in

ಪ್ರಧಾನಿ ಮೋದಿ ಜನ್ಮದಿನ : 1 ಲಕ್ಷಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ

ಪ್ರಧಾನಿ ಮೋದಿ ಜನ್ಮದಿನ
ಪ್ರಧಾನಿ ಮೋದಿ ಜನ್ಮದಿನ

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಶನಿವಾರ ಮಧ್ಯರಾತ್ರಿ ವರೆಗೆ ನಡೆದ ‘ರಕ್ತದಾನ ಅಮೃತ ಮಹೋತ್ಸವ’ದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದ್ದಾರೆ. ಈ ಮೂಲಕ ಒಂದೇ ದಿನದಲ್ಲಿ ಅತಿಹೆಚ್ಚು ಮಂದಿ ರಕ್ತದಾನ ಮಾಡಿದ ವಿಶ್ವದಾಖಲೆಯಾಗಿದೆ.

2014ರ ಸೆಪ್ಟಂಬರ್‌ 6ರಂದು 87,059 ಮಂದಿ ರಕ್ತದಾನ ಮಾಡಿದ್ದು ಈ ಹಿಂದಿನ ದಾಖಲೆಯಾಗಿತ್ತು. ಅಖಿಲ ಭಾರತೀಯ ತೆರಾಪಂಥ ಯುವಕ ಪರಿಷದ್‌ ಅಡಿಯಲ್ಲಿ ರಾಷ್ಟ್ರದಾದ್ಯಂತ 300 ನಗರಗಳಲ್ಲಿ 556 ರಕ್ತದಾನ ಕೇಂದ್ರಗಳಲ್ಲಿ ಮಾಡಲಾಗಿತ್ತು.

‘ಹೊಸ ವಿಶ್ವದಾಖಲೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು 87,000ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತರಾಗಿ ರಕ್ತದಾನ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಲು ಸಂತಸವಾಗುತ್ತಿದೆ. ನಮ್ಮ ಪ್ರಧಾನ ಸೇವಕನಿಗೆ ರಾಷ್ಟ್ರ ಕೊಟ್ಟಿರುವ ಬೆಲೆಕಟ್ಟಲಾಗದ ಉಡುಗೊರೆ ಎಂದು ಶನಿವಾರ ಸಂಜೆ 7.42ಕ್ಕೆ ಟ್ವೀಟ್‌ ಮಾಡಿದ್ದಾರೆ. ಬಳಿಕ 1 ಲಕ್ಷ ದಾಟಿದೆ ಎಂದು ಇತ್ತೀಚಿನ ಮಾಹಿತಿಯನ್ನು ದಾಖಲಿಸಿದ್ದಾರೆ.

ನರೇಂದ್ರ ದಾಮೋದರದಾಸ್ ಮೋದಿ ಸೆಪ್ಟೆಂಬರ್ ೧೭, ೧೯೫೦, ಇವರು ಭಾರತದ ಪ್ರಧಾನ ಮಂತ್ರಿಗಳು. ಇವರು ಭಾರತೀಯ ಜನತಾ ಪಕ್ಷದ ಸದಸ್ಯರು. ಇವರು ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಎನ್.ಡಿ.ಎ. ಮೈತ್ರಿಕೂಟ) ಪಕ್ಷದಿಂದ ಸ್ಪರ್ಧಿಸಿ ಗೆದ್ದು ಭಾರತದ ೧೪ನೆಯ ಪ್ರಧಾನಮಂತ್ರಿಯಾಗಿದ್ದಾರೆ. ಮೋದಿಯವರು,ಗುಜರಾತ್ ನ ವಡೋದರ, ಹಾಗೂ ವಾರಣಾಸಿ ಎರಡೂ ಕ್ಷೇತ್ರಗಳಲ್ಲಿ ಗೆದ್ದು, ಪ್ರಸಕ್ತ ವಾರಣಾಸಿಯ ಸಂಸದರಾಗಿದ್ದಾರೆ.

ಪ್ರಧಾನಿ ಮೋದಿ ಜನ್ಮದಿನ : 1 ಲಕ್ಷಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ
ನರೇಂದ್ರ ದಾಮೋದರದಾಸ್ ಮೋದಿ

