೧೯೭೧ರ ಭಾರತ-ಪಾಕಿಸ್ತಾನ ಯುದ್ಧವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಒಂದು ಪ್ರಮುಖ ಸೈನಿಕ ಸಂಘರ್ಷವಾಗಿದೆ. ಈ ಯುದ್ಧವು ಬಾಂಗ್ಲಾ ವಿಮೋಚನೆಗೆ ಸಂಬಂಧಿಸಿದೆ. ಅದನ್ನು ಕೆಲವು ಸಲ ಪಾಕಿಸ್ತಾನದ ಆಂತರಿಕ ಯುದ್ಧ ಎಂದೂ ಕರೆಯುತ್ತಾರೆ.
ಯುದ್ಧದ ನಿಖರ ದಿನಾಂಕಗಳ ಬಗ್ಗೆ ಒಮ್ಮತವಿಲ್ಲವಾದರೂ ಅಧಿಕೃತವಾಗಿ ಎರಡೂ ದೇಶಗಳ ನಡುವೆ ಡಿಸೆಂಬರ್ ೩, ೧೯೭೧ ರಂದು ವೈಷಮ್ಯ ಉಂಟಾಯಿತು. ೩ ಡಿಸೆಂಬರ್ ೧೯೭೧ ಮತ್ತು ೧೬ ಡಿಸೆಂಬರ್ ೧೯೭೧ ರ ನಡುವೆ ಭಾರತದ ಪಶ್ಚಿಮ ಗಡಿಯಲ್ಲಿ ನಡೆದ ಸಶಸ್ತ್ರ ಸಂಘರ್ಷವನ್ನು “ಭಾರತ-ಪಾಕಿಸ್ತಾನ ಯುದ್ಧ ಎಂದು ಭಾರತ ಮತ್ತು ಬಾಂಗ್ಲಾ ದೇಶಗಳ ಸೈನ್ಯಗಳು ಕರೆದಿವೆ. ಯುದ್ಧವು ಪಾಕಿಸ್ತಾನ ಸೈನ್ಯದ ಶರಣಾಗತಿಯೊಂದಿಗೆ ಕೊನೆಗೊಂಡಿತು.
1971ರಲ್ಲಿ ಯುದ್ಧವನ್ನು ಗೆದ್ದ ಭಾರತಕ್ಕೆ ಆದ ಲಾಭವನ್ನು ಲೆಕ್ಕ ಹಾಕಿದರೆ ನಷ್ಟವೇ ಹೆಚ್ಚು ಕಾಣುತ್ತದೆ. ಇಂದಿರಾಗಾಂಧಿ ಭುಟ್ಟೊವನ್ನು ಓಲೈಸಲು ಅಥವಾ ದೃಢವಾದ ನಿಲುವು ತೆಗೆದುಕೊಳ್ಳುವ ರಾಜಕೀಯ ಇಚ್ಛಾಶಕ್ತಿ ಅಭಾವದಿಂದ ಬಹು ದೊಡ್ಡ ಪ್ರಮಾದವನ್ನೇ ಎಸಗಿದ್ದರು. 71ರ ಯುದ್ಧದಲ್ಲಿ ಪಾಕಿಸ್ತಾನದ ಶೇಕಡಾ 25ರಷ್ಟು ಸೇನೆ ನಮ್ಮ ವಶದಲ್ಲೇ ಇತ್ತು. ಅವರ ನೌಕಾ ಪಡೆಯು ಅರ್ಧದಷ್ಟು ನಾಶ ವಾಗಿತ್ತು. ಭಾರತೀಯ ಸೈನಿಕರ ಪರಾಕ್ರ ಮದ ಮುಂದೆ ಪಾಕಿಸ್ತಾನದ ಸೇನೆ ಮಂಡಿಯೂರಿತ್ತು. ಭಾರತದ ಮುಂದೆ ಶರಣಾಗತಿಯಲ್ಲದೆ ಬೇರೆ ದಾರಿಯು ಇರಲಿಲ್ಲ.
