ಅಗಸೆ ಬೀಜಗಳು ಕಂದುಬಣ್ಣದ ಬೆಳೆಯಾಗಿದ್ದು ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಒಮೆಗಾ – 3 ಕೊಬ್ಬಿನಾಮ್ಲಗಳು, ಫೈಬರ್ ಉತ್ತಮ ಪ್ರಮಾಣದಲ್ಲಿ ಇದೆ. ಎಲ್ಲಾ ಪೋಷಕಾಂಶಗಳು ಜೀರ್ಣಕಾರಿ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಗಸೆ ಬೀಜ ಸುಲಭವಾಗಿ ಪ್ರತಿ ಮನೆಯ ಅಡುಗೆ ಮನೆಯಲ್ಲಿ ಕಂಡುಬರುತ್ತದೆ. ಇದು ರುಚಿಯನ್ನು ಹೆಚ್ಚಿಸುವುದಲ್ಲದೆ ಅನೇಕ ಗಂಭೀರ ಕಾಯಿಲೆಗಳಿಂದ ನಿಮ್ಮನ್ನು ದೂರವಿಡಲು ಸಹಕಾರಿಯಾಗಿದೆ. ಸ್ಥೂಲಕಾಯದಿಂದ ಬಳಲುತ್ತಿದ್ದರೆ ಅಥವಾ ಚರ್ಮ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರೆ, ಅಗಸೆ ಬೀಜವನ್ನು ತೆಗೆದುಕೊಳ್ಳಿ. ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿಯೂ ಇದು ಪ್ರಯೋಜನಕಾರಿ.
ಅಗಸೆ ಬೀಜಗಳ ಪ್ರಯೋಜನಗಳು ಅಗಸೆಬೀಜದಲ್ಲಿ ಆಂಟಿ-ಆಕ್ಸಿಡೆಂಟ್ಸ್ ಮತ್ತು ಫೈಟೊಕೆಮಿಕಲ್ಸ್ ಗುಣ ಲಕ್ಷಣಗಳಿವೆ, ಇದು ಹೆಚ್ಚುತ್ತಿರುವ ವಯಸ್ಸಿನಲ್ಲಿ ಮುಖದ ಚರ್ಮವನ್ನು ಯುವ್ವನಯುಕ್ತವಾಗಿರಿಸುತ್ತದೆ. ಸುಕ್ಕುಗಳು ಸಮಸ್ಯೆ ದೂರವಾಗಿಸಿ ಮತ್ತು ಚರ್ಮವು ಹೊಳೆಯುವಂತೆ ಮಾಡುತ್ತದೆ.ಒಮೆಗಾ -3 ಕೊಬ್ಬಿನಾಮ್ಲಗಳು, ಪ್ರೋಟೀನ್ಸ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಇದರಲ್ಲಿವೆ. ಅಗಸೆ ಬೀಜಗಳು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಅಗಸೆ ಬೀಜದ ಹುಡಿ ಸೇವನೆ ಮಾಡಿದ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಿರಿ. ಇದು ದೇಹದಲ್ಲಿ ಉಷ್ಣತೆ ಹೆಚ್ಚು ಮಾಡುವ ಕಾರಣದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿದರೆ ಅದು ದೇಹವನ್ನು ತಂಪಾಗುವಂತೆ ಮಾಡುವುದು.
ಅಗಸೆಬೀಜವನ್ನು ನಿಯಮಿತವಾಗಿ ಬಳಸುವ ಮೂಲಕ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಬಹುದು. ಇದರಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.
ಉರಿಯೂತದ ಕಾಯಿಲೆ, ಹೃದಯ ಕಾಯಿಲೆ, ಹಾರ್ಮೋನುಗಳ ಅಸಮತೋಲನ, ಹೊಟ್ಟೆ ಉಬ್ಬರ ಮತ್ತು ಎಡಿಮಾವನ್ನು ಕಡಿಮೆ ಮಾಡುತ್ತದೆ. ಆಗಸೆ ಬೀಜಗಳು ಟೈಪ್ 2 ಡಯಾಬಿಟಿಸ್, ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಲ್ಲದು.
