ನಮಸ್ಕಾರ ವೀಕ್ಷಕರೆ ಡೈಮಂಡ್ ಉದ್ದಿಮೆಯನ್ನು ಸಿನಿ ರೀತಿಯಲ್ಲಿ ಅಪಹರಣ ಮಾಡಿದ ನಾರಾಯಣ್ ಹಾಗೂ ಆತನ ಸಹಚರ ರನ್ನು ಪೊಲೀಸರು ಬಂಧಿಸಿದ್ದಾರೆ. ನಾರಾಯಣ್ ಸಿನಿಮಾದಲ್ಲಿ ಖಳ ನಟನಾಗಿ ಅಭಿನಯಿಸಿದ್ದ. ವೀರಪರಂಪರೆ ಸೇರಿದಂತೆ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳ ನಾಯಕನಾಗಿ ಅಭಿನಯಿಸಿದ್ದಾರೆ.
ನಾರಾಯಣ್ ಮತ್ತು ಆತನ ಸಹಚರರು ಮಂಡ್ಯ ಮೂಲದ ವಜ್ರ ವ್ಯಾಪಾರಿಯನ್ನು ಬೆಂಗಳೂರಿನ ಯುಬಿಸಿಟಿ ಬಳಿ ಅಪಹರಿಸಿ ರಾತ್ರಿಯೆಲ್ಲ ಬೆಂಗಳೂರು ಸುತ್ತ ಡಿಸಿದ್ದಾರೆ. ಕಳೆದ ತಿಂಗಳು 21 ರಂದು ಈ ಘಟನೆ ನಡೆದಿದ್ದು ನಾರಾಯಣ್ ಮತ್ತು ಆತನ ಸಹಚರರು ಮರುದಿನ ಹೈಗ್ರೌಂಡ್ಸ್ ಸ್ಥಾನ ವ್ಯಾಪ್ತಿಯಲ್ಲಿ ಉದ್ದಿಮೆಯನ್ನು ಬಿಟ್ಟುಹೋಗಿದ್ದರು.
ಬಳಿಕ ಉದ್ಯಮಿ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಗ್ರೌಂಡ್ಸ್ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಕರಣ ಗಂಭೀರ ಸ್ವರೂಪ ಆಗಿದ್ದರಿಂದ ಬಂಧಿತ ಮೂವರು ಆರೋಪಿಗಳನ್ನು ಏಳು ದಿನ ಕಸ್ಟಡಿಗೆ ಬಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ಮತ್ತು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಶೇರ್ ಮಾಡಿ ಧನ್ಯವಾದಗಳು.
GIPHY App Key not set. Please check settings