in

ಕನ್ನಡ ವ್ಯಾಕರಣ : ವಚನಗಳು ಮತ್ತು ಲಿಂಗಗಳು, ಕಾಲಗಳು

ಕನ್ನಡ ವ್ಯಾಕರಣ
ಕನ್ನಡ ವ್ಯಾಕರಣ

ವ್ಯಾಕರಣ ಪರಿಭಾಷೆಯಲ್ಲಿ ‘ವಚನ’ ಎಂದರೆ ಸಂಖ್ಯೆ.

ಕನ್ನಡ ಭಾಷೆಯಲ್ಲಿ ವಚನಗಳು ಎರಡು : 

ಏಕವಚನ ಮತ್ತು ಬಹುವಚನ 

ದ್ವಿವಚನ: ಕನ್ನಡದಲ್ಲಿ ದ್ವಿವಚನವು ವಿಶೇಷ ಸಂದರ್ಭದಲ್ಲಿ ಬರುತ್ತದೆ. ಹಳೆಗನ್ನಡದಲ್ಲಿ ದ್ವಿವಚನ ಸಾಮಾನ್ಯವಾಗಿದ್ದು ಹೊಸಗನ್ನಡದಲ್ಲಿ ಇದು ಇಲ್ಲ. ಸಂಸ್ಕೃತದ ಅನುಕರಣೆಯಿಂದ ಕನ್ನಡಕ್ಕೆ ದ್ವಿವಚನವನ್ನು ತುಂಬಿರಬಹುದು ಎಂಬ ಅಭಿಪ್ರಾಯ ಇದೆ. ದ್ವಿವಚನವನ್ನು ಬಹುವಚನವೆಂದೇ ಪರಿಗಣಿಸಲಾಗುತ್ತದೆ.

ಕನ್ನಡದಲ್ಲಿ ಏಕ ಮತ್ತು ಬಹುವಚನ. ಸಾಮಾನ್ಯವಾಗಿ ದ್ವಿವಚನ ಉಚಿತವಾಗಿ ಬರುತ್ತದೆ.

ಏಕವಚನ :

ಒಂದು ವಸ್ತುವನ್ನು ಸೂಚಿಸುವ ಪದಗಳೆಲ್ಲ ಏಕವಚನದವು.

ಉದಾ : ಹುಡುಗ, ಹುಡುಗಿ, ಅರಸು, ಮರ, ಅಣ್ಣ, ನೀನು, ಅವನು, ಅವಳು.

ಬಹುವಚನ :

ಕನ್ನಡ ವ್ಯಾಕರಣ : ವಚನಗಳು ಮತ್ತು ಲಿಂಗಗಳು, ಕಾಲಗಳು

ಒಂದಕ್ಕಿಂತ ಹೆಚ್ಚಾದ ವಸ್ತುಗಳೆಂದು ತಿಳಿಸುವ ಪದಗಳೆಲ್ಲ ಬಹುವಚನ ಪದಗಳು. ಬಹುವಚನವನ್ನು ಗೌರವ ಸೂಚಕವಾಗಿಯೂ ಬಳಸಲಾಗುತ್ತದೆ.

ಉದಾ : ಹುಡುಗರು, ಹುಡುಗಿಯರು, ಅರಸರು, ಮರಗಳು, ಅಣ್ಣಂದಿರು, ನೀವು, ನಾವು, ಅವರು, ತಾಯಂದಿರು, ಮನೆಗಳು. ಕಣ್ಣುಗಳು.

ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಾದಿ ಲಿಂಗ ಸೂಚಕ ನಾಮಗಳಿಗೆ ವಿಭಕ್ತಿಪ್ರತ್ಯಯಗಳು ಸೇರುವ ಪೂರ್ವದಲ್ಲಿ ವಚನಗಳು ಬಂದು ಸೇರುತ್ತವೆ. 

ಕನ್ನಡ ಭಾಷೆಯಲ್ಲಿ ವಸ್ತು, ಪ್ರಾಣಿ, ಅಥವಾ ವ್ಯಕ್ತಿಗಳ ಸಂಖ್ಯೆಯನ್ನು ತಿಳಿಸುವ ಶಬ್ದಗಳನ್ನು ವಚನ ಎಂದು ಹೇಳುತ್ತಾರೆ. 

