‍ಐವಿ / ಏಡ್ಸ್ ಮಾಹಿತಿ ಒಟ್ಟಿಗೆ ಉಲ್ಲೇಖಿಸಲಾಗುತ್ತದೆ. ಪರಿಣಾಮವಾಗಿ, ಒಂದು ಏಡ್ಸ್ ರೋಗಿಗೆ ಹಲವಾರು ಅವಕಾಶವಾದಿ ಸೋಂಕುಗಳು ಅಭಿವೃದ್ಧಿ ಅಂತಿಮವಾಗಿ ಸಾವಿಗೆ ಕಾರಣವಾಗಬಹುದು.

ಸಂಶೋಧನೆಯ ಪ್ರಕಾರ, ಎಚ್‍ಐವಿ ಮೂಲಗಳನ್ನು ಪಶ್ಚಿಮ-ಕೇಂದ್ರ ಆಫ್ರಿಕಾದಲ್ಲಿ ಹತ್ತೊಂಬತ್ತನೆ ಶತಮಾನದ ಕೊನೆ ಅಥವಾ ಇಪ್ಪತ್ತನೇ ಶತಮಾನದ ದಿನಾಂಕಕ್ಕೆ ಸಂಬಂಧಿಸಿದವಾಗಿವೆ. ಏಡ್ಸ್ ಮತ್ತು ಅದಕ್ಕೆ ಕಾರಣವಾದ ಊIಗಿ, ಮೊದಲ ಗುರುತಿಸಿ 1980 ರಲ್ಲಿ ಲಭಿಸಿತು. ಎಚ್‍ಐವಿ / ಏಡ್ಸ್ ಯಾವುದೇ ಚಿಕಿತ್ಸೆ ನಡೆಯುತ್ತಿವೆ. ಚಿಕಿತ್ಸೆಗಳು ಸನ್ನಿವೇಶದ ಸಂದರ್ಭದಲ್ಲಿ ನಿಧಾನಗೊಳಿಸುವ – ಕೆಲವು ಸೋಂಕಿತ ಜನರಿಗೆ ದೀರ್ಘ ಮತ್ತು ತುಲನಾತ್ಮಕವಾಗಿ ಆರೋಗ್ಯಕರ ಜೀವನವನ್ನು ನಡೆಸಬಹುದು.

ಪ್ರಾಥಮಿಕ ಹಂತ

ಏಡ್ಸ್‌ ರೋಗ ಲಕ್ಷಣಗಳು
ಹೆಚ್ಐವಿ

ಹೆಚ್ಐವಿ ಸೋಂಕಿಗೆ ಒಳಗಾದ ೨-೪ ವಾರಗಳ ನಂತರ ಬಹಳಷ್ಟು ವ್ಯಕ್ತಿಗಳಲ್ಲಿ ಫ಼್ಲೂನಂತ ಲಕ್ಷಣಗಳು ಕಾಣೆಸಿಕೊಳ್ಳುತ್ತವೆ ಮತ್ತು ಕೆಲ ದಿನಗಳಲ್ಲಿ ಅಥವಾ ವಾರಗಳಲ್ಲಿ ಅವುಗಳು ಗುಣವಾಗುತ್ತವೆ. ಆ ಲಕ್ಷಣಗಳು ಸಾಮಾನ್ಯವಾಗಿ ಕೆಳಕಂಡಂತಿರುತ್ತವೆ.
ಜ್ವರ
ತಲೆನೋವು
ಕೀಲುನೋವು
ಆಯಾಸ
ಬಾಯಿ ಮತ್ತು ಗಂಟಲಿನಲ್ಲಿ ಹುಣ್ಣುಗಳು
ಚರ್ಮದ ತುರಿಕೆ
ಆದರೆ ಕೆಲ ವ್ಯಕ್ತಿಗಳಲ್ಲಿ ಪ್ರಾಥಮಿಕ ಹಂತದಲ್ಲಿ ಯಾವುದೇ ನಿರ್ದಿಷ್ಟ ರೋಗಲಕ್ಷಣಗಳು ಕಾಣೆಸಿಕೊಳ್ಳುವುದಿಲ್ಲ.

