ಅಕಾಲ ಪ್ರಸವ ಅಥವಾ ಸ್ವಾಭಾವಿಕ ಗರ್ಭಪಾತವು ಸಾಮಾನ್ಯವಾಗಿ ಮಾನವರಲ್ಲಿ ಖಚಿತವಾದ ಗರ್ಭಧಾರಣೆಯಾದ 24 ವಾರಗಳೊಳಗೆ ಸಂಭವಿಸುವ ಪಿಂಡ ಅಥವಾ ಭ್ರೂಣವು ಬದುಕುಳಿಯಲು ಅಸಮರ್ಥವಾದ ಹಂತದಲ್ಲಿ ಉಂಟಾಗುವ ಗರ್ಭದ ಅಸಂಕಲ್ಪಿತ, ಸಹಜವಾದ ಮರಣ. ಗರ್ಭಪಾತವು ಪ್ರಸವಪೂರ್ವದ ಅತೀ ಸಾಮಾನ್ಯವಾದ ಸಂಕೀರ್ಣ ಪರಿಸ್ಥಿತಿಯಾಗಿದೆ.
ಗರ್ಭಾವಸ್ಥೆಯ ಸಂದರ್ಭದಲ್ಲಿ ಸಹಜವಾಗಿಯೇ ಬೆಳೆಯುವ ಗರ್ಭ ಚೀಲವು ಬರಿದಾಗುವುದು ಮತ್ತು ಭ್ರೂಣದ ಅಂಶವು ಇಲ್ಲದೇ ಇರುವುದು ಅಥವಾ ಇದರ ಬೆಳವಣಿಗೆಯು ಮೊದಲ ಹಂತದಲ್ಲೇ ನಿಂತುಹೋಗಿರುವುದು. ಈ ಸ್ಥಿತಿಗೆ ಇರುವ ಇತರ ಹೆಸರುಗಳು “ಬತ್ತಿದ ಅಂಡಾಣು ” ಮತ್ತು “ಭ್ರೂಣವಿಲ್ಲದ ಗರ್ಭಧಾರಣೆ “
ಅನಿವಾರ್ಯ ಗರ್ಭಪಾತ ಇದು ಗರ್ಭಕೋಶದ ಕಂಠವು ವಿಕಸನ ಹೊಂದಿ ತೆರೆಯಲ್ಪಟ್ಟಿದ್ದರೂ, ಭ್ರೂಣವು ಹೊರಬರದೇ ಇದ್ದ ಸ್ಥಿತಿಯನ್ನು ವಿವರಿಸುತ್ತದೆ. ಇದು ಸಾಮಾನ್ಯವಾಗಿ ಪೂರ್ಣ ಗರ್ಭಪಾತವಾಗಿ ಮುಂದುವರೆಯುವುದು. ಭ್ರೂಣದ ಹೃದಯಬಡಿತವು ನಿಲ್ಲುವ ಹಾಗೆ ಕಂಡುಬಂದರೂ ಇದು ಈ ಸಂದರ್ಭದಲ್ಲಿ ಪರಿಗಣಿಸಬೇಕಾದ ಅಂಶವಲ್ಲ.
ಪೂರ್ಣಪ್ರಮಾಣದ ಗರ್ಭಪಾತ : ಗರ್ಭಧಾರಣೆಯಲ್ಲಿನ ಎಲ್ಲಾ ಅಂಶಗಳೂ ಗರ್ಭಕೋಶದಿಂದ ಹೊರಹಾಕಲ್ಪಡುವುದು. ಈ ಗರ್ಭಧಾರಣೆ ಒಳಗೊಂಡ ಅಂಶಗಳೆಂದರೆ: ಟ್ರೋಪೋಪ್ಲಾಸ್ಟ್, ಕೋರಿಯೋನಿಕ್ ವಿಲ್ಲೈ, ಗರ್ಭಚೀಲ, ಹಳದಿ ಲೋಳೆ ತುಂಬಿದ ಕೋಶಚೀಲ ಮತ್ತು ಭ್ರೂಣದ ತುದಿ ಅಥವಾ ಗರ್ಭಾವಧಿ ಮುಗಿದಬಳಿಕದ ಭ್ರೂಣ, ಕರುಳುಬಳ್ಳಿ, ಪ್ಲಾಸೆಂಟ, ಆಮ್ನಿಯೋಟಿಕ್ ದ್ರವ ಮತ್ತು ಆಮ್ನಿಯೋಟಿಕ್ ಪೊರೆ.
