in

ದೇವರುಗಳು ಮತ್ತು ಅವರ ವಾಹನಗಳು

ದೇವರುಗಳು ಮತ್ತು ಅವರ ವಾಹನಗಳು
ದೇವರುಗಳು ಮತ್ತು ಅವರ ವಾಹನಗಳು

ಪ್ರತಿಯೊಂದು ಹಿಂದೂ ದೇವತೆಯು ಒಂದು ನಿರ್ದಿಷ್ಟ ಪ್ರಾಣಿ-ವಾಹನ ಅಥವಾ ವಾಹನವನ್ನು ಹೊಂದಿದ್ದು , ಅದರ ಮೇಲೆ ಸಂಚರಿಸುತ್ತಾರೆ ಎಂಬ ನಂಬಿಕೆ. ಪ್ರಾಣಿಗಳು ಅಥವಾ ಪಕ್ಷಿಗಳಾಗಿರುವ ಈ ವಾಹನಗಳು ಪ್ರತಿ ದೇವತೆಯನ್ನು ಒಯ್ಯುವ ಮತ್ತು ಅದನ್ನು ಪ್ರತಿನಿಧಿಸುವ ವಿವಿಧ ಆಧ್ಯಾತ್ಮಿಕ ಮತ್ತು ಮಾನಸಿಕ ಶಕ್ತಿಗಳನ್ನು ಪ್ರತಿನಿಧಿಸುತ್ತವೆ. ವಾಹನಗಳು ಎಷ್ಟು ಮುಖ್ಯವಾಗಿವೆ ಎಂದರೆ ದೇವತೆಗಳನ್ನು ಅವುಗಳ ಅನುಗುಣವಾದ ಜೀವಿಗಳಿಲ್ಲದೆ ವಿರಳವಾಗಿ ಚಿತ್ರಿಸಲಾಗುತ್ತದೆ. ವಾಹನಗಳು ದೇವತೆ ಸವಾರಿ ಮಾಡುವ ತಡಿಯನ್ನು ಧರಿಸಬಹುದು ಅಥವಾ ಅವರು ದೇವತೆಯಿಂದ ಓಡಿಸುವ ರಥವನ್ನು ಎಳೆಯಬಹುದು.

ಕೇವಲ ಮನುಷ್ಯರಿಗೆ ಮಾತ್ರ ಒಂದೆಡೆಯಿಂದ ಇನ್ನೊಂದೆಡೆಗೆ ಪ್ರಯಾಣಿಸಲು ವಾಹನಗಳಿರುವುದು ಮಾತ್ರವಲ್ಲ, ಹಿಂದೂ ಧರ್ಮದಲ್ಲಿನ ದೇವರು, ದೇವತೆಗಳು ಕೂಡ ವಾಹನಗಳಲ್ಲಿ ಸವಾರಿ ಮಾಡುತ್ತಾರೆ.

ದೇವರು ಮತ್ತು ದೇವತೆಗಳು ತಮ್ಮ ಪ್ರಯಾಣಕ್ಕಾಗಿ ಪ್ರಾಣಿ, ಪಕ್ಷಿಗಳನ್ನು ಉಪಯೋಗಿಸುತ್ತಾರೆ. ದೇವಾನು ದೇವತೆಗಳ ಬಳಸುವ ಈ ಪ್ರಾಣಿ, ಪಕ್ಷಿಗಳನ್ನು ವಾಹನವೆಂದು ಕರೆಯಲಾಗುತ್ತದೆ.

