in

ಇನ್ನೂ ಚಿರ ಯುವಕನಂತೆ ಕಾಣುವ ಅನಿಲ್ ಕಪೂರ್ ಅವರ ಜನ್ಮದಿನದ ವಿಶೇಷ

ಅನಿಲ್ ಕಪೂರ್ ಅವರ ಜನ್ಮದಿನದ ವಿಶೇಷ
ಅನಿಲ್ ಕಪೂರ್ ಅವರ ಜನ್ಮದಿನದ ವಿಶೇಷ

ಅನಿಲ್ ಕಪೂರ್ ಅವರು ಭಾರತೀಯ ಚಿತ್ರನಟರ ಪೈಕಿ ಅತ್ಯಂತ ಮನ್ನಣೆ ಗಳಿಸಿದ ನಟರಾಗಿದ್ದಾರೆ. ಇಂದು ಅಂದರೆ ಡಿಸೆಂಬರ್ ೨೪, ಅವರ ಜನ್ಮದಿನ. ಅವರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.

ಅನಿಲ್ ಕಪೂರ್ ಹಿಂದಿ ಚಿತ್ರರಂಗದ ಪ್ರಖ್ಯಾತ ನಟ ಮತ್ತು ನಿರ್ಮಾಪಕ. ತಮ್ಮ 40 ವರ್ಷಗಳ ಸಿನಿಜೀವನದಲ್ಲಿ ಸುಮಾರು ನೂರಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಿತ್ರಗಳಲ್ಲಿ ನಟಸಿದ್ದಾರೆ. ಇವರ ತಂದೆ ಸುರೀಂದರ್ ಕಫೂರ್ ಬಾಲಿವುಡ್ ನ ಖ್ಯಾತ ನಿರ್ಮಾಪಕರಾಗಿದ್ದರು. ಸಹೋದರ ಬೋನಿ ಕಪೂರ್ ನಿರ್ಮಾಪಕರಾಗಿದ್ದರೆ, ಮಗಳು ಸೋನಮ್ ಕಪೂರ್ ಕೂಡ ಬಾಲಿವುಡ್ ಚಿತ್ರರಂಗದಲ್ಲಿ ನಟಿಯಾಗಿ ಸಕ್ರಿಯವಾಗಿದ್ದಾರೆ.

ಸಿನಿಜೀವನದ ಆರಂಭದಲ್ಲಿ ಸುಮಾರು 5 ಹಿಂದಿ ಚಿತ್ರಗಳಲ್ಲಿ ಮತ್ತು 1 ತೆಲುಗು ಚಿತ್ರದಲ್ಲಿ ನಟಿಸಿದ್ದ ಇವರು ಕನ್ನಡದಲ್ಲಿ ಮಣಿರತ್ನಂರವರ ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ನಟಿಸಿದರು.

ಇನ್ನೂ ಚಿರ ಯುವಕನಂತೆ ಕಾಣುವ ಅನಿಲ್ ಕಪೂರ್ ಅವರ ಜನ್ಮದಿನದ ವಿಶೇಷ
ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ಅನಿಲ್ ಕಪೂರ್

ಅನಿಲ್ ಕಪೂರ್ ಅವರು ಮುಂಬೈನ ತಿಲಕನಗರ್‌ನ ಚಾಲ್‌ನಲ್ಲಿ ಪಂಜಾಬಿ ಕುಟುಂಬದಲ್ಲಿ ಚಲನಚಿತ್ರ ನಿರ್ಮಾಪಕ ಸುರೀಂದರ್ ಕಪೂರ್ ಮತ್ತು ಅವರ ಪತ್ನಿ ನಿರ್ಮಲ್ ಅವರಿಗೆ ಜನಿಸಿದರು. ಅವರು ಮುಂಬೈನ ಹೊರವಲಯ ಚೆಂಬೂರ್‌ನಲ್ಲಿರುವ ಅವರ್ ಲೇಡಿ ಆಫ್ ಪರ್ಪೆಚ್ಯುಯಲ್ ಸಕರ್ ಹೈಸ್ಕೂಲ್-ಚೆಂಬೂರ್ ಮತ್ತು ನಂತರ ಸೇಂಟ್ ಕ್ಸೇವಿಯರ್ ಕಾಲೇಜು, ಮುಂಬೈನಲ್ಲಿ ಶಿಕ್ಷಣ ಪಡೆದರು. ಕಪೂರ್ ಅವರ ಅಣ್ಣ ಬೋನಿ ಕಪೂರ್ ಚಲನಚಿತ್ರ ನಿರ್ಮಾಪಕರು ಹಾಗು ತಮ್ಮ ಸಂಜಯ್ ಕಪೂರ್ ಕೂಡ ನಟರಾಗಿದ್ದಾರೆ. 1984ರಲ್ಲಿ ಅವರು ಸುನಿತಾ ಕಪೂರ್ ರವರನ್ನು ವಿವಾಹವಾದರು ಮತ್ತು ಅವರಿಗೆ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಹರ್ಷವರ್ಧನ್ ಕಪೂರ್ ಇದ್ದಾರೆ. ಕಪೂರ್ ಅವರ ಹಿರಿಯ ಪುತ್ರಿ ನಟಿಯಾಗಿರುವ ಸೋನಂ ಕಪೂರ್. ರಿಯಾ ಕಪೂರ್ ನ್ಯೂಯಾರ್ಕ್‌ನ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು ಈಗ ಮುಂಬೈನಲ್ಲಿ ನಿರ್ಮಾಪಕಿಯಾಗಿದ್ದಾರೆ.

