in

ಯಾವುದೇ ಕಟ್ಟಡ, ಮನೆ ಕಟ್ಟುವಾಗ ಪ್ರಮುಖವಾಗಿ ನೋಡುವುದೇ ವಾಸ್ತು

ವಾಸ್ತು
ವಾಸ್ತು

ಭೃಗು, ಅತ್ರಿ, ವಸಿಷ್ಠ, ವಿಶ್ವಕರ್ಮ, ಯಮ, ನಾರದ, ನಗ್ನಜಿತ್, ವಿಶಾಲಾಕ್ಷ, ಪುರಂದರ, ಬ್ರಹ್ಮ, ಕುಮಾರ, ನಂದೀಶ, ಶೌನಕ, ಗರ್ಗ, ವಾಸುದೇವ, ಅನಿರುದ್ಧ, ಶುಕ್ರ, ಬೃಹಸ್ಪತಿ-ಈ ಹದಿನೆಂಟು ಮಂದಿ ವಾಸ್ತುಶಾಸ್ತ್ರದ ಉಪದೇಶಕರು. ಮತ್ಸ್ಯರೂಪಿಯಾದ ಭಗವಂತನಿಂದ ಮನುವಿಗೆ ಇದು ಉಪದಿಷ್ಟವಾಗಿದೆ. ವಿಶ್ವಕರ್ಮ ಪ್ರಕಾಶದಲ್ಲಿರುವಂತೆ ಮೊಟ್ಟಮೊದಲು ಲೋಕಹಿತಕ್ಕಾಗಿ ಇದನ್ನು ತಿಳಿಸಿದವ ಶಂಭು.

ಪುರಾತನವಾದ ಈ ಶಾಸ್ತ್ರವನ್ನು ಪರಾಶರ ಬೃಹದ್ರಥನಿಗೂ, ಬೃಹದ್ರಥ ವಿಶ್ವಕರ್ಮನಿಗೂ ತಿಳಿಸುತ್ತಾನೆ. ವಿಶ್ವಕರ್ಮ ಈ ಶಾಸ್ತ್ರವನ್ನೇ ಲೋಕದಲ್ಲಿ ಪ್ರಚಾರ ಮಾಡಿರುತ್ತಾನೆ. ಬಹಳ ಹಿಂದೆ, ತ್ರೇತಾಯುಗದಲ್ಲಿ, ದೊಡ್ಡ ಆಕಾರದ ಒಂದು ಭೂತ ತನ್ನ ಶರೀರದಿಂದ ಪ್ರಪಂಚವನ್ನೆಲ್ಲ ಆವರಿಸಿಕೊಂಡು ನಿದ್ರಿಸುತ್ತಿತ್ತು. ಇಂದ್ರನೇ ಮೊದಲಾದ ದೇವತೆಗಳು ಆ ಭಯಂಕರಾಕಾರದ ಭೂತವನ್ನು ನೋಡಿ ವಿಸ್ಮಿತರಾಗಿ ಭಯಪಟ್ಟು ಬ್ರಹ್ಮನ ಮೊರೆಹೊಕ್ಕು, ಭಯಂಕರ ರೂಪಿಯಾದ ಭೂತವೊಂದು ಮಲಗಿ ಪ್ರಪಂಚವನ್ನೆಲ್ಲ ಆವರಿಸಿಕೊಂಡಿದೆ, ನಾವು ಭೀತರಾಗಿದ್ದೇವೆ, ಈಗ ಎಲ್ಲಿಗೆ ಹೋಗುವುದು. ಏನು ಮಾಡುವುದು ಎಂಬ ಅರಿವಿಲ್ಲದೆ ನಿನ್ನಲ್ಲಿಗೆ ಬಂದಿದ್ದೇವೆ-ಎಂದು ವಿಷಯವನ್ನು ತಿಳಿಸಿ, ತಮ್ಮ ದುರಿತಗಳನ್ನು ನಿವಾರಿಸಿ ರಕ್ಷಿಸುವಂತೆ ಪ್ರಾರ್ಥಿಸಿದರು.

ಆಗ ಬ್ರಹ್ಮ, ದೇವತೆಗಳಿಗೆ ಅಭಯ ಪ್ರದಾನಮಾಡಿ, ನೀವು ಹೆದರಬೇಡಿ, ಆ ಭೂತವನ್ನು ಕೆಳಮುಖ ಮಾಡಿ ತಳ್ಳಿ, ನಿಮಗೆ ಯಾವ ಭಯವೂ ಇರುವುದಿಲ್ಲ ಎಂದು ತಿಳಿಸುತ್ತಾನೆ. ಅದರಂತೆ, ದೇವತೆಗಳು ಆ ಭೂತವನ್ನು ಕೆಳಮೊಗನಾಗಿ ತಳ್ಳಿ ಹಿಂಸಿಸಿದರು. ಅವನೇ ಬ್ರಹ್ಮಕೃತ ವಾಸ್ತುಪುರುಷ.