ಗುಜರಾತ ರಾಜ್ಯದ ಮೆಹಸಾನಾ ಜಿಲ್ಲೆಯ ವಡನಗರದ ಮೋದಿ ಪರಿವಾರದಲ್ಲಿ ೪ ಮಕ್ಕಳ ಪೈಕಿ ಮೂರನೆಯವರಾಗಿ, ೧೭ ಸೆಪ್ಟೆಂಬರ್ ೧೯೫೦ ರಲ್ಲಿ ಮೋಧ್ ಗಂಛಿ ತೆಲಿ ಜಾತಿಯ ಅತಿ ಬಡ ಕುಟುಂಬದಲ್ಲಿ ಜನಿಸಿದರು. ತಂದೆ ದಾಮೋದರ ದಾಸ್ ಮುಲಚಂದ್ ಮೋದಿ ಮತ್ತು ತಾಯಿ ಹೀರಾ ಬೆನ್. ವಾದ್ ನಗರ ರೈಲ್ವೆ ನಿಲ್ದಾಣದಲ್ಲಿ ಒಂದು ಚಹಾದ ಅಂಗಡಿಯನ್ನು ನಡೆಸುತ್ತಿದ್ದ ಸಮಯದಲ್ಲಿ ಮೋದಿಯವರು, ತಂದೆಗೆ ಸಹಾಯ ಮಾಡುತ್ತಿದ್ದರು. ಅರವತ್ತರ ದಶಕದ ಮಧ್ಯದಲ್ಲಿ ಇಂಡೋ-ಪಾಕ್ ಯುದ್ಧ ನಡೆದಾಗ ಬಾಲಕ ಮೋದಿ, ರೈಲು ನಿಲ್ದಾಣಗಳಲ್ಲಿ ಸೈನಿಕರಿಗೆ ಸ್ವಯಂಪ್ರೇರಣೆಯಿಂದ ಸೇವೆ ಮಾಡಿದ್ದರು. ೧೯೬೭ರಲ್ಲಿ ಪ್ರವಾಹ ಪೀಡಿತ ಗುಜರಾತ್ ಜನತೆಯ ಸೇವೆ ಮಾಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ನಾಯಕರಾಗಿ ಆಯ್ಕೆಯಾಗಿದ್ದರು. ಗುಜರಾತಿನಲ್ಲಿ ಅನೇಕ ಸಾಮಾಜಿಕ-ರಾಜಕೀಯ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಪ್ರಧಾನಮಂತ್ರಿಯಾಗಿ ತಮ್ಮ ಎರಡನೇ ಅವಧಿಯ ಆರಂಭದ ಸಂಕೇತವಾಗಿ ಮೇ 30, 2019 ರಂದು ಶ್ರೀ ನರೇಂದ್ರ ಮೋದಿ ಅವರು ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಜನ್ಮ ಪಡೆದ ಮೊದಲ ಪ್ರಧಾನಮಂತ್ರಿ ಶ್ರೀ. ಮೋದಿ ಅವರಾಗಿದ್ದಾರೆ. ಕ್ರಿಯಾಶೀಲ, ಸಮರ್ಪಿತ ಮತ್ತು ನಿರ್ದಿಷ್ಟ, ಶ್ರೀ. ನರೇಂದ್ರ ಮೋದಿ ಅವರು ಒಂದು ಶತಕೋಟಿಗೂ ಅಧಿಕ ಭಾರತೀಯರ ಆಶೋತ್ತರ ಮತ್ತು ಭರವಸೆಗಳನ್ನು ಪ್ರತಿಬಿಂಬಿಸುತ್ತಾರೆ.

ಪ್ರಧಾನ ಮಂತ್ರಿಯಾಗಿ ಮೇ 2014ರಲ್ಲಿ ಜವಾಬ್ದಾರಿ ಪಡೆದ ಮೇಲೆ ಮೊದಲ ಹೆಜ್ಜೆಯಾಗಿ, ಪ್ರತಿಯೊಬ್ಬ ಭಾರತೀಯನೂ ಒಟ್ಟಾರೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯ ಕಾರ್ಯಗಳಲ್ಲಿ ಸಹಪಯಣಿಗನಾಗಿ ತಮ್ಮ ಆಶೋತ್ತರ ಹಾಗೂ ಅಪೇಕ್ಷೆಗಳು ಫಲಕಾಣುವ ಹಾಗೂ ಅವುಗಳ ಅನುಭವಗಳಿಸುವ ಅವಕಾಶ ಸೃಷ್ಠಿಸಿದರು. ಈ ನಿಟ್ಟಿನಲ್ಲಿ, ಸಮಾಜದ ಕೊನೆ ಸಾಲಿನ ಕಟ್ಟಕಡೆಯ ವ್ಯಕ್ತಿಯ ಕೂಡಾ ಸೇವೆಯಲ್ಲಿ ನಿರತನಾಗಲು ಅವರ ಪಾಲಿಗೆ “ಅಂತ್ಯೋದಯ” ನೀತಿ ಸೂತ್ರ ಗಾಢ ಪ್ರಭಾವ ಬೀರಿದೆ

ನಿತ್ಯನೂತನ ಪ್ರಕ್ರಿಯಾ ಯೋಜನೆಗಳೊಂದಿಗೆ ಪ್ರಗತಿಯ ಹಾದಿಹಿಡಿದ ಸರ್ಕಾರ, ತನ್ನ ಉದ್ದೇಶಿತ ಸುಧಾರಣೆಯ ಘಟ್ಟ ತಲುಪಿ, ಪ್ರತಿಯೊಬ್ಬ ಜನಸಾಮಾನ್ಯನಿಗೆ ಇದರ ಪ್ರಯೋಜನ ಸಮಪರ್ಕವಾಗಿ ಲಭ್ಯವಾಗುವ ಸುವ್ಯವಸ್ಥೆಯನ್ನು ಮಾಡಲಾಗಿದೆ. ಸಂಪೂರ್ಣವಾಗಿ ತೆರೆದ ಮುಕ್ತ ವಾತಾವರಣ, ಸುಲಭ ಹಾಗೂ ಪಾರದರ್ಶಕತೆ ಹೊಂದಿದ ಆಡಳಿತವನ್ನು ಸ್ಥಾಪಿಸಲಾಗಿದೆ.