ಅವ್ಯಕ್ತ ಸ್ಥಿತಿಯ ಹಂತ

ಈ ಹಂತದಲ್ಲಿ ಹೆಚ್ಐವಿ ಸೋಂಕಿನ ಯಾವುದೇ ನಿರ್ದಿಷ್ಟ ಲಕ್ಷಣಗಳು ಸಾಮಾನ್ಯವಾಗಿ ಕಂಡುಬರುವುದಿಲ್ಲ. ಚಿಕಿತ್ಸೆಯನ್ನು ಪಡೆಯದ ಸಂದರ್ಭದಲ್ಲಿ ಈ ಹಂತದ ಅವಧಿಯು ಸರಾಸರಿ ೧೦ ವರ್ಷಗಳಾಗಿರುತ್ತದೆ.

ಏಡ್ಸ್‌

ಏಡ್ಸ್ ಹೆಚ್ಐವಿ ಸೋಂಕಿನ ಅತಿ ಮುಂದುವರಿದ ಅಥವಾ ಕೊನೆಯ ಹಂತವಾಗಿದೆ. ಈ ಹಂತದಲ್ಲಿ ಸಿಡಿ4 ಜೀವಕಣಗಳ ಪ್ರಮಾಣವು ಅತಿ ಕಡಿಮೆಯಾಗಿರುತ್ತದೆ ಹಾಗು ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಬಹಳಷ್ಟು ಪ್ರಮಾಣದಲ್ಲಿ ಹಾಳಾಗಿರುತ್ತದೆ. ಹೆಚ್ಐವಿ ಸೋಂಕಿಗೆ ಒಳಗಾದ ನಂತರ ಬಹಳಷ್ಟು ವ್ಯಕ್ತಿಗಳಲ್ಲಿ ಏಡ್ಸ್‌ನ ಲಕ್ಷಣಗಳು ಸುಮಾರು ೮-೧೦ ವರ್ಷಗಳ ನಂತರ ಕಾಣೆಸಿಕೊಳ್ಳುತ್ತವೆ. ಅವುಗಳು ಸಾಮಾನ್ಯವಾಗಿ ಕೆಳಕಂಡಂತಿರುತ್ತವೆ.

ದೇಹದ ತೂಕದಲ್ಲಿ ಭಾರಿ ಇಳಿಕೆ
ಮತ್ತೆಮತ್ತೆ ಮರುಕಳಿಸುವ ಜ್ವರ
ಕೆಮ್ಮು ಮತ್ತು ಕಫ
ವಾಂತಿ
ನಿರಂತರವಾಗಿ ತೀವ್ರ ದಣೆವಾಗುವುದು
ಅತಿಸಾರ
ಬಾಯಿಯಲ್ಲಿ ಬಿಳಿ ಮಚ್ಚೆಗಳು ಕಾಣೆಸಿಕೊಳ್ಳುವುದು
ಬಾಯಿ ಹಾಗು ಜನನಾಂಗದ ಭಾಗಗಳಲ್ಲಿ ಹುಣ್ಣುಗಳು
ನೆನಪಿನ ಶಕ್ತಿ ಕುಂದುವುದು
ತಲೆನೋವು ಮತ್ತು ತಲೆಸುತ್ತು.

ಹರಡುವಿಕೆ ವಿಧಾನ :

ಹೆಚ್ಐವಿಯು ಸೋಂಕಿತ ವ್ಯಕ್ತಿಯ ಕೆಲ ದೈಹಿಕ ಸ್ರಾವಗಳು ಸೋಂಕು ರಹಿತ ವ್ಯಕ್ತಿಯ ಲೋಳೆ ಪೊರೆಯ ಅಥವಾ ಹಾನಿಗೀಡಾದ ಅಂಗಾಂಶಗಳ ಅಥವಾ ರಕ್ತಪ್ರವಾಹದ ಸಂಪರ್ಕಕ್ಕೆ ಬಂದಾಗ ಹರಡಬಹುದಾಗಿದೆ.