ಯಾವುದೇ ಕಟ್ಟಡ, ಮನೆ ಕಟ್ಟುವಾಗ ಪ್ರಮುಖವಾಗಿ ನೋಡುವುದೇ ವಾಸ್ತು
ವಾಸ್ತುಪುಜೆ

ಭಾದ್ರಪದ ಮಾಸದ ಕೃಷ್ಣಪಕ್ಷ ತೃತೀಯಾ ತಿಥಿ, ಕೃತ್ತಿಕಾ ನಕ್ಷತ್ರ, ವ್ಯತೀಪಾತ ಯೋಗ, ಭದ್ರಾಕರಣ ಶನಿವಾರ, ಗುಳಿಕ ಕಾಲದಲ್ಲಿ ವಾಸ್ತುಪುರುಷ ಬ್ರಹ್ಮನಲ್ಲಿಗೆ ಹೋಗಿ ಜಗತ್ಪ್ರಭುವೇ! ಚರಾಚರಾತ್ಮಕವಾದ ಸರ್ವವೂ ನಿನ್ನಿಂದ ಸೃಷ್ಟವಾಗಿದೆ. ಯಾವ ತಪ್ಪು ಇಲ್ಲದ ನನ್ನನ್ನು ವಿನಾಕಾರಣ ದೇವತೆಗಳು ಪೀಡಿಸುತ್ತಿದ್ದಾರೆ ಎನ್ನಲು ಪ್ರೀತನಾದ ಬ್ರಹ್ಮ ಅವನಿಗೆ ಗ್ರಾಮ, ನಗರ, ದುರ್ಗ, ಪ್ರಾಸಾದ, ಉದ್ಯಾನ, ಗೃಹ-ಈ ಸ್ಥಳಗಳಲ್ಲಿ ಯಾರು ನಿನ್ನನ್ನು ಪೂಜಿಸದೆ ಕಟ್ಟಡ ಮೊದಲಾದುವನ್ನು ನಿರ್ಮಿಸಲು ಪ್ರಾರಂಭಿಸುತ್ತಾರೊ ಅವರ ಸಂಪತ್ತು ನಾಶವಾಗುತ್ತದೆ, ವಿಘ್ನಪರಂಪರೆಗಳು ಬರುತ್ತವೆ, ಕಟ್ಟಡ ಕಟ್ಟುವವನಿಗೂ ಮೃತ್ಯು ಸಂಭವಿಸುತ್ತದೆ ಎಂದು ವರವನ್ನು ಕೊಟ್ಟು ಅಂತರ್ಧಾನನಾದ. ಅಂದಿನಿಂದ ಯಾವ ಕಟ್ಟಡವನ್ನು ಕಟ್ಟಿಸಲು ಪ್ರಾರಂಭಿಸಬೇಕಾದರೂ ಮೊದಲು ವಾಸ್ತುಪುಜೆಯನ್ನು ಮಾಡುತ್ತಾರೆ. ಇಂದಿಗೂ ಇದು ಆಚರಣೆಯಲ್ಲಿದೆ.

ಪಾರಂಪರಿಕ ಆಗಮ ಕೇಂದ್ರಿತ ವಾಸ್ತುಶಾಸ್ತ್ರದಲ್ಲಿ ಬಹಳಷ್ಟು ಪರಿಕಲ್ಪನೆಗಳನ್ನು ಆಗಮ ತಂತ್ರಗಳಿಂದಲೇ ಪಡೆಯಲಾಗಿದೆ. ಇದರಲ್ಲಿ “ವಾಸ್ತುಸೂತ್ರೋಪನಿಷತ್” ಎನ್ನುವ ಗ್ರಂಥದಲ್ಲಿ ವಿವರಿಸಿದಂತಹ ವೈದಿಕ ಮೂಲವಾದ ಪರಿಕಲ್ಪನೆಗಳು ಮತ್ತು ಆಗಮಗಳಲ್ಲಿ ಸ್ವತಂತ್ರವಾಗಿರುವ ಪರಿಕಲ್ಪನೆಗಳು ಇವೆ. ಬಹಳ ಗೌಣವಾಗಿ ಯೋಗ ಶಾಸ್ತ್ರ ಮತ್ತಿತರ ದರ್ಶನ ಶಾಸ್ತ್ರ ಕೇಂದ್ರಿತ ಕಲ್ಪನೆಗಳು ಇವೆ. ಉದಾ: ಪಂಚ ಮಹಾಭೂತಗಳು-

ಪೃಥ್ವೀ/ಭೂಮಿ ;
ಜಲ/ನೀರು;
ವಾಯು/ಗಾಳಿ;
ಅಗ್ನಿ/ಬೆಂಕಿ;
ಆಕಾಶ/ನಭ

ವಾಸ್ತು ಪುರುಷ ಮಂಡಲ ಎನ್ನುವುದು ವಾಸ್ತುಶಾಸ್ತ್ರದಲ್ಲಿ ಅತ್ಯಗತ್ಯವಾದ ಭಾಗ. ಹಿಂದೂ ವಿಶ್ವವಿಜ್ಞಾನದ ಪ್ರಕಾರ ಭೂಮಿಯ ಮೇಲ್ಮೈ ಚೌಕ, ಭೂಮಿಯು ವಾಸ್ತು ಪುರುಷ ಮಂಡಲದ ನಾಲ್ಕು ಬದಿಗಳನ್ನು ದಿಗಂತವೆಂದೂ ಸೂರ್ಯಾಸ್ತ ಹಾಗೂ ಸೂರ್ಯೋದಯ ಹಾಗೂ ಉತ್ತರ ದಕ್ಶಿಣ ದಿಕ್ಕುಗಳೆನ್ನಲಾಗಿದೆ. ವಾಸ್ತು ಪುರುಷ ಮಂಡಲದ ನಂಬಿಕೆಯು ಈ ಪ್ರಕಾರವಾಗಿದೆ. ಒಮ್ಮೆ ಅಗೋಚರ ಶಕ್ತಿಯು ಸ್ವರ್ಗವನ್ನು ಭೂಮಿಯಿಂದ ತಡೆಗಟ್ಟಿದಾಗ ಬ್ರಹ್ಮ ಹಾಗೂ ಇತರೆ ದೇವರುಗಳು ಸೇರಿ ಅವನ್ನನ್ನು ಭೂಮಿಯ ಅಡಿಯಲ್ಲಿ ಬಂದಿಸಿ ಇಡುತ್ತಾರೆ. ಈ ಕಥೆಯ ಪ್ರಕಾರ ವಾಸ್ತು ಪುರುಷ ಮಂಡಲವು ರಚನೆಯಾಗಿದೆ. ವಾಸ್ತು ಪುರುಷ ಮಂಡಲದಲ್ಲಿ ೪೫ ದೇವರುಗಳು ಇವೆ, ಅವರಲ್ಲಿ ೩೨ ಅನ್ಯರು ಸೇರಿವೆ.

ಉತ್ತರ – ಕುಬೇರ
ದಕ್ಷಿಣ – ಯಮ
ಪೂರ್ವ – ಇಂದ್ರ
ಪಶ್ಚಿಮ – ವರುಣ
ಈಶಾನ್ಯ – ಶಿವ
ಆಗ್ನೇಯ – ಅಗ್ನಿ
ವಾಯವ್ಯ – ವಾಯು
ನೈಋತ್ಯ – ಪಿತೃ
ಮಧ್ಯ – ಬ್ರಹ್ಮ

ವಾಸ್ತುಶಾಸ್ತ್ರವು ವೈಶಿಷ್ಟ್ಯವು ಕಟ್ಟಡ ಹಾಗೂ ಸ್ಠಳದ ಮೂಲಕ ಶಕ್ತಿಯ ಹರಿವನ್ನು ನಿರ್ಧರಿಸುವುದಾಗಿದೆ. ಗುರುತ್ವಾಕರ್ಷಣಾ ಶಕ್ತಿಯ ಅಧಿಪತಿಯೇ “ವಾಸ್ತುಪುರುಷ”.ಭೂಮಿ ಮೇಲೆ ನಿರ್ಮಿಸಿದ ಎಂಥದೇ ಕಟ್ಟಡದಲ್ಲಿ ವಾಸ್ತುಪುರುಷ ವಾಸಿಸುತ್ತಾನೆ ಮತ್ತು ನಿಯಮಗಳನುಸಾರ ಆ ಕಟ್ಟಡದೊಳಗೆ ಪ್ರವೇಶಿಸುವ ದುಷ್ಟ ಹಾಗೂ ಅನಿಷ್ಟಕಾರ ಶಕ್ತಿಗಳನ್ನು ಆತ ನಿಯಂತ್ರಿಸುತ್ತಾನೆ. ಇದಲ್ಲದೆ ಆದ್ಯ ಶಿಲಾಸ್ತಂಭ ವಿನ್ಯಾಸ ಸ್ಥಳವನ್ನು ಗೊತ್ತುಮಾಡುವಾಗ ತತ್ಕಾಲದಲ್ಲಿ ವಾಸ್ತುಪುರುಷನ ಸ್ಥಿತಿಯನ್ನು ಅರಿಯಬೇಕು. ಈ ವಾಸ್ತುವೇ ಚರವಾಸ್ತು.

