in

ಈದೀಗ ಟಾಟಾ ಮೋಟಾರ್ಸ್ ಲಾಂಚ್ ಮಾಡಿದೆ : ಯೋಧಾ 2.0, ಇಂಟ್ರಾ ವಿ20 ಬೈಫ್ಯೂಯಲ್ ಮತ್ತು ಇಂಟ್ರಾ ವಿ50 

ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ಲಿಮಿಟೆಡ್ ಭಾರತೀಯ ಬಹುರಾಷ್ಟ್ರೀಯ ವಾಹನ ತಯಾರಿಕಾ ಕಂಪನಿಯಾಗಿದ್ದು, ಟಾಟಾ ಗ್ರೂಪ್‌ನ ಭಾಗವಾಗಿರುವ ಭಾರತದ ಮುಂಬೈನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಕಂಪನಿಯು ಪ್ರಯಾಣಿಕ ಕಾರುಗಳು, ಟ್ರಕ್‌ಗಳು, ವ್ಯಾನ್‌ಗಳು, ಕೋಚ್‌ಗಳು, ಬಸ್‌ಗಳನ್ನು ಉತ್ಪಾದಿಸುತ್ತದೆ.

ಹಿಂದೆ ಟಾಟಾ ಇಂಜಿನಿಯರಿಂಗ್ ಮತ್ತು ಲೋಕೋಮೋಟಿವ್ ಕಂಪನಿ ಎಂದು ಕರೆಯಲಾಗುತ್ತಿತ್ತು, ಕಂಪನಿಯು 1945 ರಲ್ಲಿ ಇಂಜಿನ್‌ಗಳ ತಯಾರಕರಾಗಿ ಸ್ಥಾಪಿಸಲಾಯಿತು. ಕಂಪನಿಯು ತನ್ನ ಮೊದಲ ವಾಣಿಜ್ಯ ವಾಹನವನ್ನು 1954 ರಲ್ಲಿ ಡೈಮ್ಲರ್-ಬೆನ್ಜ್ AG ಸಹಯೋಗದೊಂದಿಗೆ ತಯಾರಿಸಿತು, ಅದು 1969 ರಲ್ಲಿ ಕೊನೆಗೊಂಡಿತು. ಟಾಟಾ ಮೋಟಾರ್ಸ್ 1988 ರಲ್ಲಿ ಟಾಟಾಮೊಬೈಲ್ ಅನ್ನು ಪ್ರಾರಂಭಿಸುವುದರೊಂದಿಗೆ ಪ್ರಯಾಣಿಕ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿತು ಮತ್ತು ನಂತರ 1991 ರಲ್ಲಿ ಟಾಟಾ ಸಿಯೆರಾವನ್ನು ಪ್ರಾರಂಭಿಸಿತು. ಸ್ಪರ್ಧಾತ್ಮಕ ಸ್ಥಳೀಯ ಆಟೋಮೊಬೈಲ್ ಅನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಸಾಧಿಸಲು ತಯಾರಕರು  1998 ರಲ್ಲಿ, ಟಾಟಾ ಮೊದಲ ಸಂಪೂರ್ಣ ಸ್ವದೇಶಿ ಭಾರತೀಯ ಪ್ರಯಾಣಿಕ ಕಾರು ಇಂಡಿಕಾವನ್ನು ಬಿಡುಗಡೆ ಮಾಡಿತು ಮತ್ತು 2008 ರಲ್ಲಿ ಟಾಟಾ ನ್ಯಾನೋವನ್ನು ಬಿಡುಗಡೆ ಮಾಡಿತು., ವಿಶ್ವದ ಅತ್ಯಂತ ಕೈಗೆಟುಕುವ ಕಾರು. ಟಾಟಾ ಮೋಟಾರ್ಸ್ 2004 ರಲ್ಲಿ ದಕ್ಷಿಣ ಕೊರಿಯಾದ ಟ್ರಕ್ ತಯಾರಕ ಡೇವೂ ಕಮರ್ಷಿಯಲ್ ವೆಹಿಕಲ್ಸ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು. 2008 ರಲ್ಲಿ ಫೋರ್ಡ್‌ನಿಂದ ಜಾಗ್ವಾರ್ ಕಾರ್ಸ್ ಮತ್ತು ಲ್ಯಾಂಡ್ ರೋವರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಕಂಪನಿಯು ಸ್ಥಾಪಿಸಿದಾಗಿನಿಂದ ಟಾಟಾ ಮೋಟಾರ್ಸ್ ಜಾಗ್ವಾರ್ ಲ್ಯಾಂಡ್ ರೋವರ್‌ನ ಮೂಲ ಕಂಪನಿಯಾಗಿದೆ.

ಟಾಟಾ ಮೋಟಾರ್ಸ್ ಅನ್ನು 1945 ರಲ್ಲಿ ಲೋಕೋಮೋಟಿವ್ ತಯಾರಕರಾಗಿ ಸ್ಥಾಪಿಸಲಾಯಿತು. ಟಾಟಾ ಗ್ರೂಪ್ 1954 ರಲ್ಲಿ ಜರ್ಮನಿಯ ಡೈಮ್ಲರ್-ಬೆನ್ಜ್ ಜೊತೆ ಜಂಟಿ ಉದ್ಯಮವನ್ನು ರೂಪಿಸಿದ ನಂತರ ವಾಣಿಜ್ಯ ವಾಹನ ಕ್ಷೇತ್ರವನ್ನು ಪ್ರವೇಶಿಸಿತು. ಭಾರತದಲ್ಲಿ ವಾಣಿಜ್ಯ ವಾಹನ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದ ವರ್ಷಗಳ ನಂತರ, ಟಾಟಾ ಮೋಟಾರ್ಸ್ 1991 ರಲ್ಲಿ ಟಾಟಾ ಮೊಬೈಲ್ ಪ್ಲಾಟ್‌ಫಾರ್ಮ್ ಆಧಾರಿತ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಟಾಟಾ ಸಿಯೆರಾವನ್ನು ಬಿಡುಗಡೆ ಮಾಡುವ ಮೂಲಕ ಪ್ರಯಾಣಿಕ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿತು. ಟಾಟಾ ತರುವಾಯ ಟಾಟಾ ಎಸ್ಟೇಟ್ (1992; ಹಿಂದಿನ ಟಾಟಾ ಮೊಬೈಲ್ ಆಧಾರಿತ ಸ್ಟೇಷನ್ ವ್ಯಾಗನ್ ವಿನ್ಯಾಸ), ಟಾಟಾ ಸುಮೋ (1994, 5-ಬಾಗಿಲಿನ SUV) ಮತ್ತು ಟಾಟಾ ಸಫಾರಿಗಳನ್ನು ಬಿಡುಗಡೆ ಮಾಡಿತು.(1998)

ಈದೀಗ, ಯೋಧಾ 2.0, ಇಂಟ್ರಾ ವಿ20 ಬೈಫ್ಯೂಯಲ್ ಮತ್ತು ಇಂಟ್ರಾ ವಿ50 ಲಾಂಚ್‌ ಮಾಡುವ ಮೂಲಕ ಹೊಸ ಅಲೆ ಎಬ್ಬಿಸಲು ಮುಂದಾಗಿದೆ. ಈ ಹೊಸ ಪಿಕಪ್‌ಗಳು ಹೊಸ ಡಿಸೈನ್‌ ಮತ್ತು ಹೆಚ್ಚು ಲೋಡ್‌ ಕ್ಯಾರಿ ಮಾಡುವ ಸಾಮರ್ಥ್ಯಗಳನ್ನು ಆಫರ್‌ ಮಾಡುತ್ತದೆ. ದೊಡ್ಡ ಡೆಕ್‌ ಉದ್ದ, ಹಾಗೂ ಹಲವು ಮಾರ್ಡನ್‌ ಬಗೆಯ ಅಗತ್ಯ ಫೀಚರ್‌ಗಳನ್ನು ಸುರಕ್ಷಿತ ಮತ್ತು ಆರಾಮದಾಯಕ ಚಾಲನೆಗಾಗಿ ಹೊಂದಿವೆ.

