ಶ್ರೀಕೃಷ್ಣನು ತನ್ನ ಹೆಂಡತಿ ರುಕ್ಮಿಣಿಯು ಒಂದಿಗೆ ಸುಮಾರು 12ವರ್ಷಗಳ ಕಾಲ ಪ್ರತ್ಯೇಕವಾಗಿ ಜೀವನವನ್ನು ನಡೆಸಬೇಕಾಗಿತ್ತು. ಭಗವಾನ್ ಕೃಷ್ಣ ಮತ್ತು ರುಕ್ಮಿಣಿದೇವಿಯ ಒಂದಿಗೆ ಕೆಲವೊಂದು ಘಟನೆಗಳು ಅವರಿಬ್ಬರನ್ನು ಬೇರೆಬೇರೆ ಮಾಡಿಬಿಟ್ಟಿತ್ತು. ಒಂದಾಗಿ ಇಬ್ಬರು 12 ವರ್ಷಗಳ ಕಾಲ ಪರಸ್ಪರ ದೂರ ಇರಬೇಕಾಯಿತು. ಈ ಘಟನೆಯ ಪುರಾವೆಗಳು ದ್ವಾರಕದಲ್ಲಿ ಇನ್ನೂ ಇವೆ. ಇವರ ಕಥೆಯನ್ನು ರುಕ್ಮಿಣಿ ದೇವಸ್ಥಾನಕ್ಕೆ ಭೇಟಿ ನೀಡುವ ಪ್ರತಿ ಸಂದರ್ಶಕರಿಗೆ ಅರ್ಚಕರು ವಿವರಿಸುತ್ತಾರೆ.
ಕೃಷ್ಣ ಮತ್ತು ರುಕ್ಮಿಣಿದೇವಿಯ ಅಗಲಿಕೆಗೆ ಕಾರಣವೇನು ಅಂತ ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ ಮತ್ತು ಈ ಮಾಹಿತಿಯನ್ನು ನೀವು ಮಿಸ್ ಮಾಡದೆ ಕೊನೆಯವರೆಗೂ ಓದಿ. ವಾಸ್ತವವಾಗಿ ಭಗವಾನ್ ಶ್ರೀಕೃಷ್ಣ ಮತ್ತು ರುಕ್ಮಿಣಿದೇವಿಯ ವಿವಾಹ ದ್ವಾರಕದಲ್ಲಿ ನಡೆದಾಗ ಒಂದು ದಿನ ಶ್ರೀಕೃಷ್ಣನು ತನ್ನ ಉಪಕುಲಪತಿ ಯಾದ ಮಹರ್ಷಿ ದುರ್ವಾಸರು ಇಂದ ಆಶೀರ್ವಾದವನ್ನು ಪಡೆಯಲು ಬಯಸುವುದಾಗಿ ರುಕ್ಮಿಣಿ ದೇವಿಗೆ ಹೇಳಿದನು. ಇದಕ್ಕಾಗಿ ಶ್ರೀಕೃಷ್ಣ ಮತ್ತು ರುಕ್ಮಿಣಿದೇವಿಯು ರಥವನ್ನು ಹತ್ತಿ ದುರ್ವಾಸ ಋಷಿಯ
ಆಶ್ರಮವನ್ನು ತಲುಪಿದರು. ಶ್ರೀಕೃಷ್ಣ ಮತ್ತು ರುಕ್ಮಿಣಿದೇವಿಯು ಮಹರ್ಷಿಗಳಿಗೆ ನಮಸ್ಕರಿಸಿ ಅರಮನೆಗೆ ಬಂದು ಆಹಾರವನ್ನು ತೆಗೆದುಕೊಂಡು ನಮ್ಮನ್ನು ಆಶೀರ್ವದಿಸುವಂತೆ ವಿನಂತಿಸಿದರು. ಮಹರ್ಷಿಗಳು ಆಹ್ವಾನವನ್ನು ಸ್ವೀಕರಿಸಿದರು. ಆದರೆ ಒಂದು ಷರತ್ತು ಹಾಕಿದರು. ಆ ರಥದಲ್ಲಿ ದಂಪತಿಗಳು ಬಂದಿದ್ದಾರೆ ಅಂದರೆ ನೀವಿಬ್ಬರೂ ಬಂದಿದ್ದೀರಿ ಮಹರ್ಷಿಗಳು ಹೇಳಿದರು. ಶ್ರೀಕೃಷ್ಣನು ಹೇಳಿದನು ಗುರುದೇವ ಹೌದು ನಾವಿಬ್ಬರು ರಥದಲ್ಲಿ ಬಂದಿದ್ದೇವೆ. ಆಗ ದೂರ್ವಾಸ ಮುನಿಗಳು ನಾನು ರಥದಲ್ಲಿ ಸವಾರಿ ಮಾಡುತ್ತೇನೆ.
ನೀವಿಬ್ಬರು ರಥಗಳ ಎರಡು ಕುದುರೆಗಳನ್ನು ಹೊತ್ತು ಸಾಗಬೇಕು ಎಂದು ಷರತ್ತು ಹಾಕಿದರು. ಮಹರ್ಷಿಗಳು ಬಂಧು ರಥದಲ್ಲಿ ಕುಳಿತರು. ಮತ್ತು ಶ್ರೀಕೃಷ್ಣ ಮತ್ತು ರುಕ್ಮಿಣಿ ಕುದುರೆಯ ಬದಲಿಗೆ ಕೂಳಿ ರಥವನ್ನು ಎಳೆಯಲು ಪ್ರಾರಂಭಿಸಿದರು. ಮಹರ್ಷಿ ಆಶ್ರಮದಿಂದ ಸ್ವಲ್ಪ ದೂರ ಸಾಗುತ್ತಿದ್ದಂತೆ ರುಕ್ಮಿಣಿ ದೇವಿಗೆ ಬಾಯಾರಿಕೆ ಆಗಲು ಆರಂಭವಾಯಿತು. ರುಕ್ಮಿಣಿದೇವಿಯ ಬಾಯಾರಿಕೆಯನ್ನು ನೀಗಿಸಲು ಕೃಷ್ಣ ತನ್ನ ಹೆಬ್ಬೆರಳಿಂದ ಭೂಮಿಗೆ ಹೊಡೆಯುತ್ತಾನೆ. ಅಲ್ಲಿ ಗಂಗಾನದಿ ಹೊಡೆದು ನಂತರ ರುಕ್ಮಿಣಿ ಮತ್ತು ಕೃಷ್ಣ ನೀರು ಕುಡಿದರು.
GIPHY App Key not set. Please check settings