in

ನಿಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯವನ್ನು ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ನಿಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯವನ್ನು ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಸಿರಿಧಾನ್ಯಗಳು ಎಂದರೆ ಏನು ಮತ್ತು ಅವು ಯಾವುವು ಎಂದು ಕೇಳುವ ಪರಿಸ್ಥಿತಿ ಇಂದು ನಮ್ಮದಾಗಿದೆ ಏಕೆಂದರೆ ಅವುಗಳ ಪರಿಚಯವೇ ಇಲ್ಲವಲ್ಲ. ನಮ್ಮ ಬದಲಾದ ಜೀವನ ಶೈಲಿಯಿಂದ ಇಂತಹ ಎಷ್ಟೋ ವಿಚಾರಗಳನ್ನು ನಾವು ನಿರ್ಲಕ್ಷ ಮಾಡಿ, ನಮ್ಮದೇ ಆದ ಹಾದಿಯಲ್ಲಿ ಮುಂದೆ ಸಾಗುತ್ತಿದ್ದೇವೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದು ಈಗಾಗಲೇ ನಮ್ಮಲ್ಲಿ ಕೆಲವರಿಗೆ ಅನುಭವಕ್ಕೆ ಬಂದಿದೆ.


ಸಿರಿಧಾನ್ಯಗಳು ಪೋಷಕಾಂಶಗಳ ಆಗರ ನಾವು ಪ್ರತಿ ದಿನ ಸೇವಿಸುವ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಟಿಕಾಂಶಗಳ ಲಾಭವೇ ಹೆಚ್ಚು ಅತಿ ಕಡಿಮೆ ಕ್ಯಾಲೋರಿ ಪ್ರಮಾಣ, ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ, ಹೊಟ್ಟೆ ಹಸಿವು ಕಡಿಮೆಯಾಗುತ್ತದೆ, ಸಕ್ಕರೆ ಪ್ರಮಾಣದ ಅಂಶ ಕಡಿಮೆಯಾಗುತ್ತದೆ, ಹೃದಯದ ಸಮಸ್ಯೆಗಳನ್ನು ದೂರವಿಡಬಹುದು
ಇದು ನಾಲ್ಕು ದಶಕಗಳ ಹಿಂದಿನ ಮಾತು. ಆಗಿನ್ನೂ ಹಳ್ಳಿ ಮಾತ್ರವಲ್ಲ, ಪಟ್ಟಣದ ಮನೆಗಳ ಅಡುಗೆ ಕೋಣೆಗಳಲ್ಲೂ ರಾಗಿ, ನವಣೆ, ಸಾಮೆ, ಸಜ್ಜೆ, ಜೋಳ ಸೇರಿ ಹಲವಾರು ಸಿರಿಧಾನ್ಯಗಳಿದ್ದವು. ರಟ್ಟೆ ಮುರಿದು