in

ಫೆಬ್ರವರಿ 7 ರಂದು, “ರೋಸ್ ಡೇ” ಆಚರಣೆ ಮಾಡಲಾಗುತ್ತದೆ

ರೋಸ್ ಡೇ
ರೋಸ್ ಡೇ

ಪ್ರೇಮಿಗಳ ದಿನಾಚರಣೆಯ ವಾರವನ್ನು ಪ್ರೀತಿ ಮತ್ತು ಪ್ರಣಯಕ್ಕೆ ಮೀಸಲಾದ ವಾರ ಎಂದು ಹೇಳಲಾಗುವುದು. ಪ್ರತಿ ವರ್ಷವು ಫೆಬ್ರವರಿ 7 ರಂದು ಪ್ರಾರಂಭವಾಗುತ್ತದೆ. ಫೆಬ್ರುವರಿ 14 ರಂದು ಮುಕ್ತಾಯಗೊಳ್ಳುತ್ತದೆ. ಫೆಬ್ರುವರಿ 7 ರಿಂದ 14ರ ವರೆಗೂ ರೋಸ್ ಡೇ ವಾರವನ್ನು ಆಚರಿಸಲಾಗುವುದು. ಗುಲಾಬಿಯ ಹೂವು ಹಾಗೂ ಗುಲಾಬಿ ಬಣ್ಣವು ಪ್ರೀತಿಯನ್ನು ಬಿಂಬಿಸುವುದು.

ಪ್ರೇಮಿಗಳ ದಿನವನ್ನು ವ್ಯಾಲೆಂಟೈನ್ಸ್ ಡೇ ಎಂದು ಕರೆಯಲಾಗುತ್ತದೆ. ಇದು ಪ್ರತಿ ವರ್ಷ ಫೆಬ್ರವರಿ 14 ರಂದು ನಡೆಯುತ್ತದೆ. ಇಂದು ಪ್ರಪಂಚದಾದ್ಯಂತ ಪ್ರೀತಿಯ ಸಂಕೇತವಾಗಿ ಆಚರಿಸಲಾಗುತ್ತದೆ. ಫೆಬ್ರವರಿ 7 ರ ಗುಲಾಬಿ ದಿನದಿಂದ ಆರಂಭವಾಗಿ ಫೆಬ್ರವರಿ 14 ರ ಪ್ರೇಮಿಗಳ ದಿನದವರೆಗೆ, ಇಡೀ ವಾರವನ್ನು ವಿವಿಧ ವಿಶೇಷ ದಿನಗಳಾಗಿ ಆಯೋಜಿಸಲಾಗಿದೆ.

ಪ್ರೇಮದ ಪ್ರತೀಕವಾದ ಗುಲಾಬಿ ಹೂವು ಮತ್ತು ಮಾನವ ಬದುಕಿಗೆ ಅವಿನಾಭಾವ ಸಂಬಂಧವಿದೆ. ನಮ್ಮ ಬದುಕಿನಲ್ಲಿ ಸುಖದ ಜೊತೆಗೆ ಕಷ್ಟವೂ ಇದೆ ಎಂಬ ಸಂದೇಶ ನೀಡುವ ಅಪರೂಪದ ಹೂವಿದು.

ಮಾತನಾಡಿ ಹೇಳಲು ಕಷ್ಟವಾಗುವ ಭಾವನೆಗಳನ್ನು ಹೇಳಿಕೊಳ್ಳಲು ವಿಕ್ಟೋರಿಯನ್ನರು ಗುಲಾಬಿ ಹೂವನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಅದು ಕ್ರಮೇಣವಾಗಿ ಗುಲಾಬಿ ಹೂವಿನ ದಿನ ಎನ್ನುವ ಆಚರಣೆಯು ಬಂದಿತು. ಹೀಗೆ ನೀಡುವ ಗುಲಾಬಿ ಹೂವಿನಲ್ಲಿ ಕೆಂಪು ಗುಲಾಬಿ ಹೂವು ಪ್ರೀತಿ ಮತ್ತು ಉತ್ಸಾಹವನ್ನು ಸಂಕೇತಿಸುತ್ತದೆ. ಗುಲಾಬಿ ಹೂವಿನಲ್ಲಿ ಇರುವ ವಿವಿಧ ಬಣ್ಣಗಳು ವಿವಿಧ ಭಾವನೆಗಳನ್ನು ಹಾಗೂ ಸಂಬಂಧಗಳನ್ನು ವ್ಯಕ್ತಪಡಿಸುತ್ತವೆ.