ಮುಖ್ಯವಾಗಿ ಅವರು ಬಾಲಿವುಡ್ ಚಲನಚಿತ್ರಗಳಲ್ಲಿ ಪಾತ್ರವಹಿಸುತ್ತಾರೆ. ಅವರು ಯಶ್ ಚೋಪ್ರಾ ಅವರ ಚಿತ್ರ ಮಶಾಲ್ ನ ಅಭಿನಯಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಯನ್ನು ಗೆದ್ದಿದ್ದಾರೆ. ಕಪೂರ್ ಅವರು ತಮ್ಮ ಪ್ರಥಮ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು 1988ರಲ್ಲಿ  ಎನ್. ಚಂದ್ರಾ ಅವರ ತೇಜಾಬ್ ಚಿತ್ರದ ಅಭಿನಯಕ್ಕಾಗಿ ಹಾಗೂ ನಂತರ 1992ರಲ್ಲಿ ಇಂದ್ರ ಕುಮಾರ್ ಅವರ ಬೇಟಾ ಚಿತ್ರದ ಅಭಿನಯಕ್ಕಾಗಿ ಗಳಿಸಿದ್ದಾರೆ. ಆಗಿನಿಂದ ಅವರು ಅತ್ಯುತ್ತಮ ನಟನೆಗೆ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿಗಳಿಸಿದ ವಿರಾಸತ್, ಎರಡನೇ ಫಿಲ್ಮ್‌ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದರು. 

ತಾಲ್, ಅತ್ಯುತ್ತಮ ನಟನೆಗೆ ಪ್ರಥಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು.

ಪುಕಾರ್ (2000 ),ನೋ ಎಂಟ್ರಿ (2005 )ಮತ್ತು ವೆಲ್‌ಕಂ (2007 )ಚಲನಚಿತ್ರಗಳಲ್ಲಿ ಪಾತ್ರವಹಿಸಿದ್ದಾರೆ. 

ಕಪೂರ್ ಅವರ ಅಂತಾರಾಷ್ಟ್ರೀಯ ಚಿತ್ರದಲ್ಲಿ ಪ್ರಥಮ ಪಾತ್ರವು ಡ್ಯಾನಿ ಬಾಯ್ಲ್ ಅವರ ಅಕಾಡೆಮಿ ಪ್ರಶಸ್ತಿ ವಿಜೇತ ಚಿತ್ರ ಸ್ಲಮ್‌ಡಾಗ್ ಮಿಲಿಯನೇರ್ , ಚಿತ್ರದ ಪಾತ್ರವಾಗಿದೆ. ಅದಕ್ಕಾಗಿ ಅವರು ಚಲನಚಿತ್ರದಲ್ಲಿ ಪಾತ್ರವೊಂದರ ಮನೋಜ್ಞ ಅಭಿನಯಕ್ಕಾಗಿ ಚಿತ್ರತೆರೆ ನಟರ ಗಿಲ್ಡ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಸಾಹಸ ಸರಣಿ 24 ರ ಎಂಟನೇ ಸೀಸನ್‌ನಲ್ಲಿ ಅವರ ಅಭಿನಯವು ಅಮೆರಿಕದ ಮಾಧ್ಯಮದಿಂದ ಅತ್ಯುತ್ಸಾಹದ ವಿಮರ್ಶೆಗಳನ್ನು ಗಳಿಸಿತು.

