ಕ್ರಿಸ್ಮಸ್ ಎಂದರೆ ಕ್ರಿಸ್ತ ಜಯಂತಿ ಅಥವಾ ಯೇಸುಕ್ರಿಸ್ತನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸುಕ್ರಿಸ್ತನ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ.
ಹಬ್ಬ ಡಿಸೆಂಬರ್ 25, ಆದರೆ ಕ್ರಿಸ್ಮಸ್ ಹಬ್ಬದ ತಯಾರಿ ಒಂದು ವಾರ ಮುಂಚೆ ಶುರುವಾಗಿರುತ್ತದೆ ಮತ್ತು 25ರ ನಂತರ ಕೂಡ ನಡೆಯುತ್ತಲೇ ಇರುತ್ತದೆ.
ಡಿಸೆಂಬರ್ 25 ರಂದು ಬಹುಪಾಲು ಕ್ರಿಶ್ಚಿಯನ್ನರು ಆಚರಿಸುತ್ತಾರೆ. ಆದರೆ ಆರಂಭಿಕ ಕ್ರಿಶ್ಚಿಯನ್ನರು ಅವನ ಜನ್ಮವನ್ನು ಆಚರಿಸಲಿಲ್ಲ, ಮತ್ತು ಯೇಸು ನಿಜವಾಗಿ ಯಾವ ದಿನಾಂಕದಂದು ಜನಿಸಿದನೆಂದು ಯಾರಿಗೂ ತಿಳಿದಿಲ್ಲ.
ಚಕ್ರವರ್ತಿ ಕಾನ್‌ಸ್ಟಂಟೈನ್‌ನ ಆಳ್ವಿಕೆಯಲ್ಲಿ ರೋಮ್‌ನಲ್ಲಿರುವ ಚರ್ಚ್ 336 ರಲ್ಲಿ ಡಿಸೆಂಬರ್ 25 ರಂದು ಕ್ರಿಸ್‌ಮಸ್ ಅನ್ನು ಔಪಚಾರಿಕವಾಗಿ ಆಚರಿಸಲು ಪ್ರಾರಂಭಿಸಿತು. ಕಾನ್ಸ್ಟಂಟೈನ್ ಕ್ರಿಶ್ಚಿಯನ್ ಧರ್ಮವನ್ನು ಸಾಮ್ರಾಜ್ಯದ ಪರಿಣಾಮಕಾರಿ ಧರ್ಮವನ್ನಾಗಿ ಮಾಡಿದ್ದರಿಂದ, ಈ ದಿನಾಂಕವನ್ನು ಆಯ್ಕೆಮಾಡುವುದು ಸ್ಥಾಪಿತ ಪೇಗನ್ ಆಚರಣೆಗಳನ್ನು ದುರ್ಬಲಗೊಳಿಸುವ ರಾಜಕೀಯ ಉದ್ದೇಶವನ್ನು ಹೊಂದಿದೆ ಎಂದು ಕೆಲವರು ಊಹಿಸಿದ್ದಾರೆ. ಪೂರ್ವ ಸಾಮ್ರಾಜ್ಯದಲ್ಲಿ ದಿನಾಂಕವು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿಲ್ಲ, ಅಲ್ಲಿ ಜನವರಿ 6 ರಂದು ಒಲವು ಹೊಂದಿತ್ತು, ಮತ್ತೊಂದು ಅರ್ಧ ಶತಮಾನದವರೆಗೆ, ಮತ್ತು 9 ನೇ ಶತಮಾನದವರೆಗೂ ಕ್ರಿಸ್ಮಸ್ ಪ್ರಮುಖ ಕ್ರಿಶ್ಚಿಯನ್ ಹಬ್ಬವಾಗಲಿಲ್ಲ.
ಕ್ರಿಸ್ಮಸ್ನ ಸಂಭ್ರಮವು ಒಂದು ದಿನ ಮುಂಚಿತವಾಗಿ ಅಂದರೆ ಡಿಸೆಂಬರ್ 24 ರಿಂದ ಪ್ರಾರಂಭವಾಗುತ್ತದೆ. ಕ್ರಿಶ್ಚಿಯನ್ ಧರ್ಮದ ಜನರು ಈ ದಿನವನ್ನು ಯೇಸುಕ್ರಿಸ್ತನ ಜನ್ಮದಿನವೆಂದು ಆಚರಿಸುತ್ತಾರೆ. ಭಾರತದಲ್ಲಿಯೂ ಕ್ರಿಶ್ಚಿಯನ್ ಧರ್ಮದ ಜೊತೆಗೆ ಎಲ್ಲಾ ಧರ್ಮದ ಜನರು ಕ್ರಿಸ್‌ಮಸ್ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ.