ಫೆಬ್ರವರಿ 7 ರಂದು, "ರೋಸ್ ಡೇ" ಆಚರಣೆ ಮಾಡಲಾಗುತ್ತದೆ
ಪ್ರೇಮದ ಪ್ರತೀಕವಾದ ಗುಲಾಬಿ ಹೂವು

ಫೆಬ್ರವರಿ ಅಂದ್ರೆ ಪ್ರೇಮಿಗಳಿಗೆ ಹಬ್ಬ. ಫೆಬ್ರವರಿಯ ಎರಡನೇ ವಾರವನ್ನು ಪ್ರೇಮಿಗಳ ವಾರವಾಗಿ ಆಚರಣೆ ಮಾಡಲಾಗುತ್ತದೆ. ಪ್ರೇಮಿಗಳ ವಾರವು ರೋಸ್ ಡೇಯಿಂದ ಪ್ರಾರಂಭವಾಗುತ್ತದೆ. ಫೆಬ್ರವರಿ 7 ರಂದು ರೋಸ್ ಡೇ ಆಚರಣೆ ಮಾಡಲಾಗುತ್ತದೆ. ಸಂಗಾತಿ ಪರಸ್ಪರ ಗುಲಾಬಿ ನೀಡುವ ಮೂಲಕ ಶುಭಕೋರುತ್ತಾರೆ. ತಮ್ಮ ಪ್ರೀತಿಯನ್ನು ಗುಲಾಬಿ ನೀಡುವ ಮೂಲಕ ವ್ಯಕ್ತಪಡಿಸುತ್ತಾರೆ. ಗುಲಾಬಿ ಯಾರಿಗೆ ಇಷ್ಟವಿಲ್ಲ. ಗುಲಾಬಿಯನ್ನು ಪ್ರೀತಿಗೆ ಹೋಲಿಕೆ ಮಾಡಲಾಗುತ್ತದೆ. ಆದ್ರೆ ರೋಸ್ ಡೇ ಕೇವಲ ಪ್ರೇಮಿಗಳ ಹಬ್ಬವಲ್ಲ. ದಂಪತಿ ಮಾತ್ರ ತಮ್ಮ ಸಂಗಾತಿಗೆ ಗುಲಾಬಿಗಳನ್ನು ನೀಡುವ ಮೂಲಕ ಗುಲಾಬಿ ದಿನವನ್ನು ಆಚರಿಸುವುದಲ್ಲ, ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ನೀಡುವ ಮೂಲಕ ಗುಲಾಬಿ ದಿನವನ್ನು ಆಚರಿಸಬಹುದು.

ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸಲು ಕೆಂಪು ಗುಲಾಬಿ ಹೂವನ್ನು ಆಯ್ಕೆ ಮಾಡಿಕೊಳ್ಳಬೇಕು. ಕೆಂಪು ಗುಲಾಬಿ ಅತಿಯಾದ ಪ್ರೀತಿ ಮತ್ತು ಭಾವೋದ್ರಿಕ್ತತೆಯನ್ನು ವ್ಯಕ್ತಪಡಿಸುತ್ತದೆ. ಗುಲಾಬಿಯ ಈ ಬಣ್ಣವನ್ನು ಶುಕ್ರ ಗ್ರಹಕ್ಕೂ ಸಹ ಹೋಲಿಸಲಾಗುತ್ತದೆ. ಗ್ರೀಕರು ಮತ್ತು ರೋಮನ್ನರು ಶುಕ್ರನನ್ನು ಪ್ರೀತಿಯ ಜೀವನಕ್ಕೆ ಸಂಬಂಧಿಸಿದ ದೇವತೆ ಎಂದು ಸಹ ಪರಿಗಣಿಸುವರು. ನಾನು ನಿನ್ನನ್ನು ಪ್ರೀತಿಸುತ್ತೇನೆ(ಐ ಲವ್ ಯು) ಎನ್ನುವ ಭಾವನೆಯನ್ನು ವ್ಯಕ್ತಪಡಿಸಲು ಕೆಂಪು ಗುಲಾಬಿ ಹೂವನ್ನು ನೀಡಬೇಕು.

ಒಂದು ವೇಳೆ ನೀವು ನಿಮ್ಮ ಸಂಗಾತಿಯನ್ನು ಹೊರತುಪಡಿಸಿ ಬೇರೆಯವರಿಗೆ ಗುಲಾಬಿಗಳನ್ನು ನೀಡುತ್ತಿದ್ದರೆ, ಗುಲಾಬಿಯ ಬಣ್ಣವನ್ನು ಸರಿಯಾಗಿ ಆರಿಸಿ. ಗುಲಾಬಿ ಹೂವುಗಳು ಹಲವು ಬಣ್ಣಗಳನ್ನು ಹೊಂದಿವೆ. ಆದರೆ, ಪ್ರತಿಯೊಂದು ಬಣ್ಣದ ಗುಲಾಬಿಯು ವಿಭಿನ್ನ ಅರ್ಥವನ್ನು ಹೊಂದಿದೆ. ಮನಸ್ಸಿಗೆ ಕಂಡ ಬಣ್ಣದ ಗುಲಾಬಿಯನ್ನು ಯಾರ್ಯಾರಿಗೋ ನೀಡಲಾಗುವುದಿಲ್ಲ. ನೀವು ಗುಲಾಬಿ ನೀಡುತ್ತಿದ್ದರೆ ಅಥವಾ ಗುಲಾಬಿ ಪಡೆಯಲು ಮುಂದಾಗಿದ್ದರೆ, ಮೊದಲು ಯಾವ ಬಣ್ಣ ಯಾವ ಅರ್ಥ ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಿ.

