in ,

ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ

ಸರ್ ಎಂ ವಿಶ್ವೇಶ್ವರಯ್ಯ
ಸರ್ ಎಂ ವಿಶ್ವೇಶ್ವರಯ್ಯ

ಮೈಸೂರಿನ ಕೃಷ್ಣ ರಾಜಸಾಗರ ಅಣೆಕಟ್ಟು ನಿರ್ಮಾಣದ ಜವಾಬ್ದಾರಿಯನ್ನು ಮುಖ್ಯ ಎಂಜಿನಿಯರ್ ಆಗಿದ್ದರು. ಜೊತೆಗೆ ಹೈದರಾಬಾದ್ ನಗರದ ಪ್ರವಾಹ ರಕ್ಷಣೆ ವ್ಯವಸ್ಥೆಯ ಪ್ರಧಾನ ವಿನ್ಯಾಸಕ. ಜಿಜನಪ್ರಿಯರಾಗಿದ್ದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು, ಭಾರತದ ಗಣ್ಯ ಇಂಜಿನಿಯರ್ ಆಗಿದ್ದರು. ಇವರು ೧೯೧೨ ರಿಂದ ೧೯೧೮ರವರೆಗೆ ಮೈಸೂರು ಸಂಸ್ಥಾನದ ದಿವಾನರಾಗಿದ್ದವರು. ಇವರ ಹುಟ್ಟಿದ ದಿನವನ್ನು ಭಾರತ ದೇಶದಾದ್ಯಂತ ಅಭಿಯಂತರ(ಇಂಜಿನಿಯರ್ಸ್ ಡೇ) ದಿನ ಎಂದು ಆಚರಿಸುತ್ತಾರೆ.

ವಿಶ್ವೇಶ್ವರಯ್ಯನವರು ಜನಿಸಿದ್ದು ಸೆಪ್ಟೆಂಬರ್ ೧೫,೧೮೬೦ ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ. ವಿಶ್ವೇಶ್ವರಯ್ಯನವರ ತಂದೆ ‘ಶ್ರೀನಿವಾಸ ಶಾಸ್ತ್ರಿ’, ತಾಯಿ ‘ವೆಂಕಟಲಕ್ಷ್ಮಮ್ಮ’. ಅವರ ಪೂರ್ವಜರು ಈಗಿನ ಆಂದ್ರಪ್ರದೇಶದ ‘ಮೋಕ್ಷಗುಂಡಂ’ ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡಂ ಸೇರಿಕೊಂಡಿದೆ. ವಿಶ್ವೇಶ್ವರಯ್ಯ ನವರ ತಂದೆ ಸಂಸ್ಕೃತ ವಿದ್ವಾಂಸರು.ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ಅವರು ೧೫ ವರ್ಷದವರಿರುವಾಗಲೆ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ೧೮೮೧ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.

ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ
ಸರ್ ಎಂ. ವಿಶ್ವೇಶ್ವರಯ್ಯ

ವಿಶ್ವೇಶ್ವರಯ್ಯನವರು ನಂತರ ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು. ಇದಾದ ಮೇಲೆ ಭಾರತೀಯ ನೀರಾವರಿ ಆಯೋಗದಿಂದ ಅವರಿಗೆ ಆಮಂತ್ರಣ ಬಂದಿತು. ಈ ಆಯೋಗವನು ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ. ವಿ. ಯವರು ಅರ್ಥರ್ ಕಾಟನ್ ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚನಾಪಳ್ಳಿಯಲ್ಲಿ ಚೋಳ ರಾಜರಿಂದ ನಿರ್ಮಿಸಲ್ಪಟ್ಟ ಹಾಗೂ ೧೮ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟುನ್ನು ನೋಡಿ ಪ್ರಭಾವಿತರಾಗಿದ್ದರು. ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ‘ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ’ ವೂಂದನ್ನು ಕಂಡು ಹಿಡಿದು ಅದಕ್ಕಾಗಿ ‘ಪೇಟೆಂಟ್’ ಪಡೆದರು. ಮೊದಲ ಬಾರಿಗೆ ೧೯೦೩ ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ ‘ಖಡಕ್ವಾಸ್ಲಾ’ ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ ‘ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು’ ಮತ್ತು ಕರ್ನಾಟಕದ ‘ಕೃಷ್ಣರಾಜಸಾಗರ’ ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು. ಕೃಷ್ಣರಾಜ ಸಾಗರವನ್ನು ಕಟ್ಟಿದಾಗ ಅದು ಆ ಕಾಲದಲ್ಲಿ ಭಾರತದ ಅತ್ಯಂತ ದೊಡ್ಡ ಅಣೆಕಟ್ಟು. ವಿಶ್ವೇಶ್ವರಯ್ಯನವರು ದೇಶದಾದ್ಯಂತ ಪ್ರಸಿದ್ಧರಾದದ್ದು ಹೈದರಾಬಾದ್ ನಗರವನ್ನು ಪ್ರವಾಹಗಳಿಂದ ರಕ್ಷಿಸಲು ಪ್ರವಾಹ ರಕ್ಷಣಾ ವ್ಯವಸ್ಥೆಯನ್ನು ಅವರು ಏರ್ಪಡಿಸಿದಾಗ.

ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ
ಸರ್ ಎಂ ವಿಶ್ವೇಶ್ವರಯ್ಯ

೧೯೦೮ರಲ್ಲಿ ಅತ್ಯಂತ ಕೆಟ್ಟ ಪ್ರವಾಹ ಏರಿ ಬಂದು, ಹೈದರಾಬಾದಿಗೆ ಎಲ್ಲಿಲ್ಲದ ಹಾನಿಯಾಯಿತು. ವಿದೇಶ ಪ್ರವಾಸದಲ್ಲಿದ್ದ ವಿಶ್ವೇಶ್ವರಯ್ಯ ಅವರಿಗೆ ಹೈದರಾಬಾದಿನ ನಿಜಾಮರಿಂದ ತುರ್ತು ಕರೆ ಹೋಯಿತು. ತಮ್ಮ ವಿದೇಶ ಯಾತ್ರೆಯನ್ನು ಪೂರ್ಣಗೊಳಿಸದೆಯೇ ಹಿಂದಿರುಗಿ ಬಂದ ವಿಶ್ವೇಶ್ವರಯ್ಯ ಅವರು, ಅಂದಿನ ಹೈದರಾಬಾದನ್ನು ಪ್ರವಾಹದಿಂದ ರಕ್ಷಿಸಲು ಯೋಜನೆಗಳನ್ನು ತಯಾರಿಸಿಕೊಟ್ಟರು. ಅಂದಿನ ಹೈದರಾಬಾದ್ ನಗರದಿಂದ ಹದಿನಾರು ಮೈಲಿಗಳಾಚೆಗೆ ಓಸ್ಮಾನ್ ಸಾಗರ ಮತ್ತು ಹಿಮಾಯತ್ ಸಾಗರಗಳನ್ನು ನಿರ್ಮಿಸಲು ಕಾರಣರಾದರು. ನಗರದ ಒಳಚರಂಡಿ, ನೀರ್ಗಾಲುವೆಗಳ ವ್ಯವಸ್ಥೆಯನ್ನೂ ನಿರೂಪಿಸಿದರು. ಒಂದು ಕಾಲಕ್ಕೆ ಅಬ್ಬರಿಸಿ ಹರಿದ ಮುಸಿಯನ್ನು ಪಳಗಿಸಿ ಆಧುನಿಕ ಹೈದರಾಬಾದಿನ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಕಾರಣರಾದರು.

೧೯೦೮ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ ಕೃಷ್ಣರಾಜ ಒಡೆಯರ್ ರವರ ಜೊತೆ ಮೈಸೂರು ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. ೧೯೧೭ ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು (ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್). ಮೈಸೂರು ವಿಶ್ವವಿದ್ಯಾಲಯದ ಬೆಳವಣಿಗೆಗಾಗಿಯೂ ಶ್ರಮಿಸಿದರು.

ವಿಶ್ವೇಶ್ವರಯ್ಯನವರು ದಿವಾನರಾಗಿದ್ದಾಗ ಬ್ರಿಟೀಷ ಸರ್ಕಾರ ಅವರಿಗೆ “ಸರ್” ಪದವಿಯನ್ನು ನೀಡಿತು.
೧೯೫೫ ರಲ್ಲಿ ಭಾರತ ಸರ್ಕಾರದ ಅತ್ಯುಚ್ಚ ಗೌರವವಾದ ಭಾರತ ರತ್ನ ಲಭಿಸಿತು. ಸರ್. ಎಂ. ವಿಶ್ವೇಶ್ವರಯ್ಯನವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು.
ಕರ್ನಾಟಕದಲ್ಲಿ ಹೆಚ್ಚಿನ ಶಾಲಾ ಕಾಲೇಜುಗಳು, ಐ.ಟಿ.ಐ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಿಗೆ ಇವರ ಹೆಸರಿಟ್ಟು ಗೌರವಿಸಲಾಗಿದೆ.