ಕ್ರೈಸ್ತ ಸುವಾರ್ತೆಯ ಪ್ರಕಾರ ಯೇಸುಕ್ರಿಸ್ತನು ಮೇರಿ ಮತ್ತು ಜೋಸೆಫರ ಮಗನಾಗಿ ಇಂದು ಇಸ್ರೇಲ್ನಲ್ಲಿರುವ ಬೆತ್ಲಹೆಮ್ ಎಂಬ ಊರಿನಲ್ಲಿ ಹುಟ್ಟಿದ. ಆಗ ಮೇರಿ ಮತ್ತು ಜೋಸೆಫ್ ದಂಪತಿಯು ರೋಮನ್ ಜನಗಣತಿಯಲ್ಲಿ ನೋಂದಾಯಿಸಲು ಅಲ್ಲಿಗೆ ಹೋಗಿದ್ದರು. ಜುಡಾಯಿಸಮ್ನ, ಯಹೂದ್ಯ ಧರ್ಮ ಪ್ರಕಾರ ಪ್ರವಾದನೆಗಳನ್ನು ನೆರವೇರಿಸಲು ಡೇವಿಡ್ನ ವಂಶದಲ್ಲಿ ಮೆಸ್ಸಾಯ ಬರುವನೆಂಬ ನಂಬಿಕೆಯಿದೆ. ಆ ಮೆಸ್ಸಾಯ ಬೇರಾರೂ ಅಲ್ಲ ಸ್ವತಃ ಯೇಸುಕ್ರಿಸ್ತನೇ ಎಂದು ಕ್ರೈಸ್ತರು ಭಾವಿಸುತ್ತಾರೆ. ಗ್ರೀಕ್ ಲಿಪಿಯಲ್ಲಿ ಕ್ರಿಸ್ತನ ಮೊದಲಕ್ಷರವು ಇಂಗ್ಲಿಷಿನ ಎಕ್ಸ್ ನಂತೆ ತೋರುವುದರಿಂದ ಕೆಲವರು ಕ್ರಿಸ್ಮಸ್ ಅನ್ನು ಎಕ್ಸ್ ಮಸ್ ಎಂದೂ ಬರೆಯುತ್ತಾರೆ.
ಒಂದು ಕಾಲದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮತ್ತು ಕ್ರೈಸ್ತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಆದರೆ ಇಂದು ಪ್ರಪಂಚದಾದ್ಯಂತ ಆಚರಿಸುವ ಹಬ್ಬವಾಗಿ ಇದು ಮಾರ್ಪಟ್ಟಿದೆ. ಜನರನ್ನು ಪಾಪದಿಂದ ಮುಕ್ತಗೊಳಿಸಲು ಮತ್ತು ಜನರಿಗೆ ಒಳಿತನ್ನು ಮಾಡಲು ದೇವರು ತನ್ನ ಮಗನನ್ನು ಭೂಮಿಗೆ ಕಳುಹಿಸಿದನು ಮತ್ತು ಜನರನ್ನು ಪಾಪದಿಂದ ಮುಕ್ತಗೊಳಿಸುವ ಹೋರಾಟದಲ್ಲಿ ಯೇಸು ಕ್ರಿಸ್ತನು ತನ್ನ ಪ್ರಾಣವನ್ನು ತ್ಯಾಗ ಮಾಡಿದನು ಎಂಬ ನಂಬಿಕೆ ಕ್ರಿಸ್‌ಮಸ್ ಹಬ್ಬದ ಕುರಿತು ಇದೆ.
ಕ್ರಿಸ್ಮಸ್ ಒಂದು ಸಾರ್ವತ್ರಿಕ ರಜಾದಿನವೂ ಹೌದು. ಕ್ರೈಸ್ತ ಜನಸಂಖ್ಯೆ ಕಡಿಮೆ ಇರುವ ಜಪಾನ್ನಂತಹ ದೇಶಗಳನ್ನೂ ಒಳಗೊಂಡು ವಿಶ್ವದ ಹಲವೆಡೆ ಕ್ರಿಸ್ಮಸ್ ವರ್ಷದ ರಜಾದಿನ. ಜೀಸಸ್ನ ನಿಜವಾದ ಹುಟ್ಟಿದ ದಿನಾಂಕ ಹಾಗೂ ಐತಿಹಾಸಿಕತೆಯ ಬಗ್ಗೆ ಹಲವು ವಾದಗಳಿವೆ. ಕ್ರಿಸ್ತನ ಹುಟ್ಟುಹಬ್ಬವನ್ನು ನಿರ್ಧರಿಸುವ ಯತ್ನ ಕ್ರಿಸ್ತಶಕ ಎರಡನೆ ಶತಮಾನದಿಂದ ಆರಂಭವಾಯಿತು. ಕ್ರೈಸ್ತ ಚರ್ಚ್ ಇದೇ ಕಾಲದಲ್ಲಿ ತನ್ನ ಸಂಪ್ರದಾಯಗಳನ್ನು ಸ್ಥಾಪಿಸಲು ಯತ್ನಿಸುತ್ತಿತ್ತು. ಆಗಿನ ಕಾಲದ ಸುಮಾರು ಎಲ್ಲ ಮುಖ್ಯ ಚರ್ಚ್ಗಳೂ ಕ್ರಿಸ್ತ ಹುಟ್ಟಿದ ದಿನಾಂಕ ಡಿಸೆಂಬರ್ ೨೫ ಎಂದು ಒಪ್ಪಿಕೊಂಡವು. ಸಾಮಾನ್ಯವಾಗಿ ಎಲ್ಲ ಕ್ರೈಸ್ತ ದೇಶಗಳಲ್ಲೂ ಕ್ರಿಸ್ಮಸ್ ಹಬ್ಬವನ್ನು ಕ್ರಿಸ್ಮಸ್ ದಿನ ಮಾತ್ರವಲ್ಲದೆ ಅದರ ಆಚೀಚೆ ಕೆಲವು ದಿನಗಳನ್ನೂ ಸೇರಿಸಿಕೊಂಡು ಆಚರಿಸಲಾಗುತ್ತದೆ.
