in

ತುಲಾ ರಾಶಿಯವರಿಗಿಂದು ಯಶಸ್ಸಿನ ದಿನ, ಆದರೆ ವಿರೋಧಿಗಳಿಂದ ಜಾಗರೂಕರಾಗಿರಿ

ತುಲಾ ರಾಶಿಯವರಿಗಿಂದು ಯಶಸ್ಸಿನ ದಿನ, ಆದರೆ ವಿರೋಧಿಗಳಿಂದ ಜಾಗರೂಕರಾಗಿರಿ

ಮೇಷ ರಾಶಿ

ಈ ದಿನ ನಿಮಗೆ ಉತ್ತಮವಾಗಿರಲಿದೆ. ಸಂತೋಷವನ್ನು ನೀವು ಇತರರೊಂದಿಗೆ ಹಂಚಿಕೊಳ್ಳುವಿರಿ. ಆರ್ಥಿಕವಾಗಿ ಬಲಗೊಳ್ಳುವ ಸಾಧ್ಯತೆಯಿದೆ. ಸಾಲ ನೀಡಿದ ಹಣ ಮರಳಿ ಬರುವ ಸಾಧ್ಯತೆ ಇದೆ. ಬಿಡುವಿನ ವೇಳೆ ಮಕ್ಕಳೊಂದಿಗೆ ಆನಂದಿಸುವಿರಿ. ಕೆಲವರಿಗೆ ವ್ಯಾಪಾರದಲ್ಲಿ ಲಾಭ ಸಿಗಲಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉನ್ನತ ಮಟ್ಟ ತಲುಪುವ ಸಾಧ್ಯತೆಗಳು ಇವೆ. ನಿಮ್ಮ ಕೆಲಸವನ್ನು ಮೇಲಾಧಿಕಾರಿಗಳು ಗುರುತಿಸುತ್ತಾರೆ. ಕೆಲಸದಲ್ಲಿ ಪೈಪೋಟಿ ಹೆಚ್ಚಾಗಿದ್ದರೂ ನೀವು ಕೆಲಸವನ್ನು ಒತ್ತಡವಾಗಿಸಿಕೊಳ್ಳುವುದಿಲ್ಲ. ಹೊಸ ಕೆಲಸಗಳನ್ನು ಆರಂಭಿಸಲು ನಿಮ್ಮ ಮನೆಯವರ ಅಥವಾ ಅನುಭವಿಗಳ ಸಹಾಯ ಪಡೆಯುವುದು ಉತ್ತಮ.

ವೃಷಭ ರಾಶಿ

ಪ್ರವಾಸಗಳು, ಸಾಮಾಜಿಕ ಸಭೆಗಳು ನಿಮ್ಮನ್ನು ಆರಾಮವಾಗಿ ಮತ್ತು ಸಂತೋಷವಾಗಿರಿಸುತ್ತವೆ. ಇದು ನಿಮಗೆ ಶಕ್ತಿ ತುಂಬುವ ದಿನವಾಗಿದೆ. ಈ ದಿನ ನಿಮಗೆ ಅನಿರೀಕ್ಷಿತ ಲಾಭಗಳನ್ನು ಸಿಗಬಹುದು. ನಿಮ್ಮ ಸಂಗಾತಿ ನಿಮ್ಮ ಕೆಲಸದಲ್ಲಿ ಬೆಂಬಲವನ್ನು ನೀಡುತ್ತಾರೆ. ನಿಮ್ಮ ಸಂಗಾತಿಯು ನಿಮ್ಮ ಬಗ್ಗೆ ಚೆನ್ನಾಗಿ ಯೋಚಿಸುತ್ತಾರೆ. ಸಂಬಂಧಗಳಲ್ಲಿ ಆಗುವ ಮನಸ್ತಾಪಗಳನ್ನು ತಾಳ್ಮೆಯಿಂದ ಸ್ವೀಕರಿಸುವುದು ಒಳ್ಳೆಯದು.