ಪ್ರಧಾನಿ ಮೋದಿ ಜನ್ಮದಿನ : 1 ಲಕ್ಷಕ್ಕೂ ಹೆಚ್ಚು ಮಂದಿಯಿಂದ ರಕ್ತದಾನ
ಪ್ರಶಸ್ತಿ/ಗೌರವ

ಪ್ರಶಸ್ತಿ/ಗೌರವ

ರಷ್ಯಾ ಸರಕಾರವು ಪಿಎಂ ನರೇಂದ್ರ ಮೋದಿಯವರನ್ನು ‘ಆರ್ಡರ್ ಆಫ್ ಅಪಾಸಲ್ ಸೇಂಟ್ ಆಂಡ್ರ್ಯೂ ‘ ಪ್ರಶಸ್ತಿಯೊಂದಿಗೆ ಗೌರವಿಸಿದೆ. – ಎಪ್ರಿಲ್ ೧೨, ೨೦೧೯
ಸಂಯುಕ್ತ ಅರಬ್ ಸಂಸ್ಥಾಪನೆಗಳು(ಯುಎಇ) ಪ್ರಧಾನಿ ನರೇಂದ್ರ ಮೋದಿಯವರಿಗೆ ಜಾಯೆದ್ ಪದಕ ನೀಡಿ ಗೌರವಿಸಿದೆ – ಎಪ್ರಿಲ್ ೪, ೨೦೧೯
ನರೇಂದ್ರ ಮೋದಿಯವರಿಗೆ ಫಿಲಿಪ್ ಕೋಟ್ಲರ್ ಅಧ್ಯಕ್ಷೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು – ಜನವರಿ ೧೪, ೨೦೧೯
ನರೇಂದ್ರ ಮೋದಿಯವರಿಗೆ “ಮೋಡಿನೋಮಿಕ್ಸ್” ಗಾಗಿ ಪ್ರತಿಷ್ಠಿತ ಸಿಯೋಲ್ ಬಹುಮಾನ ೨೦೧೮ನ್ನು ನೀಡಲಾಯಿತು – ಅಕ್ಟೋಬರ್ ೨೪, ೨೦೧೮
ಪ್ರಧಾನಿ ಮೋದಿಯವರಿಗೆ ವಿಶ್ವ ಸಂಸ್ಥೆಯ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ ೨೦೧೮ನ್ನು ನೀಡಿ ಗೌರವಿಸಲಾಯಿತು – ಸೆಪ್ಟೆಂಬರ್ ೨೬, ೨೦೧೮

ಪ್ರಧಾನಿ ಮೋದಿಯವರಿಗೆ ಪ್ಯಾಲೆಸ್ಟೈನ್ ರಾಜ್ಯದ ಗ್ರ್ಯಾಂಡ್ ಕಾಲರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು – ಫೆಬ್ರವರಿ ೧೦, ೨೦೧೮
ಪ್ರಧಾನಿ ನರೇಂದ್ರ ಮೋದಿಯವರಿಗೆ ಅಫ್ಘಾನಿಸ್ತಾನದ ಅಮೀರ್ ಅಬ್ದುಲ್ಲಾ ಖಾನ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು – ಜೂನ್ ೪, ೨೦೧೬
ಮೋದಿಯವರಿಗೆ ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ಲಾಜಿಜ್ ಸಾಶ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು – ಎಪ್ರಿಲ್ ೩, ೨೦೧೬

ಮನ್‌ಸುಖ್‌ ಮಾಂಡವೀಯ ಅವರು ಸ್ವತಃ ಸಫ್ತರ್‌ಜಂಗ್‌ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದರು. ಬಳಿಕ ಆರೋಗ್ಯ ಸೇತು ಆ್ಯಪ್‌ ಅಥವಾ ಇ-ರಕ್ತೋಶ್‌ ಪೋರ್ಟಲ್‌ ಮೂಲಕ ರಕ್ತದಾನ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ನಾಗರಿಕರನ್ನು ಒತ್ತಾಯಿಸಿದರು. ರಾಷ್ಟ್ರೀಯ ಸ್ವಯಂ ರಕ್ತದಾನ ದಿನ, ಅಕ್ಟೋಬರ್‌ 1ರ ವರೆಗೆ ರಕ್ತದಾನ ಕಾರ್ಯಕ್ರಮ ಮುಂದುವರಿಯಲಿದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕರ್ನಾಟಕದಲ್ಲಿನ ಕ್ರೀಡೆಗಳು

ಕರ್ನಾಟಕದಲ್ಲಿನ ಕ್ರೀಡೆಗಳು

ಅಂಡಮಾನ್ ಮತ್ತು ನಿಕೊಬಾರ್

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು