in

ವಿಧಾನಸೌಧ : ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ

ವಿಧಾನಸೌಧ
ವಿಧಾನಸೌಧ

ವಿಧಾನಸೌಧವು ಕರ್ನಾಟಕದ ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ. ಇದರ ನಿರ್ಮಾಣವು ಮಾಜಿಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಆಡಳಿತದ ಅವಧಿಯಲ್ಲಿ ನಿರ್ಮಾಣವಾಯಿತು. ವಿಧಾನಸೌಧಕ್ಕೆ 1951 ಜುಲೈ 13ರಂದು ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್‌ ನೆಹರು ಶಂಕುಸ್ಥಾಪನೆ ಮಾಡಿದರು. ೧೯೫೨ರಲ್ಲಿ ಪ್ರಾರಂಭವಾದ ಕಟ್ಟಡ ನಿರ್ಮಾಣ ಕಾರ್ಯವು ಪೂರ್ಣಗೊಳ್ಳಲು ನಾಲ್ಕು ವರ್ಷಗಳಾದವು. ೫೦೦೦ಕ್ಕೂ ಹೆಚ್ಚು ಕೆಲಸಗಾರರು ಈ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸಾರ್ವಜನಿಕ ಕಾರ್ಯಗಳ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್‌ ಹಾಗೂ ವಾಸ್ತುಶಿಲ್ಪಿಯಾಗಿದ್ದ ಮಾಣಿಕ್ಯಂ ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಂಡರು. ಇದರ ವಾಸ್ತುಶಿಲ್ಪವು ಮೈಸೂರು ದ್ರಾವಿಡ ಶೈಲಿ ಎಂದು ಕೆಲವರು ಕರೆಯುತ್ತಾರೆ. ಈ ಕಟ್ಟಡದ ವಾಸ್ತುಶೈಲಿಯಲ್ಲಿ ಇಂಡೋ ಸಾರ್ಸೆನಿಕ್ ಮತ್ತು ದ್ರಾವಿಡ ಶೈಲಿಯ ಹಲವಾರು ಅಂಶಗಳು ಆಡಕವಾಗಿದೆ. ಕರ್ನಾಟಕದ ಗೆಜೆಟ್‌ ಪ್ರಕಾರ ಅಂದು ವಿಧಾನಸೌಧ ಕಟ್ಟಲು ತಗುಲಿದ ವೆಚ್ಚ ₹ 1.75ಕೋಟಿ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಭಾಗಗಳಲ್ಲಿ ಪ್ರವೇಶದ್ವಾರಗಳಿದ್ದು ಎತ್ತರವಾದ ಕೆತ್ನೆಯುಳ್ಳ ಕಂಬಗಳು ಕಟ್ಟಡಕ್ಕೆ ವಿಶೇಷ ಮೆರುಗು ತಂದುಕೊಟ್ಟಿವೆ. ಕಟ್ಟಡದ ಮೇಲ್ಭಾಗದಲ್ಲಿ ಕಣ್ಸೆಳೆವ ಗೋಪುರಗಳೂ ಇವೆ.

ವಿಧಾನಸೌಧ : ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ
ವಿಧಾನಸೌಧ ಮುಖ್ಯ ಗೋಪುರ

ಮುಖ್ಯ ಗೋಪುರದ ಮೇಲ್ಭಾಗದಲ್ಲಿ ಚಿತ್ತಾರಗಳ ಮಧ್ಯೆ ಅಶೋಕಸ್ತಂಭವನ್ನೂ ಸ್ಥಾಪಿಸಲಾಗಿದೆ. ಗೋಪುರಗಳು ಇಂಡೋ ಇಸ್ಲಾಮಿಕ್‌ ಅಂಶಗಳನ್ನು ಒಳಗೊಂಡಿದ್ದು ಕಟ್ಟಡದ ಉಳಿದ ಭಾಗಗಳಿಗೆ ಸಂಬಂಧ ಕಲ್ಪಿಸುವಂತೆ ನಾಲ್ಕೂ ಮೂಲೆಯಲ್ಲಿ ಚಿಕ್ಕದಾದ ಗೋಪುರನ್ನು ನಿರ್ಮಿಸಲಾಗಿದೆ.