ಮಿಥುನ ರಾಶಿ

ಕೆಲ ಸಮಸ್ಯೆಗಳು ಇಂದು ನಿಮಗೆ ಮಾನಸಿಕ ಒತ್ತಡವನ್ನು ತರುತ್ತವೆ. ಈ ದಿನವನ್ನು ಸಂತೋಷವಾಗಿ ಕಳೆಯಲು ದುಂದು ವೆಚ್ಚ ಮಾಡುವುದನ್ನು ತಪ್ಪಿಸಿ. ಮನರಂಜನೆಗಾಗಿ ಹೆಚ್ಚು ಸಮಯ ಮತ್ತು ಹಣವನ್ನು ವ್ಯಯಿಸುವುದನ್ನು ನಿಯಂತ್ರಿಸಿ. ನಿಮ್ಮೊಂದಿಗೆ ವಾಸಿಸುವ ಯಾರಾದರೂ ಇಂದು ನಿಮ್ಮ ಇತ್ತೀಚಿನ ಕ್ರಿಯೆಗಳಿಂದ ಹೆಚ್ಚು ಕಿರಿಕಿರಿಗೊಳ್ಳುತ್ತಾರೆ. ನಿಮ್ಮ ಪ್ರಿಯತಮೆಯ ಅನಿಯಮಿತ ನಡವಳಿಕೆಯು ನಿಮ್ಮ ಮನಸ್ಥಿತಿಯನ್ನು ಅಸಮಾಧಾನಗೊಳಿಸಬಹುದು. ಕೆಲಸದಲ್ಲಿ ವಿಷಯಗಳು ಉತ್ತಮವಾಗಿರುತ್ತವೆ. ನಿಮ್ಮ ಮನಸ್ಥಿತಿ ಕೆಲಸದಲ್ಲಿ ದಿನವಿಡೀ ಉತ್ತಮವಾಗಿರುತ್ತದೆ. ಕ

ಕರ್ಕಾಟಕ ರಾಶಿ

ಇಂದು ನೀವು ವಿಶ್ರಾಂತಿ ಪಡೆಯಲು ಸಾಧ್ಯವಾಗುವ ದಿನ. ನಿಮ್ಮ ಆರೋಗ್ಯ ಸುಧಾರಣೆಗೆ ವ್ಯಾಯಾಮ ಮಾಡಿ. ಇದನ್ನು ನಿತ್ಯ ಪಾಲಿಸುವುದನ್ನು ರೂಢಿಸಿಕೊಳ್ಳಿ. ನಿಮ್ಮ ಸ್ನೇಹಿತರ ಸಹಾಯದಿಂದ ಹಣಕಾಸಿನ ತೊಂದರೆಗಳು ನಿವಾರಣೆಯಾಗುತ್ತವೆ. ಮನೆಗೆ ಅಗತ್ಯವಾದ ವಸ್ತುಗಳ ಖರೀದಿಯು ಸಂಜೆಯ ಸಮಯದಲ್ಲಿ ನಿಮ್ಮನ್ನು ಕಾರ್ಯನಿರತವಾಗಿರಿಸುತ್ತವೆ. ನೀವು ನಿಮ್ಮ ಕಾರ್ಯಗಳಿಂದ ಜನಪ್ರಿಯರಾಗುತ್ತೀರಿ. ಸುಲಭವಾಗಿ ಬೇರೆಯವರನ್ನು ನಿಮ್ಮ ಕೆಲಸಗಳಿಂದ ಆಕರ್ಷಿಸುತ್ತೀರಿ.

ಸಿಂಹ ರಾಶಿ

ನಿಮ್ಮ ಆಸಕ್ತಿದಾಯಕ ಕೆಲಸಗಳನ್ನು ಮಾಡುವ ಮೂಲಕ ಮನಸ್ಸನ್ನು ಸಂತೋಷವಾಗಿಡಿ. ನಿತ್ಯ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ಇದು ನಿಮ್ಮ ಆರೋಗ್ಯ ಉತ್ತಮವಾಗಿಡುವುದು ಮಾತ್ರವಲ್ಲದೆ ಮನಸ್ಸನ್ನು ಪ್ರಶಾಂತವಾಗಿರಿಸುತ್ತದೆ. ಹೊರಗಿನ ಆಹಾರ ಸೇವನೆಯನ್ನು ತಪ್ಪಿಸಿ. ನಿಮಗೆ ಯಾರ ಸಹಾಯವಿಲ್ಲದೆ ಹಣ ಗಳಿಸಲು ಸಾಧ್ಯವಾಗುತ್ತದೆ. ಮನೆಯ ಕೆಲಸವು ದಣಿವು ಮತ್ತು ಮಾನಸಿಕ ಒತ್ತಡಕ್ಕೆ ಪ್ರಮುಖ ಕಾರಣವಾಗಬಹುದು.