ಈದೀಗ ಟಾಟಾ ಮೋಟಾರ್ಸ್ ಲಾಂಚ್ ಮಾಡಿದೆ : ಯೋಧಾ 2.0, ಇಂಟ್ರಾ ವಿ20 ಬೈಫ್ಯೂಯಲ್ ಮತ್ತು ಇಂಟ್ರಾ ವಿ50 
ಯೋಧಾ 2.0

ಟಾಟಾ ಮೋಟಾರ್ಸ್‌ ಭಾರತದಲ್ಲಿ ದೊಡ್ಡಮಟ್ಟದಲ್ಲಿ ಕಮರ್ಷಿಯಲ್ ವಾಹನಗಳನ್ನು ನಿರ್ಮಿಸುವ ಕಂಪನಿ. ದೊಡ್ಡ ಡೆಕ್‌ ಉದ್ದ, ಹಾಗೂ ಹಲವು ಮಾರ್ಡನ್‌ ಬಗೆಯ ಅಗತ್ಯ ಫೀಚರ್‌ಗಳನ್ನು ಸುರಕ್ಷಿತ ಮತ್ತು ಆರಾಮದಾಯಕ ಚಾಲನೆಗಾಗಿ ಹೊಂದಿವೆ. ಇವುಗಳನ್ನು ವಿವಿಧ ರೀತಿಯ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಅಗತ್ಯವಾದವುಗಳನ್ನು ಕೊಂಡೊಯ್ಯಲು ಬೇಕಾದ ರೀತಿಯಲ್ಲಿ ಡಿಸೈನ್‌ ಮಾಡಲಾಗಿದೆ. ಯೋಧಾ 2.0, ಇಂಟ್ರಾ ವಿ20 ಬೈಫ್ಯೂಯಲ್ ಮತ್ತು ಇಂಟ್ರಾ ವಿ50 ಯು ವೇಗವಾಗಿ ಬೆಳೆಯುತ್ತಿರುವ ಕೃಷಿ, ಕೋಳಿ, ಡೈರಿ ವಲಯಗಳ ವೈವಿಧ್ಯಮಯ ಚಲನಶೀಲತೆಯ ಅಗತ್ಯಗಳನ್ನು ಪೂರೈಸಲು ಸೂಕ್ತವಾಗಿದೆ. ಅಲ್ಲದೇ ಎಫ್‌ಎಂಸಿಜಿ, ಇ-ಕಾಮರ್ಸ್‌ ಮತ್ತು ಲಾಜಿಸ್ಟಿಕ್ಸ್‌ ಕ್ಷೇತ್ರದ ಡೆಲಿವರಿಗೂ ಸಹ ಅನುಕೂಲ ಮಾಡಿಕೊಡಲಿವೆ. ಈ ಎಲ್ಲ ಬಗೆಯ ಪಿಕಪ್‌ಗಳು ಸಹ ಗ್ರಾಹಕರಿಗೆ ಗರಿಷ್ಠ ಲಾಭವನ್ನು ಗಳಿಸಲು ಕಡಿಮೆ ವೆಚ್ಚದಲ್ಲಿ ಓನರ್‌ಶಿಪ್‌ ಅನ್ನು ಸಹ ನೀಡಲಿವೆ. ಟಾಟಾ ಮೋಟಾರ್ಸ್‌ ಭಾರತದ ಅತ್ಯುತ್ತಮ ಪಿಕಪ್‌ಗಳನ್ನು ಈಗಾಗಲೇ 750 ಅನ್ನು ಗ್ರಾಹಕರಿಗೆ ತಲುಪಿಸುವ ಮೂಲಕ ಬಿಡುಗಡೆಯನ್ನು ಸ್ಮರಿಸಿದೆ.