ಆಯಾತಾಕಾರದಲ್ಲಿ ನಿರ್ಮಿಸಲಾದ ಕಟ್ಟಡದ ಒಳಭಾಗದಲ್ಲಿಯೂ ಸಾಕಷ್ಟು ಗಾಳಿ– ಬೆಳಕು ಇರುವಂತೆ ಗಮನ ನೀಡಲಾಗಿದೆ. ವಿಸ್ತಾರವಾದ ಹಜಾರ ಕೂಡ ಇಲ್ಲಿಯ ಆಕರ್ಷಣೆ.

ಬಾಲ್ಕನಿಗಳಿಗೆ ರಾಜಸ್ತಾನಿ ಶೈಲಿಯ ಮೆರುಗು ಇದೆ. ಬೆಟ್ಟಹಲಸೂರಿನಿಂದ ತರಿಸಲಾದ ಕಲ್ಲುಗಳಿಗೆ ಬಣ್ಣಗಳ ಲೇಪನವಿಲ್ಲದೆ ಮೂಲ ರೂಪವನ್ನೇ ಉಳಿಸಿಕೊಂಡಿರುವುದು ಕಟ್ಟಡದ ಭವ್ಯತೆಯನ್ನು ಹೆಚ್ಚಿಸಿದೆ.

ವಿಧಾನಸೌಧದ ಬಾಗಿಲುಗಳು, ಕಿಟಕಿಗಳಿಗೆ ಬಳಕೆಯಾಗಿರುವುದು ಹುಣಸೂರು ತೇಗ. ಅವುಗಳಲ್ಲಿನ ಕೆತ್ತನೆ, ನೀಡಲಾದ ಪಾಲಿಶ್‌ ಮೆರುಗು ಎಲ್ಲರ ಗಮನ ಸೆಳೆಯುತ್ತಿವೆ.

ಸರ್ಕಾರದ ಸಚಿವಾಲಯ ಹಾಗೂ ಶಾಸಕಾಂಗ ಎರಡೂ ಒಂದೇ ಕಡೆ ಇರುವುದು ಕಟ್ಟಡದ ವಿಶೇಷ. ಇಂಥ ವ್ಯವಸ್ಥೆ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಸುಮಾರು 700 ಅಡಿ ಉದ್ದ ಹಾಗೂ 350 ಅಡಿ ಅಗಲ ಹೊಂದಿರುವ ವಿಧಾನಸೌಧದಲ್ಲಿ ಒಟ್ಟು ನಾಲ್ಕು ಮಹಡಿಗಳಿವೆ.

ಒಂದನೇ ಮಹಡಿಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್‌ ಸಭಾಂಗಣಗಳಿದ್ದು ವಿಶಾಲವಾಗಿದೆ. ದೊಡ್ಡದಾದ ಈ ಸಭಾಂಗಣದ ಮಧ್ಯಭಾಗದಲ್ಲಿ ಒಂದೂ ಕಂಬ ಇಲ್ಲದಿರುವುದು ಇನ್ನೊಂದು ವಿಶೇಷ.

ಪ್ರತಿ ಮಹಡಿಯಲ್ಲಿಯೂ ನಲವತ್ತರಿಂದ ನಲವತ್ತೈದು ಕೊಠಡಿಗಳಿದ್ದು 3ನೇ ಮಹಡಿಯಲ್ಲಿ ಕ್ಯಾಬಿನೆಟ್‌ ಹಾಲ್‌ ಹಾಗೂ ಕಾನ್‌ಫರೆನ್ಸ್‌ ಹಾಲ್‌ ಇದೆ.