ಕನ್ಯಾ ರಾಶಿ

ನೀವು ಪ್ರಯಾಣಿಸಲು ತುಂಬಾ ದುರ್ಬಲರಾಗಿರುವುದರಿಂದ ದೀರ್ಘ ಪ್ರಯಾಣವನ್ನು ತಪ್ಪಿಸಲು ಪ್ರಯತ್ನಿಸಿ. ನೀವು ಅನಿರೀಕ್ಷಿತ ಲಾಭಗಳನ್ನು ನಿರೀಕ್ಷಿಸಬಹುದು. ಮಾತನಾಡುವಾಗ ಯಾರಿಗೂ ಬೇಸರವಾಗದಂತೆ ನೋಡಿಕೊಳ್ಳಿ. ಹರಟೆ ಹೊಡೆಯುವುದರಲ್ಲಿ ಸಮಯ ವ್ಯರ್ಥ ಮಾಡುವುದಕ್ಕಿಂತ ಲಾಭದಾಯಕ ಹುದ್ದೆಗಳ ಬಗ್ಗೆ ಯೋಚಿಸಿ. ನೀವು ನಿಮ್ಮ ಕುಟುಂಬಸ್ಥರ ಬಗ್ಗೆ ಕಾಳಜಿ ವಹಿಸುತ್ತೀರಿ.

ತುಲಾ ರಾಶಿ

ನೀವು ಇಂದು ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳು ಇವೆ. ಹಳೆಯ ಸ್ನೇಹಿತ ಇಂದು ನಿಮಗೆ ಹಣಕಾಸಿನ ಸಹಾಯವನ್ನು ಕೇಳಬಹುದು. ನಿಮ್ಮ ಸಹಾಯವು ನಿಮ್ಮ ಹಣಕಾಸಿನ ಪರಿಸ್ಥಿತಿಗಳನ್ನು ದುರ್ಬಲಗೊಳಿಸಬಹುದು. ನೀವು ಮಾತನಾಡುವಾಗ ಎಚ್ಚರಿಕೆಯಿಂದಿರಿ. ಯಾಕೆಂದರೆ ನಿಮಗೆ ಗೊತ್ತಿಲ್ಲದೇ ಆಡುವ ಮಾತು ನಿಮ್ಮ ಹಿರಿಯರ ಭಾವನೆಗಳನ್ನು ನೋಯಿಸಬಹುದು. ವಿದ್ಯಾರ್ಥಿಗಳು ಅಭ್ಯಾಸದ ಕಡೆಗೆ ಗಮನ ಹರಿಸುತ್ತಾರೆ.

ವೃಶ್ಚಿಕ ರಾಶಿ

ದೀರ್ಘಾವಧಿಯ ಬಾಕಿ ಉಳಿದಿರುವ ಸಾಲ ಇಂದು ವಸೂಲಿಯಾಗುತ್ತವೆ. ಚಿಕ್ಕ ಮಕ್ಕಳು ನಿಮ್ಮನ್ನು ಕಾರ್ಯನಿರತರನ್ನಾಗಿ ಮಾಡುತ್ತಾರೆ ಮತ್ತು ನಿಮಗೆ ಸಂತೋಷವನ್ನು ತರುತ್ತಾರೆ. ಪ್ರಮುಖ ವ್ಯಾಪಾರ ಒಪ್ಪಂದವನ್ನು ಮಾತುಕತೆ ಮಾಡುವಾಗ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಿ. ನಿಮ್ಮ ಬಿಡುವಿನ ವೇಳೆಯಲ್ಲಿ ನಿಮಗೆ ಇಷ್ಟವಾದುದ್ದನ್ನು ಮಾಡಬಹುದು. ಆದರೆ ಮದ್ಯಪಾನವನ್ನು ಮಾಡುವುದು ತಪ್ಪಿಸಿ.

ಧನಸ್ಸು ರಾಶಿ

ಕೆಲಸದಲ್ಲಿ ನೀವು ವೇಗವಾಗಿ ಗ್ರಹಿಕೆಯನ್ನು ಹೊಂದಿರುತ್ತೀರಿ. ನೀವು ಮಾಡುವ ಪ್ರತಿಯೊಂದು ಕೆಲಸವೂ ನಿಮಗೆ ಸುಲಭ ಎನಿಸುತ್ತದೆ. ಜ್ಞಾನವನ್ನು ವೃದ್ಧಿಸಿಕೊಳ್ಳುವ ಕಲೆಯನ್ನು ನೀವು ಹೊಂದಿರುತ್ತೀರಿ. ಹೀಗಾಗಿ ಸಹೋದ್ಯೋಗಿಗಳು ನಿಮ್ಮೊಂದಿಗೆ ಪೈಪೋಟಿಗಳಿರಬಹುದು ಆದರೆ ನಿಮ್ಮ ಜ್ಞಾನಕ್ಕೆ ಪೈಪೋಟಿ ಬೀಳುವವರು ಕೊಂಚ ಕಡಿಮೆ. ಸ್ನೇಹಿತರನ್ನು ಸಮಸ್ಯೆಗಳನ್ನು ತರುತ್ತಾರೆ.

