ಕನ್ನಡ ಚಿತ್ರರಂಗದ ಮೇರುನಟ ಡಾಕ್ಟರ್ ರಾಜಕುಮಾರ್ ಸ್ಯಾಂಡಲ್ವುಡ್ನಲ್ಲಿ ದೊಡ್ಮನೆ ಎಂದೇ ಕರೆಯುವ ಅಣ್ಣಾವ್ರ ಕುಟುಂಬದ ಕುಡಿ ರಾಜಕುಮಾರ್ ಅವರ ಮೊಮ್ಮಗಳು ನಟ ರಾಮ್ ಕುಮಾರ್ ಅವರ ಮಗಳು ಧನ್ಯ ರಾಮ್ ಕುಮಾರ್ ಅವರ ವಿಚಾರವಾಗಿ ಇದೀಗ ಸಿಹಿ ಸುದ್ದಿಯೊಂದು ಹೊರ ಬಂದಿದೆ.
ಇನ್ನು ದೊಡ್ಮನೆ ಯಿಂದ ಹೆಣ್ಣು ಮಕ್ಕಳು ಯಾರು ಸಹ ಚಿತ್ರರಂಗಕ್ಕೆ ಕಾಲಿಟ್ಟಿರಲಿಲ್ಲ. ಅಂಡರ್ ಗ್ರೌಂಡ್ ಸಿನಿಮಾದಲ್ಲಿ ಶಿವಣ್ಣನ ಪುತ್ರಿ ಬಾಲ ಕಲಾವಿದೆಯಾಗಿ ಶಿವಣ್ಣನ ಮಗಳ ಪಾತ್ರವನ್ನು ನಿರ್ವಹಿಸಿ ಸಹಿ ಎನಿಸಿಕೊಂಡಿದ್ದ ರಂತೆ. ಆದರೆ ಅದರ ಬಳಿಕ ಮತ್ಯಾರು ಚಿತ್ರರಂಗಕ್ಕೆ ಮುಖ ಮಾಡಿರಲಿಲ್ಲ. ಆದರೆ ಆನಂತರ ಕೆಲ ವರ್ಷಗಳ ಹಿಂದೆ ರಾಮ್ ಕುಮಾರ್ ಅವರ ಮಗಳು ಧನ್ಯ ರಾಮ್ ಕುಮಾರ್
ಚಿತ್ರರಂಗಕ್ಕೆ ಕಾಲಿಡುವ ನಿರ್ಧಾರ ಮಾಡಿ ಸಕಲ ತಯಾರಿ ನಡೆಸಿ ನಿನ್ನ ಸನಿಹಕ್ಕೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ನೀಡಿದ್ದರು. ಈ ಸಿನಿಮಾದ ಮೂಲಕ ತಮ್ಮ ನಟನೆಯ ಮೂಲಕ ಧನ್ಯ ರಾಮ್ ಕುಮಾರ್ ತಾನೊಬ್ಬಳು ಉತ್ತಮ ಕಲಾವಿದ ಎಂದು ಸಾಬೀತು ಮಾಡಿದ್ದಾರೆ.
ಇನ್ನು ವಿಶೇಷ ಏನೆಂದರೆ ಡಾಕ್ಟರ್ ರಾಜಕುಮಾರ್ ಅವರ ಮನೆಯಿಂದ ಹೊರಬಂದ ಮೊದಲ ನಟಿ ಧನ್ಯ ರಾಮ್ ಕುಮಾರ್. ನಿನ್ನ ಸನಿಹಕ್ಕೆ ಸಿನಿಮಾದಲ್ಲಿನ ಅವರ ನಟನೆಗೆ ಅಭಿಮಾನಿಗಳಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾದ ಯಶಸ್ಸಿನ ನಂತರ ಧನ್ಯ ಅವರಿಗೆ ಕೆಲವು ಸಿನಿಮಾಗಳ ಅವಕಾಶಗಳು ಹುಡುಕಿಕೊಂಡು ಬಂದಿದೆ ಎನ್ನಲಾಗಿದೆ.
ಇನ್ನೂ ವಿಶೇಷ ಎಂದರೆ ಇದೀಗ ಧನ್ಯ ರಾಮ್ ಕುಮಾರ್ ಪರಭಾಷೆ ಸಿನಿಮಾಗಳಲ್ಲಿಯೂ ಕಾಲಿಡುತ್ತಿದ್ದಾರೆ. ಹೌದು ಕನ್ನಡದ ಜೊತೆಗೆ ಬೇರೆ ಭಾಷೆಗಳ ಸಿನಿಮಾಗಳ ಅವಕಾಶಗಳು ಸಹ ನಟಿ ಧನ್ಯ ಅವರಿಗೆ ಬರುತ್ತಿದ್ದು ನಟಿ ಧನ್ಯ ರಾಮ್ ಕುಮಾರ್ ಈಗಾಗಲೇ ಸಿನಿಮಾಗಳ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಶೀಘ್ರದಲ್ಲಿ ಸಿನಿಮಾಗಳ ಕುರಿತು
ಚಿತ್ರತಂಡ ಅಧಿಕವಾಗಿ ಘೋಷಣೆ ಮಾಡಲಿದೆ ಎನ್ನಲಾಗುತ್ತಿದೆ. ಇನ್ನು ಈ ನಟಿ ಕನ್ನಡದಲ್ಲಿ ನಿನ್ನ ಸನಿಹಕ್ಕೆ ನಂತರ ಕಾಲ ಪತ್ರ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಈ ಸಿನಿಮಾದ ಬಳಿಕ ತೆಲುಗು ಸಿನಿಮಾ ಸೆಟ್ಟೇರಲಿದೆ ಎನ್ನಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಆ ಸಿನಿಮಾಗಳ ಬಗ್ಗೆ ಸಹ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇನ್ನು ತನ್ನ ಈ ಸಿನಿಮಾ ಜರ್ನಿಯ ಬಗ್ಗೆ ಮಾತನಾಡಿ ಧನ್ಯ ಈ ಎಲ್ಲ ವಿಚಾರಗಳನ್ನು ಹಂಚಿಕೊಂಡಿದ್ದು ಡಾಕ್ಟರ್ ರಾಜಕುಮಾರ್ ಅವರ ಹೆಸರು ತುಂಬಾ ದೊಡ್ಡದು. ನಾನು ಆ ಹೆಸರನ್ನು ಉಳಿಸಬೇಕು ಎಂದಿದ್ದಾರೆ ನಟಿ ಧನ್ಯ ರಾಮ್ ಕುಮಾರ್.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.
GIPHY App Key not set. Please check settings