ವಿಧಾನಸೌಧ : ವಿಧಾನ ಮಂಡಲದ ಸಭೆ ನಡೆಯುವ ಕಟ್ಟಡ
ಹೈಕೋರ್ಟ್‌

ಎದುರಿನಲ್ಲಿ ಹೈಕೋರ್ಟ್‌ ಹಾಗೂ ಉತ್ತರದಲ್ಲಿ ರಾಜಭವನ ಇದೆ. ಇಟ್ಟಿಗೆ ಹಾಗು ಕಲ್ಲುಗಳ ಅದ್ಭುತ ಕಾಮಗಾರಿಯನ್ನು ಹೊಂದಿರುವ, ರಾಜ್ಯಸಚಿವಾಲಯವೂ ಆಗಿರುವ ಬೆಂಗಳೂರಿನ ವಿಧಾನ ಸೌಧವು ಭೇಟಿ ನೀಡಲೇ ಬೇಕಾದ ಒಂದು ಸ್ಥಳ. ಕಟ್ಟಡವು 46ಮಿ. ಎತ್ತರವಾಗಿದ್ದು ಬೆಂಗಳೂರಿನ ಎತ್ತರದ ಕಟ್ಟಡಗಳಲ್ಲಿ ಒಂದಾಗಿದೆ. ಕಟ್ಟಡವು ದ್ರಾವಿಡಿಯನ್ ಮತ್ತು ಆಧುನಿಕ ಶೈಲಿಯ ಕ್ರಿಯಾತ್ಮಕ ಮಿಶ್ರಣವಾಗಿದ್ದು, ಸಂದರ್ಶಕರಿಗೆ ನಿರಾಸೆಯನ್ನುಂಟು ಮಾಡುವುದಿಲ್ಲ. ಇದನ್ನು ಎಲ್ಲ ದಿಕ್ಕಿನಿಂದಲೂ ಕೂಡ ಸರಳವಾಗಿ ಪ್ರವೇಶಿಸಬಹುದು. ಸಾರ್ವಜನಿಕ ರಜಾ ದಿನಗಳು ಮತ್ತು ಪ್ರತಿ ಭಾನುವಾರ ಸಾಯಂಕಾಲದಂದು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ದೀಪಗಳಿಂದ ಸಿಂಗರಿಸಲ್ಪಡುವದರಿಂದ ಇನ್ನಷ್ಟು ಸುಂದರವಾಗಿ ಗೋಚರಿಸುತ್ತದೆ. ಸಾಮಾನ್ಯವಾಗಿ ಇದು ಪ್ರತಿದಿನ ಸಾಯಂಕಾಲ 6 ರಿಂದ 8.30 ರ ವರೆಗೆ ದೀಪಗಳಿಂದ ಬೆಳಗುವದರಿಂದ, ನೀವು ಇದನ್ನು ನೋಡುವುದನ್ನು ತಪ್ಪಿಸಿಕೊಳ್ಳಲೇ ಬಾರದು. ಇದು ಬೆಂಗಳೂರು ನಗರ ಜಂಕ್ಷನನಿಂದ 9 ಕಿ.ಮೀ. ದೂರದಲ್ಲಿದೆ. ಹಚ್ಚಹಸಿರಿನ ಕಬ್ಬನ್ ಪಾರ್ಕಿನ ಹತ್ತಿರದಲ್ಲಿರುವ ವಿಧಾನ ಸೌಧವು ಭೇಟಿ ನೀಡಲು ಯೋಗ್ಯವಾದ ಸ್ಥಳವಾಗಿದ್ದು, ಕ್ರಿಯಾತ್ಮಕ ವ್ಯಕ್ತಿಗಳು ಮಧುರತೆಯಿಂದ ದಿನ ಕಳೆಯಲು ಅತ್ಯಂತ ಸೂಕ್ತವಾಗಿದೆ.

