in

ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜನ್ಮದಿನ

ಎಸ್.ನಿಜಲಿಂಗಪ್ಪ
ಎಸ್.ನಿಜಲಿಂಗಪ್ಪ

ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರವಹಿಸಿ, ಅದರ ಯಶಸ್ಸಿಗೆ ಶಕ್ತಿಮೀರಿ ದುಡಿದ ಎಸ್. ನಿಜಲಿಂಗಪ್ಪನವರು, ಕರ್ನಾಟಕದ ಮೊದಲ ಮುಖ್ಯಮಂತ್ರಿಯಾಗಿ ಹಾಗೂ ಇನ್ನಿತರ ರಾಜಕೀಯ ಹುದ್ದೆಗಳಲ್ಲಿ ಯಶಸ್ಸನ್ನು ಗಳಿಸಿದವರು.

ರಾಷ್ಟ್ರ ನಾಯಕ ಸಿದ್ದವ್ವನಹಳ್ಳಿ ನಿಜಲಿಂಗಪ್ಪ – ಡಿಸೆಂಬರ್ ೧೦, ೧೯೦೨, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು ಎಂಬ ಚಿಕ್ಕಹಳ್ಳಿಯೊಂದರ ಮಧ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ ಎಸ್. ನಿಜಲಿಂಗಪ್ಪನವರು ಶಾಂತ ಸ್ವಭಾವಕ್ಕೆ ಮತ್ತು ಸಜ್ಜನಿಕೆಗೆ ಪ್ರಸಿಧ್ಧರಾದ ದೇಶಪ್ರೇಮಿ ಮತ್ತು ರಾಜಕಾರಣಿ.

ಕೃಷಿ ಪ್ರಧಾನವಾದ ಬಡ ಕುಟುಂಬವೊಂದರಲ್ಲಿ ಜನಿಸಿದ ನಿಜಲಿಂಗಪ್ಪ, ತಮ್ಮ ಬದುಕಿನ ಕೊನೆಯ ದಿನಗಳವರೆಗೂ ಸ್ಪಂದಿಸಿದ್ದು ಜನಸಾಮಾನ್ಯರ ಕಷ್ಟ ಸುಖಗಳಿಗೆ.

ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜನ್ಮದಿನ
ನಿಜಲಿಂಗಪ್ಪನವರ ಸ್ಮಾರಕ ಅಂಚೆ ಚೀಟಿ

ಚಿಕ್ಕಂದಿನಲ್ಲಿ ತಮ್ಮ ಹಳ್ಳಿಯ “ವೀರಪ್ಪ ಮಾಸ್ತರ” ರಿಂದ ಸಾಂಪ್ರದಾಯಿಕ ವಾಗಿ ಅಕ್ಷರಾಭ್ಯಾಸ ಮಾಡಿದ ನಿಜಲಿಂಗಪ್ಪನವರು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ೧೯೨೪ರಲ್ಲಿ ಪದವೀಧರರಾಗಿ ಉತ್ತೀರ್ಣರಾದರು.೧೯೨೧-೧೯೨೪ ರ ಅವಧಿಯಲ್ಲಿ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ವಿಧ್ಯಾರ್ಥಿ ನಿಲಯದ ವಿಧ್ಯಾರ್ಥಿಗಳಾಗಿದ್ದರು. ಶ್ರೀ ಬಸವೇಶ್ವರ ಮತ್ತು ಶಿವಶರಣರ ನೀತಿ-ಸಾಧನೆಗಳನ್ನು ಅಭ್ಯಾಸಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ನಿಜಲಿಂಗಪ್ಪನವರು, ಗಾಂಧೀಜಿಯವರ ವಿಚಾರಧಾರೆಯಿಂದಲೂ ಪ್ರಭಾವಿತರಾದರು. ಚಿತ್ರದುರ್ಗವನ್ನು ತಮ್ಮ ಕರ್ಮಭೂಮಿಯಾಗಿ ಸ್ವೀಕರಿಸಿದ ನಿಜಲಿಂಗಪ್ಪನವರು; ಅಂದಿನ ಚಿತ್ರದುರ್ಗ ಜಿಲ್ಲೆಯ ಏಳಿಗೆಗಾಗಿ ಶ್ರಮವಹಿಸಿದ್ದಾರೆ.