ಈ ಹೊಸ ಪಿಕಪ್‌ ವಾಹನಗಳನ್ನು ಲಾಂಚ್‌ ಮಾಡಿದ ಟಾಟಾ ಮೋಟಾರ್ಸ್‌ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಿರಿಶ್ ವಾಘ್‌ ರವರು, ‘ನಮ್ಮ ಸಣ್ಣ ಕಮರ್ಷಿಯಲ್ ವಾಹನಗಳು ದಶಲಕ್ಷದಷ್ಟು ಗ್ರಾಹಕರಿಗೆ ಜೀವನ ಕಲ್ಪಿಸುವಲ್ಲಿ ಹೆಸರುವಾಸಿ ಪಡೆದಿವೆ. ಅವರಿಗೆ ಯಶಸ್ಸು ತಂದುಕೊಟ್ಟಿವೆ. ಅವರ ಬ್ಯುಸಿನೆಸ್ ಗುರಿಗೆ ಮತ್ತು ಉತ್ತಮ ಜೀವನಕ್ಕೆ ಧೈರ್ಯವನ್ನು ನೀಡಿವೆ. ಆದ್ದರಿಂದ ಅವರು ನಮ್ಮ ಹೊಸ ಶ್ರೇಣಿಯ ಪಿಕಪ್‌ಗಳಲ್ಲಿ ಆದರ್ಶ ಹೊಂದಾಣಿಕೆಯನ್ನು ಕಂಡುಕೊಳ್ಳುತ್ತಾರೆ. ಏಕೆಂದರೆ ಇವುಗಳು ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ಆಕಾಂಕ್ಷೆಗಳನ್ನು ಪರಿಹರಿಸಲು ಅಭಿವೃದ್ಧಿಗೊಳಿಸಲಾದವುಗಳಾಗಿವೆ. ಈ ಪಿಕಪ್‌ಗಳ ಪ್ರತಿಯೊಂದು ಲಕ್ಷಣವು ಸಹ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಬಳಕೆಗಳನ್ನು ಸಮರ್ಥವಾಗಿ ಪೂರೈಸಲು ಸೂಕ್ಷ್ಮವಾಗಿ ಅಭಿವೃದ್ಧಿಪಡಿಸಲಾಗಿದೆ. 

* ಇವು ಭಾರವಾದ ಸರಕುಗಳನ್ನು ಸಾಗಿಸುವ ಕಾರ್ಯದಲ್ಲಿ ಅತ್ಯಧಿಕ ಪೇಲೋಡ್‌ ಅನ್ನು ನೀಡಲಿವೆ; ಹೆಚ್ಚು ಸರಕುಗಳನ್ನು ಸಾಗಿಸಲು ವಿಶಾಲ ಉದ್ದವನ್ನು ಹೊಂದಿವೆ;

* ತೂಕದ ಅನುಪಾತಕ್ಕೆ ಹೆಚ್ಚಿನ ಶಕ್ತಿ, ಗರಿಷ್ಠ ದೂರವನ್ನು ಕ್ರಮಿಸಲು ದೀರ್ಘ ಶ್ರೇಣಿ ಹೊಂದಿವೆ;

*  ಆಧುನಿಕ ಯುಗದ ಸುರಕ್ಷತೆ ಬೇಕಾದ ಆರಾಮದಾಯಕ ಫೀಚರ್‌ಗಳನ್ನು, ಒತ್ತಡ ರಹಿತ ಚಾಲನೆಗಾಗಿ ಅಭಿವೃದ್ಧಿಪಡಿಸಲಾಗಿದೆ. 

*  ದೂರದ ಪ್ರದೇಶಗಳನ್ನು ತಲುಪಲು ಎಲ್ಲಾ ಭೂಪ್ರದೇಶದ ಪ್ರವೇಶ ಮತ್ತು ಭಾರತದ ಅತಿದೊಡ್ಡ ಡೀಲರ್‌ ಮತ್ತು ಸೇವಾ ನೆಟ್‌ವರ್ಕ್‌ನ ಬೆಂಬಲದೊಂದಿಗೆ, ನಮ್ಮ ಸಮಗ್ರ ಶ್ರೇಣಿಯ ಪಿಕಪ್‌ಗಳು ನೀಡುವ ಸಮಗ್ರ ಮೌಲ್ಯದ ಪ್ರತಿಪಾದನೆಯು ಅಜೇಯವಾಗಿದೆ.

ಈದೀಗ ಟಾಟಾ ಮೋಟಾರ್ಸ್ ಲಾಂಚ್ ಮಾಡಿದೆ : ಯೋಧಾ 2.0, ಇಂಟ್ರಾ ವಿ20 ಬೈಫ್ಯೂಯಲ್ ಮತ್ತು ಇಂಟ್ರಾ ವಿ50 
ಇಂಟ್ರಾ ವಿ20

*   ಈ ಹೊಸ ಜಾಯಮಾನದ ಪಿಕಪ್‌ ವಾಹನಗಳ ಪರಿಚಯವು ಹೆಚ್ಚಿನ ಪ್ರಗತಿ ಮತ್ತು ಯಶಸ್ಸನ್ನು ತಲುಪಲು, ಗ್ರಾಹಕರನ್ನು ಸಬಲಗೊಳಿಸಲು ಸಹಕಾರಿಯಾಗಿವೆ.” ಎಂದಿದ್ದಾರೆ.

ಯೋಧಾ 2.0, ಅತಿಹೆಚ್ಚು ಅಂದರೆ 2000KG ಪೇಲೋಡ್‌ ಸಾಮರ್ಥ್ಯದ ಜತೆಗೆ ಅತ್ಯುತ್ತಮವಾದ ಆಫ್‌-ರೋಡ್‌ ಸಾಮರ್ಥ್ಯ ನೀಡುತ್ತದೆ.

*ಟಾಟಾ ಯೋಧಾ 2.0 ಪ್ರಮುಖ ಫೀಚರ್‌ಗಳು

ಅತಿ ಹೆಚ್ಚು ದರದ ಪೇಲೋಡ್ : 2000KG

2.2L ಡೀಸೆಲ್ ಇಂಜಿನ್ ಜತೆಗೆ 250Nm ಟರ್ಕ್‌ ಚಾಲಿತವಾಗಿದೆ.

*ಶೇಕಡ.30 ರಷ್ಟು ಹೈಯಷ್ಟ್‌ ಗ್ರೇಡ್‌ ಎಬಿಲಿಟಿ.

ಮೆಟಾಲಿಕ್ ಬಂಪರ್ ಮತ್ತು ಫೆಂಡರ್‌ನೊಂದಿಗೆ ರಘಡ್‌ ಲುಕ್‌ ಚಾಲಿತವಾಗಿದೆ.

*ಯೋಧಾ 2.0 ತನ್ನ ಒರಟಾದ ನೋಟದೊಂದಿಗೆ ಎಂತಹ ಕಠಿಣ ಭೂಪ್ರದೇಶವನ್ನು ಸುಲಭವಾಗಿ ನಿಭಾಯಿಸುತ್ತದೆ.

* ತಡೆರಹಿತ ಮತ್ತು ವೇಗದ ಸರಕು ಸಾಗಣೆಯನ್ನು ಖಾತ್ರಿಪಡಿಸುತ್ತದೆ. 

* ಯೋಧಾ 2.0 ಒರಟಾದ ಲುಕ್‌ನ ಅಪ್‌ಡೇಟೆಡ್‌ ಡಿಸೈನ್‌ ಅನ್ನು ಹೊಂದಿದೆ. ಅವುಗಳ ಪೈಕಿ ಟಾಟಾ ಸಿಗ್ನೇಚರ್‌ ಆದ ‘ಟ್ರಸ್ಟ್‌ ಬಾರ್‌’ ಮತ್ತು ಸ್ಟೈಲಿಶ್ ಗ್ರಿಲ್ಲೆ ವಿಶೇಷ ಕಾರ್ಯೋನ್ಮುಖ ಅಪ್‌ಗ್ರೇಡ್‌ಗಳಾಗಿವೆ.

*ಯೋಧಾ 2.0 ಪಿಕಪ್‌ 1200, 1500, 1700KG ಯ ಆಯ್ಕೆಗಳ ಪೇಲೋಡ್ ಆಪ್ಶನ್‌ಗಳನ್ನು ಹೊಂದಿದೆ. 