ಆ ದೈಹಿಕ ಸ್ರಾವಗಳೆಂದರೆ :
ರಕ್ತ
ವೀರ್ಯಾ
ಪೂರ್ವ-ವೀರ್ಯ
ಗುದನಾಳದ ಸ್ರಾವ
ಯೋನಿ ಸ್ರಾವ
ಮೊಲೆ ಹಾಲು

ಹೆಚ್ಐವಿಯು ಹರಡಬಹುದಾದ ಮಾರ್ಗಗಳು ಸಾಮಾನ್ಯವಾಗಿ ಕೆಳಕಂಡಂತಿವೆ.
*ಸೋಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಭೋಗದಲ್ಲಿ (ಯೋನಿ, ಗುದ ಹಾಗು ಮುಖ) ತೊಡಗುವುದರಿಂದ.
*ಸೋಂಕಿತ ರಕ್ತ ಮತ್ತು ರಕ್ತ ಪದಾರ್ಥಗಳನ್ನು ದಾನ ಪಡೆಯುವುದರಿಂದ.
*ಸೋಂಕಿತ ವ್ಯಕ್ತಿಯು ಬಳಸಿದ ಸೂಜಿ, ಸಿರಿಂಜ್ ಅಥವಾ ಇತರೆ ಯಾವುದೇ ಚೂಪಾದ ವಸ್ತುಗಳನ್ನು ಬಳಸುವುದರಿಂದ.
*ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆ, ಹೆರಿಗೆ ಮತ್ತು ಮೊಲೆಯುಣೆಸುವ ಸಂದರ್ಭಗಳಲ್ಲಿ.
*ಹೆಚ್ಐವಿಯು ಈ ಕೆಳಗಿನ ಮಾರ್ಗಗಳ ಮೂಲಕ ಹರಡುವುದಿಲ್ಲ.

ಹರಡುವ ಬಗ್ಗೆ ತಪ್ಪು ತಿಳುವಳಿಕೆ :

ಏಡ್ಸ್‌ ರೋಗ ಲಕ್ಷಣಗಳು
ಹೆಚ್ಐವಿ ಹರಡುವ ಬಗ್ಗೆ ತಪ್ಪು ತಿಳುವಳಿಕೆ

*ಹೆಚ್ಐವಿಯು ಒಂದು ಸಾಂಕ್ರಾಮಿಕ ರೋಗವಾಗಿದ್ದರು ಸಹ ಅದು ನೆಗಡಿ, ದಡಾರ ಮುಂತಾದ ರೋಗಗಳಂತೆ ಗಾಳಿ, ನೀರು, ಆಹಾರಗಳ ಮೂಲಕ ಹರಡುವುದ್ದಿಲ್ಲ.
*ಹೆಚ್ಐವಿ ಸೋಂಕಿತ ವ್ಯಕ್ತಿಯ ಜೊತೆಗೆ ಹಸ್ತಲಾಘವ ಮಾಡುವ ಮೂಲಕ, ಆ ವ್ಯಕ್ತಿಯನ್ನು ಆಲಿಂಗನ ಮಾಡುವುದರ ಮೂಲಕ.
*ಹೆಚ್ಐವಿ ಸೋಂಕಿತ ವ್ಯಕ್ತಿಯು ಬಳಸಿದ ತಟ್ಟೆ, ಲೋಟ, ಪಾತ್ರೆಗಳನ್ನು ಬಳಸುವುದರಿಂದ.
*ಹೆಚ್ಐವಿ ಸೋಂಕಿತ ವ್ಯಕ್ತಿಯೊಂದಿಗೆ ಆಹಾರ ಸೇವಿಸುವುದರಿಂದ.
*ಸೊಳ್ಳೆ ಅಥವಾ ಇತರೆ ಕೀಟಗಳ ಕಡಿತದಿಂದ.

ಪ್ರಸ್ತುತ ಹೆಚ್ಐವಿ ಸೋಂಕನ್ನು ವಾಸಿಮಾಡಲು ಔಷಧಿಗಳಾಗಲಿ ಅಥವಾ ಹೆಚ್ಐವಿ ಸೋಂಕನ್ನು ಬಾರದಂತೆ ತಡೆಗಟ್ಟಲು ಲಸಿಕೆಯಾಗಲಿ ಲಭ್ಯವಿಲ್ಲ. ಹಾಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅದನ್ನು ಬಾರದಂತೆ ತಡೆಗಟ್ಟುವುದೊಂದೆ ಸದ್ಯಕ್ಕೆ ಇರುವ ಪರಿಹಾರವಾಗಿದೆ.