*ಲಿಂಗಗಳು ಎಂದರೇನು? ಲಿಂಗಗಳ ವಿಧಗಳು ಯಾವುವು?

 ಜ್ಞಾನ ಅಥವಾ ಅಜ್ಞಾನದ ಕುರುಹಿನ ನಾಮ ಪ್ರಕೃತಿಯನ್ನು ‘ ಲಿಂಗ ‘ ಎನ್ನುವರು. ಇದು ಗಂಡಸು, ಹೆಂಗಸರನ್ನು ಸೂಚಿಸುವ ಶಬ್ದಗಳಾಗಿವೆ.

ಕನ್ನಡ ವ್ಯಾಕರಣ : ವಚನಗಳು ಮತ್ತು ಲಿಂಗಗಳು, ಕಾಲಗಳು

ಕನ್ನಡದಲ್ಲಿ ಪುಲ್ಲಿಂಗ, ಸ್ತ್ರೀಲಿಂಗ, ಮತ್ತು ನಪುಂಸಕ ಲಿಂಗಗಳೆಂದು ಮೂರು ವಿಧಗಳಿವೆ.

1. ಪುಲ್ಲಿಂಗ :

* ಪುರುಷರನ್ನು ಸೂಚಿಸುವ ನಾಮಪದಗಳಿಗೆ ಮಾತ್ರ ‘ ಪುಲ್ಲಿಂಗ ‘ ಶಬ್ದಗಳು ಎಂದು ಹೆಸರು.

ಉದಾ : ರಮೇಶ, ಮಂಜು, ಜಗದೀಶ, ಮಾವ, ಹುಡುಗ, ದೊಡ್ಡವನು, ಮುದುಕ, ಕಳ್ಳ, ಮನುಷ್ಯ, ಶಂಕರ, ಬಸವ, ಹುಡುಗ, ಕೆಟ್ಟವನು, ಅರಸು, ಪ್ರಧಾನಿ, ಮಂತ್ರಿ, ಜಟ್ಟಿ, ಶಕ್ತಿವಂತ, ತಂದೆ, ಮಾವ, ಸಹೋದರ, ಅಣ್ಣ, ತಮ್ಮ, ಚಿಕ್ಕಪ್ಪ, ಸಚಿವ, ರಾಮ, ಕೃಷ್ಣ, ಶಂಕರಾಚಾರ, ಮದುಮಗ, ದಾಸ, ಕವಿ ,ದೊಡ್ಡವನು, ಮುದುಕ, ಕಳ್ಳ, ಮನುಷ್ಯ, ಶಂಕರ, ಬಸವ, ಹುಡುಗ, ಕೆಟ್ಟವನು, ಅರಸು, ಪ್ರಧಾನಿ ವಿಮರ್ಶಕ, -ಇತ್ಯಾದಿ.

2. ಸ್ತ್ರೀಲಿಂಗ :

*ಸ್ತ್ರೀಯರನ್ನು ಸೂಚಿಸುವ ನಾಮಪದಗಳು ಮಾತ್ರ “ ಸ್ತ್ರೀಲಿಂಗ ‘ ಶಬ್ದಗಳು ಎಂದು ಹೆಸರು.

ಉದಾ : ರುಕ್ಕಿಣಿ, ಭವಾನಿ, ಯಲ್ಲಮ್ಮ, ಹುಡುಗಿ, ಸಿಸಿಲಿಯಾ, ಇತ್ಯಾದಿ.

3. ನಪುಂಸಕಲಿಂಗ :

ಪ್ರಾಣಿವರ್ಗ ಹಾಗೂ ನಿರ್ಜಿವ ವಸ್ತುಗಳನ್ನು ಸೂಚಿಸುವ ನಾಮಪದಗಳು ‘ ನಪುಂಸಕಲಿಂಗ ಶಬ್ದಗಳು ಎಂದು ಹೆಸರು. 