*ಕೆಂಪು ಗುಲಾಬಿ

ಕೆಂಪು ಗುಲಾಬಿಯನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪ್ರೀತಿಸಿದ ವ್ಯಕ್ತಿಗೆ ಕೆಂಪು ಗುಲಾಬಿ ನೀಡಿ ನಿಮ್ಮ ಮನಸ್ಸಿನ ಭಾವನೆಯನ್ನು ಹೇಳಬಹುದು. ಯಾವುದೋ ವ್ಯಕ್ತಿ ನಿಮಗೆ ಕೆಂಪು ಗುಲಾಬಿ ನೀಡಿದರೆ, ಆತ ನಿಮ್ಮನ್ನು ಪ್ರೀತಿಸುತ್ತಿದ್ದಾನೆಂದು ಅರ್ಥೈಸಿಕೊಳ್ಳಿ. 

*ಹಳದಿ ಗುಲಾಬಿ

ಯಾರಾದರೂ ನಿಮಗೆ ಹಳದಿ ಗುಲಾಬಿಯನ್ನು ನೀಡಿದರೆ, ಅವರು ನಿಮ್ಮ ಸ್ನೇಹ ಬಯಸುತ್ತಿದ್ದಾರೆ ಎಂದರ್ಥ. ಹಳದಿ ಗುಲಾಬಿಗಳು ಸ್ನೇಹ ಮತ್ತು ಹೊಸ ಆರಂಭದ ಸಂಕೇತವಾಗಿರುತ್ತದೆ.  

*ಬಿಳಿ ಗುಲಾಬಿ ಹೂವು

ಬಿಳಿ ಬಣ್ಣವು ಶುದ್ಧತೆ, ಶಾಂತಿ ಮತ್ತು ಏಕತೆಯನ್ನು ಪ್ರತಿಬಿಂಬಿಸುವ ಬಣ್ಣ. ಹೊಚ್ಚ ಹೊಸ ಪ್ರೇಮ ಕಥೆಯನ್ನು ಪ್ರಾರಂಭಿಸಲು ಬಯಸುವವರು ಬಿಳಿ ಗುಲಾಬಿ ಹೂವನ್ನು ನೀಡಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಅಥವಾ ಹಂಚಿಕೊಳ್ಳುವ ಪ್ರಯತ್ನ ಮಾಡಬಹುದು. ಈ ಹಿನ್ನೆಲೆಯಲ್ಲಿಯೇ ವಿವಾಹದ ಸಂಭ್ರಮದಲ್ಲಿ ಹೆಚ್ಚಾಗಿ ಬಿಳಿ ಗುಲಾಬಿ ಹೂವನ್ನು ಬಳಸುತ್ತಾರೆ.

*ಕಿತ್ತಳೆ ಗುಲಾಬಿ 

ಕಿತ್ತಳೆ ಬಣ್ಣದ ಗುಲಾಬಿ ಕೂಡ ಪ್ರೀತಿ ಅಭಿವ್ಯಕ್ತಿಯ ಸಂಕೇತವಾಗಿದೆ. ಅಂದರೆ, ನೀವು ಯಾರನ್ನಾದರೂ ಇಷ್ಟಪಟ್ಟರೆ, ಅವರಿಗೆ ಕಿತ್ತಳೆ ಬಣ್ಣದ ಗುಲಾಬಿ ಹೂವನ್ನು ನೀಡುವ ಮೂಲಕ ನಿಮ್ಮ ಮನಸ್ಸಿನಲ್ಲಿರುವುದನ್ನು ಅವರಿಗೆ ಹೇಳಬಹುದು.

