in

ಕದಂಬರ ಮೊದಲ ರಾಜ ಮಯೂರವರ್ಮ

ರಾಜ ಮಯೂರವರ್ಮ
ರಾಜ ಮಯೂರವರ್ಮ

ಮಯೂರವರ್ಮ ತಾಳಗುಂದ ,ಆಧುನಿಕ ಕರ್ನಾಟಕದ ರಾಜ್ಯದ ಶಿವಮೊಗ್ಗ ಜಿಲ್ಲೆ ,ಬನವಾಸಿ ಕದಂಬ ವಂಶದ ಮೂಲ ವ್ಯಕ್ತಿಯಾಗಿರುತ್ತಾನೆ. ಬನವಾಸಿ ಕದಂಬರು ಹಳೆ ಕರ್ನಾಟಕದ ಮೊದಲ ರಾಜ ಮನೆತನವಾಗಿರುತ್ತದೆ.

ಹಳೆ ಕರ್ನಾಟಕದ ಜಾಗಗಳು ಮೊದಲು ಹೊರಗಿನ ಇತರೆ ರಾಜರುಗಳ ಆಳ್ವಿಕೆಯಲ್ಲಿದು, ನಂತರ ಬನವಾಸಿ ಕದಂಬರು ಕನ್ನಡ ಭಾಷೆಯನ್ನು ಮೂಲವಾಗಿ ಹೊಸ ಭೌಗೋಳಿಕ ಮತ್ತು ರಾಜಕೀಯ ರಾಜ್ಯಾವಾಗಿ ಹೊರ ಹೊಮ್ಮಿದ್ದು ಇದು ಆಧುನಿಕ ಕರ್ನಾಟಕದ ಒಂದು ಮಹತ್ವ ವಾದ ಮೈಲಿಗಲ್ಲಾಗಿ ಇತಿಹಾಸವಾಗಿರುತ್ತದೆ. ಕನ್ನಡ ಭಾಷೆಯ ಮೊದಲ ಬರಹಗಳು ಬನವಾಸಿ ಕದಂಬರ ಕೊಡುಗೆಯಾಗಿರುತ್ತದೆ. ಕರ್ನಾಟಕದ ಇತಿಹಾಸಕ್ಕೆ ಮತ್ತು ಕನ್ನಡಕ್ಕೆ ಬನವಾಸಿ ಕದಂಬರ ಕಾಣಿಕೆಗಾಗಿ ಕದಂಬರ ಮೂಲ ವ್ಯಕ್ತಿ ಮಯೂರವರ್ಮನು ಮಹತ್ವವನ್ನು ಪಡೆದಿರುತ್ತಾನೆ.

ಕದಂಬರ ಮೊದಲ ರಾಜ ಮಯೂರವರ್ಮ
ಕದಂಬರ ಮೊದಲ ರಾಜ ಮಯೂರವರ್ಮ

ಕಿ.ಶ. ೪೫೦ರ ತಾಳಗುಂದ ಶಾಸನವು ಬನವಾಸಿ ಕದಂಬರ ಬಗ್ಗೆ , ಮಯೂರವರ್ಮನ ಕುಟುಂಬ ಮತ್ತು ಕದಂಬರ ಮೂಲಗಳ ಬಗ್ಗೆ ನಂಬಲಾರ್ಹವಾಗಿರುವ ಮಾಹಿತಿಯನ್ನು ಹೊಂದಿರುತ್ತದೆ. ತಾಳಗುಂದ ಶಾಸನದ ಪ್ರಕಾರ ಮಯೂರವರ್ಮನು ತಾಳಗುಂದದ ಒಬ್ಬ ಬ್ರಾಹ್ಮಣ ಪಂಡಿತನಾಗಿದು ಬಂಧುಸೇನರ ಮಗನಾಗಿರುತ್ತಾನೆ

ಮಯೂರವರ್ಮನ ಮನೆಯ ಪಕ್ಕ ಕದಂಬ ಎಂಬ ಮರವನ್ನು ಬೆಳೆಸಿರುವ ಕಾರಣಕ್ಕೆ ಕುಟುಂಬಕ್ಕೆ ಕದಂಬ ಎಂದು ಹೆಸರಿಸಲಾಯಿತು ಎಂಬ ಮಾಹಿತಿಯನ್ನು ಈ ಶಾಸನ ಕೊಡುತ್ತದೆ. ವೈದಿಕ ಕಾಲದಲ್ಲಿ ಮಯೂರವರ್ಮನ ಕುಟುಂಬ ಕನ್ನಡಿಗ ಕರ್ಣಾಟ ಮತಕ್ಕೆ ಸೇರಿದವರಾಗಿರುತ್ತಾರೆ. ಮಯೂರವರ್ಮನ್ನು ಕ್ಷತ್ರಿಯ ಧರ್ಮಕ್ಕೆ ಬದಲಾವಣೆಗೊಂಡ ಬಗ್ಗೆ ಗುಂಡಾಪುರ ಶಾಸನ ಹೆಚ್ಚಿನ ಮಾಹಿತಿ ಕೊಡುತ್ತದೆ.

