in ,

16ನೇ ವಯಸ್ಸಿನಲ್ಲೇ ದಾಖಲೆ ಬರೆದ ಯುವಕ

16ನೇ ವಯಸ್ಸಿನಲ್ಲೇ ದಾಖಲೆ ಬರೆದ ಯುವಕ
16ನೇ ವಯಸ್ಸಿನಲ್ಲೇ ದಾಖಲೆ ಬರೆದ ಯುವಕ

 

ಕ್ರಿಕೆಟ್ನಲ್ಲಿ ದಾಖಲೆಗಳು ಇರುವುದೇ ಮುರಿಯಲು ಎಂಬ ಮಾತಿದೆ…ಒಂದೊಂದು ಪಂದ್ಯದಲ್ಲೂ ಒಂದೊಂದು ದಾಖಲೆಗಳು ಕೂಡ ನಿರ್ಮಾಣವಾಗುತ್ತಿದೆ. ಅದರಲ್ಲೂ ಟಿ20 ಕ್ರಿಕೆಟ್ ಬಂದ ಮೇಲೆ ದಾಖಲೆಗಳ ಮೇಲೆ ದಾಖಲೆಗಳು ಸೃಷ್ಟಿಯಾಗುತ್ತಿದೆ. ಇದಾಗ್ಯೂ ಕ್ರಿಕೆಟ್ ಇತಿಹಾಸದ ಕೆಲವೊಂದು ದಾಖಲೆಗಳು ಹಾಗೆಯೇ ಉಳಿದಿವೆ. ಈ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ ಎನ್ನಲಾಗುತ್ತದೆ.

ಏಕದಿನ ಬೌಲಿಂಗ್ ದಾಖಲೆ : ಏಕದಿನ ಕ್ರಿಕೆಟ್​ನಲ್ಲಿ ವೆಸ್ಟ್ ಇಂಡೀಸ್​ನ ಫಿಲ್ ಸಿಮನ್ಸ್ ನಿರ್ಮಿಸಿದ ವಿಶ್ವ ದಾಖಲೆಯೊಂದು ದಶಕಗಳು ಕಳೆದರೂ ಹಾಗೆಯೇ ಉಳಿದಿದೆ. ಹೌದು, 1992 ರಲ್ಲಿ ಸಿಮನ್ಸ್ ಪಾಕಿಸ್ತಾನ್​ ವಿರುದ್ದದ ಪಂದ್ಯದಲ್ಲಿ 10 ಓವರ್ ಬೌಲಿಂಗ್ ಮಾಡಿದ್ದರು. ವಿಶೇಷ ಎಂದರೆ ಈ ವೇಳೆ ನೀಡಿದ್ದು ಕೇವಲ 3 ರನ್​ ಮಾತ್ರ. ಇನ್ನು ಪಡೆದಿದ್ದು 4 ವಿಕೆಟ್​ಗಳನ್ನು. ಅಂದರೆ ಒಟ್ಟು 10 ಓವರ್​ಗಳಲ್ಲಿ ಫಿಲ್ ಸಿಮನ್ಸ್ 8 ಓವರ್​ ಮೇಡನ್ ಮಾಡಿದ್ದರು ಎಂದರೆ ನಂಬಲೇಬೇಕು. ಈ ದಾಖಲೆಯನ್ನು ಯಾರಿಂದಲೂ ಅಳಿಸಿ ಹಾಕಲು ಸಾಧ್ಯವಿಲ್ಲ ಎಂಬ ಮಾತಿದೆ.

ಹಿರಿಯ ಟೆಸ್ಟ್ ಕ್ರಿಕೆಟಿಗ : ಯಾವುದೇ ಆಟಗಾರನ ವೃತ್ತಿಜೀವನವು 40 ರ ಅಸುಪಾಸಿನಲ್ಲಿ ಮುಕ್ತಾಯವಾಗುತ್ತದೆ. 41 ಅಥವಾ 42 ವರ್ಷ ವಯಸ್ಸಿನವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವುದು ಕನಸಿನ ಮಾತು. ಆದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ ಪರ 52 ವರ್ಷದ ಆಟಗಾರರೊಬ್ಬರು ಬ್ಯಾಟ್​ ಬೀಸಿದ್ದರು ಎಂದರೆ ನಂಬಲೇಬೇಕು. ಹೌದು, ವಿಲ್ಫ್ರೆಡ್ ರೋಡ್ಸ್ ಅವರು 52 ವರ್ಷ ಮತ್ತು 165 ದಿನಗಳ ವಯಸ್ಸಿನಲ್ಲಿ ಇಂಗ್ಲೆಂಡ್ ಪರ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇಂಗ್ಲೆಂಡ್‌ನ ದಿಗ್ಗಜ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿರುವ ವಿಲ್ಫ್ರೆಡ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4204 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