ಮುನ್ನೆಚ್ಚರಿಕೆಯ ಕ್ರಮಗಳು

*ಹೆಚ್ಐವಿ ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಸಂಪರ್ಕವನ್ನು ಹೊಂದುವುದನ್ನು ತಡೆಯುವುದು.
ಕಾಂಡೊಮ್‌ ಉಪಯೋಗಿಸುವುದು.
*ಸೋಂಕು ಹರಡುವ ಸಾಧ್ಯತೆ ಕಡಿಮೆಯಿರುವ ಲೈಂಗಿಕ ವರ್ತನೆಗಳನ್ನು ಆಯ್ದಕೊಳ್ಳುವುದು. ಉದಾಹರಣೆಗೆ ಗುದ ಸಂಭೋಗ ಹಾಗು ಯೋನಿ ಸಂಭೋಗಕ್ಕೆ ಹೋಲಿಸಿದರೆ ಮುಖ ರತಿಯಲ್ಲಿ ಸೋಂಕು ಹರಡುವ ಸಾಧ್ಯತೆ ಅತ್ಯಲ್ಪವಾಗಿದೆ.
*ಹೆಚ್ಐವಿ ಸೋಂಕಿತ ವ್ಯಕ್ತಿಯು ಬಳಸಿದ ಸೂಜಿ, ಸಿರಿಂಜ್’ಗಳನ್ನು ಬಳಸದಿರುವುದು.
*ರಕ್ತವನ್ನು ದಾನಪಡೆಯುವುದಕ್ಕೆ ಮುಂಚೆ ಹೆಚ್ಐವಿ ಸೋಂಕು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳುವುದು.
*ಹೆಚ್ಐವಿ ಸೋಂಕಿತ ತಾಯಿಯು ಮಗುವಿಗೆ ಮೊಲೆಹಾಲು ನೀಡುವುದನ್ನು ತಡೆಯುವುದು.

