ದಾಂಪತ್ಯ ಜೀವನಕ್ಕೆ ಕಾಲಿಡಲು ನಟ ಜಯರಾಮ್ ಕಾರ್ತಿಕ್ ರೆಡಿಯಾಗಿದ್ದಾರೆ. ಹೌದು ಈ ಒಂದು ಸಿಹಿಸುದ್ದಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಟ ಜಿಕೆ ಹಂಚಿಕೊಂಡಿದ್ದಾರೆ. ಹಾಗಾದರೆ ಹುಡುಗಿಯಾರು ಆಕೆಯ ಹೆಸರೇನು ಈ ಮಾಹಿತಿಯಲ್ಲಿ ನೋಡೋಣ ಬನ್ನಿ. ಅದಕ್ಕಿಂತ ಮೊದಲು ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಕೊನೆಯವರೆಗೂ ಓದುವುದನ್ನು ಮರೆಯಬೇಡಿ.
ಅಶ್ವಿನಿ ನಕ್ಷತ್ರ ಎಂಬ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದ ನಟ ಜಿಕೆ ಅದಾದನಂತರ ಹಿಂದಿ ಭಾಷೆಯ ಸೀರಿಯಲ್ ನಲ್ಲಿ ಅಭಿನಯಿಸಿ ಅಲ್ಲಿಯ ಜನರ ಪ್ರೀತಿಯನ್ನು ಕೂಡ ಪಡೆದುಕೊಂಡಿದ್ದರು. ಇದರ ಜೊತೆಗೆ ಕನ್ನಡದ ಬಿಗ್ ಬಾಸ್ ನಲ್ಲೂ ಕೂಡ ಭಾಗವಹಿಸಿ ಅಪಾರ ಜನರ ಪ್ರೀತಿಯನ್ನು ನಟ ಜಯರಾಮ್ ಕಾರ್ತಿಕ್ ಪಡೆದಿದ್ದಾರೆ. ಅಂದಹಾಗೆ ನಟ ಜೆಕೆ ಎಂದ ತಕ್ಷಣ ಪ್ರತಿಯೊಬ್ಬರು ಕೇಳುತ್ತಾ ಇದ್ದಿದ್ದು ಮದುವೆ ಯಾವಾಗ ಅಂತ.
ಅದೆಲ್ಲದಕ್ಕೂ ಇವಾಗ ಉತ್ತರ ಸಿಕ್ಕಿದೆ ಅಂತಾನೆ ಹೇಳಬಹುದು. ಹೌದು ನಟ ಜೆಕೆ ಹುಡುಗಿ ಜೊತೆ ಇರುವ ಫೋಟೋವನ್ನು ಹಂಚಿಕೊಂಡು ಅದರ ಕೆಳಗಡೆ ಈ ರೀತಿ ಕ್ಯಾಪ್ಷನ್ ಅನ್ನು ಬರೆದುಕೊಂಡಿದ್ದಾರೆ. ನಿನ್ನನ್ನು ಪಡೆಯುವುದಕ್ಕೆ ಅದೃಷ್ಟ ಮಾಡಿದ್ದೇನೆ ಅಂತ ಕ್ಯಾಪ್ಷನ್ ಅನ್ನು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳು ಅಂತು ಫುಲ್ ಖುಷಿಯಾಗಿ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಸಿಂಗಲ್ ಲೈಫ ಕಥಮ್ ಎಂಬುವುದು ಕೂಡ ಕಾಮೆಂಟ್ ಮಾಡಿ ತಿಳಿಸಿದ್ದಾರೆ.
ಹಾಗಾದರೆ ಆ ಹುಡುಗಿಯ ಹೆಸರು ಏನು ಎಂದರೆ ಅಭರಣ ಸಮಂತ ಎಂಬುದಾಗಿ. ಆಭರಣ ಇದೀಗ ಜೆಕೆ ಜೊತೆಗಿನ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದರು ಸದ್ಯ ಇರುವ ಪ್ರಶ್ನೆಯೇನೆಂದರೆ ಇವರಿಬ್ಬರ ಮದುವೆ ಯಾವಾಗ ಅನ್ನುವುದು ಒಟ್ನಲ್ಲಿ ನಟ ಜೆಕೆ ಮದುವೆಗೆ ತಯಾರಾಗಿರುವುದು ಅವರ ಅಭಿಮಾನಿಗಳಿಗೆ ತುಂಬಾ ಖುಷಿಯನ್ನು ತಂದುಕೊಟ್ಟಿದೆ. ಹಾಗಾದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.
GIPHY App Key not set. Please check settings