ತಾಳಗುಂದ ಶಾಸನದಲ್ಲಿ ಇರುವ ಮಾಹಿತಿ ಪ್ರಕಾರ, ಮಯೂರವರ್ಮನು ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಪಲ್ಲವರ ರಾಜಧಾನಿ ಕಂಚಿಗೆ ಹೋದಾಗ ಕ್ಷತ್ರಿಯನೊಬ್ಬನಿಂದ ಅವಮಾನಿತನಾದ ಮಯೂರವರ್ಮ ವಿಧ್ಯಾಭ್ಯಾಸವನ್ನು ಅಲ್ಲಿಗೆ ಬಿಟ್ಟು ಸೈನ್ಯ ಕಟ್ಟಿ ಪಲ್ಲವ ಸೇನೆಯನ್ನು ಎದುರಿಸಿದ. ಇವನಿಂದ ಪರಾಜಿತರಾದ ಪಲ್ಲವರು ಪಶ್ಚಿಮ ಸಮುದ್ರ (ಅರಬ್ಬೀ ಸಮುದ್ರ)ದಿಂದ ಈಗಿನ ಘಟಪ್ರಭಾ ನದಿಯವರೆಗಿನ ಪ್ರದೇಶದಲ್ಲಿ ಇವನ ಆಧಿಪತ್ಯವನ್ನು ಒಪ್ಪಿಕೊಂಡರು. ಇದರಿಂದ ಕದಂಬ ವಂಶದ ಆಡಳಿತ ಪ್ರಾರಂಭವಾಗಿರುತ್ತದೆ.

ಮಯೂರವರ್ಮನ ಸಫಲವಾದ ಈ ರಾಜಕೀಯ ಬಂಡಾಯ ಸಾಹಸದಿಂದ ಕ್ಷತ್ರಿಯರಾದ ಕಂಚಿಯ ಪಲ್ಲವರ ಆಡಳಿತಕ್ಕೆ ಬಾರಿ ಹಿನ್ನೆಡೆ ಉಂಟಾಗಿರುತ್ತದೆ. ಆ ಕಾಲದಲ್ಲಿ ನಡೆದ ಈ ಒಂದು ರಾಜಕೀಯದ ಬೆಳವಣಿಯಿಂದ ೨೧ನೇ ಶತಮಾನದ ಕರ್ನಾಟಕ ರಾಜ್ಯದ ಮೊದಲ ರಾಜ ಮನೆತನ ಉದಯವಾಗಿರುತ್ತದೆ. ಇತರೆ ಇತಿಹಾಸದ ಪಂಡಿತರ ಪ್ರಕಾರ ಮಯೂರವರ್ಮನ ರಾಜಕೀಯ ಬಂಡಾಯ ಮತ್ತು ದಕ್ಷಿಣದ ಪಲ್ಲವರ ರಾಜ ವಿಷ್ಣುಗೋಪ ಹಾಗೂ ಉತ್ತರದ ಸಮುದ್ರ ಗುಪ್ತರ ನಡುವೆ ನಡೆದ ಯುದ್ದ್ಧಗಳು ಅಲಹಾಬಾದ ಶಾಸನ ಪ್ರಕಾರ ಒಂದೇ ಕಾಲದಲ್ಲಿ ನಡೆದು ಪಲ್ಲವರ ಆಡಳಿತ ಕೊನೆಗೊಳ್ಳಲು ಕಾರಣವಾಗಿರಬಹುದು ಎಂಬ ವಾದವು ಉಂಟು.
ಇತರೆ ಇತಿಹಾಸಗಾರರ ಅಭಿಪ್ರಾಯದಂತೆ ಮೊದಲಿಗೆ ಪಲ್ಲವರು ಮಯೂರವರ್ಮನನ್ನು ಸೇನಾನಿ ದಂಡ ನಾಯಕಯಾಗಿ ತಮ್ಮ ಸೈನಕ್ಕೆ ನೇಮಿಸಿರುತ್ತಾರೆ. ಕಾಲಕ್ರಮೇಣ ಪಲ್ಲವರ ರಾಜ ವಿಷ್ಣುಗೋಪ ಹಾಗೂ ಉತ್ತರದ ಸಮುದ್ರ ಗುಪ್ತರ ನಡುವೆ ನಡೆದ ಯುದ್ದ್ಧಗಳಿಂದ ಉಂಟಾದ ಭಿನ್ನಾಭಿಪ್ರಾಯದಿಂದ ಮಯೂರವರ್ಮನು ಬನವಾಸಿಯನ್ನು ರಾಜಧಾನಿಯಾಗಿ ಇಟ್ಟುಕೊಂಡು ಬನವಾಸಿ ಕದಂಬ ರಾಜ್ಯ ಕಟ್ಟಿರುತ್ತಾನೆ ಎನ್ನುತ್ತಾರೆ.

ಕದಂಬರ ಮೊದಲ ರಾಜ ಮಯೂರವರ್ಮ
ಹಲ್ಮಿಡಿ ಶಾಸನ

ಕದಂಬ’ ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ಮೊಟ್ಟಮೊದಲ ಶಾಸನವಾದ ಹಲ್ಮಿಡಿ ಶಾಸನವು ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ.