ದುಡಿಯುವ ರೈತರಿಗೆ ರೊಟ್ಟಿಯೇ ಪ್ರಧಾನ ಆಹಾರವಾಗಿತ್ತು. ಮುಂಜಾನೆದ್ದು ರಾಗಿ ಗಂಜಿ ಕುಡಿದರೆ ಅದುವೇ ತಿಂಡಿ, ಊಟಕ್ಕೆ ಜೋಳ, ರಾಗಿ, ಸಜ್ಜೆಯ ರೊಟ್ಟಿ, ನವಣೆಯ ಅನ್ನ ಸೇವಿಸುತ್ತಿದ್ದ ರೈತ ಗಟ್ಟಿಮುಟ್ಟಾಗಿ, ಆರೋಗ್ಯದಿಂದಿದ್ದ. ಆದರೆ ಆಧುನಿಕತೆಯ ಪ್ರಭಾವ ನ್ಮಮ ಹಳ್ಳಿ ಅಡುಗೆ ಕೋಣೆಗಳನ್ನೂ ಬಿಡಲಿಲ್ಲ. ಕೃಷಿ ವಿಜ್ಞಾನ, ವಿಜ್ಞಾನಿಗಳು ಸೃಷ್ಟಿಸಿದ ಹೊಸ ತಳಿಗಳು ಸಿರಿ ಧಾನ್ಯಗಳನ್ನು ಹಂತ ಹಂತವಾಗಿ ಹತ್ತಿಕ್ಕುತ್ತಾ ಬಂದವು. ದಿನ ಕಳೆದಂತೆ ಒಂದೊದೇ ಸಿರಿ ಧಾನ್ಯಗಳು ಅಡುಗೆ ಕೋಣೆಯಿಂದ ಹೊರ ದೂಡಲ್ಪಟ್ಟವು. ಅವುಗಳ ಸ್ಥಾನವನ್ನು ಹೈಬ್ರೀಡ್ ಕಾಳುಗಳು, ವಿದೇಶಿ ಧಾನ್ಯಗಳು ಆವರಿಸಿದವು. ರೊಟ್ಟಿ ಬಡಿಯುತ್ತಿದ್ದ ಕೈಗಳಿಗೆ ಲಟ್ಟಣಿಗೆ ಬಂದು, ಗೋಧಿಯ ಚಪಾತಿ ಲಟ್ಟಿಸುವ ಕೆಲಸ ಶುರುವಾಯಿತು. ಚಿತ್ರಾನ್ನ, ರೈಸ್ ಬಾತು, ಇಡ್ಲಿ ದೋಸೆ, ಪಡ್ಡು ಹೀಗೆ ಬಗೆಬಗೆಯ ತಿಂಡಿಗಳನ್ನು ಸೃಷ್ಟಿಸುವ ಅಕ್ಕಿಯು, ರಾಗಿ ಗಂಜಿಯ ಸ್ಥಾನವನ್ನು ಕಿತ್ತುಕೊಂಡಿತು. ಜೊತೆಗೆ ನವಣೆಗೆ ಗೇಟ್ಪಾಸ್ ಕೊಟ್ಟಿದ್ದು ಕೂಡ ಇದೇ ಬಿಳುಪು, ಬಿನ್ನಾಣದ ಹೈಬ್ರೀಡ್ ಅಕ್ಕಿ. ಈಗೇನಿದ್ದರೂ ಅಡುಗೆ ಮನೆಗಳಲ್ಲಿ ಹೈಬ್ರೀಡ್ ಹಾವಳಿ. ಪ್ರಸ್ತುತ ಮಧ್ಯ ಕರ್ನಾಟಕ, ಹಳೇ ಮೈಸೂರು ಭಾಗ ಮತ್ತು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉಳಿದಿರುವ ‘ಸಿರಿ’ ಎಂದರೆ ಜೋಳ ಮತ್ತು ರಾಗಿ ಎರಡೇ. ಅವುಗಳಲ್ಲೂ ಹೈಬ್ರೀಡ್ ತಳಿಗಳಿವೆ. ಜೊತೆಗೆ ಇವು ಹಳ್ಳಿ ಮನೆಗಳಿಗೆ ಸೀಮಿತವಾಗಿವೆ ಎಂಬುದೇ ವಿಪರ್ಯಾಸ!