ಮಕರ ರಾಶಿ

ನೀವು ಕೈಗೊಳ್ಳುವ ಪ್ರವಾಸಗಳು ಮತ್ತು ಸಾಮಾಜಿಕ ಸಭೆಗಳು ನಿಮ್ಮನ್ನು ಆರಾಮವಾಗಿ ಮತ್ತು ಸಂತೋಷವಾಗಿರಿಸುತ್ತವೆ. ಹೊಸ ಆರ್ಥಿಕ ಲಾಭಗಳನ್ನು ತರಲು ಕೆಲವು ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಿಕೊಳ್ಳುವಿರಿ. ನೀವು ಅಂದುಕೊಂಡಂತೆ ಕುಟುಂಬದ ಪರಿಸ್ಥಿತಿ ಸಾಮಾನ್ಯವಾಗಿರುವುದಿಲ್ಲ. ಇಂದು ಕುಟುಂಬದಲ್ಲಿ ವಾದ-ವಿವಾದಗಳು ಉಂಟಾಗುವ ಸಾಧ್ಯತೆ ಇದೆ.

ಕುಂಭ ರಾಶಿ

ನಿಮ್ಮ ಸುತ್ತಲ ಕೆಲ ಜನರಿಂದ ಅಸಭ್ಯ ವರ್ತನೆಗೆ ಪ್ರಚೋದನೆ ವ್ಯಕ್ತವಾಗಬಹುದು. ಹೀಗಾಗಿ ಬೇರೆಯವರಿಗೆ ಬೇಸರವಾಗದಂತೆ ಇರುವುದು ಉತ್ತಮ. ಅಗೌರವದ ನಡೆ ಮತ್ತು ಯಾರನ್ನಾದರೂ ಲಘುವಾಗಿ ಪರಿಗಣಿಸುವುದು ನಿಮಗೆ ಶೋಭೆ ತರುವುದಿಲ್ಲ. ಅದು ನಿಮ್ಮ ಸಂಬಂಧವನ್ನು ತೀವ್ರವಾಗಿ ಹಾಳುಮಾಡುತ್ತದೆ ಎಂದು ನೀವು ಅರಿತುಕೊಳ್ಳಬೇಕು. ಸ್ಟಾಕ್‌ಗಳು ಮತ್ತು ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆಯನ್ನು ದೀರ್ಘಾವಧಿಯ ಲಾಭ ನೀಡುತ್ತದೆ.

ಮೀನ ರಾಶಿ

ದೀರ್ಘಾವಧಿಯ ಬಾಕಿ ಇರುವ ಹಣ ವಸೂಲಿಯಾಗುತ್ತದೆ. ನೀವು ಕೌಟುಂಬಿಕ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕುಟುಂಬ ನಿಭಾಯಿಸಲು ತುಂಬಾ ಸುಲಭವಾಗುತ್ತದೆ. ನಿಮ್ಮ ಕುಟುಂಬದ ಸದಸ್ಯರ ಮೇಲೆ ಪ್ರಭಾವ ಬೀರುವಲ್ಲಿ ನಿಮಗೆ ಯಾವುದೇ ತೊಂದರೆ ಕಂಡುಬರುವುದಿಲ್ಲ. ಹಠಾತ್ ಪ್ರಯಾಣ ನಿಮ್ಮನ್ನು ಗೊಂದಲಗೊಳಿಸಬಹುದು. ಇಂದು ಮಾಡಿದ ಜಂಟಿ ಉದ್ಯಮಗಳು ಪ್ರಯೋಜನಕಾರಿಯಾಗುತ್ತವೆ.

What do you think?

-1 Points
Upvote Downvote

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

48 Comments

ಬೆಳ್ಳುಳ್ಳಿಯಿಂದ ಅರೋಗ್ಯ

ಬೆಳ್ಳುಳ್ಳಿಯಿಂದ ಅರೋಗ್ಯಕ್ಕೆ ಆಗುವ ಪ್ರಯೋಜನವಾದರೂ ಏನು?

ವಾಲಿಬಾಲ್ ಆಟ

ವಾಲಿಬಾಲ್ ಆಟದ ಇತಿಹಾಸ ಹೀಗಿದೆ