ಅಪೂರ್ಣ ಗರ್ಭಪಾತ : ಇದರಲ್ಲಿ ಹೆಚ್ಚಿನ ಅಂಗಾಶಗಳು ಹೊರಹಾಕಲ್ಪಟ್ಟರೂ ಮತ್ತೆ ಕೆಲವು ಗರ್ಭಕೋಶದಲ್ಲಿಯೇ ಉಳಿದಿರುತ್ತದೆ.
ತಪ್ಪಿದ ಗರ್ಭಪಾತ : ಇದರಲ್ಲಿ ಭ್ರೂಣವು ಮರಣಹೊಂದಿದ್ದು, ಗರ್ಭವೈಫಲ್ಯ ಅಥವಾ ಗರ್ಭಪಾತವಿನ್ನೂ ಆಗದ ಸ್ಥಿತಿ. ಇದು ನಿಧಾನಿತ ಅಥವಾ ತಪ್ಪಿದ ಗರ್ಭಪಾತ ಎಂದೂ ಕರೆಯಲ್ಪಡುತ್ತದೆ.
ಈ ಕೆಳಗಿನ ಎರಡು ಪದಗಳು ಅಕಾಲ ಗರ್ಭಪಾತದ ತೀವ್ರತರ ತೊಡಕುಗಳುಂಟಾಗುವ ಜಟಿಲ ಪರಿಸ್ಥಿತಿಗಳನ್ನು ಪರಿಗಣಿಸುತ್ತವೆ.
ಕೀವುಗಟ್ಟಿದ ಗರ್ಭಪಾತ : ಇದು ತಪ್ಪಿದ ಅಥವಾ ಅಪೂರ್ಣ ಗರ್ಭಸ್ರಾವದ ಬಳಿಕ ಜೀವಕೋಶಗಳಲ್ಲಿ ಹರಡುವ ಸೋಂಕಿನಿಂದ ಉಂಟಾಗುತ್ತದೆ. ಗರ್ಭಾಶಯದ ಸೋಂಕಿನಿಂದ ಇತರ ಭಾಗಗಳಿಗೂ ಸೋಂಕು ಹರಡುವ ಸಾಧ್ಯತೆಯಿದ್ದು (ಸೆಪ್ಟಿಸೀಮಿಯ) ಇದು ಆ ಮಹಿಳೆಗೆ ಪ್ರಾಣಾಪಾಯ ತರುವ ಗಂಭೀರ ಸ್ಥಿತಿಯಾಗಿದೆ.
ಗರ್ಭ ನಷ್ಟದ ಪುನರಾವರ್ತನೆ ಅಥವಾ ಪುನರಾವರ್ತಿತ ಗರ್ಭವೈಫಲ್ಯವು ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು “ರೂಢಿಗೊಂಡ ಗರ್ಭಪಾತ ” ಎಂದು ಕರೆಯಲಾಗಿದೆ. ಅನುಕ್ರಮವಾಗಿ ಮೂರು ಭಾರಿ ಉಂಟಾಗುವ ಅಕಾಲ ಪ್ರಸವ. ಗರ್ಭಪಾತದಲ್ಲಿ ಕೊನೆಯಾಗುವ ಗರ್ಭಧಾರಣೆಯ ಅನುಪಾತವು 15%ಆಗಿದ್ದು, ಎರಡು ಅನುಕ್ರಮ ಗರ್ಭವೈಫಲ್ಯಗಳು ಸಂಭವಿಸುವ ಸಾಧ್ಯತೆಯ ಪ್ರಮಾಣ 2.25% ಮತ್ತು, ಮೂರು ಅನುಕ್ರಮ ಗರ್ಭವೈಫಲ್ಯಗಳು ಸಂಭವಿಸುವ ಸಾಧ್ಯತೆಯ ಪ್ರಮಾಣ 0.34%. ಪದೇ ಪದೇ ಗರ್ಭನಷ್ಟ ಸಂಭವಿಸುವ ಪ್ರಮಾಣ 1%. ಹೆಚ್ಚಿನ ಪ್ರಮಾಣದ (85%)ಮಹಿಳೆಯರಲ್ಲಿ ಎರಡು ಭಾರಿ ಗರ್ಭಪಾತವಾದ ನಂತರದಲ್ಲಿ ಸಹಜವಾದ ಗರ್ಭಧಾರಣೆಯು ಯಶಸ್ವಿಯಾಗಿ ಮುಂದುವರೆಯುತ್ತದೆ.
