ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ. ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್ ೧೫ ನೆಯ ದಿನ ೧೭೯೬. ಆಗಸ್ಟ ಹದಿನೈದು ಭಾರತೀಯರಿಗೆ ಸ್ವಾತಂತ್ರ್ಯ ದೊರಕಿದ ದಿನವಾಗಿದೆ. ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ (ಸಂಪಗಾವಿ)ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ತಂದೆ ಭರಮಪ್ಪ ತಾಯಿ ಕೆಂಚಮ್ಮಾಜಿಯ ಪುತ್ರನಾಗಿ ಜನಿಸಿದನು, ಈತನ ಸಹೋದರಿ ಮಾಯವ್ವ.
ರಾಯಣ್ಣ ಅಸಾಧಾರಣ ವೀರ ಮತ್ತು ದೇಶಭಕ್ತ. ಸಂಗೊಳ್ಳಿ ಗ್ರಾಮದ ತಳಾರ ಕುರುಬರ ರೋಗಣ್ಣವರ ಮನೆತನದವನು. ಪರಂಪರಾಗತವಾಗಿ ಸೈನ್ಯದಲ್ಲಿ ಹೋರಾಡಿದವನು. ಆ ಕಾಲದಲ್ಲಿ ಹಿಂದೆ ಆದಿಲ್‌ಷಾಹಿಗಳ ಅರಸರ ಸೇನೆಯಲ್ಲಿ ಹೋರಾಡಿ ಅಸುನೀಗಿದ್ದ ಅವನ ಮನೆತನದ ಇಬ್ಬರು ಕುಟುಂಬಿಕರು (ಪೂರ್ವಜರು) ಸಂಗೊಳ್ಳಿ ಊರಲ್ಲಿ ನೆತ್ತರುಕೊಡಿಗೆ ಭೂಮಿ ಪಡೆದವರು.
ಕಿತ್ತೂರಿನಿಂದ ಕೆಲವೇ ದೂರದಲ್ಲಿರುವ ಸಂಗೊಳ್ಳಿ ಗ್ರಾಮದಲ್ಲಿ ಭರಮಪ್ಪ ಮತ್ತು ಕೆಂಚವ್ವ ದಂಪತಿಯ ಪುತ್ರನಾಗಿ ರಾಯಣ್ಣ ಜನಿಸುತ್ತಾನೆ. ಇವರದು ಪ್ರಸಿದ್ಧ ಕುಟುಂಬ. ಇವರ ತಾತ ರೋಗಪ್ಪ ವೀರಪ್ಪ ದೇಸಾಯಿ ಯುದ್ಧದಲ್ಲಿ ತೋರಿದಂತಹ ಶೌರ್ಯಕ್ಕಾಗಿ ‘‘ಸಾವಿರ ಒಂಟೆ ಸರದಾರ’’ ಎಂಬ ಬಿರುದು ನೀಡಿ ರಕ್ತಮಾನ್ಯ ಭೂಮಿಯನ್ನು ಬಳುವಳಿಯಾಗಿ ನೀಡಿದನು. ರೋಗಪ್ಪ ಆಯುರ್ವೇದ ಪಂಡಿತರಾಗಿದ್ದರು. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿ. ಕಿತ್ತೂರ ಸಂಸ್ಥಾನದ ಜನರಿಗೆ ಕಾಟ ಕೊಡುತ್ತಿದ್ದ ಹೆಬ್ಬುಲಿಯನ್ನು ಕೊಂದ ಕೀರ್ತಿ ಇವರದ್ದು. ಈ ಸಾಹಸಕ್ಕಾಗಿ ಕಿತ್ತೂರು ಮಲ್ಲಸರ್ಜ ದೇಸಾಯಿ ನೀಡಿದ ಹೊಲವೇ ರಕ್ತಮಾನ್ಯದ ಹೊಲ. ಸಂಗೊಳ್ಳಿಯಲ್ಲಿನ ಗರಡಿ ಮನೆ ಅತ್ಯಂತ ಪ್ರಸಿದ್ಧಿಯಿರುವ ಗರಡಿ.
