ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿರುವ ನಟ ಹಾಗೂ ನಟಿಯರು ತಮ್ಮ ನಿಜ ಜೀವನದಲ್ಲಿ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಉದಾಹರಣೆಗಳು ನಾವು ನೋಡಬಹುದು. ನಾವು ಬಣ್ಣದ ಲೋಕದಲ್ಲಿ ಸಹಜವಾದದ್ದು ಎಂದು ಹೇಳಬಹುದು. ಈಗಾಗಲೇ ಕನ್ನಡದ ಅನೇಕ ಸ್ಟಾರ್ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಅದೇ ಸಾಲಿನಲ್ಲಿ ಮತ್ತೊಂದು ಸ್ಟಾರ್ ಜೋಡಿ ತಮ್ಮ ಹೆಸರನ್ನು ಸೇರಿಸಿಕೊಳ್ಳಲು ಮುಂದಾಗಿದೆ. ಅದು ಯಾರು ಎಂದು ಈ ಮಾಹಿತಿಯಲ್ಲಿ ನೋಡೋಣ. ಅದಕ್ಕೂ ಮುನ್ನ ಈ ಮಾಹಿತಿಯನ್ನು ಶೇರ್ ಮಾಡಿ.
ಹೌದು ಕನ್ನಡ ಕಿರುತೆರೆಯಲ್ಲಿ ಕಾವ್ಯಂಜಲಿ ಬ್ರಹ್ಮಾಸ್ತ್ರ ತೆಲುಗುವಿನಲ್ಲಿ ಪ್ರೇಮಸಾಗ ರ್ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿಯೂ ಅಭಿನಯಿಸಿರುವ ನಟಿ ದೀಪಾ ಜಗದೀಶ್. ನಟಿ ದೀಪ ಜಗದೀಶ್ ಕೈಹಿಡಿಯುತ್ತಿರುವ ಹುಡುಗ ಮತ್ಯಾರು ಅಲ್ಲ ನಟ ಹಾಗೂ ನಿರ್ದೇಶಕ ಆಗಿ ಗುರುತಿಸಿಕೊಂಡು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ನಟ ನಿರ್ದೇಶಕ ಸಾಗರ್ ಪುರಾಣಿಕ್. ಮೊದಲು ನಟನಾಗಿ ಗುರುತಿಸಿಕೊಂಡರು ಸಹ
ನಂತರದಲ್ಲಿ ನಿರ್ದೇಶಕನಾಗಿ ಹೆಸರು ಮಾಡಿ ಧಾರಾವಾಹಿಗಳು ಹಾಗೂ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು ಇವರು ನಿರ್ದೇಶನ ಮಾಡಿದ ಡೊಳ್ಳು ಸಿನಿಮಾಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. ಇನ್ನು ಸಾಗರ್ ಹಾಗೂ ದೀಪ ಮದುವೆ ಫೋಟೋ ಚಿತ್ರೀಕರಣ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಚ್ಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಸದ್ಯ ಆರತಕ್ಷತೆ ಕಾರ್ಯಕ್ರಮ ಬೆಂಗಳೂರು ಆವರಣದ ನೆರವೇರಲಿದ್ದು ಸಿನಿಮಾ ಹಾಗೂ ಕಿರುತೆರೆಯ ಗಣ್ಯರು ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಿ ನೂತನ ಜೋಡಿಗೆ ಶುಭ ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದೀಪ ಜಗದೀಶ್ ಹಾಗೂ ಸಾಗರ್ ಪುರಾಣಿಕ್ ಇಬ್ಬರು ಸಹ ಮದುವೆ ವಿಚಾರದಲ್ಲಿ ತಿಳಿಸಿ ಸಂತೋಷ ಹಂಚಿಕೊಂಡಿದ್ದು ಸ್ನೇಹಿತರು ಶುಭಾಶಯ ತಿಳಿಸಿದ್ದಾರೆ.
GIPHY App Key not set. Please check settings