ಪ್ರಾಣಿ ವರ್ಗದಲ್ಲಿ ಗಂಡು – ಹೆಣ್ಣುಗಳಿದ್ದರೂ ಅವು ಬೌದ್ಧಿಕ ಸ್ತರದಲ್ಲಿ ಮನುಷ್ಯನಂತೆ ಜ್ಞಾನದ ಅರಿವು ಮಾಡಿಕೊಳ್ಳಲಾರವು. ಕಾರಣ ಕನ್ನಡದಲ್ಲಿ ಅವನ್ನು ‘ ನಪುಂಸಕಲಿಂಗ ‘ ಗಳೆಂದೇ ತಿಳಿಯುತ್ತಾರೆ.

*ಕಾಲಗಳು ಎಂದರೇನು ?

ವರ್ತಮಾನ, ಭೂತ, ಮತ್ತು ಭವಿಷ್ಯತ್ ಕಾಲಗಳಲ್ಲಿ ಕಂಡುಬರುವ ಕ್ರಿಯೆಗಳ ಸನ್ನಿವೇಶಗಳನ್ನು ತಿಳಿಸುವ ರೂಪಗಳಿಗೆ ಕಾಲಗಳು ಎನ್ನಲಾಗಿದೆ. ಪ್ರತಿಯೊಂದು ಕಾಲಗಳಲ್ಲಿ ಧಾತುಗಳಿಗೆ ಅಖ್ಯಾತ ಪ್ರತ್ಯಯಗಳು ಸೇರಿ ಕಾರ್ಯರೂಪಗಳಾಗುತ್ತವೆ.

ಕಾಲಗಳು :

ಕನ್ನಡ ವ್ಯಾಕರಣ : ವಚನಗಳು ಮತ್ತು ಲಿಂಗಗಳು, ಕಾಲಗಳು

ವರ್ತಮಾನ ಕಾಲ

ಭೂತ ಕಾಲ

ಭವಿಷ್ಯತ್ ಕಾಲ

ವರ್ತಮಾನ ಕಾಲ:

ವರ್ತಮಾನ ಕಾಲದ ಕ್ರಿಯಾರೂಪ “ಕ್ರಿಯೆಯು ಈಗ ನಡೆಯುತ್ತಿದೆ ಎಂಬುದನ್ನು ಸೂಚುಸುವ ಕ್ರಿಯಾಪದವು ವರ್ತಮಾನ ಕಾಲದ ಕ್ರಿಯಾಪದವೆನಿಸುವುದು.” ವರ್ತಕಾಲದಲ್ಲಿ ಧಾತುವಿಗೂ, ಅಖ್ಯಾತ ಪ್ರತ್ಯಯಕ್ಕೂ ನಡುವೆ “ಉತ್ತ” ಎಂಬ ಕಾಲ ಸೂಚಕ ಪ್ರತ್ಯಯವೂ ಉರುವುದು.

ಉದಾಹರಣೆ : ಧಾತು + ಕಾ.ಸೂ + ಅಖ್ಯಾತ =ಕ್ರಿಯಾಪದ ಪ್ರತ್ಯಯ ಪ್ರತ್ಯಯ ಏ. ವಚನ ಬ. ವಚನ

ಹೊಗು +ಉತ್ತ + ಆನೆ =ಹೋಗುತ್ತಾನೆ – ತ್ತಾರೆ

ಹೊಗು + ಉತ್ತ + ಆಳೆ = ಹೋಗುತ್ತಾಳೆ – ತ್ತಾರೆ

ಹೋಗು + ಉತ್ತ + ಆದೆ = ಹೋಗುತ್ತದೆ – ತ್ತವೆ

ಹೋಗು +ಉತ್ತ + ಈಯ = ಹೋಗುತ್ತೀಯೆ – ತ್ತೀರಿ

ಹೋಗು + ಉತ್ತ + ಏನೆ = ಹೋಗುತ್ತೇನೆ – ತ್ತೇವೆ

ಭೂತ ಕಾಲ :