ಗಣೇಶನ ವಾಹನ- ಇಲಿ

ದೇವರುಗಳು ಮತ್ತು ಅವರ ವಾಹನಗಳು
ಗಣೇಶನ ವಾಹನ- ಇಲಿ

ಗಣೇಶನನ್ನು ವಿಘ್ನನಿವಾರಕನೆಂದು ಕರೆಯಲಾಗುತ್ತದೆ. ಹಿಂದೂ ಧರ್ಮದಲ್ಲಿ ಯಾವುದೇ ಶುಭ ಸಮಾರಂಭವನ್ನು ಮಾಡುವ ಮೊದಲು ಗಣೇಶನನ್ನು ಆರಾಧಿಸಿ ನಂತರ ಶುಭ ಕಾರ್ಯವನ್ನು ಪ್ರಾರಂಭಿಸುತ್ತಾರೆ. ದೊಡ್ಡ ಹೊಟ್ಟೆ, ಆನೆ ತಲೆ, ದೊಡ್ಡ ದೇಹದ ಗಣೇಶ ಚಿಕ್ಕ ಇಲಿಯ ಮೇಲೆ ಪ್ರಯಾಣಿಸುವುದೆಂದರೆ ನಿಜವಾಗಿಯೂ ಇದು ಆಶ್ಚರ್ಯಕರ. ಗಣೇಶನು ಬಹಳ ಬುದ್ಧಿವಂತನಾಗಿದ್ದನು ಮತ್ತು ಯಾವುದೇ ತೊಂದರೆಗಳು ಎದುರಾದರೂ ಕೂಡ ಅದನ್ನು ಸುಲಭವಾಗಿ ನಿಭಾಯಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದನು. ಇದಕ್ಕಾಗಿ ಇಲಿಯು ಗಣೇಶನ ವಾಹನವಾಗಿದೆ. ಏಕೆಂದರೆ ಇಲಿಯು ಕೂಡ ಸಮಸ್ಯೆಗಳಿಂದ ಬಹುಬೇಗ ಹೊರಬರುವ ಸಾಮರ್ಥ್ಯವನ್ನು ಹೊಂದಿದೆ.

ಬ್ರಹ್ಮನ ವಾಹನ – ಹಂಸ

ತ್ರಿ ಮೂರ್ತಿ ದೇವರುಗಳಲ್ಲಿ ಒಬ್ಬನಾದ ಬ್ರಹ್ಮನು ತನ್ನ ಪ್ರಯಾಣಕ್ಕಾಗಿ ದೊಡ್ಡ ಹಂಸ ವೊಂದನ್ನು ಉಪಯೋಗಿಸುತ್ತಾನೆ. ಹಂಸವು ಬುದ್ಧಿವಂತಿಕೆ, ತೀರ್ಪು, ಕೌಶಲ್ಯ ಮತ್ತು ಸೃಜನಶೀಲತೆಯನ್ನು ಸೂಚಿಸುತ್ತದೆ. ಹಂಸವು ಸುಂದರ, ಶಾಂತಿಯುತ ಮತ್ತು ಆಕರ್ಷಕ ಪಕ್ಷಿಯಾಗಿದೆ. ಅಷ್ಟು ಮಾತ್ರವಲ್ಲ ಹಾಲನ್ನು ನೀರಿನಿಂದ ಬೇರ್ಪಡಿಸುವ ಶಕ್ತಿ ಕೂಡ ಈ ಹಂಸ ಪಕ್ಷಿಗಿದೆ ಎಂದು ವೇದಗಳಲ್ಲಿ ಹೇಳಲಾಗುತ್ತದೆ.

ಶನಿಯ ವಾಹನ – ಕಾಗೆ

ಭಗವಾನ್‌ ಶನಿಯು ಶನಿ ಗ್ರಹವನ್ನು ಸೂಚಿಸುತ್ತಾನೆ. ಶನಿಯನ್ನು 9 ಗ್ರಹಗಳ ಅದಿಪತಿಯೆಂದೂ ಕೂಡ ಕರೆಯಲಾಗುತ್ತದೆ. ಶನಿಯು ಬಲಗೈಯಲ್ಲಿ ಕತ್ತಿಯನ್ನು ಹಿಡಿದು ರಣಹದ್ದು, ಕಾಗೆಯ ಮೇಲೆ ಸವಾರಿ ಮಾಡುತ್ತಾನೆ. ಇತನಿಗೆ ಕಪ್ಪು ಬಣ್ಣವೆಂದರೆ ಬಹಳಷ್ಟು ಪ್ರೀತಿ. ಈತ ಹೆಚ್ಚು ಉಪಯೋಗಿಸುವ ವಸ್ತುಗಳೆಲ್ಲವೂ ಕಪ್ಪು ಬಣ್ಣದ್ದಾಗಿರುತ್ತದೆ.