ಸಂಗೊಳ್ಳಿ ರಾಯಣ್ಣ ಕರ್ನಾಟಕ, ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟರಾಗಿದ್ದರು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಅವರ ಸಾವಿನವರೆಗೂ ಹೋರಾಡಿದರು.
ಇತಿಹಾಸದ ಪ್ರಕಾರ ರಾಯಣ್ಣನ ಮೈ ಕಟ್ಟು ನೋಡುವುದೇ ಒಂದು ಚಂದ,7ಫೀಟ್ ಎತ್ತರ,ಒಳ್ಳೆಯ ದೇಹದಾಡ್ಯ. ಆನೆಯ ಬಲ. ರಾಯಣ್ಣನಿಗೆ, ವೀರ ರಾಯ , ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ದಾಖಲೆಗಳು ಜನಮನದಾಳದಿಂದ, ಜನಪದರಿಂದ ನಾಟಕಕಾರರಿಂದ, ಇತಿಹಾಸಕಾರರಿಂದ ರಾಯಣ್ಣನಿಗೆ ಹೆಸರಿಸಲ್ಪಟ್ಟಿವೆ.
ಬಡಬಗ್ಗರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದ ಬ್ರಿಟಿಷ್ ದೊರೆಗಳ ವಿರುದ್ಧವೇ ರಾಯಣ್ಣ ಸಿಡಿದೆದ್ದಿದ್ದ. ಸ್ವತಃ ಅವನ ಜಮೀನನ್ನು ಕೂಡ ಕಿತ್ತುಕೊಳ್ಳಲಾಗಿತ್ತು. ಇದ್ದಬದ್ದ ಭೂಮಿಯ ಮೇಲೆ ವಿಪರೀತ ಕರಭಾರ. ಇದರಿಂದ ಕೈಕಟ್ಟಿ ಕುಳಿತುಕೊಳ್ಳದ ಸಂಗೊಳ್ಳಿ ರಾಯಣ್ಣ ತನ್ನದೇ ಒಂದು ಸಮರ್ಥ ತಂಡವನ್ನು ಕಟ್ಟಿದ. ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ, ಬ್ರಿಟಿಷರ ಜೊತೆ ಕೈಜೋಡಿಸಿದ್ದ ಭೂಮಾಲಿಕರ ವಿರುದ್ಧ ತಿರುಗಿನಿಂತ. ಗೆರಿಲ್ಲಾ ಯುದ್ಧದ ಹರಿಕಾರ ಎಂದೇ ಖ್ಯಾತನಾಗಿದ್ದ ರಾಯಣ್ಣ, ಗೆರಿಲ್ಲಾ ತಂತ್ರಗಾರಿಕೆ ಬಳಸಿ ಭೂಮಾಲಿಕರ ಜಮೀನುಗಳ ಕಾಗದಪತ್ರಗಳನ್ನು ವಶಪಡಿಸಿಕೊಂಡ, ಸುಟ್ಟುಹಾಕಿದ. ಅಲ್ಲದೆ, ಅವರಿಂದ ಕಿತ್ತುಕೊಂಡ ಹಣವನ್ನು ಬಡಬಗ್ಗರಿಗೆ ಹಂಚಿದ.
ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶಪ್ರೇಮ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಇದ್ದರೆ ರಾಯಣ್ಣನಂತಹ ದೇಶಪ್ರೇಮಿಗಳಿರಬೇಕು ಎನ್ನುವುದು ಎಲ್ಲರ ಮಾತಾಗಿದೆ. ರಾಯಣ್ಣನ ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಗ್ಗಟ್ಟು ಉಂಟು ಮಾಡಿರುವ ಬಗೆಯನ್ನು ತಿಳಿಯುವುದು. ರಾಯಣ್ಣನ ಹೆಸರನ್ನು ಅಮರವಾಗಿಸಲು ಬೆಂಗಳೂರಿನ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಡಲಾಗಿದೆ.
ರಾಯಣ್ಣನಿಗೆ ಮರಣದಂಡನೆಯಾಗಿ ಗಲ್ಲುಗಂಬಕ್ಕೇರಿದ ದಿನ ಜನವರಿ ೨೬ನೆಯ ದಿನ ೧೮೩೧; ಜನವರಿ ಇಪ್ಪತ್ತಾರು ಭಾರತೀಯರ ನಿಜವಾದ ಸ್ವಾತಂತ್ರ್ಯ ದಿನವಾಗಿದೆ ಹಾಗೂ ಗಣರಾಜ್ಯವ ದಿನವೂ ಹೌದು, ಪ್ರಜಾಸತ್ತಾತ್ಮಕ ದಿನ, ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಇವೆರಡು ದಿನಗಳು ಜನನ ಮರಣದವುಗಳು ರಾಯಣ್ಣನಿಗೆ ಮಾತ್ರವಲ್ಲ, ಭಾರತೀಯರಿಗೆ ರಾಷ್ಟ್ರೀಯ ಉತ್ಸವದ ದಿನಗಳಾಗಿವೆ. ಇಡೀ ಜೀವಮಾನ ಆಂಗ್ಲರನ್ನು ನಾಡಿನಿಂದ-ದೇಶದಿಂದ ಹೊರಹಾಕಲು ಮಾಡಿದ ಹೋರಾಟಗಳು ಸ್ಮರಣೀಯವಾಗಿವೆ.
ಜನ್ಮದಾರಭ್ಯದಿಂದ ಮೂವತ್ತೈದು ವರುಷಗಳ ಕಾಲ ಅಂದರೆ ಸ್ವರ್ಗವಾಸಿಯಾಗುವವರೆಗೆ, ತನ್ನ ಸರ್ವಸ್ವವನ್ನು ಕಿತ್ತೂರ ನಾಡಿನ ಸ್ವಾತಂತ್ಯ್ರಕ್ಕಾಗಿ ಅರ್ಪಣೆ ಮಾಡಿದವನು ಸಂಗೊಳ್ಳಿ ರಾಯಣ್ಣ. ಬ್ರಿಟಿಷರು ಸಂಗೊಳ್ಳಿ ರಾಯಣ್ಣನ ವಿಚಾರಣೆ ನಡೆಸಿ ಮರಣದಂಡನೆ ನೀಡಿದರು. ಆತನ ಜೊತೆ ಇತರ ಏಳು ಜನ ಅನುಯಾಯಿಗಳು ವಿಚಾರಣೆ ನಡೆಸಿ ಮರಣ ದಂಡನೆ ನೀಡಿದರು. ಆರು ಜನರಿಗೆ ಜೀವಾವಧಿ ಶಿಕ್ಷೆ ನೀಡಿ, ಸಮುದ್ರದಾಚೆಗೆ ಕಳಿಸಿದರು.
ಸಂಗೊಳ್ಳಿ ಗ್ರಾಮದ ಬಿಚ್ಚುಗತ್ತಿ ಚನ್ನಬಸವಣ್ಣ ಮಾರುವೇಷದಲ್ಲಿ ರಾಯಣ್ಣನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಇವನ ಸಮಾಧಿಯ ಮೇಲೆ ಆಲದ ಸಸಿ ನೆಡುವ ಮೂಲಕ ತನ್ನ ಗೆಳೆಯರಿಗೆ ಅಂತಿಮ ನಮನ ಸಲ್ಲಿಸಿದನು. ಅಂದು ನೆಟ್ಟ ಆಲದ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ನಮ್ಮ ರಾಷ್ಟ್ರೀಯ ವೃಕ್ಷವಾಗಿ ದೇಶಾಭಿಮಾನಿಗಳಿಗೆ ಸದಾಕಾಲ ಸ್ಪೂರ್ತಿಯ ಸಂಕೇತವಾಗಿ ಬೃಹದಾಕಾರವಾಗಿ ಬೆಳೆದು ಇಂದು ಪೂಜ್ಯ ಭಾವನೆಗಳಿಗೆ ಇಂಬು ನೀಡುವ ಪುಣ್ಯ ಸ್ಥಳವಾಗಿದೆ.
