ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕನ್ನಡ ಚಿತ್ರರಂಗ ಎಂದಿಗೂ ಮರೆಯಲು ಸಾಧ್ಯವಿಲ್ಲ. ಬಾಲನಟನಾಗಿ ಬಂದ ಅವರು ಹೀರೋ ಆಗಿಯೂ ಮಾಡಿದ ಸಾಧನೆ ದೊಡ್ಡದು. ಚಂದನವನದ ಏಳಿಗೆಯಲ್ಲಿ ಅವರ ಕೊಡುಗೆ ದೊಡ್ಡದಿದೆ. ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಅವರು ಮಾದರಿ ವ್ಯಕ್ತಿ ಆಗಿದ್ದರು. ಅವರ ಹೆಸರನ್ನು ಶಾಶ್ವತವಾಗಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ.
ಈಗ ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿ ನಿರ್ಮಾಣ ಆಗುತ್ತಿರುವ ಸ್ಟೀಲ್ ಬ್ರಿಡ್ಜ್ ಫ್ಲೈಓವರ್ಗೆ ಪುನೀತ್ ರಾಜ್‍ಕುಮಾರ್ ಅವರ ಹೆಸರು ಇಡಬೇಕು ಎಂಬ ವಿಷಯ ಚರ್ಚೆಗೆ ಬಂದಿದೆ. ಈ ಕುರಿತು ಬಿಬಿಎಂಪಿಗೆ ಮನವಿ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಹೇಳಿದ್ದಾರೆ.
ಇನ್ನು ಪುನೀತ್ ರಾಜ್‍ಕುಮಾರ್ ಅವರು ಅನೇಕರಿಗೆ ಸ್ಫೂರ್ತಿಯಾಗಿದ್ದರು. ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಅನೇಕರಿಗೆ ಮಾದರಿ ಆಗಿದ್ದರು. ಅವರ ಮಾರ್ಗದರ್ಶನದಲ್ಲಿ ಅನೇಕ ಕಲಾವಿದರು ಬದುಕು ಕಟ್ಟಿಕೊಂಡಿದ್ದರು. ಆದರೆ, ಈಗ ಅಪ್ಪು ಇಲ್ಲ ಎಂಬ ನೋವು ಅನೇಕರನ್ನು ಬಹುವಾಗಿ ಕಾಡುತ್ತಿದೆ. ಪುನೀತ್ ನಿಧನ ಹೊಂದಿ ಒಂದು ವರ್ಷ ಕಳೆಯುತ್ತಾ ಬಂದರೂ ಅವರ ಅಗಲಿಕೆಯ ನೋವು ಕಡಿಮೆ ಆಗಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಈಗ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಅನೇಕರಿಗೆ ಸ್ಫೂರ್ತಿ ಆಗಿದ್ದ ಸ್ಟಾರ್ ನಟನಿಗೆ ಸರ್ಕಾರ ವಿಶೇಷವಾಗಿ ಗೌರವ ಸೂಚಿಸುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಒಂದೇ ಬಾಕಿ ಇದೆ.
ಪುನೀತ್ ರಾಜ್‍ಕುಮಾರ್ ಅವರು ನಟನಾಗಿ ಮಾತ್ರ ಚಿತ್ರರಂಗದಲ್ಲಿ ಗುರುತಿಸಿಕೊಂಡಿರಲಿಲ್ಲ. ಅವರು ನಿರ್ಮಾಪಕನಾಗಿ ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದರು. ಅವರು ಮಾಡಿದ್ದ ಸಾಮಾಜಿಕ ಕೆಲಸಗಳು ಹಲವು. ‘ಕನ್ನಡದ ಕೋಟ್ಯಧಿಪತಿ’ ಶೋಗೆ ಬಂದ ಸ್ಪರ್ಧಿಗೆ ಪುನೀತ್ ಸಾಕಷ್ಟು ಸ್ಫೂರ್ತಿದಾಯಕ ಮಾತುಗಳನ್ನು ಆಡುತ್ತಿದ್ದರು. ಹೀಗೆ ಅವರ ಒಳ್ಳೆಯ ಗುಣ ಪಟ್ಟಿ ಮಾಡುತ್ತಾ ಹೋದರೆ ಅದು ಬೆಳೆಯುತ್ತಲೇ ಹೋಗುತ್ತದೆ. ಈ ಕಾರಣದಿಂದ ಪುನೀತ್ ಅವರಿಗೆ ಸರ್ಕಾರ ವಿಶೇಷವಾಗಿ ಗೌರವ ಸೂಚಿಸಲು ನಿರ್ಧರಿಸಿದೆ.