ಭೂತ ಕಾಲ ಕ್ರಿಯಾರೂಪ ಕ್ರಿಯೆಯ ಹಿಂದೆ ನೆಡೆದಿದೆ ಎಂಬುದನ್ನು ಸೂಚಿಸುವುದೇ ಭೂತಕಾಲ- ಭೂತಕಾಲದಲ್ಲಿ ಧಾತುವಿಗೂ, ಅಖ್ಯಾತ ಪ್ರತ್ಯಯಗಳ ನಡುವೆ “ದ” ಎಂಬ ಕಾಲ ಸೂಚಕ. ಪ್ರತ್ಯಯವು ಬರುವುದು”

ಉದಾಹರಣೆ : ತಿಳಿ – ಇದು ಒಂದು ಧಾತು ಶಬ್ಧಧಾತು + ಕಾ . ಸೂ ಪ್ರ + ಅಖ್ಯಾತ ಪ್ರ = ಕ್ರಿಯಾಪದ ಏ. ವ ಬಹುವಚನ

ತಿಳಿ + ದ + ಅನು = ತಿಳಿದನು ತಿಳಿದರು

ತಿಳಿ + ದ + ಅಳು = ತಿಳಿದಳು ತಿಳಿದರು

ತಿಳಿ + ದ + ಇತು = ತಿಳಿಯಿತು ತಿಳಿದವು

ತಿಳಿ + ದ + ಎ = ತಿಳಿದೆ ತಿಳಿದಿರಿ

ತಿಳಿ + ದ + ಎನು = ತಿಳಿದೆನು ತಿಳಿದೆವು

ಭವಿಷ್ಯತ್ ಕಾಲ :

ಭವಿಷ್ಯತ್ ಕಾಲದ ಕ್ರಿಯಾರೂಪ ಕ್ರಿಯೆಯು ಮುಂದೆ ನಡೆಯುವುದೆಂಬುದನ್ನು ಸೂಚಿಸುವುದೆ ಭವಿಷ್ಯತ್ ಕಾಲ. ಭವಿಷ್ಯತ್ ಕಾಲದಲ್ಲಿ ಧಾತುವಿಗೂ ಹಾಗೂ ಅಖ್ಯಾತ ಪ್ರತ್ಯಯಗಳ ನಡುವೆ “ವ” ಅಥವ “ಉವ” ಎಂಬ ಕಾಲಸೂಚಕ ಪ್ರತ್ಯಯಗಳು ಬರುವುದು.

ಉದಾಹರಣೆ : ಕೊಡು – ಇದು ಒಂದು ಧಾತು ಶಬ್ಧಧಾತು + ಕಾ .ಸೂ + ಅಖ್ಯಾತ = ಕ್ರಿಯಾಪದ ಪ್ರತ್ಯಯ ಪ್ರತ್ಯಯ ಏಕವಚನ ಬಹುವಚನ

ಕೊಡು + ವ + ಅನು = ಕೊಡುವನು ಕೊಡುವರು

ಕೊಡು + ವ + ಅಳು = ಕೊಡುವಳು ಕೊಡುವರು

ಕೊಡು + ವ + ಅದು = ಕೊಡುವುದು ಕಡುವುದು

ಕೊಡು + ವ + ಎ = ಕೊಡುವೆ ಕೊಡುವಿರಿ

ಕೊಡು + ವ + ಎನು = ಕೊಡುವೆನು ಕೊಡುವೆವು


ಧನ್ಯವಾದಗಳು

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಮೇಲುಕೋಟೆಯ ಬ್ರಾಹ್ಮಣರು ಕಳೆದ 200 ವರ್ಷಗಳಿಂದ ದೀಪಾವಳಿ ಆಚರಿಸದಿರಲು ಕಾರಣ

ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಬ್ರಾಹ್ಮಣರು ಕಳೆದ 200 ವರ್ಷಗಳಿಂದ ದೀಪಾವಳಿ ಆಚರಿಸದಿರಲು ಕಾರಣ

ಹುಟ್ಟುಹಬ್ಬದ ಶುಭಾಶಯಗಳು

ಕನ್ನಡದಲ್ಲಿ : ಹುಟ್ಟುಹಬ್ಬದ ಶುಭಾಶಯಗಳು