ಸಿರಿಧಾನ್ಯದ ಉಪಯೋಗಳು :
ಸಿರಿಧಾನ್ಯದಲ್ಲಿ ಪ್ರೋಟಿನ್, ಕ್ಯಾಲ್ಸಿಯಂ, ಕೊಬ್ಬಿನಾಮ್ಲಗಳು, ಖನಿಜಾಂಶಗಳಾದ ಥಯಾಮಿನ್, ರಿಬೋಫ್ಲಾವಿನ್, ನಿಯಾಸಿನ್, ಪಿರಿಡಾಕ್ಸಿನ್, ವಿಟಮಿನ್ಸ್, ರಂಜಕ. ಮ್ಯಾಗನೀಸ್. ಕಬ್ಬಿಣಾಂಶ, ಪೊಟಾಶಿಯಂ, ಅಮೈನೋ ಆಮ್ಲ ಮುಂತಾದ ಅನೇಕ ಪೋಷಕಾಂಶ ಮತ್ತು ಸೂಕ್ಷ್ಮ ಪೋಷಕಾಂಶಗಳು ಅಡಗಿವೆ. ಇವು ದೇಹದ ಆರೋಗ್ಯಕ್ಕೆ ಸಹಕಾರಿಯಾಗಿವೆ.

ಸಿರಿಧಾನ್ಯಗಳ ಪಟ್ಟಿಗೆ ಸೇರುವ ಆಹಾರ ಪದಾರ್ಥಗಳು ಹಾಗೂ ಯಾವುವು ಅದರ ವೈಶಿಷ್ಟ್ಯತೆ ತಿಳಿಯೋಣ ಬನ್ನಿ.


ರಾಗಿ :

ನಿಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯವನ್ನು ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಸಿರಿಧಾನ್ಯಗಳಲ್ಲಿ ಒಂದಾಗರುವ ರಾಗಿಯನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ ಅದ್ಭುತ ಆರೋಗ್ಯ ಲಾಭ ಸಿಗುವುದು. ಇಂತಹ ರಾಗಿಯಲ್ಲಿ ಯಾವೆಲ್ಲಾ ಪೋಷಕಾಂಶಗಳು ಇವೆ ಎಂದರೆ ಅಕ್ಕಿ ಮತ್ತು ಬೇರೆ ಧಾನ್ಯಗಳಿಗೆ ಹೋಲಿಕೆ ಮಾಡಿದರೆ ಇದರಲ್ಲಿ ಆಹಾರದ ನಾರಿನಾಂಶವು ಹೆಚ್ಚಾಗಿದೆ. ಇದರಿಂದ ಜೀರ್ಣಕ್ರಿಯೆ ಸಂಬಂಧಿ ಸಮಸ್ಯೆಗಳೂ ದೂರವಾಗುವುದು. ರಾಗಿ ತಿಂದರೆ ಅದು ಹೊಟ್ಟೆ ತುಂಬಿದಂತೆ ಮಾಡುವುದು ಹಾಗೂ ಪದೇ ಪದೇ ತಿನ್ನುವುದನ್ನು ಇದು ಕಡಿಮೆ ಮಾಡುವುದು. ಪಾಲಿಫೆನಾಲ್ ಅಂಶವು ರಾಗಿಯಲ್ಲಿದ್ದು, ಇದು ಮಧುಮೇಹಿಗಳಿಗೆ ಒಳ್ಳೆಯದು. ತೂಕ ಇಳಿಸಿಕೊಳ್ಳಲು ಬಯಸುವವರು ರಾಗಿಯನ್ನು ಅನ್ನ ಮತ್ತು ಗೋಧಿ ಬದಲಿಗೆ ಬಳಕೆ ಮಾಡಬಹುದು. ಅಮಿನೋ ಆಮ್ಲವು ತೂಕ ಇಳಿಸಲು ಸಹಕಾರಿ ಆಗಿದೆ.

ಸಜ್ಜೆ :

ನಿಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯವನ್ನು ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಸಾಮಾನ್ಯವಾಗಿ, ಭಾರತದ ಉತ್ತರ ಮತ್ತು ದಕ್ಷಿಣ ಭಾರತೀಯರ ಸಜ್ಜೆ ರೊಟ್ಟಿ ತಯಾರಿಸಿ ತಿನ್ನುತ್ತಾರೆ. ಭಾರತವನ್ನು ಹೊರತುಪಡಿಸಿ, ಆಫ್ರಿಕಾದ ಜನರು ಸಹ ಇದನ್ನು ಬೆಳೆಯುತ್ತಾರೆ. ಮೆಕ್ಕೆ ಜೋಳ ಅಥವಾ ಗೋಧಿ ಬೆಳೆಯದ ಭೂಮಿಯಲ್ಲಿ ಸಜ್ಜೆಯನ್ನು ಸುಲಭವಾಗಿ ಬೆಳೆಯಬಹುದು. ಇದು ಆಮ್ಲೀಕರಣವನ್ನು ಸಹ ತಡೆದುಕೊಳ್ಳಬಲ್ಲದು. ಇದಲ್ಲದೆ ಸಜ್ಜೆಯನ್ನು ಗಂಜಿ ಮತ್ತು ಬಿಯರ್ ತಯಾರಿಸಲು ಬಳಸಲಾಗುತ್ತದೆ. ಇದಲ್ಲದೆ ಇದನ್ನು ಇಂಧನ ಮತ್ತು ಮೇವು ಎಂದೂ ಬಳಸಲಾಗುತ್ತದೆ. ಶೀತ ವಾತಾವರಣದಲ್ಲಿ ಸೇವಿಸುವ ಅತ್ಯುತ್ತಮ ಧಾನ್ಯ ಸಜ್ಜೆ, ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ.