* ಕಪ್ಪು ಗುಲಾಬಿ 

ಫೆಬ್ರವರಿ 7 ರಂದು, "ರೋಸ್ ಡೇ" ಆಚರಣೆ ಮಾಡಲಾಗುತ್ತದೆ
ಕಪ್ಪು ಗುಲಾಬಿ 

  ಕಪ್ಪು ಗುಲಾಬಿ ದ್ವೇಷದ ಸಂಕೇತವಾಗಿದೆ. ಈ ಬಣ್ಣದ ಗುಲಾಬಿ ದ್ವೇಷವನ್ನು ಪ್ರತಿನಿಧಿಸುತ್ತದೆ. ಪ್ರೇಮಿಗಳ ದಿನವು ಪ್ರೀತಿಯ ವಾರ. ಹಾಗಾಗಿ ಆ ದಿನಗಳಲ್ಲಿ ನೀವು ಯಾರಿಗೂ ಕಪ್ಪು ಗುಲಾಬಿಯನ್ನು ನೀಡಬೇಡಿ. ಪ್ರೀತಿ ಬೇಡ ಎನ್ನುವವರು ಬಿಳಿ ಅಥವಾ ಹಳದಿ ಗುಲಾಬಿ ನೀಡುವ ಮೂಲಕ ಹೊಸ ಸಂಬಂಧ ಶುರು ಮಾಡಬಹುದು.

ಗುಲಾಬಿ ಹೂವಿನ ಬಣ್ಣವು ವಿಭಿನ್ನ ಸಂಗತಿಯನ್ನು ಪ್ರತಿಬಿಂಬಿಸುವಂತೆ ಗುಲಾಬಿ ಹೂವಿನ ಸಂಖ್ಯೆಗಳು ಸಹ ಕೆಲವು ವಿಷಯಗಳನ್ನು ಬಿತ್ತರಿಸುತ್ತವೆ. ಒಂದು ಗುಲಾಬಿ ಹೂವನ್ನು ನೀಡುವುದು ಯಾರಿಗಾದರೂ ಧನ್ಯವಾದಗಳನ್ನು ಹೇಳಲು ನೀಡುತ್ತೇವೆ.

ವಿವಾಹದ ಪ್ರಸ್ತಾಪ ಮಾಡಲು ಎರಡು ಗುಲಾಬಿ ಹೂವನ್ನು ಒಟ್ಟಿಗೆ ಸೇರಿಸಿ ನೀಡಬೇಕು. ಕೆಂಪು ಮತ್ತು ಬಿಳಿ ಬಣ್ಣದ ಗುಲಾಬಿಯನ್ನು ಒಟ್ಟಿಗೆ ಸೇರಿಸಿ ಕೊಟ್ಟರೆ ಅದು ಪ್ರೀತಿ, ಶಾಂತಿ ಮತ್ತು ಶುದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಆರು ಗುಲಾಬಿ ಹೂವನ್ನು ಹೊಂದಿರುವ ಗುಚ್ಚವನ್ನು ನೀಡಿದರೆ ಅದು ಪ್ರೀತಿಯ ಅಗತ್ಯತೆಯನ್ನು ಸಂಕೇತಿಸುತ್ತದೆ.

ಹನ್ನೊಂದು ಗುಲಾಬಿ ಹೂವನ್ನು ಸೇರಿಸಿ ನೀಡಿದರೆ ಅದು ನೀವು ಅತಿಯಾಗಿ ಪ್ರೀತಿಸುತ್ತೀರಿ ಎನ್ನುವುದನ್ನು ಪ್ರತಿಬಿಂಬಿಸುತ್ತದೆ.

ಹದಿಮೂರು ಗುಲಾಬಿ ಹೂವನ್ನು ನೀಡುವುದು ಸಾಮಾನ್ಯವಾಗಿ ಯಾರಿಗಾದರೂ ರಹಸ್ಯವಾಗಿರುವ ಅಭಿಮಾನಿ ಎಂದು ವ್ಯಕ್ತಪಡಿಸಲು ನೀಡಲಾಗುತ್ತದೆ.

ನಿಮಗೆಲ್ಲರಿಗೂ ಗುಲಾಬಿ ಹೂವಿನ ದಿನದ ಶುಭಾಶಯಗಳು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವೈಯಕ್ತಿಕ ಸಾಲ ಎಂದರೆ ಏನು?

ವೈಯಕ್ತಿಕ ಸಾಲ ಎಂದರೆ ಏನು? ಯಾರಿಗೆಲ್ಲಾ ಸಾಲ ಸಿಗಬಹುದು?

ಇಲಿಗಳಲ್ಲಿ ಅದೆಷ್ಟು ಪ್ರಬೇಧಗಳು ಇವೆ ಗೊತ್ತಾ?

ಇಲಿಗಳಲ್ಲಿ ಅದೆಷ್ಟು ಪ್ರಬೇಧಗಳು ಇವೆ ಗೊತ್ತಾ? ಹೇಳುತ್ತಾ ಹೋದರೆ ದಿನ ಮುಗಿಯಲ್ಲ