ಶಾಂಪೂ ಬಳಸಿ ತಲೆ ಸ್ನಾನ ಮಾಡಿದ ನಂತರ ಅಗಸೆ ಬೀಜದ ಎಣ್ಣೆಯನ್ನು ತಲೆ ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ ನಿಮ್ಮ ಕೂದಲಿನ ರಕ್ಷಣೆ ಮಾಡಿಕೊಳ್ಳಬಹುದು.
ಅಗಸೆಬೀಜವನ್ನು ನಿಯಮಿತವಾಗಿ ಸೇವಿಸುವ ಮೂಲಕ ನೀವು ನಿಮ್ಮ ಜೀರ್ಣಕ್ರಿಯೆ ಶಕ್ತಿಯನ್ನು ಹೆಚ್ಚಿಸಬಹುದು. ಇದರಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಕ್ರಿಯೆಯ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮಲಬದ್ಧತೆಯ ಸಮಸ್ಯೆಗಳಿಂದ ನಿಮ್ಮನ್ನು ದೂರುವಿಡುತ್ತದೆ.
ಸ್ಥೂಲಕಾಯ ಹೊಂದಿರುವವರಿಗೆ ಅಗಸೆ ಬೀಜ ರಾಮಬಾಣ. ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ಇದು ಪ್ರಯೋಜನಕಾರಿ.
ಖಾಲಿ ಹೊಟ್ಟೆಯಲ್ಲಿ ಅಗಸೆಬೀಜವನ್ನು ತಿನ್ನಬಹುದು. ಇದಲ್ಲದೆ, ರಾತ್ರಿ ಮಲಗುವ ಮೊದಲೇ ಅಗಸೆಬೀಜವನ್ನು ಸೇವಿಸಬಹುದು, ಏಕೆಂದರೆ ಇದು ಉತ್ತಮ ನಿದ್ರೆ ಮಾಡಲು ತುಂಬಾ ಸಹಾಯ ಮಾಡುತ್ತದೆ.
ಅಗಸೆ ಬೀಜಗಳನ್ನು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ನಮ್ಮ ನೆತ್ತಿ ಹಾಗೂ ತಲೆಯ ಸಂಪೂರ್ಣ ಭಾಗದಲ್ಲಿ ಕೂದಲಿಗೆ ಮಸಾಜ್ ಮಾಡಿದರೆ ನಮ್ಮ ತಲೆ ಕೂದಲು ಸಾಕಷ್ಟು ಸದೃಢವಾಗುವುದರೊಂದಿಗೆ ತುಂಬಾ ಮೃದುವಾಗಿ ಮತ್ತು ಹೊಳಪಾಗಿ ಕಾಣಿಸುತ್ತದೆ.
ಅಗಸೆಬೀಜದಲ್ಲಿ ಆಂಟಿ-ಆಕ್ಸಿಡೆಂಟ್‌ಗಳು ಮತ್ತು ಫೈಟೊಕೆಮಿಕಲ್ಸ್ ಗುಣಗಳಿವೆ, ಇದು ಮುಖದ ಚರ್ಮವನ್ನು ವೃದ್ಧಾಪ್ಯದಲ್ಲಿ ಯಂಗ್ ಆಗಿ ಕಾಣಲು ಇದು ಸಹಕಾರಿಯಾಗಿದೆ. ಇದರಿಂದ ಮುಖ ಸುಕ್ಕುಗಟ್ಟುವ ಸಮಸ್ಯೆಗಳು ಇರುವುದಿಲ್ಲ ಮತ್ತು ನಿಮ್ಮ ಮುಖದ ಚರ್ಮವನ್ನ ಹೊಳೆಯುವಂತೆ ಮಾಡುತ್ತದೆ.