ನವಣೆ :

ನಿಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯವನ್ನು ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ನವಣೆ ಹೆಚ್ಚು ನಾರಿನಾಂಶ ಹೊಂದಿರುವುದರಿಂದ ದೇಹದ ಕೊಬ್ಬು ಕಡಿಮೆ ಮಾಡಲು ಸಹಯಕಾರಿ. ಅಲ್ಲದೆ ಮಲಬದ್ದತೆ, ಮೂಲವ್ಯಾದಿ ಅಂತಹ ಕಾಯಿಲೆಗಳು ಬರದಂತೆ ತಡೆಯುತ್ತದೆ. ನವಣೆಯಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ, ಇದರಿಂದ ಮೈಗೆ ಬೇಕಾಗಿರುವ ಒಳ್ಳೆಯ ಕೊಲೆಸ್ಟರಾಲ್ ಪ್ರಮಾಣ ಹೆಚ್ಚುತ್ತದೆ. ನವಣೆಯಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ಏರಿಸುವ ಅಂಶ ಕಡಿಮೆ ಪ್ರಮಾಣದಲ್ಲಿರುವುದರಿಂದ ಸಕ್ಕರೆ ರೋಗಿಗಳಿಗೆ ಸೂಕ್ತ ಆಹಾರ

ಅರಕ :

ನಿಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯವನ್ನು ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಅರಕವನ್ನು ಸಹ ಹಲವಾರು ಸಾವಿರ ವರ್ಷಗಳ ಹಿಂದಿನಿಂದಲೂ ಬೆಳೆಯಲಾಗುತ್ತಿದೆ. ಇದು ಹೆಚ್ಚಿನ ಪ್ರಮಾಣದಲ್ಲಿ ಲೆಸಿಥಿನ್ ಹೊಂದಿದೆ ಮತ್ತು ನರಮಂಡಲವನ್ನು ಬಲಪಡಿಸಲು ಅತ್ಯುತ್ತಮ ಆಹಾರವಾಗಿದೆ. ಇದು ಬಿ ವಿಟಮಿನ್ಗಳು, ವಿಶೇಷವಾಗಿ ನಿಯಾಸಿನ್, ಬಿ 6 ಮತ್ತು ಫೋಲಿಕ್ ಆಮ್ಲ, ಹಾಗೂ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಖನಿಜಗಳಿಂದ ಕೂಡಿದೆ.
ಅರಕದ ಸಾಂಪ್ರದಾಯಿಕ ಪಾಕವಿಧಾನಗಳು: ಉಪ್ಪಿಟ್ಟು, ಇಡ್ಲಿ, ಪಲಾವ್ / ಬಿರಿಯಾನಿ ಮತ್ತು ಗಂಜಿ.

ಕೊರಲೆ :

ನಿಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯವನ್ನು ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಕೊರಲೆ ತಿಂದು ಕೊರಗೋದು ಬಿಡು, ಕೊರಲೆ ಅಪರೂಪದ ಸಿರಿಧಾನ್ಯ. ಬ್ರೌನ್ಟಾಪ್ ಮಿಲ್ಲೆಟ್ ಇಂಗ್ಲಿಷ್ ಹೆಸರು. ಉತ್ತಮ ಮೇವಿನ ಬೆಳೆ. ಟರ್ಕಿ ಕೋಳಿ, ಡಕ್, ಜಿಂಕೆ, ಮೊಲ ಮುಂತಾದ ಸಾಕು ಪಕ್ಷಿ-ಪ್ರಾಣಿಗಳ ಕಾಳಿಗಾಗಿ ಬೇರೆ ದೇಶಗಳಲ್ಲಿ ಬೆಳೆಯುತ್ತಾರೆ. ಕಾಡು ಪ್ರಾಣಿಗಳಿಂದ ಮುಖ್ಯ ಬೆಳೆ ರಕ್ಷಿಸಲೂ ಅಂಚಿನ ಬೆಳೆಯಾಗಿ ಕೊರಲೆ ಬಳಕೆಯಲ್ಲಿದೆ. ಪಕ್ಷಿ ವೀಕ್ಷಕರು ಕೊರಲೆ ಕಾಳು ಹರಡಿ ಹಕ್ಕಿ ಆಕರ್ಷಿಸಿ ಫೋಟೋ ತೆಗೆಯುತ್ತಾರಂತೆ!
ತುಮಕೂರು, ಚಿತ್ರದುರ್ಗ ಮತ್ತು ಅನಂತಪುರ ಜಿಲ್ಲೆಗಳಲ್ಲಿ ಮಾತ್ರ ಇದು ಕಂಡುಬರುತ್ತದೆ. ಕೇವಲ ಎರಡೂವರೆ ತಿಂಗಳಿಗೆ ಕುಯಿಲಿಗೆ ಬರುವ, ಬರ ನಿರೋಧಕ ಗುಣ ಹೊಂದಿದ, ಬರಡು ಮಣ್ಣಿನಲ್ಲೂ ಬೆಳೆಯಬಲ್ಲ ಧಾನ್ಯ ಇದು.
ಇದರ ಗುಣ: ಪ್ರೋಟೀನ್(14.4), ನಾರಿನಂಶ (18.35), ಖನಿಜಾಂಶ (ಇಲ್ಲ), ಕಬ್ಬಿಣ (10), ಕ್ಯಾಲ್ಸಿಯಂ (0.12).

