in

ಜ್ಞಾನಪೀಠ ಪ್ರಶಸ್ತಿ ವಿಜೇತರು ಯು.ಆರ್.ಅನಂತಮೂರ್ತಿ ಜನ್ಮದಿನ

ಯು.ಆರ್.ಅನಂತಮೂರ್ತಿ ಜನ್ಮದಿನ
ಯು.ಆರ್.ಅನಂತಮೂರ್ತಿ ಜನ್ಮದಿನ

ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ 1932 ಡಿಸೆಂಬರ್ 21 ರಂದು ರಾಜಗೋಪಾಲಾಚಾರ್ಯ-ಸತ್ಯಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದರು.

ಅವರು ಚಿಂತಕರೂ ವಿಮರ್ಶಕರೂ ಆಗಿ ಪ್ರಸಿದ್ಧರಾಗಿದ್ದವರು. ಇಂಗ್ಲೀಷ್ ಪ್ರಾಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ಅನಂತರ ಶಿಕ್ಷಣ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಮುಖ್ಯ ಹುದ್ದೆಗಳನ್ನು ನಿರ್ವಹಿಸಿದರು. ಅವರು ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಜನಿಸಿದರು ಮತ್ತು ನವ ಚಳುವಳಿಯ ಪ್ರವರ್ತಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಇವರ ಸಮಗ್ರ ಸಾಹಿತ್ಯಕ್ಕಾಗಿ ೧೯೯೪ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು.

ಅವರ ತಾತ ಪದ್ಮನಾಭಾಚಾರ್ಯ ಅಂಗಿ ತೊಡದೆ ಧೋತ್ರ ಹೊದೆದು ಜುಟ್ಟಿನಲ್ಲಿ ತುಳಸಿ ಮುಡಿಯುತ್ತಿದ್ದ ಶುದ್ಧ ವೈದಿಕ ಬ್ರಾಹ್ಮಣ, ಸಾಹಸಪ್ರಿಯ, ಅಲೆಮಾರಿ. ತಂದೆ ರಾಜಗೋಪಾಲಾಚಾರ್ಯರು ಆ ಕಾಲದಲ್ಲೇ ಲಂಡನ್ ಮೆಟ್ರಿಕ್ಯುಲೇಷನ್ ಹಾಗೂ ಕೇಂಬ್ರಿಡ್ಜ್ ಪರೀಕ್ಷೆ ಕಟ್ಟಿ ಉತ್ತೀರ್ಣರಾದವರು. ಅರ್ಚಕರಾಗಿ, ಶ್ಯಾನುಭೋಗರಾಗಿ, ಅಕೌಂಟೆಂಟ್ ಆಗಿ, ಪೋಸ್ಟ್ ಮಾಸ್ಟರ್, ಮಠದ ಪಾರುಪತ್ಯೇಗಾರ – ಹೀಗೆ ಹಲವು ಹುದ್ದೆಗಳಲ್ಲಿದ್ದು ವಿಶಿಷ್ಟ ವ್ಯಕ್ತಿತ್ವ ರೂಢಿಸಿಕೊಂಡವರು.

ಜ್ಞಾನಪೀಠ ಪ್ರಶಸ್ತಿ ವಿಜೇತರು ಯು.ಆರ್.ಅನಂತಮೂರ್ತಿ ಜನ್ಮದಿನ
ಯು.ಆರ್.ಅನಂತಮೂರ್ತಿ

ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿರುವ ಆರನೇ ಬರಹಗಾರರಾಗಿದ್ದಾರೆ. ಈ ಪ್ರಶಸ್ತಿಯು ಭಾರತದಲ್ಲಿ ನೀಡಲ್ಪಟ್ಟ ಅತ್ಯುನ್ನತ ಗೌರವವಾಗಿದೆ. ೧೯೯೮ ರಲ್ಲಿ ಇವರು ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು. ೧೯೮೦ ರ ದಶಕದ ಅಂತ್ಯದಲ್ಲಿ ಕೇರಳದ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು. ಅವರು ೨೦೧೩ ರ ಮ್ಯಾನ್ ಬುಕರ್ ಅಂತರರಾಷ್ಟ್ರೀಯ ಪ್ರಶಸ್ತಿಯ ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.

