ಕೆಲವೊಮ್ಮೆ ಇದ್ದಕ್ಕಿದ್ದ ಹಾಗೆ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣಗಳೇನು?
ಇದನ್ನು ಹೆಮಟೂರಿಯಾ ಎನ್ನುತ್ತಾರೆ. ಮೂತ್ರದ ಬಣ್ಣ ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗಬಹುದು. ಆದರೆ ಅದರಿಂದ ಯಾವುದೇ ಉರಿ ಉಂಟಾಗುವುದಿಲ್ಲ. ಆದರೆ ಇದನ್ನು ನಿರ್ಲಕ್ಷ್ಯ ಮಾಡಿದರೆ ಗಂಭೀರ ಅಪಾಯ ಎದುರಿಸಬೇಕಾಗಬಹುದು.
ಕೆಲವೊಮ್ಮೆ ನಮಗೆ ಗೊತ್ತಿಲ್ಲದೆ ನಮ್ಮ ದೇಹ ಗಂಭೀರ ಸಮಸ್ಯೆಗೆ ಗುರಿಯಾಗಬಹುದು. ಅಂತಹ ಸಂದರ್ಭದಲ್ಲಿ ಬೇಗನೆ ಎಚ್ಚೆತ್ತುಕೊಳ್ಳುವುದು ಅಗತ್ಯವಾಗಿರುತ್ತದೆ. ಅನಾರೋಗ್ಯ ಸಮಸ್ಯೆಗಳು ಯಾವಾಗ ಯಾರಿಗೆ ಬೇಕಾದರೂ ಬರಬಹುದು. ಅಂತಹ ಸಮಸ್ಯೆಗಳಲ್ಲಿ ಮೂತ್ರ ಮಾಡುವಾಗ ರಕ್ತ ಕಾಣಿಸಿಕೊಳ್ಳುವುದು ಕೂಡ ಒಂದು.
ಮೂತ್ರದಲ್ಲಿ ರಕ್ತ ಇರುವುದು ರೋಗವಲ್ಲ, ಆದರೆ ಅನಾರೋಗ್ಯವನ್ನು ಸೂಚಿಸುವ ಲಕ್ಷಣವಾಗಿದೆ. ಇದನ್ನು ವೈದ್ಯಕೀಯ ದೃಷ್ಟಿಯಿಂದ ‘ಹೆಮಟುರಿಯಾ’ ಎಂದು ಕರೆಯಲಾಗುತ್ತದೆ. ಅಪರೂಪದ ಸಂದರ್ಭಗಳಲ್ಲಿ, ಸೂಕ್ಷ್ಮದರ್ಶಕದ ಅಡಿಯಲ್ಲಿ ಮೂತ್ರದ ಮಾದರಿಯನ್ನು ನೋಡಿದಾಗ ಮಾತ್ರ ರಕ್ತ ಗೋಚರಿಸುತ್ತದೆ. ಈ ಸ್ಥಿತಿಯನ್ನು ಮೈಕ್ರೋಸ್ಕೋಪಿಕ್ ಹೆಮಟುರಿಯಾ ಎಂದು ಕರೆಯಲಾಗುತ್ತದೆ.
ಮೂತ್ರದಲ್ಲಿ ರಕ್ತ ಸ್ರಾವದ ಸಮಸ್ಯೆಯು ಮಹಿಳೆಯರಲ್ಲಿ ಅಧಿಕವಾಗಿರುತ್ತದೆ. ಮೂತ್ರದ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿದೆ ಎಂದಾದರೆ ಇತರ ರೋಗದ ಲಕ್ಷಣಗಳಾಗಿರುತ್ತವೆ. ಯುಟಿಐ ಎಂದು ಕರೆಯಲಾಗುವ ಮೂತ್ರ ಸೋಂಕಿನಿಂದ ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಸಮಸ್ಯೆ ಎದುರಾದಾಗ ಮೊದಲು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು.
ಸೂಕ್ಷ್ಮಾಣುಜೀವಿಗಳು ರಕ್ತದಿಂದ ಅಥವಾ ಮೂತ್ರನಾಳಗಳಿಂದ ಮೂತ್ರಪಿಂಡಗಳಾಗಿ ಹರಡಿದಾಗ, ಅದು ಮೂತ್ರಪಿಂಡದ ಸೋಂಕಿಗೆ ಕಾರಣವಾಗುತ್ತದೆ. ಸಂಬಂಧಿತ ಪಾರ್ಶ್ವ ನೋವಿನಿಂದ ವ್ಯಕ್ತಿಯು ಜ್ವರವನ್ನು ಹೊಂದಿರುತ್ತಾನೆ. ಕೆಲವು ಸಂದರ್ಭಗಳಲ್ಲಿ, ರೋಗಿಯು ಮೂತ್ರದಲ್ಲಿ ರಕ್ತವನ್ನು ಸಹ ಗಮನಿಸಬಹುದು.