*ಅಲ್ಲದೇ 4*4 ಮತ್ತು 4*2 ಕಾನ್ಫಿಗರೇಷನ್ಸ್‌, ಸಿಂಗಲ್ ಕ್ಯಾಬ್ ಮತ್ತು ಕ್ರಿವ್‌ ಕ್ಯಾಬ್ ಆಯ್ಕೆಗಳನ್ನು ಹೊಂದಿದ್ದು, ಗ್ರಾಹಕರು ಆಯ್ಕೆ ಮಾಡಲು ಸೂಕ್ತವಾದ ಮಾಡೆಲ್ ಮತ್ತು ಕ್ಯಾಬ್ ಟೈಪ್‌ಗಳನ್ನು ಹೊಂದಿದೆ.

*ಇಂಟ್ರಾ ವಿ50 ಸ್ಮಾರ್ಟ್‌ ಪಿಕಪ್‌ 1500KG ರೇಟೆಡ್‌ನ ಪೇಲೋಡ್‌ ಸಾಮರ್ಥ್ಯ ಮತ್ತು ವಿಶಾಲವಾದ ಡೆಕ್‌ ಉದ್ದವನ್ನು ಆಫರ್‌ ಮಾಡಿದೆ.

*ಟಾಟಾ ಇಂಟ್ರಾ ವಿ50 ಪ್ರಮುಖ ಫೀಚರ್‌ಗಳು

ಅತಿ ಹೆಚ್ಚು ದರದ ಪೇಲೋಡ್ : 1500KG

1.5L ಡೀಸೆಲ್ ಇಂಜಿನ್ ಜತೆಗೆ 220Nm ಟರ್ಕ್‌ ಚಾಲಿತವಾಗಿದೆ.

*2960mm ನ ಉದ್ದದ ಲೋಡ್‌ ಬಾಡಿ ಹೊಂದಿದೆ.

ಟಾಟಾ ಇಂಟ್ರಾ ವಿ50 ಹೆಚ್ಚಿನ ಪೇಲೋಡ್ ಸಾಮರ್ಥ್ಯ, ಅತ್ಯಾಧುನಿಕ ಕ್ಯಾಬಿನ್ ಸೌಕರ್ಯ, ಉದ್ದವಾದ ಲೋಡ್‌ ಡೆಕ್‌ ಮತ್ತು ಎಲ್ಲಾ ರೀತಿಯ ಭೂಪ್ರದೇಶಗಳಲ್ಲಿ ಸಾರಾಗವಾಗಿ ಚಾಲನೆ ಮಾಡಲು ಚಿಂತ ಮುಕ್ತವಾದ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‌ನ ಹೊಸ ಫೀಚರ್‌ಗಳನ್ನು ಹೊಂದಿದೆ.

*ಟಾಟಾ ಇಂಟ್ರಾ ವಿ20 ಮೊದಲ ಬೈ-ಫ್ಯುಯಲ್ ಪಿಕಪ್‌ ಜತೆಗೆ, 1000kg ಪೇಲೋಡ್ ಮತ್ತು ದೂರದ ಪ್ರದೇಶಗಳಿಗೆ 700kg ಭಾರವನ್ನು ಸರಾಗವಾಗಿ ಸಾಗಿಸುತ್ತದೆ.

ಟಾಟಾ ಇಂಟ್ರಾ ವಿ20 ಫೀಚರ್‌ಗಳು:

*ಬೈ-ಫ್ಯುಯಲ್ ಸಿವಿಗೆ ಅತಿ ಹೆಚ್ಚು ದರದ ಪೇಲೋಡ್ : 1000kg

*1.2L ಬೈ-ಫ್ಯುಯಲ್ ಇಂಜಿನ್ ಜತೆಗೆ 106Nm ಟರ್ಕ್‌ ಚಾಲಿತವಾಗಿದೆ.