ಗರ್ಭಪಾತದ ದೈಹಿಕ ಚಿಹ್ನೆಗಳು ಗರ್ಭಧಾರಣೆಯ ಕಾಲಾವಧಿಗೆ ಸಂಬಂಧಿಸಿದಂತೆ ಬೇರೆ ಬೇರೆ ಲಕ್ಷಣಗಳಿಂದ ಕೂಡಿರುತ್ತದೆ.
ಆರು ವಾರಗಳವರೆಗೆ ಸೆಡೆತ ಅಥವಾ ನೋವಿನಿಂದ ಕೂಡಿದ ಋತುಸ್ರಾವದೊಡನೆ, ರಕ್ತ ಹೆಪ್ಪುಗಟ್ಟಿದ ಸಣ್ಣ ಸಣ್ಣ ತುಣುಕುಗಳು ಕಂಡುಬರಬಹುದು.
ಆರರಿಂದ ಹದಿಮೂರು ವಾರಗಳವರೆಗೆ, ಭ್ರೂಣದ ಸುತ್ತಲೂ ರಕ್ತಹೆಪ್ಪುಗಟ್ಟಲು ಆರಂಭಗೊಂಡು, ಪ್ಲಾಸಂಟಾದಲ್ಲೂ ರಕ್ತ ಹೆಪ್ಪುಗಟ್ಟಿ ಸುಮಾರು 5ಸೆಂ.ಮೀ ಗಾತ್ರದ ರಕ್ತಗೆಡ್ಡೆಗಳು ಪೂರ್ಣ ಗರ್ಭಪಾತ ಸಂಭವಿಸುವ ಮೊದಲು ಹೊರಹಾಕಲ್ಪಡುತ್ತವೆ. ಈ ಪ್ರಕ್ರಿಯೆಯು ಕೆಲವು ಗಂಟೆಗಳಿಂದ, ಕೆಲವು ದಿನಗಳವರೆಗೆ ಬಿಟ್ಟು ಬಿಟ್ಟು ನಡೆಯಬಹುದು. ಈ ಲಕ್ಷಣಗಳು ವಿಭಿನ್ನವಾಗಿ ಕಂಡುಬರುವುದರ ಜೊತೆಗೆ ದೈಹಿಕ ಅನಾರೋಗ್ಯದ ಕಾರಣದಿಂದ ವಾಂತಿ ಮತ್ತು ಭೇದಿಯುಂಟಾಗುವ ಸಾಧ್ಯತೆಗಳನ್ನೂ ಹೊಂದಿವೆ. ಹದಿಮೂರು ವಾರಗಳ ಬಳಿಕ ಭ್ರೂಣವು ಗರ್ಭಕೋಶದಿಂದ ಸುಲಭವಾಗಿ ಹೊರಬರುತ್ತದೆ, ಆದರೂ, ಪ್ಲಾಸೆಂಟವು ಪೂರ್ತಿಯಾಗಿ ಅಥವಾ ಇದರ ಸ್ವಲ್ಪ ಭಾಗವು ಗರ್ಭಕೋಶದಲ್ಲೇ ಉಳಿದುಕೊಂಡು ಅಕಾಲಿಕ ಗರ್ಭಪಾತವನ್ನುಂಟುಮಾಡುತ್ತದೆ. ದೈಹಿಕ ಲಕ್ಷಣಗಳಾದ ರಕ್ತಸ್ರಾವ, ಸೆಡೆತ ಮತ್ತು ನೋವು ಪ್ರಾಥಮಿಕ ಹಂತದ ಗರ್ಭಪಾತದ ಲಕ್ಷಣಗಳಂತೇ ಕಂಡುಬಂದರೂ, ಇವು ಅತೀ ಗಂಭೀರ ಮತ್ತು ಹೆರಿಗೆ ನೋವಿನಂತಿರುತ್ತದೆ.