ಭಾರತ ದೇಶದಲ್ಲಿ ಮೊದಲ EDUSAT ತರಗತಿಗಳನ್ನು ಆರಂಭಿಸಿದ ಕೀರ್ತಿ ಬೆಳಗಾವಿಯಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸಲ್ಲುತ್ತದೆ. ಇದರ ಮುಖ್ಯ ಉದ್ದೇಶ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ನೀಡುವುದು. ಕರ್ನಾಟಕದಲ್ಲಿನ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳು ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂಗವಾಗಿವೆ.
ಇಂಜಿನಿಯರ್ ಕ್ಷೇತ್ರದಲ್ಲಿ ಇವರು ಸಲ್ಲಿಸಿರುವ ಅಪಾರ ಸೇವೆಯ ಸ್ಮರಣೆಗಾಗಿ ಇವರ ಜನ್ಮ ದಿನವನ್ನು(ಸೆಪ್ಟೆಂಬರ್ ೧೫) ಭಾರತದಲ್ಲಿ ಪ್ರತಿವರ್ಷ ಇಂಜಿನಿಯರ್ಸ್ ದಿನವಾಗಿ ಆಚರಿಸಲಾಗುತ್ತದೆ.

ಸರ್ ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆಗಳು :

  • ಕೃಷ್ಣರಾಜಸಾಗರದ ನಿರ್ಮಾಣ.
  • ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಚೇರಮನ್ನರಾಗಿ ಅದರ ಅಭಿವೃದ್ಧಿಗೆ ಕೊಡುಗೆ.
  • ಮೈಸೂರು ಸಾಬೂನು ಕಾರ್ಖಾನೆಯ ಸ್ಥಾಪನೆ
  • ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ.
  • ಮೈಸೂರು ಬ್ಯಾಂಕ್ ಸ್ಥಾಪನೆ.
  • ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ.
  • ಮೈಸೂರು ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ.
  • ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ.
  • ಶ್ರೀ ಜಯಚಾಮರಾಜೇಂದ್ರ ವೃತ್ತಿಶಿಕ್ಷಣ ತರಬೇತಿ ಸಂಸ್ಥೆಯ ಸ್ಥಾಪನೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

  1. Die Lotto Scanner App kann für iOS im Apple Store und für Android im Google Play Store direkt heruntergeladen werden. Während Euromillions in weniger Ländern als EuroJackpot gespielt wird, zahlt es einen etwas größeren Jackpot-Preis. Sie müssen auch fünf Zahlen von 1 bis 50 auswählen, aber die speziellen Zahlen reichen von 1 bis 12. Ziehungen finden zweimal pro Woche jeden Freitag und Dienstag statt. Falls Sie eine der 13 Gewinnstufen gewinnen, können Sie sich von Ihrer bevorzugten Lotterieseite zurückziehen. Der Bonus bei TheLotter ist mit normalen Kriterien, wie sie beispielsweise für Casinos angelegt werden, eigentlich kaum angemessen zu bewerten. Schließlich handelt es sich bei TheLotter um ein ganz anderes Glücksspiel-Konzept, das sich deutlich von dem der Online Casinos unterscheidet. Dementsprechend ist der Bonus nach TheLotter Erfahrungen auch eher als eine Art Gutschrift zu verstehen, der im besten Fall mehrere Millionen und im schlechtesten Fall nichts wert sein kann. Wer gern online Lotto spielen möchte, sollte diese Chance dementsprechend ruhig wahrnehmen, denn zu verlieren gibt es bei dieser Aktion praktisch nichts.
    https://dados.teresopolis.rj.gov.br/user/betmaybeandeatht1976
    Ähnliche Artikel Vorbei sind die Tage wo man nur in Online Casinos am PC spielen konnte. Nun könnt ihr ganz flexibel und praktisch mobil mit einer Online Casino App auch auf die Online Casino Slots zugreifen, und das in einer wirklich guten Qualität. Eine gute Nachricht an alle Slot Spieler: Da Online Spielautomaten den größten Teil von Online Casinos ausmachen, sind auch die meisten Slots in der mobilen App vertreten. SlotoZilla ist Ihre spezialisierte Plattform für kostenlose Spielautomaten. Auf unserer Webseite bieten wir eine große Auswahl an Online Automatenspielen, die jeder Besucher kostenlos ausprobieren kann. Insgesamt haben wir über 400 verschiedene gratis Spiele ohne Download für Sie bereit. An Vielfalt wird es Ihnen also nicht mangeln. Niedrige Volatilitäten in Online Slots sind also das genaue Gegenteil: Niedrige Auszahlungen, die öfter auftauchen. Dann gibt es auch noch mittlere Volatilitäten, die für die meisten Spieler am besten ausfallen. Beziehe bei diesen Aspekt gern in deine Spielautomaten Tipps mit ein, aber mache ihn nicht zum wichtigsten Punkt. Schlussendlich sollst du noch immer Spielen, was dir am meisten Spaß macht.

ಹರಿ ಭಕ್ತ ಪ್ರಹ್ಲಾದ

ಹರಿ ಭಕ್ತ ಪ್ರಹ್ಲಾದ

ಸತಿ ಸಾವಿತ್ರಿ

ಸತಿ ಸಾವಿತ್ರಿ ಕಥೆ