ಕೆಲವು ಸಂದರ್ಭಗಳಲ್ಲಿ, ಆಸ್ಪಿರಿನ್ ನಂತಹ ಆಂಟಿ-ಕೋಗುಲೇಟಿಂಗ್ ಏಜೆಂಟ್ ಮತ್ತು ಹೆಪಾರಿನ್ ನಂತಹ ರಕ್ತ ತೆಳುವಾಗುವುದೂ ಗಾಳಿಗುಳ್ಳೆಯಲ್ಲಿ ರಕ್ತಸ್ರಾವಕ್ಕೆ ಕಾರಣವಾಗಬಹುದು.
ಅತಿಯಾದ ವ್ಯಾಯಾಮ ಅಥವಾ ಅತಿಯಾಗಿ ದೇಹ ದಣಿದು ನಿರ್ಜಲೀಕರಣವಾಗಿದ್ದರೆ,.ಕಿಡ್ನಿ ಸ್ಟೋನ್ ಅಥವಾ ಪಿತ್ತಕೋಶದ ಕಲ್ಲಿನ ಸಮಸ್ಯೆ ಇದ್ದರೆ,
ಕಿಡ್ನಿಗೆ ಸಂಬಂಧಿಸಿದ ಗಡ್ಡೆಗಳಾದರೆ, ಮೂತ್ರದ ಸೋಂಕಿನ ಸಮಸ್ಯೆ ಇದ್ದರೆ, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವ ಸಮಸ್ಯೆ ಎದುರಾಗಬಹುದು.
ಕೆಲವೊಮ್ಮೆ, ಕೇಂದ್ರೀಕೃತ ಮೂತ್ರದಲ್ಲಿರುವ ಖನಿಜಗಳು ಮೂತ್ರಪಿಂಡ ಅಥವಾ ಮೂತ್ರಕೋಶದ ಗೋಡೆಗಳ ಮೇಲೆ ಹರಳುಗಳ ರೂಪದಲ್ಲಿ ಸಂಗ್ರಹವಾಗುತ್ತವೆ. ಸಮಯದೊಂದಿಗೆ, ಈ ಹರಳುಗಳು ಗಟ್ಟಿಯಾದ ಕಲ್ಲುಗಳಾಗಿರುತ್ತವೆ. ಸಾಮಾನ್ಯವಾಗಿ, ಈ ಕಲ್ಲುಗಳು ಯಾವುದೇ ರೋಗಲಕ್ಷಣಗಳನ್ನು ತೋರಿಸುವುದಿಲ್ಲ, ಆದರೆ ಯಾವುದೇ ರಕ್ತನಾಳಗಳು ಹಾನಿಗೊಳಗಾದರೆ ರಕ್ತಸ್ರಾವವಾಗಬಹುದು.
ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕಿನ ನಂತರ ಮೂತ್ರಪಿಂಡವು ಉಬ್ಬಿಕೊಳ್ಳುವುದರಿಂದ ಮೂತ್ರಪಿಂಡದಲ್ಲಿ ಇತ್ತೀಚಿನ ಯಾವುದೇ ಸೋಂಕು ಹೆಮಟುರಿಯಾಕ್ಕೆ ಕಾರಣವಾಗಬಹುದು.
ಸಿಸ್ಟಿಕ್ ಬೆಳವಣಿಗೆಯ ಸಮಸ್ಯೆಯು ಮಹಿಳೆಯರಲ್ಲಿ ಸಾಮಾನ್ಯವಾದ ಸಮಸ್ಯೆಗಳಾಗಿರುತ್ತವೆ. ಈ ಸಮಸ್ಯೆ ಇರುವಾಗ ಮೂತ್ರದಲ್ಲಿ ರಕ್ತ ಹಾಗೂ ವಿಪರೀತವಾದ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಅಧಿಕ ನೋವುಂಟಾಗುವುದು. ಅಲ್ಲದೆ ಮೂತ್ರದಲ್ಲಿ ಅಧಿಕ ರಕ್ತಸ್ರಾವ ಉಂಟಾಗುವುದು.