ಇನ್ನೂ ಚಿರ ಯುವಕನಂತೆ ಕಾಣುವ ಅನಿಲ್ ಕಪೂರ್ ಅವರ ಜನ್ಮದಿನದ ವಿಶೇಷ
ಅನಿಲ್ ಕಪೂರ್ ಅವರ ಸಂಸಾರ

ದಂತಕಥೆಯಾದ ದಿಲಿಪ್ ಕುಮಾರ್ ಅವರ ನಟನಾ ಚಾತುರ್ಯದ ಎದುರು ವೃತ್ತಿಜೀವನವನ್ನು ರೂಪಿಸುವ ಅಭಿನಯವನ್ನು ನೀಡುವ ಮೂಲಕ ಚಲನಚಿತ್ರದ ಅಚ್ಚರಿಯ ಅಂಶವಾದರು. ಇದರಲ್ಲಿ ಅವರು ಒರಟಾದ ‘ತಾಪೋರಿ (ರೌಡಿ)ಪಾತ್ರವನ್ನು ನಿರ್ವಹಿಸಿದರು ಹಾಗು ಇದು ಭಾರತೀಯ ಸಿನೆಮಾದಲ್ಲಿ ತಾಪೋರಿ ಪಾತ್ರಗಳ ಆಗಮನದ ಸಂಕೇತವಾಗಿದೆ. ಈ ಪಾತ್ರಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ಪ್ರಥಮ ಫಿಲ್ಮ್‌ಪೇರ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಕಪೂರ್ ಅವರ 1985ರ ಬಿಡುಗಡೆ ಯುದ್ದ್ ಸಾಧಾರಣ ಯಶಸ್ವಿಯಾಯಿತು. 1985ರ ಚಿತ್ರ ಸಾಹೇಬ್‌ ನಲ್ಲಿ ಮಧ್ಯಮ ವರ್ಗದ ಕ್ರೀಡಾಪಟುವಾಗಿ ಅವರ ಸೂಕ್ಷ್ಮ ಚಿತ್ರಣವು ಅತ್ಯಂತ ಭರವಸೆಯ, ಗಲ್ಲಾ ಪೆಟ್ಟಿಗೆ ಯಶಸ್ವಿ ಚಿತ್ರ ಎನಿಸಿದೆ.

ಇತ್ತೀಚಿನ ಚಿತ್ರ ಕಾಂತಾರ ಸಿನಿಮಾ ಬಳಿಕ ಕನ್ನಡ ಸ್ಟಾರ್ ರಿಷಬ್ ಶೆಟ್ಟ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ರಿಷಬ್‌ಗೆ ಬೇಡಿಕೆ ಹೆಚ್ಚಾಗಿದೆ. ರಿಷಬ್ ಜೊತೆ ನಟಿಸಲು ಅನೇಕ ಕಲಾವಿದರು ಕಾಯುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರು ಕೂಡ ರಿಷಬ್ ಸಿನಿಮಾದಲ್ಲಿ ನಟಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇದೀಗ ಬಾಲಿವುಡ್‌ನ ಖ್ಯಾತ ನಟ ಅನಿಲ್ ಕಪೂರ್ ಕೂಡ ಕನ್ನಡದ ಸ್ಟಾರ್ ರಿಷಬ್ ಶೆಟ್ಟಿ ಜೊತೆ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. ಅಷ್ಟೆಯಲ್ಲದೇ ಮುಂದಿನ ಸಿನಿಮಾ ನನ್ನ ಜೊತೆ ಮಾಡಿ ಎಂದು ಕೇಳಿಕೊಂಡಿದ್ದಾರೆ. 

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಚೀನಾವು ಲೀಚಿಯ ಅತಿದೊಡ್ಡ ಉತ್ಪಾದಕ

ಚೀನಾವು ಲೀಚಿಯ ಅತಿದೊಡ್ಡ ಉತ್ಪಾದಕವಾಗಿದೆ, ಹಾಗೂ ಅದ್ಭುತವಾದ ಔಷಧೀಯ ಗುಣವನ್ನು ಹೊಂದಿದೆ

ತಂದೆಯ ಸಹಾಯವಿಲ್ಲದೆ ತನ್ನ ಮಕ್ಕಳನ್ನು ಸಾಕಿ ಸಲಹಿದ ತಾಯಂದಿರು

ಪುರಾಣದಲ್ಲಿ ತಂದೆಯ ಸಹಾಯವಿಲ್ಲದೆ ತನ್ನ ಮಕ್ಕಳನ್ನು ಸಾಕಿ ಸಲಹಿದ ತಾಯಂದಿರು