ರಾಜಕೀಯ ಜೀವನ ಪ್ರಾರಂಭವಾದದ್ದು 1936ರಲ್ಲಿ. ಡಾ.ಎನ್‌.ಎಸ್‌.ಹರ್ಡಿಕರ್‌ರೊಡನೆ ಸಂಪರ್ಕ ಬೆಳೆಸಿ ಸಂಘಟನೆಯ ಕೆಲಸದಲ್ಲಿ ತೊಡಗಿಕೊಂಡು ನಂತರ ಪ್ರದೇಶ ಕಾಂಗ್ರೆಸ್‌ ಕಮಿಟಿಯ ಅಧ್ಯಕ್ಷರಾದರು. 1968ರಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾದರು. ನಿಜಲಿಂಗಪ್ಪನವರು ಮೈಸೂರು ಕಾಂಗ್ರೆಸ್ಸಿನ ಅಧ್ಯಕ್ಷರಾದ ನಂತರ 1968ರಿಂದ 1971ರ ತನಕ ಭಾರತೀಯ ರಾಷ್ಟ್ರೀಯ ಕಾಂಗೆಸ್ಸಿನ ಅಧ್ಯಕ್ಷರಾಗಿದ್ದರು. 1946-1950ರ ತನಕ ಸಂವಿಧಾನ ಸಭೆಯ ಸದಸ್ಯರಾಗಿದ್ದರು. ಚಿತ್ರದುರ್ಗ ಕ್ಷೇತ್ರದಿಂದ ಪ್ರತಿನಿಧಿಸಿ ಕೇಂದ್ರ ಸಂಸತ್ತಿನ ಸದಸ್ಯರಾದರು. ಅವರನ್ನು ಆಧುನಿಕ ಕರ್ನಾಟಕದ ನಿರ್ಮಾಣಕಾರರೆಂದು ಕರೆಯಲಾಗುತ್ತದೆ. ಅವರು ವ್ಯವಸಾಯ, ನೀರಾವರಿ, ಕೈಗಾರಿಕೆ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ವಿಶೇಷ ಅಭಿವೃದ್ಧಿಯನ್ನು ಮಾಡಿದರು.

ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ನಿಜಲಿಂಗಪ್ಪ ನವರು ಎರಡು ಅವಧಿಗಳಿಗೆ ೪ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಎಸ್. ನಿಜಲಿಂಗಪ್ಪ ನವರನ್ನು ನವಕರ್ನಾಟಕದ ನಿರ್ಮಾತೃ ಎಂದು ಕರ್ನಾಟಕದ ಜನತೆ ನೆನೆಪಿಸಿಕೊಳ್ಳುತ್ತಾರೆ. ಶರಾವತಿ ಜಲವಿದ್ಯುತ್ ಯೋಜನೆ ಮತ್ತುಕಾಳಿ ವಿದ್ಯುತ್ ಯೋಜನೆಯ ಪ್ರಮುಖ ರೂವಾರಿ ಇವರಾಗಿದ್ದಾರೆ. ಕನಾ ಸನ್ಮಾನ್ಯ ಶ್ರೀ ನಿಜಲಿಂಗಪ್ಪನವರು ಚಿತ್ರದುರ್ಗದಲ್ಲಿ ಹೆಸರಾಂತ ವಕೀಲರೂ, ನಡೆನುಡಿಗಳ ಸಂಗಮರೆಂದು ಪ್ರಖ್ಯಾತರಾಗಿದ್ದ ನನ್ನ ತ್ತತನವರಾದ ಶ್ರೀ ಸಿ.ಚೆನ್ನಕೇಶವಯ್ಯನವರ ಬಳಿ ನೆಚ್ಚಿನ ಶಿಷ್ಯನಾಗಿ ವಕೀಲಿ ವೃತ್ತಿ ಆರಂಭಿಸಿದರು. 