ಕೆಲವೊಂದು ಮನೆಮದ್ದುಗಳನ್ನು ಪ್ರಯತ್ನಿಸಿ :
ಮುಟ್ಟಿದರೆ ಮುನಿ ಗಿಡದ ಎಲೆಯನ್ನು 1 ಲೀ ನೀರಿನಲ್ಲಿ ಚೆನ್ನಾಗಿ ಕುದಿಸಿ, 250 ಎಂಎಲ್ ಆಗುವಷ್ಟು ಕುದಿಸಿ ಅದರ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುತ್ತಾ ಇರಿ.
ದೇಹ ಅತಿಯಾಗಿ ದಣಿಯುವುದಕ್ಕೆ ಒಂದು ಪ್ರಮುಖ ಕಾರಣವೆಂದರೆ ಅದು ನಿರ್ಜಲೀಕರಣ. ಹೀಗಾಗಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗುತ್ತದೆ. ಅದು ಕೂಡ ಮೂತ್ರದಲ್ಲಿ ರಕ್ತಹೋಗಲು ಕಾರಣವಾಗಿರುವುದರಿಂದ ಹೆಚ್ಚಿನ ನೀರಿನ ಸೇವನೆ, ಲಿಂಬು, ಮೋಸಂಬಿಯಂತಹ ನೀರಿನಾಂಶವಿರುವ ಆಹಾರಗಳನ್ನು ಸೇವನೆ ಮಾಡುವುದರಿಂದ ಮೂತ್ರದಲ್ಲಿನ ರಕ್ತದ ಸಮಸ್ಯೆ ನಿವಾರಣೆ ಮಾಡಬಹುದು.
ನೆಗ್ಗಿನ ಮುಳ್ಳು ಎಂದು ಕರೆಯುವ ಈ ಸಸ್ಯದ ಕಷಾಯವನ್ನು ಸೇವನೆ ಮಾಡುವುದರಿಂದ ಮೂತ್ರದಲ್ಲಿನ ರಕ್ತಸ್ರಾವವನನ್ನು ನಿಧಾನವಾಗಿ ತಡೆಗಟ್ಟಬಹುದಾಗಿದೆ.
ಗೋಕ್ಷರದ ಪುಡಿಯನ್ನು ಅಂಗಡಿಯಲ್ಲಿ ಖರೀದಿಸಿ, 2 ಚಮಚದಷ್ಟು ಸೇರಿಸಿ ಕಷಾಯ ಮಾಡಿ ಪ್ರತಿದಿನ ಬೆಳಗ್ಗೆ ಅರ್ಧಲೋಟದಷ್ಟು ಸೇವನೆ ಮಾಡುತ್ತಾ ಬಂದರೆ ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಣೆ ಮಾಡಬಹುದು.
ದಿನಾ ಒಂದು ಲೋಟ ಮಜ್ಜಿಗೆಯನ್ನು ಸೇವನೆ ಮಾಡುವುದರಿಂದ ಮೂತ್ರವಿಸರ್ಜನೆ ಸರಿಯಾಗುತ್ತದೆ ಹಾಗೂ ಮೂತ್ರಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ನಿವಾರಣೆಯಾಗುತ್ತದೆ.
ಕ್ರ್ಯಾನ್ಬೆರಿ ಹಣ್ಣುಗಳು ಮೂತ್ರದ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಹೀಗಾಗಿ ಪ್ರತಿದಿನ 250 ಎಂಎಲ್ನಷ್ಟು ಕ್ರ್ಯಾನ್ಬೆರಿ ಹಣ್ಣುಗಳ ಜ್ಯೂಸ್ ತಯಾರಿಸಿ ಸೇವನೆ ಮಾಡಿದರೆ ಮೂತ್ರದಲ್ಲಿ ರಕ್ತ ಬರುವುದು ನಿಧಾನಕ್ಕೆ ಕಡಿಮೆಯಾಗುತ್ತದೆ.
ಈ ಹಣ್ಣುಗಳ ಜ್ಯೂಸ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಧುಮೇಹ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಹಾಗೂ ಹೃದ್ರೋಗ, ಹೊಟ್ಟೆಯ ಹುಣ್ಣು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ.
ಧನ್ಯವಾದಗಳು.
GIPHY App Key not set. Please check settings