16ನೇ ವಯಸ್ಸಿನಲ್ಲೇ ದಾಖಲೆ ಬರೆದ ಯುವಕ
ವಿಲ್ಫ್ರೆಡ್ ರೋಡ್ಸ್

ಅತೀ ಹೆಚ್ಚು ವಿಕೆಟ್ : ಚಮಿಂಡ ವಾಸ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ 8 ವಿಕೆಟ್ ಪಡೆದ ವಿಶ್ವದ ಏಕೈಕ ಬೌಲರ್ ಎಂಬ ದಾಖಲೆ ವಾಸ್ ಹೆಸರಿನಲ್ಲಿದೆ. 2001 ರಲ್ಲಿ ಜಿಂಬಾಬ್ವೆ ವಿರುದ್ಧ ಈ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಹ್ಯಾಟ್ರಿಕ್‌ ಸಾಧನೆ ಕೂಡ ಸೇರಿತ್ತು. ಈ ದಾಖಲೆಯನ್ನು ಮುರಿಯುವ ಅವಕಾಶವಿದ್ದರೂ, ಕಳೆದ ಎರಡು ದಶಕಗಳಿಂದ ಯಾರಿಂದಲೂ ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ.

ಕಡಿಮೆ ಅವಧಿಯ ಟೆಸ್ಟ್​ ಪಂದ್ಯ : ಟೆಸ್ಟ್ ಪಂದ್ಯವನ್ನು ಗರಿಷ್ಠ 5 ದಿನಗಳವರೆಗೆ ಆಡಲಾಗುತ್ತದೆ. ಆದರೆ ಕೇವಲ 5 ಗಂಟೆಯಲ್ಲೇ ಒಂದು ಟೆಸ್ಟ್ ಪಂದ್ಯ ಮುಗಿದಿತ್ತು ಎಂದರೆ ಅಚ್ಚರಿಪಡಲೇಬೇಕು. 1932 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಅವಧಿಯ ಪಂದ್ಯವಾಗಿದೆ. ಈ ಪಂದ್ಯ ಕೇವಲ 5 ಗಂಟೆ 53 ನಿಮಿಷಗಳಲ್ಲಿ ಮುಗಿದಿತ್ತು. ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 36 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 45 ರನ್ ಗಳಿಸಿತು. ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್‌ನಲ್ಲಿ 153 ರನ್ ಗಳಿಸಿತು. ಅಲ್ಲದೆ ಈ ಪಂದ್ಯವನ್ನು ಇನ್ನಿಂಗ್ಸ್ ಮತ್ತು 72 ರನ್‌ಗಳಿಂದ ಗೆದ್ದುಕೊಂಡಿದ್ದು ಇತಿಹಾಸ.

ಹೀಗೆ ಹಲವು ದಾಖಲೆಗಳು ಇವೆ…ಇದರ ಮಧ್ಯ ಕ್ರಿಕೆಟ್​ನ ಎಲ್ಲಾ ದಾಖಲೆ ಪುಡಿಗಟ್ಟಿದ ತನ್ಮಯ್.

16ನೇ ವಯಸ್ಸಿನಲ್ಲೇ ದಾಖಲೆ ಬರೆದ ಯುವಕ
ತನ್ಮಯ್

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಕ್ಲಬ್ ಕ್ರಿಕೆಟ್ ಪಂದ್ಯದಲ್ಲಿ ಸಾಗರದ ನಿವಾಸಿ ತನ್ಮಯ್ ಈ ಸಾಧನೆ ಮಾಡಿದ್ದಾರೆ. ಶಿವಮೊಗ್ಗದ ಪೆಸಿಟ್ ಎಂಜಿನಿಯರಿಂಗ್ ‌ಕಾಲೇಜಿನ‌‌ ಅಟಲ್ ಬಿಹಾರಿ ವಾಜಪೇಯಿ‌ ಕ್ರೀಡಾಂಗಣದಲ್ಲಿ ಪಂದ್ಯ ನಡೆದಿತ್ತು. ಸಾಗರ ಕ್ರಿಕೆಟ್ ಕ್ಲಬ್ ಮತ್ತು ಭದ್ರಾವತಿ ಎನ್‌ಟಿಟಿಸಿ ಕ್ಲಬ್ ನಡುವೆ ಪಂದ್ಯ ನಡೆಯಿತು. ಸಾಗರ ಕ್ರಿಕೆಟ್ ಕ್ಲಬ್‌ಗಾಗಿ ಆಡುತ್ತಿದ್ದ ತನ್ಮಯ್ 50 ಓವರ್‌ಗಳ ಪಂದ್ಯದಲ್ಲಿ 407 ರನ್‌ಗಳ ಇನ್ನಿಂಗ್ಸ್‌ ಆಡಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 48 ಬೌಂಡರಿಗಳನ್ನು ಗಳಿಸಿದರೆ, ಅವರ ಬ್ಯಾಟ್‌ನಿಂದ 24 ಸಿಕ್ಸರ್‌ಗಳು ಸಿಡಿದಿದ್ದವು. ಇವರ ಇನ್ನಿಂಗ್ಸ್ ನೋಡಿದವರೆಲ್ಲ ಒಮ್ಮೆ ನಿಬ್ಬೆರಗಾಗಿದ್ದಾರೆ.