ಕದಂಬರು (ಕ್ರಿ.ಶ.೩೪೫-೫೨೫) ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಮುಂದೆ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಾಮಂತರಾಗಿ ಆಳ್ವಿಕೆ ಮುಂದುವರಿಸಿದ ಕದಂಬರರ ರಾಜ್ಯ ಗೋವಾ ಮತ್ತುಹಾನಗಲ್ ಗಳಲ್ಲಿ ಶಾಖೆಗಳನ್ನು ಹೊಂದಿತು. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕದಂಬರ ರಾಜ್ಯ ಕರ್ನಾಟಕದ ಅನೇಕ ಭಾಗಗಳನ್ನೊಳಗೊಂಡಿತ್ತು. ಕದಂಬರ ಪೂರ್ವದ ರಾಜ ವಂಶಗಳಾದ ಮೌರ್ಯರು, ಶಾತವಾಹನರು ಮೂಲತಃ ಕರ್ನಾಟಕದ ಹೊರಗಿನವರಾಗಿದ್ದು, ಅವರ ರಾಜ್ಯದ ಕೇಂದ್ರಬಿಂದು ಕರ್ನಾಟಕದ ಹೊರಗಿತ್ತು. ಕನ್ನಡವನ್ನು ರಾಜ್ಯಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಈ ಪ್ರದೇಶದ ಬೆಳವಣಿಗೆಯ ಅಧ್ಯಯನದಲ್ಲಿ , ಬಹಳ ಕಾಲ ಬಾಳಿದ ಸ್ಥಳೀಯ ರಾಜಕೀಯ ಶಕ್ತಿಯಾಗಿ ಮತ್ತು ಕನ್ನಡ ಒಂದು ಪ್ರಮುಖ ಪ್ರಾದೇಶಿಕ ಭಾಷೆಯಾಗಿ ಬೆಳೆದ ಈ ಕಾಲಮಾನ, ಕರ್ನಾಟಕದ ಇತಿಹಾಸದಲ್ಲಿ,ಸರಿಸುಮಾರು ಐತಿಹಾಸಿಕ ಪ್ರಾರಂಭ ಕಾಲವಾಗಿದೆ. ಕ್ರಿ.ಶ. ೩೪೫ರಲ್ಲಿ ಮಯೂರವರ್ಮನಿಂದ ಸ್ಥಾಪಿಸಲಾದ ಈ ರಾಜ್ಯವು, ಬೃಹತ್ ಸಾಮ್ರಾಜ್ಯವಾಗಿ ಬೆಳೆಯುವ ಲಕ್ಷಣವನ್ನು ಆಗಾಗ ತೋರಿಸುತ್ತಿತ್ತು. ಆಗಿನ ರಾಜರುಗಳ ಬಿರುದು ಬಾವಲಿಗಳೂ ಈ ವಿಷಯಕ್ಕೆ ಪುಷ್ಟಿ ಕೊಡುತ್ತವೆ. ಇದೇ ವಂಶದ ಕಾಕುಸ್ಥವರ್ಮನು ಬಲಾಢ್ಯ ಅರಸನಾಗಿದ್ದು, ಉತ್ತರದ ಗುಪ್ತ ಮಹಾಸಾಮ್ರಾಜ್ಯದ ದೊರೆಗಳು ಇವನೊಂದಿಗೆ ಲಗ್ನ ಸಂಬಂಧ ಇಟ್ಟುಕೊಂಡದ್ದು ಈ ರಾಜ್ಯದ ಘನತೆಯನ್ನು ಸೂಚಿಸುತ್ತದೆ. ಇದೇ ಪೀಳಿಗೆಯ ರಾಜ ಶಿವಕೋಟಿ ಪದೇಪದೇ ನಡೆಯುತ್ತಿದ್ದ ಯುದ್ಧ , ರಕ್ತಪಾತಗಳಿಂದ ಬೇಸತ್ತು ಜೈನ ಧರ್ಮಕ್ಕೆ ಮತಾಂತರಗೊಂಡ. ಕದಂಬರು, ಹಾಗೂ ಅವರ ಸಮಕಾಲೀನರಾಗಿದ್ದ ತಲಕಾಡು ಪಶ್ಚಿಮ ಗಂಗರು ಸಂಪೂರ್ಣ ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದ ಸ್ಥಳೀಯರಲ್ಲಿ ಮೊದಲಿಗರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕೃಷ್ಣ ರುಕ್ಮಿಣಿ 12ವರ್ಷ ಒಟ್ಟಾಗಿ ಯಾಕೆ ಇರಲಿಲ್ಲ.

ಕೃಷ್ಣ ರುಕ್ಮಿಣಿ 12ವರ್ಷ ಒಟ್ಟಾಗಿ ಯಾಕೆ ಇರಲಿಲ್ಲ.

ಇಸ್ಪೀಟ್ ರಾಜರ ಬಗ್ಗೆ ನಿಮಗೆ ಗೊತ್ತಿಲ್ಲದ ರೋಚಕ ಸತ್ಯ.