ಗರ್ಭಪಾತಗಳು ಹಲವಾರು ಕಾರಣಗಳಿಂದ ಉಂಟಾಗಬಹುದು. ಈ ಎಲ್ಲಾ ಕಾರಣಗಳನ್ನೂ ಪತ್ತೆಹಚ್ಚಲಾಗುವುದಿಲ್ಲ. ಇವುಗಳಲ್ಲಿ ಅನುವಂಶಿಕ ತೊಂದರೆಗಳು, ಗರ್ಭಕೋಶದ ತೊಂದರೆಗಳು ಅಥವಾ ಹಾರ್ಮೋನ್ಗಳ ವೈಪರೀತ್ಯಗಳು, ಪುನರುತ್ಪಾದಕ ನಾಳಗಳ ಸೋಂಕು, ಮತ್ತು ಜೀವಕೋಶಗಳ ನಿರಾಕರಣೆಗಳು, ಗರ್ಭಪಾತ ಉಂಟುಮಾಡುವ ಕೆಲವು ಕಾರಣಗಳು. ಹೆಚ್ಚಿನ ಗರ್ಭಪಾತವು (ಮೂರನೇ ಎರಡು ಭಾಗದಿಂದ ಮುಕ್ಕಾಲು ಭಾಗದಷ್ಟು ಅಧ್ಯಯನಗಳ ಪ್ರಕಾರ)ಮೊದಲ ತ್ರೈಮಾಸಿಕದಲ್ಲಾಗುತ್ತದೆ.
ಮೊದಲ 13 ವಾರಗಳಲ್ಲಿ ಗರ್ಭಪಾತವಾದ ಭ್ರೂಣಗಳಲ್ಲಿ ಕ್ರೋಮೊಸೋಮಿನ ಅಸಹಜತೆಗಳು ಹೆಚ್ಚಾಗಿ ಕಂಡುಬರುತ್ತದೆ. ಜೀನಿನಲ್ಲಿ ತೊಂದರೆಯಿರುವವರಲ್ಲಿ ಗರ್ಭಧಾರಣೆಯಾದಾಗ 95%ರಷ್ಟು ಭಾಗ ಗರ್ಭಪಾತದಲ್ಲಿ ಕೊನೆಗಾಣುತ್ತದೆ. ಹೆಚ್ಚಿನ ಕ್ರೋಮೊಸೋಮಿನ ತೊಂದರೆಗಳು ಆಕಸ್ಮಿಕವಾಗಿ ಆಗುತ್ತದೆ, ಇದು ದಂಪತಿಗಳಿಂದ ಬಂದಿಲ್ಲದಿದ್ದರೂ ಮರುಕಳಿಸುವ ಸಾಧ್ಯತೆಯಿರುತ್ತದೆ. ಕ್ರೋಮೊಸೋಮಿನ ತೊಂದರೆಗಳು ದಂಪತಿಗಳಿಂದಲೂ ಬರುವ ಸಾಧ್ಯತೆಯಿರುತ್ತದೆ. ಇದು ಪದೇ ಪದೇ ಗರ್ಭಪಾತವಾಗುವವರಲ್ಲಿ ಅಥವಾ ದಂಪತಿಗಳಲ್ಲಿ ಮೊದಲೆ ಈ ರೀತಿಯ ಮಕ್ಕಳಿದ್ದರೆ ಅಥವಾ ಸಂಬಂಧಿಕರಲ್ಲಿ ಹುಟ್ಟಿದಾಗಲೇ ವೈಕಲ್ಯತೆ ಹೊಂದಿದ್ದ ಮಕ್ಕಳಿದ್ದರೇ ಹೆಚ್ಚಾಗಿ ಗರ್ಭಪಾತವು ಸಂಭವಿಸುತ್ತದೆ. ಜೀನಿಗೆ ಸಂಬಂಧಪಟ್ಟ ತೊಂದರೆಗಳು ಹೆಚ್ಚಾಗಿ ವಯಸ್ಸಾದ ದಂಪತಿಗಳಿಂದ ಹುಟ್ಟುವ ಮಕ್ಕಳಿಗೆ ಬರುತ್ತದೆ: ಹೆಚ್ಚು ವಯಸ್ಸಾದ ಮಹಿಳೆ ಗರ್ಭಧರಿಸಿದಾಗ ಗರ್ಭಪಾತ ಉಂಟಾಗುವ ದರವು ಹೆಚ್ಚಿರುತ್ತದೆ.