*ದೂರದ ಪ್ರದೇಶಗಳಿಗೆ 700kg ಭಾರವನ್ನು ಸರಾಗವಾಗಿ ಸಾಗಿಸುತ್ತದೆ.

*ಟಾಟಾ ಮೋಟಾರ್ಸ್‌ ಇಂಟ್ರಾ ವಿ20 ಅಲ್ಲಿ ದೇಶದಲ್ಲೇ ಮೊದಲು ಬೈ-ಫ್ಯುಯಲ್ (ಸಿಎನ್‌ಜಿ + ಪೆಟ್ರೋಲ್) ಅಳವಡಿಸಿದ ಕಮರ್ಷಿಯಲ್ ವೆಹಿಕಲ್ ಜತೆಗೆ ಪೇಲೋಡ್ 1000kg ಸಾಮರ್ಥ್ಯವನ್ನು ಅಳವಡಿಸಿದೆ.

*ಇದು ಹೆಚ್ಚು ಮೌಲ್ಯವನ್ನು ತಲುಪಿಸಲು ಸಿಎನ್‌ಜಿಯ ಕಡಿಮೆ ಕಾರ್ಯಾಚರಣೆಯ ವೆಚ್ಚದೊಂದಿಗೆ ಸಾಬೀತಾಗಿರುವ ಇಂಟ್ರಾ ವಿ20 ಸಾಮರ್ಥ್ಯಗಳ ದೃಢತೆಯನ್ನು ಸಂಯೋಜಿಸುತ್ತದೆ.

*ಈ ಆಯ್ಕೆಯ ಪಿಕಪ್‌ 1 ಲಕ್ಷಕ್ಕಿಂತ ಹೆಚ್ಚು ಹ್ಯಾಪಿ ಗ್ರಾಹಕರನ್ನು ಹೊಂದಿದೆ. ಇಂಟ್ರಾ ಹಲವು ಬಗೆಯ ಕಾರ್ಯಾಚರಣೆಗೆ ಆದರ್ಶವಾಗಿದೆ.

* ಈ ಕಂಪನಿಯ ಯಶಸ್ವಿ ‘ಪ್ರಿಮೀಯಂ ಟಫ್‌’ ತತ್ವ ವಿನ್ಯಾಸದ ಮೇಲೆ ನಿರ್ಮಿಸಲಾದ ಇಂಟ್ರಾ ಶ್ರೇಣಿಯು ವಾಕ್‌ಥ್ರೂ ಕ್ಯಾಬಿನ್, ಡ್ಯಾಶ್‌-ಮೌಂಟೆಡ್ ಗೇರ್ ಲಿವರ್‌ನಂತಹ ಆಧುನಿಕ ವೈಶಿಷ್ಠ್ಯಗಳೊಂದಿಗೆ ಬಂದಿದೆ. 

* ಹಲವು ಅನುಕೂಲಗಳಿಗಾಗಿ ವಿ10, ವಿ30 ಸ್ಪೆಕ್ಸ್‌ಗಳನ್ನು ಸಹ ಒಳಗೊಂಡಿದೆ.

ಮಾರಾಟದ ನಂತರವೂ ಸಹ ಹಲವು ಉಪಯೋಗಗಳನ್ನು ಗ್ರಾಹಕರು ಪಡೆಯಲಿದ್ದಾರೆ. ಪಿಕಪ್‌ನ ಯಾವುದೇ ಭಾಗಗಳು ಸುಲಭವಾಗಿ ಸಿಗುತ್ತವೆ. ಸಂಪೂರ್ಣ ಸೇವಾ 2.0 ಪ್ರೋಗ್ರಾಮ್‌ ಅಡಿಯಲ್ಲಿ ಈ ಕೆಳಗಿನ ಹಲವು ಮೌಲ್ಯವರ್ಧಿತ ಸೇವೆಗಳು ಸಿಗಲಿವೆ.

ಟಾಟಾ ಜಿಪ್ಪಿ : ಯಾವುದೇ ದುರಸ್ತಿಗೆ 48 ಗಂಟೆಗಳ ಒಳಗೆ ಸಮಸ್ಯೆ ಪರಿಹಾರದ ಭರವಸೆ.