ಇಂದು ಪುನೀತ್ ರಾಜ್‍ಕುಮಾರ್ ಅವರು ಭೌತಿಕವಾಗಿ ನಮ್ಮ ಜೊತೆ ಇಲ್ಲದೇ ಇರಬಹುದು. ಆದರೆ, ಅವರ ನೆನಪು ಎಂದಿಗೂ ಶಾಶ್ವತ. ಅಪ್ಪು ಮೇಲೆ ಜನರು ಇಟ್ಟಿರುವ ಅಭಿಮಾನಕ್ಕೆ ಸಾಟಿಯೇ ಇಲ್ಲ. ಪುನೀತ್ ನಿಧನರಾದ ಬಳಿಕ ಅನೇಕ ವೃತ್ತ, ರಸ್ತೆ, ಪಾರ್ಕ್ಗಳಿಗೆ ಅವರ ಹೆಸರು ಇಡಲಾಯಿತು. ಹಲವಾರು ಕಡೆಗಳಲ್ಲಿ ಪುನೀತ್ ಅವರ ಪುತ್ಥಳಿ, ಪ್ರತಿಮೆ ನಿರ್ಮಾಣ ಮಾಡಲಾಯಿತು. ಜನರ ಹೃದಯದಲ್ಲಿ ಪುನೀತ್ ರಾಜ್‍ಕುಮಾರ್ ಅವರಿಗೆ ಯಾವ ಸ್ಥಾನ ಇದೆ ಎಂಬುದಕ್ಕೆ ಈ ಘಟನೆಗಳೇ ಸಾಕ್ಷಿ.
ಎಷ್ಟೋ ಪೋಷಕರು ತಮ್ಮ ಮಕ್ಕಳಿಗೆ ಪುನೀತ್ ರಾಜ್‍ಕುಮಾರ್, ಅಪ್ಪು ಎಂದು ಹೆಸರು ಇಟ್ಟಿದ್ದು ಕೂಡ ವರದಿ ಆಗಿದೆ. ಜಾತ್ರೆ, ಉತ್ಸವಗಳಲ್ಲಿ ಪುನೀತ್ ಭಾವಚಿತ್ರ ಹಿಡಿದು ಬರುವ ಭಕ್ತರ ಸಂಖ್ಯೆಗೂ ಕಡಿಮೆ ಇಲ್ಲ. ಇನ್ನೂ ಕೆಲವರ ಮನೆಯ ದೇವರ ಕೋಣೆಯಲ್ಲಿ ಅಪ್ಪು ಫೋಟೋ ಇಡಲಾಗಿದೆ. ಒಟ್ಟಿನಲ್ಲಿ ಪುನೀತ್ ರಾಜ್‍ಕುಮಾರ್ ಅವರ ನೆನಪನ್ನು ಶಾಶ್ವತವಾಗಿಸುವ ಕಾರ್ಯ ಎಲ್ಲೆಡೆಯೂ ನಡೆಯುತ್ತಿದೆ.
ಬಹುನಿರೀಕ್ಷಿತ ಚಿತ್ರ ಗಂಧದ ಗುಡಿ
ಅಕ್ಟೋಬರ್ 28ರಂದು ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಅಕ್ಟೋಬರ್ 21ರಂದು ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಮಾಡಲು ತೀರ್ಮಾನಿಸಲಾಗಿದೆ. ‘ಪುನೀತ ಪರ್ವ’ ಎಂಬ ಹೆಸರಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕದ ಮೂಲೆ ಮೂಲೆಗಳಿಂದ 5 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ.