ಗರ್ಭಪಾತವಾಗುವ ಇನ್ನೊಂದು ಸಂದರ್ಭವೆಂದರೆ ಪ್ರೊಜೆಸ್ಟರಾನ್ ಕೊರತೆ. ಮಹಿಳೆಯ ಋತುಚಕ್ರದ ದ್ವಿತೀಯಾರ್ಧದಲ್ಲಿ ಪ್ರೊಜೆಸ್ಟರಾನ್ ಕೊರತೆ ಕಂಡುಬಂದರೆ ಪ್ರೊಜೆಸ್ಟರಾನ್ ಪೂರಕಗಳನ್ನು ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಸೇವಿಸಲು ಸಲಹೆ ನೀಡುತ್ತಾರೆ.ಆದರೆ ಯಾವುದೇ ಅಧ್ಯಯನಗಳು ಸಾಮಾನ್ಯವಾಗಿ ಮೊದಲ ತ್ರೈಮಾಸಿಕದಲ್ಲಿ ಪ್ರೊಜೆಸ್ಟರಾನ್ ಪೂರಕಗಳು ಗರ್ಭಪಾತದ ಅಪಾಯಗಳನ್ನು ಕಡಿಮೆ ಮಾಡುತ್ತದೆಂದು ಹೇಳಿಲ್ಲ, ಮತ್ತು ಲೂಟಿಯಲ್ ಹಂತದ ತೊಂದರೆಗಳ ಗುರುತಿಸುವಿಕೆಯು ಗರ್ಭಪಾತಕ್ಕೆ ನೆರವಾಗುವುದು ಪ್ರಶ್ನಾರ್ಹವಾಗಿದೆ.
ಎರಡನೇ ತ್ರೈಮಾಸಿಕ
ಗರ್ಭಾಶಯದ ವಿಕಾರ, ಗರ್ಭಾಶಯದ ಬೆಳವಣಿಗೆ, ಅಥವಾ ಗರ್ಭಾಶಯದ ಕೊರಳಿನ ತೊಂದರೆಗಳಿಂದ 15%ದಷ್ಟು ಗರ್ಭಪಾತ ಆಗುತ್ತದೆ. ಈ ಪರಿಸ್ಥಿತಿಗಳು ಅವಧಿಪೂರ್ವ ಜನನಕ್ಕೆ ಎಡೆಮಾಡಿ ಕೊಡುತ್ತದೆ.
ಎರಡನೇ ತ್ರೈಮಾಸಿಕದಲ್ಲಿ ಹೊಕ್ಕಳ ಬಳ್ಳಿಯ ತೊಂದರೆಯಿಂದ 19%ದಷ್ಟು ಗರ್ಭಪಾತವುಂತಾಗುತ್ತದೆ. ಮಾಸುಚೀಲದಲ್ಲಿನ ತೊಂದರೆಯಿದ್ದಾಗಲೂ ಸಹ ನಂತರದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಪಾತವುಂತಾಗುತ್ತದೆ.
ಸಾಮಾನ್ಯ ಅಪಾಯದ ಅಂಶಗಳು
ಒಂದಕ್ಕಿಂತ ಹೆಚ್ಚು ಭ್ರೂಣವನ್ನು ಒಳಗೊಂಡ ಗರ್ಭಧಾರಣೆಗಳಲ್ಲಿ ಗರ್ಭಪಾತದ ಅಪಾಯ ಹೆಚ್ಚಾಗಿರುತ್ತದೆ.