ಟಾಟಾ ಅಲರ್ಟ್‌ : ವಾರಂಟಿ ಅಡಿಯಲ್ಲಿ ವಾಹನಗಳಿಗೆ 24 ಗಂಟೆಗಳಲ್ಲಿ ರಸ್ತೆ ಬದಿಯ ಸಹಾಯ ಕಾರ್ಯಕ್ರಮಗಳು.

ಈದೀಗ ಟಾಟಾ ಮೋಟಾರ್ಸ್ ಲಾಂಚ್ ಮಾಡಿದೆ : ಯೋಧಾ 2.0, ಇಂಟ್ರಾ ವಿ20 ಬೈಫ್ಯೂಯಲ್ ಮತ್ತು ಇಂಟ್ರಾ ವಿ50 
ಇಂಟ್ರಾ ವಿ50 

ಟಾಟಾ ಗುರು : 50,000+ ತರಬೇತುದಾರ ತಂತ್ರಜ್ಞರು ರೋಡ್‌ ಸೈಡ್ ಸಮಸ್ಯೆಗಳಿಗೆ ಮತ್ತು ವರ್ಕ್‌ಶಾಪ್‌ ಸಹಾಯಕ್ಕೆ ಬಂದು ದುರಸ್ತಿ ಸೇವೆಗಳನ್ನು ದೇಶದಾದ್ಯಂತ ನೀಡಲಿದ್ದಾರೆ.

ಟಾಟಾ ಬಂಧು : ಎಲ್ಲರಿಗೂ ಒಂದೇ ಅಪ್ಲಿಕೇಶನ್‌. ಈ ಅಪ್ಲಿಕೇಶನ್‌ನಲ್ಲಿ ಸ್ಟೇಕ್‌ಹೋಲ್ಡರ್‌ಗಳು, ಮೆಕಾನಿಕ್‌ಗಳು, ಡ್ರೈವರ್‌ಗಳು, ಫ್ಲೀಟ್ ಓನರ್‌ಗಳು, ಇರಲಿದ್ದು, ಸುಲಭವಾಗಿ ಸಂಪರ್ಕಿಸಬಹುದು.

360 ಡಿಗ್ರಿ, ನ್ಯಾಷನಲ್ ಮಲ್ಟಿಮಿಡಿಯಾ ಮಾರ್ಕೆಟಿಂಗ್ ಪ್ರಚಾರವನ್ನು ಲಾಂಚ್‌ ಮಾಡಲಾಗಿದ್ದು, ಈ ಮೂಲಕ ಹೊಸ ಪಿಕಪ್‌ಗಳ ಕುರಿತು, ಅವುಗಳ ವೈಶಿಷ್ಟಗಳನ್ನು ಪರಿಚಯಿಸಲು ಭಾವನಾತ್ಮಕ ಕಥೆ ಹೇಳುವ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಉದ್ದೇಶಿಸಲಾಗಿದೆ. ಈ ಪ್ರಚಾರ ಕಾರ್ಯಕ್ರಮವು ಪರಿಣಾಮಕಾರಿಯಾಗಿ ಹೊಸ ಪಿಕಪ್‌ಗಳ ಇಂಜಿನಿಯರಿಂಗ್ ಪವರ್, ಸೇವೆಯ ವ್ಯವಸ್ಥೆಗಳು, ಗ್ರಾಹಕರಿಗೆ ಹೇಗೆಲ್ಲಾ ಸುಲಭವಾಗಿ ಟಾಟಾ ಮೋಟಾರ್ಸ್‌ ಸೇವೆ ಸಿಗಲಿವೆ ಎಂದು ಹೇಳಲಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಗಸೆ ಬೀಜದ ಎಣ್ಣೆ

ಅಗಸೆ ಬೀಜದಿಂದ ತಯಾರಿಸುವ ಎಣ್ಣೆ

ಕುಸುಬೆ

ಕುಸುಬೆಯು ಉತ್ತರ ಕರ್ನಾಟಕದ ವಾಣಿಜ್ಯ ಬೆಳೆ