‘ದೂರ್ವಾಸಪುರ’ದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ ಪದವಿ ಪಡೆದರು.”ಋಜುವಾತು “ಪತ್ರಿಕೆಯನ್ನು ಪ್ರಾರಂಭಿಸಿದರು.

ಗಾಂಧೀಜಿ, ರಾಜಾಜಿ ಅಂತಹವರ ಅಭಿಮಾನಿ. ಇಂಗ್ಲೀಷ್ ಸಾಹಿತ್ಯವನ್ನು ಸಾಕಷ್ಟು ಓದಿಕೊಂಡವರು. ಗಾಂಧೀಜಿಯವರ ‘ಹರಿಜನ’ ಪತ್ರಿಕೆ ತರಿಸುತ್ತಿದ್ದರು. ‘ಪುರಷಸೂಕ್ತವನ್ನು’ ಪಠಿಸುತ್ತಿದ್ದರು. ಒಂದು ರೀತಿಯಲ್ಲಿ ರಾಜಗೊಪಾಲಾಚಾರ್ಯರು ಎರಡು ಪ್ರಪಂಚಗಳ ನಡುವೆ ಇದ್ದವರು. ಕೆಲವೊಮ್ಮೆ ಕ್ರಾಪು, ಮತ್ತೆ ಕೆಲವೊಮ್ಮೆ ಜುಟ್ಟು, ಇನ್ನು ಕೆಲವೊಮ್ಮೆ ಕ್ರಾಪು ಜುಟ್ಟು ಎರಡೂ ಇರೋದು. ತಂದೆಯವರಿಗೆ ಮಗ ಅನಂತಮೂರ್ತಿ ಗಣಿತಶಾಸ್ತ್ರಜ್ಞನಾಗಬೇಕೆಂಬ ಆಸೆಯಿತ್ತು. ಆದರೆ ಮಗನ ಮನಸ್ಸು ಸಾಹಿತ್ಯದತ್ತ ಒಲಿದಾಗ ಅದಕ್ಕೆ ಅಡ್ಡಿಯುಂಟುಮಾಡಲಿಲ್ಲ.

ಜ್ಞಾನಪೀಠ ಪ್ರಶಸ್ತಿ ವಿಜೇತರು ಯು.ಆರ್.ಅನಂತಮೂರ್ತಿ ಜನ್ಮದಿನ
ಡಾಕ್ಟರ್. ರಾಜ್ ಅವರೊಂದಿಗೆ ಯು.ಆರ್.ಅನಂತಮೂರ್ತಿ

ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದ ಅನಂತಮೂರ್ತಿ ತನ್ನ ಗೆಳೆಯರೊಡನೆ ‘ತರಂಗಿಣಿ’ ಎಂಬ ಕೈಬರಹದ ಪತ್ರಿಕೆಯೊಂದನ್ನು ತರುತ್ತಿದ್ದರು. ಇಂಟರ್ ಮೀಡಿಯೆಟ್ ಓದುತ್ತಿದ್ದಾಗ ‘ಮಿತ್ರ’ ಪತ್ರಿಕೆಯಲ್ಲಿ ಅವರ ಕೆಲವು ಕತೆ, ಕವನಗಳು ಪ್ರಕಟವಾಗಿದ್ದವು. ನಂತರ ‘ಚಿತ್ರಗುಪ್ತ’, ಜನಪ್ರಗತಿ’ ಪತ್ರಿಕೆಗಳಿಗೂ ಕೆಲವು ಕತೆಗಳನ್ನು ಬರೆದರು. ಪ್ರಸಿದ್ಧಿ ತಂದುಕೊಟ್ಟ ಮೊದಲ ಕತೆ ‘ಎಂದೆಂದೂ ಮುಗಿಯದ ಕತೆ’. ಇದು ಮೈಸೂರಿನ ‘ವಾರ್ಸಿಟಿ ಟೈಮ್ಸ್’ನಲ್ಲಿ ಪ್ರಕಟವಾಯಿತು. 1955ರಲ್ಲಿ ಅವರ ಪ್ರಥಮ ಕಥಾ ಸಂಕಲನ ಇದೇ ಹೆಸರಿನಲ್ಲಿ ಗೋಪಾಲಕೃಷ್ಣ ಅಡಿಗರ ‘ಮುನ್ನುಡಿ’ಯೊಡನೆ ಪ್ರಕಟವಾಯಿತು. ಅನಂತರ ನಾಲ್ಕು ಕಥಾಸಂಕಲನಗಳನ್ನು ಅವರು ಪ್ರಕಟಿಸಿದ್ದಾರೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ, ಟಬಿಂಗನ್ ವಿಶ್ವವಿದ್ಯಾಲಯ, ಅಯೋವಾ ವಿಶ್ವವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ ಮತ್ತು ಶಿವಾಜಿ ವಿಶ್ವವಿದ್ಯಾಲಯ ಸೇರಿದಂತೆ ಅನೇಕ ಭಾರತೀಯ ಮತ್ತು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು.ಅನಂತಮೂರ್ತಿ ಎರಡು ಬಾರಿ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ೨೦೧೨ ರಲ್ಲಿ ಅವರನ್ನು ಕರ್ನಾಟಕದ ಕೇಂದ್ರ ವಿಶ್ವವಿದ್ಯಾಲಯದ ಮೊದಲ ಕುಲಪತಿಯನ್ನಾಗಿ ನೇಮಿಸಲಾಯಿತು.

ಡಾ.ಅನಂತ ಮೂರ್ತಿಯವರು ೨೦೦೨ರಿಂದ ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿದ್ದರು. ಜೊತೆಗೆ ಸಕ್ಕರೆ ಕಾಯಿಲೆ ಕಾಡುತ್ತಿತ್ತು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರಿನ ‘ಮಣಿಪಾಲ್ ಆಸ್ಪತ್ರೆ’ಯಲ್ಲಿ ೧೦ ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಹೊಂದದೆ ಮೂತ್ರಪಿಂಡ ವೈಫ಼ಲ್ಯ ಹಾಗು ಲಘು ಹೃದಯಾಘಾತದಿಂದ 2014ರ ಆಗಸ್ಟ್ 22ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬೆಂಗಳೂರಿನ ಡಾಲರ್ ಕಾಲೊನಿಯಲ್ಲಿ ವಾಸಿಸುತ್ತಿದ್ದ ಮೂರ್ತಿಯವರ ಅಂತಿಮ ಸಂಸ್ಕಾರ, ಬೆಂಗಳೂರಿನ ‘ಜ್ಞಾನಭಾರತಿ ಕಲಾಗ್ರಾಮ’ದಲ್ಲಿ2014ರ ಆಗಸ್ಟ್ 23 ನೆಯ ತಾರೀಖಿನ ಮಧ್ಯಾಹ್ನ ಸುಮಾರು ೪ ಗಂಟೆಗೆ ಜರುಗಿತು. ಮೂರ್ತಿಯವರು ಪತ್ನಿ ಎಸ್ತರ್, ಮಗ ಶರತ್ ಮತ್ತು ಮಗಳು ಅನುರಾಧರನ್ನು ಆಗಲಿದ್ದಾರೆ.

 ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅರ್ಧನಾರೀಶ್ವರ

ಶಿವನು ಅರ್ಧನಾರೀಶ್ವರನಾಗಲು ಪುರಾಣದಲ್ಲಿ ಹಲವು ಕಥೆಗಳಿವೆ

ಅವಕಾಡೋ

ಬೆಣ್ಣೆ ಹಣ್ಣಿನ ಬೆಣ್ಣೆಯಂತಹ ಉಪಯೋಗಗಳು