ಅಪ್ಪು ನಿಧನರಾಗಿ ಇಂದಿಗೆ 11 ತಿಂಗಳು ಕಳೆದಿದೆ
ಕಳೆದ ವರ್ಷ ಅಕ್ಟೋಬರ್ 29ರಂದು ಪುನೀತ್ ರಾಜ್‍ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಅವರು ಇಲ್ಲ ಎಂಬ ಶೋಕ ಎಂದಿಗೂ ಕೊನೆಯಾಗುವಂಥದ್ದಲ್ಲ. ಅಪ್ಪು ನಿಧನರಾಗಿ ಇಂದಿಗೆ 11 ತಿಂಗಳು ಕಳೆದಿದೆ. ಡಾ. ರಾಜ್‍ಕುಮಾರ್ ಕುಟುಂಬದವರು ಪುನೀತ್ ಸಮಾಧಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಿ, ಬಗೆಬಗೆಯ ತಿನಿಸುಗಳ ನೈವೇದ್ಯ ಅರ್ಪಿಸಿದ್ದಾರೆ. ದೂರದೂರದ ಊರುಗಳಿಂದ ಬಂದ ಅಭಿಮಾನಿಗಳು ‘ಪವರ್ ಸ್ಟಾರ್’ ನೆನಪಿನಲ್ಲಿ ಕಣ್ಣೀರು ಹಾಕಿದ್ದಾರೆ. ಅಪ್ಪು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಅಭಿಮಾನಿಗಳಿಗೆಸಾಧ್ಯವಾಗುತ್ತಿಲ್ಲ.
ಹೊಸಪೇಟೆಯಲ್ಲಿ ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿ ನಿರ್ಮಾಣ ಆಗಿದೆ. ಈಗ ವಿನಯ್ ರಾಜ್‍ಕುಮಾರ್ ಅವರು ಹೊಸಪೇಟೆಗೆ ತೆರಳಿದ್ದಾರೆ. ಅಲ್ಲಿ ಪುನೀತ್ ರಾಜ್‍ಕುಮಾರ್ ವೃತ್ತದಲ್ಲಿರೋ ಪುನೀತ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದಾರೆ ವಿನಯ್. ಈ ವೇಳೆ ದೊಡ್ಮನೆಯ ನಟರ ಭಾವಚಿತ್ರ ಇರುವ ಫೋಟೋಗಳನ್ನು ಅಭಿಮಾನಿಗಳು ಕೊಟ್ಟಿದ್ದಾರೆ.
ಪುನೀತ್ ರಾಜ್‍ಕುಮಾರ್ ಅವರು ನಟನಾಗಿ ಮಾತ್ರ ಚಿತ್ರರಂಗದಲ್ಲಿ ಗುರುತಿಸಿಕೊಂಡಿರಲಿಲ್ಲ. ಅವರು ನಿರ್ಮಾಪಕನಾಗಿ ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದರು. ಅವರು ಮಾಡಿದ್ದ ಸಾಮಾಜಿಕ ಕೆಲಸಗಳು ಹಲವು.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನವನ್ನು ಸ್ಫೂರ್ತಿ ದಿನ ಎಂದು ಸರ್ಕಾರದ ವತಿಯಿಂದಲೇ ನಡೆಸಬೇಕೆಂಬ ನನ್ನ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದಾರೆ. ಅವರಿಗೆ ಧನ್ಯವಾದಗಳು. ಅಪ್ಪು ಜನ್ಮದಿನ, ಮಾರ್ಚ್ 17 ಇನ್ನುಮುಂದೆ ಸ್ಫೂರ್ತಿ ದಿನವೆಂದು ಆಚರಿಸುವ ಮೂಲಕ ನಾಡಿನ ಲಕ್ಷಾಂತರ ಯುವಕರಿಗೆ ಸ್ಫೂರ್ತಿಯಾಗಲಿದೆ’.
ಧನ್ಯವಾದಗಳು.
GIPHY App Key not set. Please check settings