ಊದಲು :

ನಿಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯವನ್ನು ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಬಾರ್ನ್ ಯಾರ್ಡ್ ಮಿಲೆಟ್ ಇದರ ಇಂಗ್ಲಿಷ್ ಹೆಸರು. ಜಪಾನ್ ಮೂಲದ್ದಂತೆ. ಇದರ ತೆನೆಯು ನೋಡಲು ಕುದುರೆ ಬಾಲದ ರೀತಿ ಕಾಣುವುದರಿಂದ ತಮಿಳುನಾಡಿನಲ್ಲಿ ಇದನ್ನು ‘ಕುದುರೆ ವಾಲಿ’ ಹೆಸರಿನಿಂದ ಕರೆಯುತ್ತಾರಂತೆ.
ಇದರ ಗುಣ:ಪ್ರೋಟೀನ್(11.2) , ನಾರಿನಂಶ(10.1), ಖನಿಜಾಂಶ(4.4), ಕಬ್ಬಿಣ(15.2), ಕ್ಯಾಲ್ಸಿಯಂ(11).

ಬರಗು :

ನಿಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯವನ್ನು ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಬರಗು ಅಷ್ಟೇನು ಪರಿಚಯವಿಲ್ಲದ ಸಣ್ಣ ಸಿರಿಧಾನ್ಯವಾಗಿದ್ದು ಹೆಚ್ಚಾಗಿ ಒಣ ಹವೆಯಲ್ಲಿ ಬೆಳೆಯಲಾಗುತ್ತದೆ, ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆಗೊಳಿಸುವುದಲ್ಲಿ ನೇರವಾಗಿ ಹೃದಯರಕ್ಷಕ ಗುಣ ಹೊಂದಿದೆ, ಗರಿಷ್ಟ ಪೋಷಕಾಂಶಗಳನ್ನು ಉಳಿಸಿಕೊಳ್ಳಲು ಕನಿಷ್ಟ ಸಂಸ್ಕರಣೆ, ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ, ಪಾಲಿಫಿನಾಲ್ಗಳು ಮತ್ತು ಕ್ಯಾರೋಟಿನಾಯ್ಡ್ ಗಳಂತಹ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧ, ವಿಟಮಿನ್ ಬಿ6 ಮತ್ತು ಫೋಲಿಕ್ ಆಸಿಡ್ನ ಸಮೃದ್ಧ ಮೂಲ

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ನಿಮಗೂ ಕೂದಲು ಉದುರುತ್ತಿದೆಯಾ? ಇಲ್ಲಿದೆ ಕೂದಲು ಉದುರುವಿಕೆಗೆ ಸುಲಭ ಪರಿಹಾರ

ನಿಮಗೂ ಕೂದಲು ಉದುರುತ್ತಿದೆಯಾ? ಇಲ್ಲಿದೆ ಕೂದಲು ಉದುರುವಿಕೆಗೆ ಸುಲಭ ಪರಿಹಾರ

ಗಾನಕೋಗಿಲೆ ಲತಾ ಮಂಗೇಷ್ಕರ್

ಗಾನಕೋಗಿಲೆ ಲತಾ ಮಂಗೇಷ್ಕರ್