ರಾಯಣ್ಣನ ಬದುಕನ್ನು ಆಧರಿಸಿ ೧೯೬೭ರಲ್ಲಿ ಒಂದು ಚಿತ್ರ ನಿರ್ಮಾಣವಾಯ್ತು. ಮತ್ತೆ ೨೦೧೨ರಲ್ಲಿ ಸಂಗೊಳ್ಳಿ ರಾಯಣ್ಣ ಎಂಬ ಹೆಸರಿನಲ್ಲಿಯೇ ಮತ್ತೊಂದು ಅದ್ದೂರಿ ಚಿತ್ರವೂ ನಿರ್ಮಾಣವಾಯ್ತು. ಇದನ್ನು ನಿರ್ಮಿಸಿದವರು ಆನಂದ ಅಪ್ಪುಗೋಳ ಮತ್ತು ಇದನ್ನು ನಿರ್ದೇಶಿಸಿದವರು ನಾಗಣ್ಣ. ಈ ಚಿತ್ರದ ನಾಯಕರಾಗಿ ದರ್ಶನ್ ತೂಗುದೀಪ್ ಅಭಿನಯಿಸಿದ್ದಾರೆ. ತಾಯಿಯ ಪಾತ್ರದಲ್ಲಿ ಶ್ರೀಮತಿ ಉಮಾಶ್ರೀಯವರು ಮತ್ತು ಕಿತ್ತೂರು ಚೆನ್ನಮ್ಮನಾಗಿ ಜಯಪ್ರದಾ ಕೂಡಾ ಅಭಿನಯಿಸಿದ್ದಾರೆ.
ಒಂದು ವಿಶೇಷ ಎಂದರೆ ರಾಯಣ್ಣ ಗಲ್ಲಿಗೇರಿಸುವ ಮುನ್ನ ಕೆಂಪುಮೂತಿಯ ಬ್ರಿಟಿಷರಿಗೆ ಒಂದು ಮಾತು ಹೇಳುತ್ತಾರೆ.ನನ್ನಂತಹ ಅದೆಷ್ಟೋ ಮಂದಿಯನ್ನು ನೀವು ಗಲ್ಲಿಗೇರಿಸಿದರೂ ಪ್ರತಿಯೊಂದು ಮನೆಯಲ್ಲಿ ರಾಯಣ್ಣ ಹುಟ್ಟೇ ಹುಟ್ಟುತ್ತಾರೆ.ನಿಮ್ಮ ವಿರುದ್ಧ ನಿಲ್ಲುತ್ತಾರೆ. ಆ ದಿನ ನೀವು ಮಧ್ಯರಾತ್ರಿಯಲ್ಲಿ ಭಯಪಟ್ಟು ಓಡಿಹೋಗುತ್ತೀರ.ರಾಯಣ್ಣ ಹೇಳಿದ ರೀತಿ ಆಗಸ್ಟ್ 15,ಅಂದರೆ ರಾಯಣ್ಣ ಹುಟ್ಟಿದ ದಿನ, ಮಧ್ಯ ರಾತ್ರಿ 12ಗಂಟೆಗೆ ಬ್ರಿಟಿಷರು ನಮ್ಮ ದೇಶ ಬಿಟ್ಟು ಹೋಗುತ್ತಾರೆ.ನಮ್ಮ ದೇಶ ಸ್ವತಂತ್ರ ಗೊಳ್ಳುತ್ತದೆ.
ಧನ್ಯವಾದಗಳು.
вуз инфо [url=https://1oriks-diplom199.ru/]1oriks-diplom199.ru[/url] .
Процесс получения диплома стоматолога: реально ли это сделать быстро?