ಶ್ರೀಯುತ ಚೆನ್ನಕೇಶವಯ್ಯನವರು ತಮ್ಮ ೫೫ನೇ ವಯಸ್ಸಿನಲ್ಲಿ ತಮ್ಮ ವಕೀಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಹೊಂದಿದಾಗ ತಮ್ಮ ಬಳಿ ಇದ್ದ ಎಲ್ಲ್ ಕೇಸ್ ಗಳನ್ನೂ ನಿಜಲಿಂಗಪ್ಪನವರೂ ಸೇರಿ ಮಿಕ್ಕ ತಮ್ಮ ಶಿಷ್ಯರಿಗೆ ಹಂಚಿದರಂತೆ. ಇದು ತುಂಬಾ ಅಪರೂಪದ ವಿಶೇಷವಲ್ಲವೇ ? ನಂತರ ಶ್ರೀ ನಿಜಲಿಂಗಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ತಮ್ಮ ಗುರುಗಳಾದ ನನ್ನ ತಾತನವರಾದ ಚೆನ್ನಕೇಶವಯ್ಯನವರು ಅಷ್ಟುಹೊತ್ತಿಗೆ ಬೆಂಗಳೂರು ಬಸವನಗುಡಿಯಲ್ಲಿ ಇದ್ದ ನಮ್ಮ ಮನೆಗೆ ಅಂದೇ ಮಧ್ಯಾನ್ಹವೇ ಬಂದು ಚೆನ್ನಕೇಶವಯ್ಯನವರಿಗೆ ನಮಸ್ಕರಿಸಿ ವಿನಮ್ರರಾಗಿ ನಿಂತೇ ಹೀಗೆ ಹೇಳಿದರು – ” ರಾಯರೇ, ಇಂದು ತಮ್ಮ ಆಶೀರ್ವಾದದಿಂದ ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿ ಇದೀಗ ಪ್ರಮಾಣವಚನ ಸ್ವೀಕರಿಸಿದೆ. ತಮ್ಮ ಆಶೀರ್ವಾದಕ್ಕಾಗಿ ಬಂದಿದ್ದೇನೆ. ಒಂದು ಬಿನ್ನಹ – ನನ್ನಿಂದ ತಮಗೇನು ಸೇವೆ ಮಾಡಲು ಬೇಕಾದರೂ ನಾನು ಸಿದ್ಧ, ತಾವು ಏನು ಬೇಕಾದರೂ ಅಪ್ಪಣೆಯಾಗಲೀ” ಎಂದರು. ಕೂಡಲೇ ನನ್ನ ತಾತನವರು ” ತುಂಬಾ ಸಂತೋಷ, ಮಾರಾಯ ನನಗೆ ದೇವರು ಏನೂ ಕಡಿಮೆ ಮಾಡಿಲ್ಲ, ಆದ್ದರಿಂದ ನನಗೇನೂ ಬೇಡ, ನೀನು ಪ್ರಾಮಾಣಿಕವಾಗಿ ದೇಶಸೇವೆ ಮಾಡು ಅಷ್ಟೇ ನನಗೆ ಸಾಕು ” ಎಂದರು. ಆದರೂ ಶ್ರೀ ನಿಜಲಿಂಗಪ್ಪನವರು ತಾತನವರನ್ನು ಒತ್ತಾಯಿಸಿದ್ದರಿಂದ , ” ಹಾಗಾದರೆ ಇಲ್ಲೇ ಹತ್ತಿರ ಬಸವನಗುಡಿಯಲ್ಲಿ ಒಂದು ದೊಡ್ಡ ಗಣೇಶ ದೇವಸ್ಥಾನವಿದೆ. ಅಲ್ಲಿ ದೇವರಿಗೆ ಅಭಿಷೇಕ ಮಾಡಲು ಕೊಳಾಯಿ ವ್ಯವಸ್ಠೆ ಇಲ್ಲದ್ದರಿಂದ ತುಂಬಾ ದೂರದಿಂದ ಒಂದೇ ಕೊಡ ತಂದು ಅಭಿಷೇಕ ಮಾಡುತ್ತಿದ್ದಾರೆ. ಆದ್ದರಿಂದ ಒಂದು ಕೊಳಾಯಿ ಹಾಕಿಸು ” ಎಂದರು. ಎಲ್ಲಿದೆ ದಯಮಾಡಿ ಈಗಲೇ ತೋರಿಸಿ ಎಂದರು. ನಾನು, ನಮ್ಮ ತಾತ ಶ್ರೀ ನಿಜಲಿಂಗಪ್ಪನವರ ಕಾರ್ ನಲ್ಲೇ ಹೋಗಿ ತೋರಿಸಲಾಯಿತು. ಕೂಡಲೇ ಎರಡೇ ದಿನದಲ್ಲಿ ಬಸವನಗುಡಿಯ ದೊಡ್ಡಗಣೇಶನಿಗೆ ಸಮೃದ್ಧಿ ಜಲಕ ಸ್ನಾನ ಲಭ್ಯವಾಯಿತು.