ಭಾರತ-ಪಾಕಿಸ್ತಾನ ವೈಷಮ್ಯದ ಕಿಚ್ಚಿಗೆ ಬಾಂಗ್ಲಾ ವಿಮೋಚನೆಯ ಯುದ್ಧವು ಕಿಡಿಯಾಯಿತು. ಆ ಯುದ್ಧವು ಸತತವಾಗಿ ಅಧಿಕಾರದಲ್ಲಿದ್ದ ಪಶ್ಚಿಮ ಪಾಕಿಸ್ತಾನ ಮತ್ತು ಬಹುಮತ ಹೊಂದಿದ್ದ ಪೂರ್ವ ಪಾಕಿಸ್ತಾನಗಳ ನಡುವಿನ ತಿಕ್ಕಾಟವಾಗಿತ್ತು . ೧೯೭೦ ರ ಪಾಕಿಸ್ತಾನದ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನದ ಅವಾಮಿ ಲೀಗ್ ಪಕ್ಷವು ಪೂರ್ವ ಪಾಕಿಸ್ತಾನದಲ್ಲಿನ ೧೬೯ ಸ್ಥಾನಗಳ ಪೈಕಿ ೧೬೭ ನ್ನು ಗೆದ್ದು ೩೧೩ ಸ್ಥಾನಗಳಿದ್ದ ಪಾಕಿಸ್ತಾನದ ಶಾಸನ ಸಭೆ ಮಜ್ಲಿಸ್-ಏ -ಶುರಾದಲ್ಲಿ ಸರಳ ಬಹುಮತ ಪಡೆಯುವುದರೊಂದಿಗೆ ಬಾಂಗ್ಲಾ ವಿಮೋಚನೆಯ ಯುದ್ಧದ ಕಿಡಿಯು ಹತ್ತಿಕೊಂಡಿತು.
27 ಮಾರ್ಚ್ ೧೯೭೧ ರಂದು , ಪಾಕಿಸ್ತಾನ ಸೈನ್ಯದಲ್ಲಿ ಮೇಜರ್ ಆಗಿದ್ದು ಬಂಡೆದ್ದ ಝಿಯಾ ಉರ್ ರಹಮಾನ್ ಮುಜಿಬುರ್ ಪರವಾಗಿ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಘೋಷಿಸಿದರು. ಏಪ್ರಿಲ್ ನಲ್ಲಿ ದೇಶಭ್ರಷ್ಟರಾದ ಅವಾಮೀ ಲೀಗ್ ನಾಯಕರು ಒಂದು ದೇಶಭ್ರಷ್ಟ ಸರಕಾರ ವನ್ನು ಮೆಹೆರ್ ಪುರದ ಹತ್ತಿರ ಸ್ಥಾಪಿಸಿದರು ಈಸ್ಟ್ ಪಾಕಿಸ್ತಾನ್ ರೈಫಲ್ಸ್ ಎಂಬ ಅರೆಸೈನಿಕ ಪಡೆಯೂ ಬಂಡುಕೋರರೊಂದಿಗೆ ಸೇರಿಕೊಂಡಿತು. ಮುಕ್ತಿವಾಹಿನಿ ಎಂಬ ಗೆರಿಲ್ಲಾ ಮಾದರಿಯ ನಾಗರಿಕರ ಸೈನ್ಯವೊಂದನ್ನು ಬಾಂಗ್ಲಾ ಸೈನ್ಯಕ್ಕೆ ಸಹಾಯಮಾಡುವುದಕ್ಕಾಗಿ ರಚಿಸಲಾಯಿತು.