ಮೊಟ್ಟ ಮೊದಲ AIDS ಪ್ರಕರಣ ಜೂನ್ 5, 1981ರಂದು ವರದಿಯಾಯಿತು, U.S.ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಸಂಸ್ಥೆಯು ಲಾಸ್ ಎಂಜಲೀಸ್‌ನ ಐವರು ಸಲಿಂಗಕಾಮಿಗಳಲ್ಲಿ ಏಡ್ಸ್‌ಗೆ ಕಾರಣವಾದ ನ್ಯುಮೊಸಿಸ್ಟಿಸ್ ಕಾರಿನೀ ನ್ಯುಮೋನಿಯಾದ ಈಗಲೂ PCP ಎಂದೇ ವರ್ಗೀಕರಿಸಲಾಗಿದೆ, ಆದರೆ ನ್ಯುಮೊಸಿಸ್ಟಿಸ್ ಜಿರೊವೆಸೀ ಇದಕ್ಕೆ ಕಾರಣ ಎನ್ನಲಾಗಿದೆ ಗುಂಪು ಇರುವುದನ್ನು ದಾಖಲಿಸಿತು. ಆರಂಭದಲ್ಲಿ, CDC ಈ ರೋಗಕ್ಕೆ ಯಾವುದೇ ಅಧಿಕೃತವಾದ ಹೆಸರನ್ನು ಹೊಂದಿರಲಿಲ್ಲ, ಅದರ ಜೊತೆಗಿರುವ ರೋಗಗಳ ಆಧಾರದಲ್ಲಿ ಈ ಕುರಿತು ಆಗಿಂದಾಗ್ಗೆ ಹೇಳಲಾಗುತ್ತಿತ್ತು, ಉದಾಹರಣೆಗೆ HIV ವೈರಸ್‌ನ್ನೇ ಆರಂಭದಲ್ಲಿ ಸಂಶೋಧಕರು ಲಿಂಫಡಿನೋಪತಿ ರೋಗ ಎಂದು ಕರೆಯುತ್ತಿದ್ದರು. ಈ ವೈರಸ್‌ಗಳಿಂದಾಗಿ ಕಾಪೊಸಿಯ ಸಾರ್ಕೋಮಾ ಮತ್ತು ಅವಕಾಶವಾದಿ ಸೋಂಕುಗಳಿಗೂ ಎಡೆ ಸಿಕ್ಕಿತು, ಬಳಿಕ 1981ರಲ್ಲಿ ಇದೇ ಹೆಸರಿನಲ್ಲಿ ಕಾರ್ಯಪಡೆಯನ್ನೂ ರಚಿಸಲಾಯಿತು. ಸಾಮಾನ್ಯ ಪತ್ರಿಕೆಗಳಲ್ಲಿ, ಸಲಿಂಗಕಾಮಿ-ಸಂಬಂಧಿತ ರೋಗ ನಿರೋಧಕ ಶಕ್ತಿ ಹೀನತೆ ಅರ್ಥ ನೀಡುವ GRID ಪದ ಹುಟ್ಟಿಕೊಂಡಿತು. ಈ ನಡುವೆ ಸೂಕ್ತ ಹೆಸರಿಗಾಗಿ ಹುಡುಕಾಟ ನಡೆಸಿದ CDCಯು, ಸೋಂಕಿತ ಸಮುದಾಯಗಳನ್ನು ನೋಡಿ “ದಿ 4H ರೋಗ,” ಎಂದು ಹೆಸರಿಟ್ಟಿತು, ಇದು ಹೈಟಿಯನ್ನರು, ಸಲಿಂಗಕಾಮಿಗಳು, ಹೆಮೊಫಿಲಿಯಾಕ್ಸ್‌, ಮತ್ತು ಹೆರಾಯಿನ್ ಬಳಕೆದಾರರಿಗೆ ಸೀಮಿತವಾಗಿತ್ತು. ಆದಾಗ್ಯೂ, AIDS ಕೇವಲ ಸಲಿಂಗಕಾಮಿ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ, GRID ಪದ ತಪ್ಪುದಾರಿಗೆ ಎಳೆದಿದೆ ಎಂದು ತೀರ್ಮಾನಿಸಲಾಯಿತು, ಮತ್ತು 1982ರ ಜುಲೈ ತಿಂಗಳಲ್ಲಿ ನಡೆದ ಸಭೆಯೊಂದರಲ್ಲಿ ಏಡ್ಸ್ ಪದವನ್ನು ಪರಿಚಯಿಸಲಾಯಿತು. ಸೆಪ್ಟೆಂಬರ್ 1982ರಲ್ಲಿ CDCಯು AIDS ಪದ ಬಳಕೆ ಆರಂಭಿಸಿತು ಮತ್ತು ಈ ರೋಗದ ಕುರಿತು ಸರಿಯಾದ ವ್ಯಾಖ್ಯಾನ ನೀಡಿತು. ಈ ನಡುವೆ, ಭಾರಿ ಚರ್ಚಿತವಾಗಿದ್ದ ವಿವಾದಾಸ್ಪದ OPV AIDS ಕಲ್ಪನೆ ಸಿದ್ಧಾಂತದ ಪ್ರಕಾರ, 1950ರ ಅಂತ್ಯದಲ್ಲಿ ಹಿಲರಿ ಕೊಪ್ರೊವಿಸ್ಕಿ ಅವರು ಬೆಲ್ಜಿಯಂ ಕಾಂಗೊದಲ್ಲಿ ಪೋಲಿಯೋಮೈಲಿಟಿಸ್ ಲಸಿಕೆ ಕುರಿತು ಸಂಶೋಧನೆ ನಡೆಸುತ್ತಿದ್ದಾಗಲೇ ಏಡ್ಸ್ ಸಾಂಕ್ರಾಮಿಕ ರೋಗ ಶುರುವಾಗಿತ್ತು, ಆದರೆ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಈ ಸಿದ್ಧಾಂತವನ್ನು ಲಭ್ಯವಿರುವ ಯಾವುದೇ ನಿದರ್ಶನಗಳು ಪುಷ್ಟೀಕರಿಸುವುದಿಲ್ಲ ಎಂಬುದು ವಿಜ್ಞಾನಿಗಳ ಒಮ್ಮತದ ಅಭಿಪ್ರಾಯ. HIV ಪ್ರಾಯಶಃ ಆಫ್ರಿಕಾದಿಂದ ಹೈಟಿಗೆ ಮತ್ತು ಆ ನಂತರ 1969ರ ಸುಮಾರಿಗೆ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಪ್ರವೇಶಿಸಿತು ಎಂದು ಇತ್ತೀಚಿನ ಅಧ್ಯಯನಗಳು ಹೇಳುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಗರ್ಭಪಾತ

ಗರ್ಭಪಾತ ಆಗುವ ಸಾಧ್ಯತೆಗಳು ಯಾವಾಗ?

ಆಯುಧ ಪೂಜೆ

ಆಯುಧ ಪೂಜೆ ಮಾಡುವ ವಿಶೇಷತೆ