ಕರ್ನಾಟಕದ ಮೊದಲ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಜನ್ಮದಿನ
ನಿಜಲಿಂಗಪ್ಪನವರು

ನಿಜಲಿಂಗಪ್ಪನವರ ಮತ್ತೊಂದು ಪ್ರಮುಖವಾದ ಕೆಲಸವೆಂದರೆ, ಟಿಬೇಟ್ ಸಮುದಾಯದವರಿಗೆ ಕರ್ನಾಟಕದಲ್ಲಿ ಆಶ್ರಯ ಒದಗಿಸಿದ್ದು. ಕರ್ನಾಟಕದಲ್ಲಿನ ಟಿಬೇಟಿಯನ್ನರು ಮನಗಳಲ್ಲಿ ನಿಜಲಿಂಗಪ್ಪನವರು ಸದಾ ನೆಲೆಸಿರುತ್ತಾರೆ. ಈ ಕಾರಣಕ್ಕಾಗಿಯೇ, ಚಿತ್ರಗುರ್ಗದಲ್ಲಿನ ಅವರ ಸ್ಮಾರಕವನ್ನು ‘ದಲಾಯಿ ಲಾಮ’ರವರು ಉದ್ಘಾಟಿಸಿದರು.

೧೯೩೬ರಲ್ಲಿ ತಮ್ಮ ರಾಜಕೀಯ ಜೀವನವನ್ನು ತಡವಾಗಿಯೇ ಪ್ರಾರಂಭಿಸಿದ ನಿಜಲಿಂಗಪ್ಪನವರು, ಎನ್.ಎಸ್. ಹರ್ಡೀಕರರ ಸಹಾಯದಿಂದ ಕಾಂಗ್ರೆಸ್ ಸೇರಿದರು.

ಪ್ರಾರಂಭದಲ್ಲಿ ಸಾಮಾನ್ಯ ಸದಸ್ಯನಾಗಿ ಸೇರಿ ನಂತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಕೊನೆಗೆ ೧೯೬೮ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಾರ್ಟಿಯ ಅಧ್ಯಕ್ಷರಾದರು. ಇಂದಿರಾ ಗಾಂಧಿಯವರ ಜೊತೆ ರಾಜಕೀಯ ಭಿನ್ನಾಭಿಪ್ರಾಯ ಹೊಂದಿದ ಕೆಲವು ಹಿರಿಯ ಕಾಂಗ್ರೆಸ್ ನಾಯಕರೊಡನೆ ಸೇರಿ ಕಾಂಗ್ರೆಸ ಪಕ್ಷದ ಸ್ಥಾಪನೆಗೆ ಕಾರಣವಾದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮ

ದಾಂಡೇಲಿ : ರಾಜ್ಯದಲ್ಲಿಯೇ ಎರಡನೇ ದೊಡ್ಡ ವನ್ಯಜೀವಿಧಾಮ

ನೆತ್ತಿಯ ಮೇಲಿನ ಮೊಡವೆಗಳಿಗೆ ಕಾರಣ

ನೆತ್ತಿಯ ಮೇಲಿನ ಮೊಡವೆಗಳಿಗೆ ಕಾರಣ ಮತ್ತು ಕೆಲವೊಂದು ಮನೆಮದ್ದುಗಳು