ವಿಧಾನಸೌಧದ ಕಾರಿಡಾರ್ ಗಳಲ್ಲಿ ವಿಡಿಯೋ ಚಿತ್ರೀಕರಣ ಹಾಗೂ ಛಾಯಾಗ್ರಹಣವನ್ನು ಮಾಡುವುದನ್ನು ನಿರ್ಬಂಧಿಸಿ ಕರ್ನಾಟಕ ಸರ್ಕಾರ ಸಚಿವಾಲಯ ಸುತ್ತೋಲೆ ಹೊರಡಿಸಿದೆ.

ಈ ಸಂಬಂಧ ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ(ಕಾರ್ಯಕಾರಿ) ಇದರ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ರವೀಂದ್ರ ಸಚಿವರ ವಿಧಾನಸೌಧ ವಿಕಾಸಸೌಧದ ಕಚೇರಿಗಳಿಗೆ ಸುತ್ತೋಲೆ ಹೊರಡಿಸಿದ್ದು, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಕಲಾಪಗಳು ಹಾಗೂ ಇನ್ನಿತರೇ ಸಂದರ್ಭಗಳಲ್ಲಿ ಕೆಲವು ಪತ್ರಿಕಾ ಹಾಗೂ ವಿದ್ಯುನ್ಮಾನ ಮಾಧ್ಯಮದವರು ವಿಧಾನಸೌಧ ಕಟ್ಟಡದ ಕಾರಿಡಾರ್ ಗಳಲ್ಲಿ ವಿಡಿಯೋ ಚಿತ್ರೀಕರಣ ಛಾಯಾಗ್ರಹಣ ಮಾಡುತ್ತಿದ್ದು, ಹಲವಾರು ಬಾರಿ ಗಣ್ಯ ವ್ಯಕ್ತಿಗಳ ಸುಗಮ ಚಲನವಲನಕ್ಕೆ ಅಡ್ಡಿಯುಂಟಾಗಿರುವುದು ಗಮನಕ್ಕೆ ಬಂದಿದ್ದು, ಸುಗಮ ಚಲನೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳು ಹಾಗೂ ಸಚಿವರಿಂದ ಹೇಳಿಕೆಯನ್ನು ಪಡೆಯುವ ಸಲುವಾಗಿ ವಿಧಾನಸೌಧದ ಕೆಂಗಲ್ ದ್ವಾರದ ಬಳಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಇನ್ನುಮುಂದೆ ನಿರ್ದಿಷ್ಟಪಡಿಸಿದ ಜಾಗವನ್ನು ಹೊರತುಪಡಿಸಿ ಕಾರಿಡಾರ್ ಗಳಲ್ಲಿ ವಿಡಿಯೋ ಚಿತ್ರೀಕರಣ ಛಾಯಾಗ್ರಹಣವನ್ನು ನಿಷೇಧಿಸುವುದು ಸೂಕ್ತವೆಂಬ ಪ್ರಸ್ತಾವನೆಯು ಮುಖ್ಯಮಂತ್ರಿಯವರಿಂದ ಅನುಮೋದಿಸಲ್ಪಟ್ಟಿರುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

50 Comments

ಡಾ. ರಾಜ್‌ಕುಮಾರ್

ಕನ್ನಡ ಎಂದ ತಕ್ಷಣ ನೆನಪಾಗುವುದು ಮೊದಲು ಡಾ. ರಾಜ್‌ಕುಮಾರ್

ಮಗಳ ಮದುವೆಯ ಲಗ್ನ ಪತ್ರಿಕೆಯಲ್ಲಿ ಈ ತಂದೆ ಪ್ರಿಂಟ್ ಹಾಕಿಸಿದ್ದ ವಿಷಯ ನೋಡಿ ಸಂಬಂಧಿಕರು ಮೂರ್ಛೆ ಹೋದರು.

ಮಗಳ ಮದುವೆಯ ಲಗ್ನ ಪತ್ರಿಕೆಯಲ್ಲಿ ಈ ತಂದೆ ಪ್ರಿಂಟ್ ಹಾಕಿಸಿದ್ದ ವಿಷಯ ನೋಡಿ ಸಂಬಂಧಿಕರು ಮೂರ್ಛೆ ಹೋದರು.