ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ ರಾಣಿ ಇತ್ತೀಚಿಗೆ ಸೀಮಂತದ ಸಂಭ್ರಮದ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ಬೇಬಿ ಬಂಪ್ ಫೋಟೋಶೂಟ್ ಅನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಗಂಡ ಹೆಂಡತಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತರಾದ ನಟಿ ಸಂಜನಾ ಗಲ್ ರಾಣಿ ಅವರು ಬಹುಭಾಷೆ ನಟಿಯಾಗಿ ಗುರುತಿಸಿಕೊಂಡರು. ಬಳಿಕ ಅ ಜಿಜ್ ಪಾಶ ಅವರೊಂದಿಗೆ ಸಂಜನ ವಿವಾಹವಾಗಿದ್ದರು. ಇತ್ತಿಚಿಗೆ ಸೀಮಂತ ಶಾಸ್ತ್ರದ ಸಂಭ್ರಮದ ಕ್ಷಣಗಳನ್ನು ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಕೊಂಡಿದ್ದರು. ಅದರ ಬೆನ್ನಲ್ಲೇ ಸಂಜನಾ ಈಗ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.
ಈ ಫೋಟೋ ಶೂಟ್ ಸಕ್ಕತ್ ವೈರಲ್ ಆಗುತ್ತಿದೆ. ಸಂಜನ ಗಲ್ರಣಿ 9ತಿಂಗಳ ತುಂಬು ಗರ್ಭಿಣಿ ಆಗಿದ್ದು ಹೊಸ ಫೋಟೋ ಶೂಟ್ ನಲ್ಲಿ ಮೆರೂನ್ ಕಲರ್ ಡ್ರೆಸ್ ನಲ್ಲಿ ಭಿನ್ನವಾಗಿ ಫೋಟೋಸ್ ಗೆ ಪೋಸ್ ಕೊಟ್ಟಿದ್ದಾರೆ. ತಲೆಗೆ ಹ್ಯಾಟ್ ಹಾಕಿಕೊಂಡು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಜೀವನ ಎಷ್ಟು ವಿಭಿನ್ನ ಮತ್ತು ಕಷ್ಟಕರ ಎಂದು ನಟಿ ಸಂಜನಾ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಕಷ್ಟದ ಸಮಯದಲ್ಲಿ ನನ್ನ ಮನಸ್ಸನ್ನು ಬೇರೆ ಕಡೆ ತಿರುಗಿಸಿದೆ. ನನ್ನ ನೆರೆಹೊರೆಯಲ್ಲಿ ನಲವತ್ತಕ್ಕೂ ಹೆಚ್ಚು ಗಿಡಗಳನ್ನು ಸಂಜನಾ ಫೌಂಡೇಶನ್ ನೇತೃತ್ವದಲ್ಲಿ ಮೂಲಕ ನನ್ನ ಸಮಯವನ್ನು ಮೀಸಲಿಟ್ಟಿದ್ದೇನೆ.
ನನ್ನ 9ನೇ ತಿಂಗಳ ಗರ್ಭಾವಸ್ಥೆಯ ಹಂತದಲ್ಲಿ ನಾನು ಹಿಂದೂ ಆಗಿ ಜನಿಸಿ ಮುಸ್ಲಿಂ ಕುಟುಂಬಕ್ಕೆ ಮದುವೆಯಾಗಿ ಎರಡು ಧರ್ಮದ ಪದ್ಧತಿಯನ್ನು ಖುಷಿಯಾಗಿ ಜೀವಿಸುತ್ತಿದ್ದೇನೆ ಎಂದು ತಮ್ಮ ಅಭಿಪ್ರಾಯವನ್ನು ಇಷ್ಟ ಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಪೋಸ್ ಮತ್ತು ಬೇಬಿ ಫೋಟೋಸ್ ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಂಜನಾ ಫೋಟೋಶೂಟ್ ವೈರಲ್ ಆಗುತ್ತಿದೆ. ಇನ್ನು ನೀವು ಕೂಡ ಇವರಿಗೆ ವಿಶ್ ಮಾಡುವುದರ ಮೂಲಕ ಕಾಮೆಂಟ್ ಮಾಡಿ ತಿಳಿಸಿ.
GIPHY App Key not set. Please check settings