ಇಂಧ್ರನ ವಾಹನ – ಬಿಳಿ ಐರಾವತ

ಇಂಧ್ರನ ವಾಹನ ಐರಾವತ ಅಂದರೆ ಶುದ್ಧ ಬಿಳಿ ಬಣ್ಣದ ಆನೆಯಾಗಿದೆ. ಇಂಧ್ರನು ಸಿಡಿಲುಗಳನ್ನು ತನ್ನ ಆಯುಧವನ್ನಾಗಿ ಮಾಡಿಕೊಂಡಿದ್ದು, ಭೂಮಿಗೆ ಅವಶ್ಯಕವಿರುವ ಸಮಯದಲ್ಲಿ ವರ್ಷಧಾರೆಯನ್ನು ತರುತ್ತಾನೆ. ಇಂಧ್ರನ ವಾಹನದ ವಿಶೇಷತೆ ಕೇವಲ ಬಿಳಿ ಬಣ್ಣದ ದೊಡ್ಡ ಆನೆ ಮಾತ್ರವಲ್ಲ, ಈ ಆನೆಯು ಬರೋಬ್ಬರಿ 4 ದಂತಗಳನ್ನು ಹೊಂದಿತ್ತು ಎಂದು ಹೇಳಲಾಗುತ್ತದೆ.

ಸರಸ್ವತಿ ದೇವಿಯ ವಾಹನ – ನವಿಲು

ಸರಸ್ವತಿ ದೇವಿಯ ವಾಹನ, ಆಕರ್ಷಕವಾದ ಮತ್ತು ಸುಂದರವಾದ ನವಿಲು, ಉದಾಹರಣೆಗೆ, ಪ್ರದರ್ಶನ ಕಲೆಗಳ ಅನ್ವೇಷಣೆಯ ನಿಯಂತ್ರಕನಾಗಿ ಅವಳ ಸ್ಥಾನಮಾನವನ್ನು ಪ್ರತಿನಿಧಿಸುತ್ತದೆ. ಕೆಲವೊಂದು ಕಡೆ ಹಂಸ ಕೂಡ ಇರುತ್ತದೆ. ಸರಸ್ವತಿ ದೇವಿಯು ಬ್ರಹ್ಮನ ಪತ್ನಿ. ಆಕೆಯು ಕೂಡ ಹಂಸವನ್ನು ತನ್ನ ವಾಹನವಾಗಿ ಮಾಡಿಕೊಂಡಿದ್ದಾಳೆ. ಸರಸ್ವತಿಯನ್ನು ಜ್ಞಾನ ಮತ್ತು ವಿದ್ಯಾಭ್ಯಾಸದ ಸಂಕೇತ ಎಂದು ಹೇಳಲಾಗುತ್ತದೆ. ಈಗಾಗಲೇ ಹೇಳಿರುವ ಹಾಗೇ ಹಂಸವು ಸೌಮ್ಯ ಸ್ವಭಾವದ ಸುಂದರವಾದ ಪಕ್ಷಿಯಾಗಿದೆ. ಈ ಪಕ್ಷಿಯು, ಶಾಂತಿ, ಸೌಂದರ್ಯ, ಸಮತೋಲನವನ್ನು ಸೂಚಿಸುತ್ತದೆ.