ಹಾಗೆ ನೋಡಿದರೆ, 1971ರ ಯುದ್ಧದ ಗೆಲುವು ದೇಶಗಳ ನಡುವೆ ಇದ್ದ ವಿವಾದಗಳನ್ನು ಬಗೆಹರಿಸಿಕೊಳ್ಳಲು ಒದಗಿದ್ದ ಸುವರ್ಣಾವ ಕಾಶವಾಗಿತ್ತು. ದೊರೆತ ಅವಕಾಶವನ್ನು ತನ್ನ ಹಿತ ಕಾಪಾಡಲು ಬಳಸಿಕೊಳ್ಳುವಲ್ಲಿ ವಿಫಲವಾಗಿತ್ತು ಭಾರತ. ಯುದ್ಧದಲ್ಲಿ ಸೋತಿದ್ದ ಪಾಕಿಸ್ತಾನ ತನ್ನ ಅನುಕೂಲಕ್ಕೆ ತಕ್ಕ ಹಾಗೆ ಒಪ್ಪಂದ ಮಾಡಿಕೊಳ್ಳಲು ಯಶಸ್ವಿಯಾಗಿ ಗೆದ್ದು ಬೀಗಿದ್ದು ಕಟು ಸತ್ಯ.
ಪಾಕಿಸ್ತಾನವನ್ನು ಬಗ್ಗು ಬಡಿದು ಬಾಂಗ್ಲಾದೇಶ ಉದಯಕ್ಕೆ ಕಾರಣರಾಗಿದ್ದು ಇಂದಿರಾ ಗಾಂಧಿ ಹಾಗೂ ಬಾಬು ಜಗಜೀವನ್ ರಾಮ.
ದೇಶದ ಗಡಿ ಮತ್ತು ಗೌರವ ಕಾಪಾಡಲು ಸಾವಿರಾರು ಸೈನಿಕರು ತಮ್ಮ ರಕ್ತ ಬಸಿದಿದ್ದರು ಮತ್ತು ಸಹಸ್ರಾರು ಯೋಧರ ಪ್ರಾಣಾರ್ಪಣೆಯಾಗಿತ್ತು. ಸಾವಿರಾರು ಕೋಟಿ ಹಣವು ವೆಚ್ಚಮಾಡಿ ಶತ್ರು ರಾಷ್ಟ್ರದ ದುಸ್ಸಾಹಸಕ್ಕೆ ತಕ್ಕ ಪ್ರತ್ಯುತ್ತರವನ್ನು ಭಾರತ ನೀಡಿತ್ತು. ಆದರೆ ಇದಕ್ಕೆ ಪ್ರತಿಫಲ ವಾಗಿ ನಾವು ಪಡೆದಿದ್ದು, 1971ರಲ್ಲಿ 2/3 ರಷ್ಟು ಬಹುಮತ ಪಡೆದು ಅಧಿಕಾರ ಚುಕ್ಕಾಣಿ ಹಿಡಿದಿದ್ದ ಇಂದಿರಾಗಾಂಧಿಯನ್ನು ಪ್ರಶ್ನಿಸುವುದು ದುಃಸ್ಸಾಹಸವೇ ಆಗಿತ್ತು.
ಪಾಕಿಸ್ತಾನದೊಂದಿಗಿನ ಭಾರತದ ಪಶ್ಚಿಮ ಗಡಿಯುದ್ದಕ್ಕೂ ಪಾಕಿಸ್ತಾನ ಹಲವಾರು ಸ್ಥಳಗಳಲ್ಲಿ ದಾಳಿ ಮಾಡಿತು, ಆದರೆ ಭಾರತೀಯ ಸೈನ್ಯವು ತಮ್ಮ ಮಾರ್ಗವನ್ನು ಯಶಸ್ವಿಯಾಗಿ ನಡೆಸಿತು. ಪಾಕಿಸ್ತಾನದ ಸೈನ್ಯದ 51 ನೇ ಕಾಲಾಳುಪಡೆ ಬ್ರಿಗೇಡ್ನ 22- ಆರ್ಮರ್ಡ್ ರೆಜಿಮೆಂಟ್ನ ಬೆಂಬಲದೊಂದಿಗೆ 2000-3000 ಬಲವಾದ ಆಕ್ರಮಣಕಾರಿ ಸೈನ್ಯವನ್ನು ಪಾಕಿಸ್ತಾನ ಸೇನೆಯು ಸೋಲಿಸಿತು, ಇದು ಭಾರತದ 120-ನಷ್ಟು ಸೈನಿಕರು ಹಿಮ್ಮೆಟ್ಟಿಸಿತು. ‘ಎ’ ಕಂಪನಿ, 23 ನೇ ಬಿಎನ್, ಪಂಜಾಬ್ ರೆಜಿಮೆಂಟ್. ಪಾಕಿಸ್ತಾನದ ಭೂಪ್ರದೇಶದ ಟೆಂಪ್ಲೇಟು:ಪರಿವರ್ತನೆ ವನ್ನು ವಶಪಡಿಸಿಕೊಳ್ಳುವಲ್ಲಿ ಸೇರಿದಂತೆ ಪಾಕಿಸ್ತಾನದ ಕಾಶ್ಮೀರದ ಚಳುವಳಿಗಳನ್ನು ಭಾರತೀಯ ಸೇನೆಯು ತ್ವರಿತವಾಗಿ ಪ್ರತಿಕ್ರಿಯಿಸಿತು ಮತ್ತು ಪಾಕಿಸ್ತಾನದ ಕಾಶ್ಮೀರದಲ್ಲಿ ಭೂಮಿ ಪಡೆದುಕೊಂಡಿತು, ಪಾಕಿಸ್ತಾನಿ ಪಂಜಾಬ್ ಮತ್ತು ಸಿಂಧ್ ವಲಯಗಳನ್ನು ನಂತರ 1972 ರ ಸಿಮ್ಲಾ ಒಪ್ಪಂದ ಯಲ್ಲಿ ಗುಡ್ವಿಲ್ನ ಸೂಚಕವಾಗಿ ಬಿಟ್ಟುಕೊಟ್ಟಿತು.
ಭಾರತ ಅನಿವಾರ್ಯವಾಗಿ ಡಿಸೆಂಬರ್ 3, 1971 ರಲ್ಲಿ ಕದನದ ಕಣಕ್ಕೆ ಧುಮುಕಬೇಕಾಯಿತು. ಭಾರತದ ಸೈನಿಕರ ಪರಾಕ್ರಮದ ಮುಂದೆ ತತ್ತರಿಸಿ ಹೋದ ಪಾಕಿಸ್ತಾನ, ಕೇವಲ 13 ದಿನಗಳಲ್ಲಿ, ಡಿಸೆಂಬರ್ 16ರಂದು ಏಕಪಕ್ಷೀಯವಾಗಿ ಯುದ್ಧ ವಿರಾಮ ಘೋಷಿಸಿ, ಲೆ. ಜ. ಎಎಕೆ ನಿಯಾಜಿರವರ ನೇತೃತ್ವದ 93 ಸಾವಿರ ಸೈನಿಕರನ್ನೊಳಗೊಂಡ ಇಡೀ ಸೇನೆ ಭಾರತಕ್ಕೆ ಶರಣಾಯಿತು. ಭಾರತಕ್ಕೆ ಇದೊಂದು ಐತಿಹಾಸಿಕ ಕ್ಷಣವಾಗಿತ್ತು. ತನ್ನ ಬದ್ಧ ವೈರಿಯನ್ನು ಯುದ್ಧದಲ್ಲಿ ಮಣಿಸಿ ಶರಣಾಗುವಂತೆ ಮಾಡುವ ಮೂಲಕ ಭಾರತೀಯ ಸೇನೆ ಇತಿಹಾಸವನ್ನು ಬರೆದಿತ್ತು. ಪೂರ್ವ ಪಾಕಿಸ್ತಾನದಲ್ಲಿ ಸಂಪೂರ್ಣ ಸೋಲು ಮತ್ತು ಪಶ್ಚಿಮ ಪಾಕಿಸ್ತಾನದಲ್ಲಿ 15000 ಚದರಡಿ ಭೂ ಭಾಗವು ಭಾರತದ ವಶವಾಗಿತ್ತು.
ಧನ್ಯವಾದಗಳು.
GIPHY App Key not set. Please check settings