ಕೆಜಿಎಫ್ ಟು ಚಿತ್ರ ಕೇವಲ ಕರ್ನಾಟಕ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಈಗಾಗಲೇ ಭಾರತದ ಬಹುತೇಕ ಎಲ್ಲಾ ಸಿನಿಮಾಗಳ ಧೂಳಿಪಟ ಮಾಡಿರುವ ವಿಚಾರ ನಿಮಗೆ ಗೊತ್ತೇ ಇದೆ. ಇದೀಗ ಮತ್ತೆ ಒಂದು ಚರಿತ್ರೆ ಸೃಷ್ಟಿ ಮಾಡಿದೆ. ಹಾಗಿದ್ದರೆ ಏನಪ್ಪ ಅದು ಅಂತೀರಾ ಈ ವಿಚಾರವನ್ನು ನಾವು ನಿಮಗೆ ಈ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ. ಕೆಜಿಎಫ್ ಟು ಚಿತ್ರ ಏಪ್ರಿಲ್ 14ರಂದು ವರ್ಲ್ಡ್ ವರ್ಲ್ಡ್ ಗ್ರಾಂಡ್ ಆಗಿ ರಿಲೀಸ್ ಆಗಿ ಅಭೂತಪೂರ್ವ ಯಶಸ್ಸು ಕಂಡಿದೆ. ಬರೋಬ್ಬರಿ ಸಾವಿರ ಕೋಟಿಗೂ ಅಧಿಕ ಗಳಿಕೆ
ಮಾಡಿ ಬಾಕ್ಸಾಫೀಸಿನಲ್ಲಿ ಧೂಳೆಬ್ಬಿಸಿದೆ.. ಭಾರತದಲ್ಲಿ ಮೊದಲ ಬಾರಿಗೆ ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಹೊರದೇಶಗಳಲ್ಲಿ 200 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಇದೀಗ ಕೆಜಿಎಫ್ ಟು ಚಿತ್ರ ಹಾಲಿವುಡ್ನಲ್ಲಿ ದಾಖಲೆಯೊಂದನ್ನು ನಿರ್ಮಿಸಿದೆ.. ಅದೇನಪ್ಪಾ ಎಂದರೆ ಹಾಲಿವುಡ್ನಲ್ಲಿ ಕೆಜಿಎಫ್ ಟು ಚಿತ್ರ ರಿಲೀಸ್ ಆದಾಗ n ಅದೇ ಸಂದರ್ಭದಲ್ಲಿ ಒಂದಿಷ್ಟು ಇಂಗ್ಲಿಷ್ ಚಿತ್ರಗಳು ರಿಲೀಸ್ ಆಗಿದೆ ಆದರೆ ಹಾಲಿವುಡ್ ನಟಿ ಸಿನಿಮಾಗಳು ಕೆಜಿಎಫ್ 2 ಚಿತ್ರದ ಕಲೆಕ್ಷನ್ ಮುಂದೆ ಮುಗ್ಗರಿಸಿದೆ. ಅಂದರೆ ಹಾಲಿವುಡ್ ಸಿನಿಪ್ರೇಕ್ಷಕರು ಕೂಡ ನಮ್ಮ ಕನ್ನಡದ ಕೆಜಿಎಫ್ 2 ಚಿತ್ರಕ್ಕೆ ಫಿದಾ ಆಗಿದ್ದಾರೆ..
ಅದಲ್ಲದೆ ಹಾಲಿವುಡ್ನ ಬಹುತೇಕ ಥಿಯೇಟರ್ಗಳಲ್ಲಿ ಕೆಜಿಎಫ್ ಟು ಚಿತ್ರ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ ಟು ಚಿತ್ರ ಈ ರೀತಿ ದಾಖಲೆ ಮಾಡುತ್ತಿರಬೇಕಾದರೆ ಇನ್ನು ಕೆಜಿಎಫ್ ತ್ರೀ ಇನ್ಯಾವ ರೀತಿ ದಾಖಲೆ ಮಾಡಬಹುದು ಅಂತ ನೀವೇ ಊಹಿಸಿಕೊಳ್ಳಿ. ಏನೇ ಆಗಲಿ ಕೆಜಿಎಫ್ ಟು ಚಿತ್ರ ವಿಶ್ವದಲ್ಲೆಡೆ ಕನ್ನಡದ ಕಂಪನ್ನು ಪ್ರಸರಿಸುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ನೀವು ಕೂಡ ಕೆಜಿಎಫ್ ಚಿತ್ರದ ನಿರೀಕ್ಷೆ ಮಾಡುವುದಾದರೆ ಈ ಮಾಹಿತಿಯನ್ನು ಎಲ್ಲಾ ಕಡೆ ಶೇರ್ ಮಾಡಿ. ಧನ್ಯವಾದಗಳು.