 ತನ್ಮಯ್ ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳೊಂದಿಗೆ 407 ರನ್‌ಗಳಲ್ಲಿ 336 ರನ್ ಗಳಿಸಿದರು. ತನ್ಮಯ್ ಅವರ ಈ ಇನ್ನಿಂಗ್ಸ್‌ನಿಂದಾಗಿ ಅವರ ತಂಡ ಸಾಗರ ಕ್ಲಬ್ 50 ಓವರ್‌ಗಳ ಪಂದ್ಯದಲ್ಲಿ 583 ರನ್ ಗಳಿಸಿತು. ಈ ಮೂಲಕ ಸಾಗರ ತಂಡ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಭದ್ರಾವತಿ ತಂಡ ಕೇವಲ 73 ರನ್‌ ಗಳಿಸಿ ಆಲ್ ಔಟ್ ಆಯಿತು.

ಏಕದಿನದಲ್ಲಿ ಅತಿ ದೊಡ್ಡ ಇನ್ನಿಂಗ್ಸ್ ಆಡಿದ ದಾಖಲೆ ಭಾರತೀಯ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿದೆ. ರೋಹಿತ್ ಶ್ರೀಲಂಕಾ ವಿರುದ್ಧ 264 ರನ್‌ಗಳ ದಾಖಲೆಯ ಇನ್ನಿಂಗ್ಸ್ ಆಡಿದ್ದರು. ಈ ವೇಳೆ ಅವರು 33 ಬೌಂಡರಿ ಹಾಗೂ 9 ಸಿಕ್ಸರ್‌ಗಳನ್ನು ಬಾರಿಸಿದ್ದರು. ರೋಹಿತ್ ಏಕದಿನದಲ್ಲಿ ಮೂರು ದ್ವಿಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್. 2010 ರಲ್ಲಿ ಸಚಿನ್ ಬ್ಯಾಟ್‌ನಿಂದ ಏಕದಿನದ ಮೊದಲ ದ್ವಿಶತಕ ಹೊರಹೊಮ್ಮಿತ್ತು. ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ಸಾಧನೆ ಮಾಡಿದ್ದರು. ಆದರೆ ಇದೀಗ ಈ ಯುವ ಆಟಗಾರ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಲ್ಲದಿದ್ದರೂ, ಕ್ಲಬ್ ಕ್ರಿಕೆಟ್​ನಲ್ಲಿ ರೋಹಿತ್ ಅವರ ದಾಖಲೆಯನ್ನೂ ಮುರಿದಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ಯುವ ಆಟಗಾರ ತನ್ಮಯ್ ಅವರು ಭವಿಷ್ಯದ ಟೀಂ ಇಂಡಿಯಾದ ಆಟಗಾರರಾಬಹುದೆಂದು ಹೇಳಲಾಗುತ್ತಿದೆ.

ಇನ್ನು, ಕಳೆದ ವರ್ಷ, ತನ್ಮಯ್ ಮಂಜುನಾಥ್ ಅವರು 16 ವರ್ಷ ವಯಸ್ಸಿನ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ತನ್ಮಯ್ ಅವರಿಗೆ ಕೊರೋನಾ ದೊಡ್ಡ ಹೊಡೆತ ನೀಡಿತು. ಕೊರೋನಾದಿಂದಾಗಿ ಕೆಎಸ್‌ಸಿಎ 16 ವರ್ಷದ ವಯೋಮಿತಿಯ ಕ್ರಿಕೆಟ್ ಟೂರ್ನಿ ರದ್ದಾಯಿತು. ಇದರಿಂದ ಅವರಿಗೆ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಮಿಸ್​ ಮಾಡಿಕೊಂಡರು. ಆದರೆ ಇದೀಗ ಮತ್ತೆ ಅಬ್ಬರಿಸುವ ಮೂಲಕ ತನ್ಮಯ್ ಅವರು ಆಯ್ಕೆಗಾರರ ಗಮನವನ್ನು ಸೆಳೆದಿದ್ದಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

38 Comments

ನಾಗರಹಾವಿನ ಜಾತಿಗಳು

ನಾಗರಹಾವಿನ ಜಾತಿಗಳು ಮತ್ತು ವಿಶ್ಲೇಷಣೆ

ಅಶೋಕ್ ಜುಂಜುನ್ವಾಲಾ

ಅಶೋಕ್ ಜುಂಜುನ್ವಾಲಾ