ಅಗಸೆ ಬೀಜದಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುವ ಮೂಲಕ ಮಲಬದ್ಧತೆಯನ್ನು ಹೋಗಲಾಡಿಸುತ್ತದೆ.
ಅಗಸೆ ಬೀಜವನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಲು ಬಯಸುತ್ತಿದ್ದರೆ, ಆಗ ನೀವು ಇದನ್ನು ಹುಡಿ ಮಾಡಿದ ರೂಪದಲ್ಲಿ ಸೇವನೆ ಮಾಡಿ. ಅಗಸೆ ಬೀಜದ ಸಿಪ್ಪೆಯು ತುಂಬಾ ಗಟ್ಟಿಯಾಗಿರುವುದು ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಇದನ್ನು ಭೇದಿಸಲು ಸಾಧ್ಯವಾಗದು.
ಅಗಸೆ ಬೀಜ ಯಾರೆಲ್ಲ ಸೇವಿಸುವುದು ಬೇಡ :
ಮಗುವಿನ ನಿರೀಕ್ಷೆಯಲ್ಲಿರುವ ತಾಯಂದಿರು, ಗರ್ಭ ಧರಿಸಲು ಪ್ರಯತ್ನಿಸುತ್ತಿರುವ ಮಹಿಳೆಯರು ಅಗಸೆ ಬೀಜವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಅಗಸೆ ಬೀಜವು ಋತುಚಕ್ರವನ್ನು ಪ್ರಚೋದಿಸುತ್ತದೆ. ಏಕೆಂದರೆ ಅದು ದೇಹದಲ್ಲಿನ ಈಸ್ಟ್ರೋಜನ್ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ.ಅಗಸೆ ಬೀಜವನ್ನು ಸೇವಿಸುವುದರಿಂದ ಮಹಿಳೆಯರು ಗರ್ಭ ಧರಿಸುವ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಲ್ಲದೆ ಕಷ್ಟಪಟ್ಟು ಪ್ರಯತ್ನಿಸಿದ ನಂತರ ಗರ್ಭದರಿಸಲು ಸಾಧ್ಯವಾಗದಿರಬಹುದು.ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವವರು ಅಗಸೆ ಬೀಜಗಳನ್ನು ತೆಗೆದುಕೊಳ್ಳಬಾರದು.ಅಗಸೆ ಬೀಜವನ್ನು ಸೇವಿಸಬಾರದು ಇದರ ಜೊತೆಗೆ ಅಗಸೆ ಬೀಜದ ಎಣ್ಣೆಯನ್ನು ಸಹ ಸೇವಿಸಬಾರದು.
ಕರುಳಿನ ಸಂಬಂಧಿ ಯಾವುದೇ ಸಮಸ್ಯೆ ಇರುವವರು ಅಗಸೆ ಬೀಜವನ್ನು ತೆಗೆದುಕೊಳ್ಳುವುದು ಬೇಡ, ಅಂತಹ ಸ್ಥಿತಿಯ ಜನರು ಅಗಸೆ ಬೀಜದ ಎಣ್ಣೆಯನ್ನು ಸೇವಿಸಿದರೆ ಅದು ಕರುಳಿನ ಚಲನೆಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೆ ಇದು ಅತಿಸಾರ ಮತ್ತು ಕರುಳಿನ ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಕರುಳಿನ ಸಮಸ್ಯೆಗಳನ್ನು ಹೊಂದಿದ್ದರೆ ಅಗಸೇಬೀಜಗಳಿಂದ ದೂರವಿರುವುದು ಉತ್ತಮ.
ಒಟ್ಟಿನಲ್ಲಿ ಔಷಧಿಗಳನ್ನು ಅಥವಾ ಔಷಧಿ ಪೂರಕಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಗಸೆ ಬೀಜಗಳನ್ನು ತೆಗೆದುಕೊಳ್ಳಬಾರದು.
ಧನ್ಯವಾದಗಳು.
GIPHY App Key not set. Please check settings