ನಿಯಂತ್ರಣದಲ್ಲಿಲ್ಲದ ಸಕ್ಕರೆ ಖಾಯಿಲೆ ಹೆಚ್ಚಾಗಿ ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ. ಸಕ್ಕರೆ ಖಾಯಿಲೆ ನಿಯಂತ್ರಣದಲ್ಲಿರುವ ಸ್ತ್ರೀಯರಲ್ಲಿ ಗರ್ಭಪಾತದ ಅಪಾಯ ನಿಯಂತ್ರಣದಲ್ಲಿರುತ್ತದೆ. ಏಕೆಂದರೆ ಸಕ್ಕರೆ ಖಾಯಿಲೆ ಗರ್ಭಪಾತದ ಸಮಯದಲ್ಲಿ ಗರ್ಭಾವಸ್ಥೆ ಸಕ್ಕರೆ ಖಾಯಿಲೆನ್ನು ಉಂಟುಮಾಡಬಹುದು, ರೋಗದ ಲಕ್ಷಣಗಳನ್ನು ಪರೀಕ್ಷಿಸುವುದು ಜನನ ಪೂರ್ವದ ಎಚ್ಚರಿಕೆಯ ಒಂದು ಮುಖ್ಯ ಭಾಗವಾಗಿದೆ.
ಪಾಲಿಸೈಸ್ಟಿಕ್ ಒವರಿ ಲಕ್ಷಣ ಗರ್ಭಪಾತದ ಅಪಾಯದ ಒಂದು ಸ್ಥಿತಿಯಾಗಿದೆ, ಪಿಸಿಒಎಸ್ ಹೊಂದಿರುವ 30-50% ಸ್ತ್ರೀಯರ ಗರ್ಭಧಾರಣೆಗಳು ಮೊದಲ ತ್ರೈಮಾಸಿಕದಲ್ಲಿ ಗರ್ಭಪಾತವಾಗುತ್ತಿವೆ. ಮೆಟ್ಫೊರ್ಮೆನ್ ಎನ್ನುವ ಔಷಧಿಯ ಚಿಕಿತ್ಸೆ ಪಿಸಿಒಎಸ್ ಹೊಂದಿರುವ ಮಹಿಳೆಯರಲ್ಲಿ ಗರ್ಭಪಾತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತೋರಿಸಿದೆ, ಮೆಟ್ಫೊರ್ಮೆನ್ ಚಿಕಿತ್ಸೆ ಮಾಡಿದ ಗುಂಪುಗಳು ಕಂಟ್ರೋಲ್ ಗುಂಪುಗಳ ಸುಮಾರು ಮೂರನೆಯ ಒಂದು ಭಾಗದ ಗರ್ಭಪಾತದ ಪ್ರಮಾಣಗಳನ್ನು ಅನುಭವಿಸಿದವು. ಆದರೂ, ಗರ್ಭಧಾರಣೆಯಲ್ಲಿ ಮೆಟ್ಫೊರ್ಮೆನ್ ಚಿಕಿತ್ಸೆಯ 2006ರ ಅವಲೋಕನ ಸುರಕ್ಷತೆಗೆ ಸಾಕಷ್ಟು ಪುರಾವೆಗಳನ್ನು ಹೊಂದಿಲ್ಲ ಮತ್ತು ಈ ಔಷಧಿಯ ನಿತ್ಯದ ಚಿಕಿತ್ಸೆಯನ್ನು ಶಿಫಾರಸ್ಸು ಮಾಡಿಲ್ಲ.
ಕೆಲವೊಮ್ಮೆ ಬೆಳವಣಿಗೆಯಾಗುತ್ತಿರುವ ಭ್ರೂಣಕ್ಕೆ ಸರಿಯಾದ ನಿರೋಧಕ ಶಕ್ತಿ ದೊರೆಯದೆ ಇರುವುದು ಪ್ರಿಕ್ಲಾಂಪ್ಸಿಯ ಎಂದು ಕರೆಯಲ್ಪಡುವ ಗರ್ಭಧಾರಣೆಯ ಸಮಯದಲ್ಲಿನ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ ಮತ್ತು ಇದು ಗರ್ಭಪಾತದ ಅಪಾಯದ ಜೊತೆ ಸಂಬಂಧವನ್ನು ಹೊಂದಿದೆ. ಅಂತೆಯೇ, ಸ್ತ್ರೀಯರಲ್ಲಿ ಗರ್ಭಪಾತಗಳು ಪುನರಾವರ್ತನೆಯಾದ ಇತಿಹಾಸವನ್ನು ಹೊಂದಿದ್ದರೆ ಪ್ರಿಕ್ಲಾಂಪ್ಸಿಯ ಆಗುವ ಅಪಾಯವಿದೆ.