​ದುರ್ಗಾ ದೇವಿ ವಾಹನ – ಸಿಂಹ ಅಥವಾ ಹುಲಿ

ದೇವರುಗಳು ಮತ್ತು ಅವರ ವಾಹನಗಳು
​ದುರ್ಗಾ ದೇವಿ

ದುರ್ಗಾ ದೇವಿಯೆಂದರೆ ವಿಜಯದ ಸಂಕೇತ. ಈಕೆ ಹಿಂದೂ ದೇವತೆಯರಲ್ಲಿ ಅತಿ ಹೆಚ್ಚು ಶಕ್ತಿಯನ್ನು ಹೊಂದಿದ ಹಾಗೂ ಅತ್ಯಂತ ಪ್ರಮುಖ ದೇವಿಯಾಗಿದ್ದಾಳೆ. ಈಕೆಯನ್ನು ದೇವಿ ಪಾರ್ವತಿಯೊಂದಿಗೆ ಗುರುತಿಸಲಾಗಿದೆ. ಈಕೆಗೆ 10 ಕೈಗಳಿದ್ದು, ಪ್ರತಿ ಕೈಗಳಲ್ಲೂ ಕೂಡ ವಿವಿಧ ಬಗೆಯ ಆಯುಧಗಳನ್ನು ಹಿಡಿದುಕೊಂಡಿದ್ದಾಳೆ. ಈಕೆಯ ವಾಹನ ಹುಲಿ ಅಥವಾ ಸಿಂಹವಾಗಿದೆ. ಅಂದರೆ ಈಕೆಯ ವಾಹನದ ಪ್ರಾಣಿಯು ಮುಂಭಾಗದಲ್ಲಿ ಸಿಂಹದ ರೂಪವನ್ನು ಪಡೆದುಕೊಂಡರೆ ಹಿಂಭಾಗವು ಹುಲಿಯ ರೂಪವನ್ನು ಪಡೆದುಕೊಂಡಿದೆ. ನವರಾತ್ರಿಯಂದು ಈಕೆಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ.

ದಯೆ, ಕೋಪ ಮತ್ತು ಹೆಮ್ಮೆಯನ್ನು ಸಂಕೇತಿಸುತ್ತದೆ – ಅವಳು ತನ್ನ ಭಕ್ತರನ್ನು ಪರೀಕ್ಷಿಸಲು ಸಹಾಯ ಮಾಡಬಹುದು.

ಗಂಗಾ ದೇವಿ ವಾಹನ – ಮೊಸಳೆ

ಗಂಗೆಯನ್ನು ದೇಶಾದ್ಯಂತ ಪೂಜನೀಯ ಭಾವದಿಂದ ಕಾಣಲಾಗುತ್ತದೆ. ಈಕೆ ಲಕ್ಷಾಂತರ ಭಾರತೀಯರಿಗೆ ಜೀವ ನೀಡುವ ಗಂಗಾ ನದಿಯ ರೂಪದಲ್ಲಿ ಹರಿಯುತ್ತಾಳೆ. ಆಕೆಯನ್ನು ಎಲ್ಲರ ತಾಯಿ ಮತ್ತು ಅತ್ಯಂತ ಪವಿತ್ರ ನದಿಯೆಂದು ಪರಿಗಣಿಸಲಾಗುತ್ತದೆ. ಗಂಗೆಯಲ್ಲಿ ಸ್ನಾನ ಮಾಡುವುದರಿಂದ ನಮ್ಮೆಲ್ಲಾ ಪಾಪ ಕರ್ಮಗಳು ದೂರಾಗುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಗಂಗೆಯ ವಾಹನ ಮೊಸಳೆಯಾಗಿದೆ.

ಶಿವನ ವಾಹನ – ನಂದಿ

 ತ್ರಿಮೂರ್ತಿ ದೇವರುಗಳಲ್ಲಿ ಒಬ್ಬರಾದ, ಶಿವನು ಮಹಾನ್‌ ಪರಾಕ್ರಮಿ, ಅಷ್ಟೇ ಕೋಪಿಷ್ಠ ಕೂಡ ಹೌದು, ಆತನಿಗೆ ಕೋಪ ಬಂದಾಗ ತನ್ನ ತಾಂಡವ ನೃತ್ಯದ ಮೂಲಕ ಬ್ರಹ್ಮಾಂಡವನ್ನೇ ಸುಟ್ಟು ಹಾಕುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಶಿವನ ನಂದಿಯು ಲೈಂಗಿಕ ಶಕ್ತಿ ಅಂದರೆ ಕಾಮ ಮತ್ತು ಫಲವತ್ತತೆಯ ಪ್ರತೀಕವಾಗಿದೆ. ಪ್ರತೀ ಈಶ್ವರನ ದೇವಾಲಯದಲ್ಲೂ ಕೂಡ ನಂದಿಯನ್ನು ನೋಡಬಹುದು.

