ಹಿಂದೂ ಮಾಸಿಕದ ಪ್ರಕಾರ ಅಕ್ಷಯ ತದಿಗೆಯು ವೈಶಾಖದ ಶುಕ್ಲ ಪಕ್ಷದ ಮೂರನೇ ದಿನದಂದು ಬರುತ್ತದೆ. ಮೇ 3ರಂದು ಹಬ್ಬವನ್ನು ಆಚರಿಸಲಾಗುತ್ತಿದ್ದು, ತಿಥಿಯ ಸಮಯ, ಹಬ್ಬದ ಮಹತ್ವ ಸೇರಿದಂತೆ ಪೂರ್ಣ ವಿವರ ಇಲ್ಲಿದೆ.
ಹಿಂದೂ ಮಾಸಿಕದ ಪ್ರಕಾರ ಅಕ್ಷಯ ತೃತೀಯವು ವೈಶಾಖದ ಶುಕ್ಲ ಪಕ್ಷದ ಮೂರನೇ ದಿನದಂದು ಬರುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಏಪ್ರಿಲ್ ಅಥವಾ ಮೇ ಆಸುಪಾಸಿನಲ್ಲಿ ಬರುತ್ತದೆ. ಈ ಹಬ್ಬವು ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದ್ದು, ಈ ವರ್ಷ, ಹಬ್ಬವನ್ನು 2022ರ ಮೇ 3ರಂದು ಆಚರಿಸಲಾಗುತ್ತದೆ.
ಹಿಂದೂ ಪುರಾಣಗಳ ಪ್ರಕಾರ, ತ್ರೇತಾಯುಗವು ಅಕ್ಷಯ ತೃತೀಯ ದಿನದಂದು ಪ್ರಾರಂಭವಾಯಿತು. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸುವುದರಿಂದ ಭವಿಷ್ಯದಲ್ಲಿ ಅದು ಅಕ್ಷಯವಾಗುತ್ತದೆ ಅರ್ಥಾತ್ ಸಮೃದ್ಧವಾಗುತ್ತದೆ ಎಂಬ ನಂಬಿಕೆ ಇದೆ. ಈ ಕಾರಣದಿಂದ ಜನರು ಈ ದಿನದಂದು ಚಿನ್ನದ ಆಭರಣಗಳನ್ನು ಖರೀದಿಸಲು ಬಯಸುತ್ತಾರೆ. ಅಕ್ಷಯ ತೃತೀಯ ದಿನದಂದು ದಾನ, ಯಜ್ಞದಂತಹ ಶುಭ ಕಾರ್ಯಗಳನ್ನು ಮಾಡುವ ವ್ಯಕ್ತಿಯು ಜೀವನದಲ್ಲಿ ಒಳ್ಳೆಯ ಫಲಿತಾಂಶಗಳನ್ನು ಪಡೆಯುತ್ತಾನೆ ಮತ್ತು ಅಂತಹವರು ಲಕ್ಷ್ಮಿ ದೇವಿಯು ಕೃಪೆಗೆ ಪಾತ್ರರಾಗುತ್ತಾರೆ ಎಂದೂ ನಂಬಲಾಗಿದೆ.
Как получить диплом техникума официально и без лишних проблем