ಕ್ರಿಸ್ಮಸ್ ಜೊತೆಗೆ ಈ ಕೆಳಕಂಡ ಆಚರಣೆಗಳೂ ರೂಢಿಯಲ್ಲಿವೆ.
*ಮನೆಯಲ್ಲಿ ಪುಟ್ಟದಾದ ಕೊಟ್ಟಿಗೆ ಕಟ್ಟಿ ಕ್ರಿಸ್ತಜನನದ ಗೊಂಬೆಗಳನ್ನಿಡುವುದು
*ಕ್ರಿಸ್ಮಸ್ ವೃಕ್ಷ ಇಟ್ಟು ಅಲಂಕರಿಸುವುದು
*ಮಿಸಲ್ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುವುದು
*ಕ್ರಿಸ್ಮಸ್ಸಿಗೆಂದೇ ತಯಾರಿಸಿದ ವಿಶಿಷ್ಟ ತಿಂಡಿಗಳನ್ನು ಹಾಗೂ ಉಡುಗೊರೆಗಳನ್ನು ಹಂಚುವುದು
*ಸಾಂಟಾ ಕ್ಲಾಸ್, ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್ಮಸ್ನ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂಟಾ ಕ್ಲಾಸ್ ಬರುತ್ತಾನೆ ಎಂಬುದು ಜನಪ್ರಿಯ ನಂಬುಗೆ.
*”ಸಾಂಟಾ ಕ್ಲಾಸ್” ಎಂಬುದು “ಸಂತ ನಿಕೋಲಾಸ್” ಎಂಬುದರ ಅಪಭ್ರಂಶ.
ಸಂತ ನಿಕೋಲಾಸ್ ನಾಲ್ಕನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸಂತ ನಿಕೋಲಾಸ್ ಪ್ರಸಿದ್ಧ. ಹಾಗಾಗಿ ಪ್ರತಿ ವರ್ಷ ಕ್ರಿಸ್ಮಸ್ ದಿನದಂದು ಆತನೇ ಉಡುಗೊರೆ ತಂದುಕೊಡುತ್ತಾನೆ ಎಂದು ಮಕ್ಕಳಿಗೆ ಹೇಳಲಾಗುತ್ತದೆ.
*ಎಲ್ಲ ಮನೆಗಳಲ್ಲೂ ಒಂದು ಕ್ರಿಸ್ಮಸ್ ವೃಕ್ಷವನ್ನು ತಂದು ನಿಲ್ಲಿಸುವುದು ವಾಡಿಕೆ. ಈ ವೃಕ್ಷವನ್ನು ದೀಪಗಳು ಮತ್ತು ಇತರ ವಸ್ತುಗಳಿಂದ ಅಲಂಕೃತಗೊಳಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಮನೆಯ ಹೊರಗೂ ದೀಪಗಳ ತೋರಣ ಕಟ್ಟುವುದು ವಾಡಿಕೆ. ಹಾಗೆಯೇ ಮನೆಯ ಹೊರಗೆ “ಹಿಮದ ಮನುಷ್ಯ” ಮೊದಲಾದ ಅಲಂಕಾರಗಳೂ ಸಾಮಾನ್ಯ. ಹಾಗೆಯೇ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕೆಲವು ಹೂವುಗಳು ಮತ್ತು ಸಸ್ಯಗಳು ಮೊದಲಾದವುಗಳನ್ನು ತರಲಾಗುತ್ತದೆ.
ಧನ್ಯವಾದಗಳು.
GIPHY App Key not set. Please check settings