ಕಾರ್ತಿಕೇಯನ ವಾಹನ – ನವಿಲು

 ಶಿವ ಮತ್ತು ಪಾರ್ವತಿಯ ಎರಡನೇ ಮಗನೇ ಈ ಕಾರ್ತಿಕೇಯ. ಭಾರತದ ದಕ್ಷಿಣ ಭಾಗದಲ್ಲಿ ಈತನನ್ನು ಅತಿ ಹೆಚ್ಚಾಗಿ ಪೂಜಿಸಲಾಗುತ್ತದೆ. ರಾಕ್ಷಸರನ್ನು ನಾಶಪಡಿಸಲು ಜನಿಸಿದ ಈತನ ವಾಹನ ಸುಂದರ ನವಿಲಾಗಿದೆ.

ಮಹಾಲಕ್ಷ್ಮಿಯ ವಾಹನ – ಗೂಬೆ

ದೇವಿ ಲಕ್ಷ್ಮಿಯು ಉಲ್ಕಾ ಎಂದು ಕರೆಯಲ್ಪಡುವ ವಾಹನ ಗೂಬೆಯನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾಳೆ. ಈಕೆಯ ವಾಹನವಾದ ಉಲ್ಕಾವು ಶಾಂತಿ ಮತ್ತು ಬುದ್ಧಿವಂತಿಕೆಯ ಸಂಕೇತವಾಗಿದೆ. ಕೆಲವರು ಗೂಬೆಯನ್ನು ನೋಡಿ ಭಯಪಡುತ್ತಾರೆ. ಇನ್ನು ಕೆಲವರು ಇದು ನಕಾರಾತ್ಮಕ ಶಕ್ತಿಗಳ ಸಂಕೇತವೆಂದು ಹೇಳುತ್ತಾರೆ.

ಸೂರ್ಯ ದೇವನ ವಾಹನ – ಓಡುತ್ತಿರುವ 7 ಕುದುರೆಗಳು

ದೇವರುಗಳು ಮತ್ತು ಅವರ ವಾಹನಗಳು
ಸೂರ್ಯ ದೇವನ ವಾಹನ

ಸೂರ್ಯನನ್ನು ರವಿ, ಆದಿತ್ಯ, ಗ್ರಹಪತಿ, ಸೂರ್ಯದೇವ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಭಗವಾನ್‌ ಸೂರ್ಯನಿಗೆ ಬರೊಬ್ಬರಿ 12 ವಿಭಿನ್ನ ಹೆಸರುಗಳಿವೆ. ಓಡುತ್ತಿರುವ 7 ಕುದುರೆಗಳುಳ್ಳ ರಥವೇ ಈತನ ವಾಹನವಾಗಿದೆ. ಈ ಏಳು ಕುದುರೆಗಳು ಮಾನವನ ದೇಹದ 7 ಚಕ್ರಗಳನ್ನು ಪ್ರತಿನಿಧಿಸುತ್ತದೆ.

ಅಗ್ನಿ ದೇವನ ವಾಹನ- ಮೇಕೆ

 ಅಗ್ನಿ ದೇವರು ಯಾವಾಗಲೂ ಮೇಕೆಯ ಮೇಲೆ ಸವಾರಿ ಮಾಡುತ್ತಾನೆ. ಮೇಕೆಯು ಶಕ್ತಿ ಮತ್ತು ಚೈತನ್ಯವನ್ನು ಸೂಚಿಸುತ್ತದೆ. ಹಿಂದೂ ಧರ್ಮದಲ್ಲಿ ಆಚರಿಸುವ ಹೋಮ – ಹವನಾದಿಗಳಲ್ಲಿ ಅಗ್ನಿ ದೇವನಿಗೆ ಪ್ರಮುಖ ಪಾತ್ರವನ್ನು ನಿಡಲಾಗುತ್ತದೆ