ಯಾವುದೇ ಕಟ್ಟಡ, ಮನೆ ಕಟ್ಟುವಾಗ ಪ್ರಮುಖವಾಗಿ ನೋಡುವುದೇ ವಾಸ್ತು
ವಾಸ್ತುಪುರುಷ

ಮಂಡಲದಲ್ಲಿರುವ ದೇವರುಗಳು ನೆಲಸಿದ ಪ್ರಕಾರ ಕಟ್ಟಡ ನಿರ್ಮಾಣ ಕೈಗೊಳ್ಳಲಾಗುತ್ತದೆ. ಅದರ ಪ್ರಕಾರ ಕಟ್ಟಡದ ಕೊಣೆಗಳನ್ನು ಕಟ್ಟಲಾಗುತ್ತದೆ. ಕೆಳಗಿನವು ಕೆಲವು ಉದಾಹರಣೆ:

ಉತ್ತರ – ಖಜಾನೆ, ಬೊಕ್ಕಸ, ಕೋಶಾಗಾರ, ಭಂಡಾರ
ಈಶಾನ್ಯ – ಪೂಜಾ ಸ್ಥಳ
ಪೂರ್ವ – ಮನೆಯ ದ್ವಾರ
ಆಗ್ನೇಯ – ಅಡುಗೆ ಮನೆ
ದಕ್ಷಿಣ – ಮಲಗುವ ಕೋಣೆ, ಶಯನಗೃಹ
ನೈಋತ್ಯ – ಶಸ್ತ್ರಾಗಾರ
ಪಶ್ಚಿಮ – ಊಟದ ಕೊಣೆ , ಕೊಟ್ಟಿಗೆ
ವಾಯವ್ಯ – ಉಗ್ರಾಣ

ವಾಸ್ತುಶಾಸ್ತ್ರ – ವಾಸ್ತು ವೇದ. ವಾಸ್ತುಶಾಸ್ತ್ರವು ಪ್ರಮುಖವಾದ ಹಿಂದೂ ನಿರ್ಮಾಣ ವಿಧಾನವಾಗಿರುತ್ತದೆ. ಇದನ್ನು ದೇವಸ್ಥಾನ ನಿರ್ಮಾಣದಲ್ಲಿ ಅತೀ ಮುಖ್ಯವಾದ ಅಂಶ ಎಂದು ಭಾವಿಸಲಾಗುತ್ತದೆ. ವಾಸ್ತುಶಾಸ್ತ್ರವನ್ನು ದೇವಾಲಯ ಮತ್ತು ಮನುಷ್ಯಾಲಯ ನಿರ್ಮಾಣಗಳಲ್ಲಿ ಬಹಳವಾಗಿ ಬಳಸಲಾಗುತ್ತದೆ. ಇನ್ನು ಯಾನ-ವಾಹನ, ಆಸನ ಇತ್ಯಾದಿಗಳ ನಿರ್ಮಾಣದಲ್ಲಿಯೂ ಬಳಸಲಾಗುತ್ತದೆ. ನಗರಗಳ ನಿರ್ಮಾಣಗಳ ಬಗ್ಗೂ ವಿಚಾರಗಳು ಲಭ್ಯವಿವೆ. ಇಲ್ಲಿ ನಿವೇಶನದ ಆಯ್ಕೆ, ಮನೆಯ ಉದ್ದಗಲ, ಎತ್ತರ ಮತ್ತು ವಿನ್ಯಾಸ, ನೋಡಬೇಕಾದ ತಿಥಿ-ವಾರ ಇತ್ಯಾದಿಗಳು. ಉಪಯೋಗಿಸಬೇಕಾದ ಮರಮುಟ್ಟುಗಳು-ಈ ಎಲ್ಲ ವಿಷಯಗಳು ಬರುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪಂಜುರ್ಲಿ ದೈವ

ಅಣ್ಣ ತಂಗಿಯಾಗಿದ್ದವರು ಕುಕ್ಕೆಯಲ್ಲಿ ದೇವರ ಬಳಿ ಹೋಗಿ ಗಂಡ ಹೆಂಡತಿಯಾದರು , ಕರಾವಳಿಯ ನಂಬುವ ದೈವಗಳು ವರ್ತೆ- ಪಂಜುರ್ಲಿ

ಇದೀಗ ಬಂದ ಸುದ್ದಿ ಗೀತಾ ಸೀರಿಯಲ್ ನಟಿಯ ರಿಯಲ್ ಗಂಡ ಮದುವೆ.

ಇದೀಗ ಬಂದ ಸುದ್ದಿ ಗೀತಾ ಸೀರಿಯಲ್ ನಟಿಯ ರಿಯಲ್ ಗಂಡ ಮದುವೆ.