ಹೈಪೊಥೈರೈಡಿಸಮ್ನ ತೀವ್ರ ಸ್ಥಿತಿ ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ. ಗರ್ಭಪಾತದ ಪ್ರಮಾಣದ ಮೇಲೆ ಹೈಪೊಥೈರೈಡಿಸಮ್ ಪ್ರಭಾವ ಬೀರುತ್ತದೆ ಎಂದು ಎಲ್ಲೂ ಪ್ರಮಾಣೀಕರಿಸಿಲ್ಲ. ಅಟೊ ಇಮ್ಯೂನ್ ರೋಗದಂತಹ ಕೆಲವು ಪ್ರತಿರಕ್ಷಿತ ಸ್ಥಿತಿಗಳು ಇದ್ದಾಗ ಅತ್ಯಂತ ಹೆಚ್ಚಿಗೆ ಗರ್ಭಪಾತವಾಗುವ ಅಪಾಯವಿದೆ.
ಕೆಲವು ವ್ಯಾಧಿಗಳು, ರುಬೆಲ್ಲ, ಕ್ಲಮಿದಿಯ ಮತ್ತು ಮುಂತಾದವುಗಳು ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತವೆ.
ತಂಬಾಕು(ಸಿಗರೇಟ್), ಧೂಮಪಾನ ಮಾಡುವವರಲ್ಲಿ ಗರ್ಭಪಾತದ ಅಪಾಯ ಹೆಚ್ಚಾಗಿರುತ್ತದೆ. ಗರ್ಭಪಾತದ ಹೆಚ್ಚಳ ತಂದೆ ಮಾಡುವ ಸಿಗರೇಟ್ ಸೇವನೆ ಜೊತೆ ಸಹ ಸಂಬಂಧವನ್ನು ಹೊಂದಿದೆ. ಪುರುಷರನ್ನು ಕುರಿತು ನಡೆಸಿದ ಅಧ್ಯಯನದಲ್ಲಿ ದಿನದಲ್ಲಿ 20ಕ್ಕಿಂತ ಕಡಿಮೆ ಸಿಗರೇಟು ಸೇದುವ ತಂದೆಯರಲ್ಲಿ 4% ಅಪಾಯ ಹೆಚ್ಚಾಗಿದೆ ಮತ್ತು ದಿನಕ್ಕೆ 20ಕ್ಕಿಂತ ಹೆಚ್ಚು ಸಿಗರೇಟುಗಳನ್ನು ಸೇದುವ ತಂದೆಯರಲ್ಲಿ 81% ಗರ್ಭಪಾತದ ಅಪಾಯ ಹೆಚ್ಚಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಕೊಕೇನ್ ಉಪಯೋಗ ಗರ್ಭಪಾತದ ಪ್ರಮಾಣಗಳನ್ನು ಹೆಚ್ಚಿಸುತ್ತದೆ. ದೈಹಿಕ ಗಾಯ, ವಾತಾವರಣದಲ್ಲಿನ ವಿಷದ ಅಂಶಗಳಿಗೆ ತೆರೆದುಕೊಳ್ಳುವಿಕೆ, ಮತ್ತು ಗರ್ಭಧಾರಣೆಯ ಸಮಯದಲ್ಲಿ ಆಯ್ಯುಡಿಯ ಬಳಕೆಗಳು ಸಹ ಹೆಚ್ಚಿನ ಗರ್ಭಪಾತದ ಅಪಾಯದ ಜೊತೆ ಸಂಬಂಧವನ್ನು ಹೊಂದಿದೆ. ಮುಖ್ಯವಾಗಿ ಪ್ಯಾರಕ್ಸೆಟಿನ್ ಮತ್ತು ವೆನ್ಲಫ್ಯಾಕ್ಸೈನ್ನಂತಹ ಖಿನ್ನತೆ ನಿವಾರಕ ಔಷಧಗಳು ಸ್ವಾಭಾವಿಕ ಗರ್ಭಪಾತಕ್ಕೆ ಕಾರಣವಾಗುತ್ತವೆ.
ಧನ್ಯವಾದಗಳು.
GIPHY App Key not set. Please check settings