ವಿಷ್ಣುವಿನ ವಾಹನ – ಗರುಡ ಮತ್ತು ಆದಿಶೇಷ

ಹಿಂದೂ ಧರ್ಮದಲ್ಲಿ ಪೂಜಿಸುವ ತ್ರಿಮೂರ್ತಿ ದೇವರುಗಳಲ್ಲಿ ವಿಷ್ಣು. ಸಾಮಾನ್ಯವಾಗಿ ನಾವು ವಿಷ್ಣುವನ್ನು ಆದಿಶೇಷನ ಮೇಲೆ ಅಥವಾ ಗರುಡನ ಮೇಲೆ ನೋಡುತ್ತೇವೆ. ಹೌದು ಆದಿಶೇಷ ಮತ್ತು ಗರುಡನೇ ವಿಷ್ಣುವಿನ ವಾಹನವಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಆದಿಶೇಷ ಅಥವಾ ಶೇಷನಾಗನು ಎಲ್ಲಾ ಗ್ರಹಗಳನ್ನು ಹಾಗೂ ಭೂಮಿಯನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡಿದ್ದಾನೆಂದು ಹೇಳಲಾದರೆ, ಇನ್ನು ಮಹಾಭಾರತದ ಪ್ರಕಾರ ಆದಿಶೇಷ ಕಶ್ಯಪ ಮಹರ್ಷಿಯ ಮಗನೆಂದು ಹೇಳಲಾಗಿದೆ. ವಿಷ್ಣುವಿನ ಗರುಡ ವಾಹನವು ನೋಡಲು ಮನುಷ್ಯನಂತಿದ್ದರೂ ಕೂಡ ಇದು ಗರುಡನಂತೆ ರೆಕ್ಕೆ ಹಾಗೂ ಕೊಕ್ಕುಗಳನ್ನು ಒಳಗೊಂಡಿದೆ.

ಯಮನ ವಾಹನ – ಎಮ್ಮೆ ಅಥವಾ ಕೋಣ 

ದೇವರುಗಳು ಮತ್ತು ಅವರ ವಾಹನಗಳು
​ಯಮನ ವಾಹನ

ಯಮನು ಮೃತ್ಯುವಿನ ರೂಪವೆಂದು ಪರಿಗಣಿಸಲಾಗುತ್ತದೆ. ಯಮನು ಕೆಂಗಣ್ಣನ್ನು, ಕೈಯಲ್ಲಿ ಮೃತ್ಯು ದಂಡವನ್ನು ಹಿಡಿದು ಎಮ್ಮೆಯ ಮೇಲೆ ಸವಾರಿ ಮಾಡಿಕೊಂಡು ಬರುತ್ತಾನೆ. ಯಮನು ಸೂರ್ಯದೇವನ ಮಗನೆಂದು ಹೇಳಲಾಗುತ್ತದೆ.

ಇನ್ನು ಹನುಮಂತನಿಗೆ ಯಾವುದೇ ವಾಹನದ ಅವಶ್ಯಕತೆ ಇಲ್ಲ. ಯಾಕೆಂದರೆ ಹನುಮಂತ ವಾಯುಪುತ್ರ ಅವರು ಗಾಳಿಯಲ್ಲಿ ಹಾರುವ ವರವನ್ನು ಪಡೆದುಕೊಂಡೆ ಜನಿಸಿರುತ್ತಾರೆ. ಹಾಗಾಗಿ ಹನುಮಂತನು ವಾಯುವಿನಲ್ಲಿ ಹಾರಾಡಿಕೊಂಡು ಹೋಗುತ್ತಾರೆ ಎಂಬುದೇ ನಂಬಿಕೆ.

​ವರುಣ, ವಾಯು, ಮಹೇಶ್ವರಿ, ಭೈರವ, ಚಂಡಿ, ಚಂದ್ರ ಮತ್ತು ಕುಬೇರ ದೇವರುಗಳು ಕೂಡ ವಿವಿಧ ವಾಹನಗಳನ್ನು ಹೊಂದಿದ್ದಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕಬ್ಬಿನ ರಸದ ಆರೋಗ್ಯಕರ ಲಾಭ

ಕಬ್ಬಿನ ರಸದ ಆರೋಗ್ಯಕರ ಲಾಭಗಳು

ಕಾಫಿ ಕುಡಿಯಲು ಮಾತ್ರ ಅಲ್ಲ

ಕಾಫಿ ಕುಡಿಯಲು ಮಾತ್ರ ಅಲ್ಲ, ಮುಖದ ಸೌಂದರ್ಯಕ್ಕಾಗಿ ಕೂಡ ಉಪಯೋಗಕ್ಕೆ ಬರುತ್ತದೆ