ಅಪ್ಪು ಇಲ್ಲವಾಗಿ ಈಗ 6 ತಿಂಗಳು ಕಳೆದುಹೋಗಿದೆ. ಅಪ್ಪು ಇಲ್ಲದ ನೋವು ಈ ಸಮಯಕ್ಕೂ ಯಾರಿಂದಲೂ ಸಂಪೂರ್ಣವಾಗಿ ನಂಬಲು ಸಾಧ್ಯವಾಗುತ್ತಿಲ್ಲ. ಅಪ್ಪು ಆ ಬೆಟ್ಟದ ಹೂವು ಕಂಡಂತಹ ಕನಸುಗಳು ಸಾವಿರಾರು. ಅದೆಲ್ಲವನ್ನು ಒಂದೊಂದಾಗಿ ನನಸು ಮಾಡುತ್ತಿದ್ದ ಸಮಯದಲ್ಲೇ ಈ ರೀತಿ ಆಗಿದ್ದು, ನಿಜಕ್ಕು ಬಹಳ ನೋವಿನ ವಿಷಯ. ದೇವರು ಇನ್ನು ಸ್ವಲ್ಪ ಸಮಯ ಕಾಲಾವಕಾಶ ಕೊಡಬೇಕಿತ್ತು ಎಂದೇ ಎಲ್ಲರು ಭಾವಿಸುತ್ತಿದ್ದಾರೆ.
ಆದರೆ ಈಗ ಏನು ಮಾಡಲು ಸಾಧ್ಯವಿಲ್ಲ. ಅದೆಷ್ಟೋ ಕನಸುಗಳಿಂದ ಪಿ.ಆರ್.ಕೆ ಸಂಸ್ಥೆ ಶುರು ಮಾಡಿದ್ದರು ಅಪ್ಪು, ಈಗ ಆ ಎಲ್ಲಾ ಕನಸುಗಳನ್ನು ನನಸು ಮಾಡುವ ದೊಡ್ಡ ಜವಾಬ್ದಾರಿ ಅಶ್ವಿನಿ ಅವರ ಮೇಲಿದೆ. ಅಂತೆಯೇ ಅಪ್ಪು ಅವರ ಕನಸುಗಳನ್ನು ಒಂದೊಂದಾಗಿ ನನಸು ಮಾಡುತ್ತಾ ಬರುತ್ತಿದ್ದಾರೆ ಅಶ್ವಿನಿ.
ಇತ್ತೀಚೆಗೆ ಅಪ್ಪು ಅವರ ದೊಡ್ಡ ಕನಸಾಗಿದ್ದ ಗಂಧದಗುಡಿ ಟೈಟಲ್ ಟೀಸರ್ ಬಿಡುಗಡೆ ಮಾಡಿದರು, ಈಗಲೂ ಸಹ ಟೀಸರ್ ಬಹಳ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಅಭಿಮಾನಿಗಳು ಪದೇ ಪದೇ ಟೀಸರ್ ವೀಕ್ಷಣೆ ಮಾಡುತ್ತಿದ್ದಾರೆ. ಜೊತೆಗೆ ಅಪ್ಪು ಅವರ ಹುಟ್ಟುಹಬ್ಬದಂದು ಜೇಮ್ಸ್ ಸಿನಿಮಾ ಬಿಡುಗಡೆಯಾಯಿತು.
ಅಪ್ಪು ಅವರು ಇಲ್ಲದ ನೋವು ಅಭಿಮಾನಿಗಳಲ್ಲಿ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಕುಟುಂಬದವರಲ್ಲಿದೆ, ಅಪ್ಪು ಅವರ ಪತ್ನಿ ಅಶ್ವಿನಿ ಅವರು, ಮಕ್ಕಳಾದ ಧೃತಿ ಮತ್ತು ವಂದಿತಾ, ಹಾಗೂ ಅಣ್ಣಂದಿರ ಮತ್ತು ಇಡೀ ಕುಟುಂಬದಲ್ಲಿದೆ. ಯಾರು ಕೂಡ ಅಪ್ಪು ಅವರನ್ನು ನೆನೆಯದೇ ಒಂದು ದಿನವನ್ನು ಸಹ ಕಳೆಯುತ್ತಿಲ್ಲ, ಇಂದು ಅಪ್ಪು ಅವರ ಚಿಕ್ಕ ಮಗಳು ವಂದಿತಾ ಅವರ ಹುಟ್ಟುಹಬ್ಬ, ತಂದೆ ಇಲ್ಲದೆ ಮೊದಲ ಬಾರಿಗೆ ಹುಟ್ಟುಹಬ್ಬ ಆಚರಿಸಲು ಆ ಪುಟ್ಟ ಮನಸ್ಸಿಗೆ ಅದೆಷ್ಟು ನೋವಾಗಿರಬಹುದು ಎಂದು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ.
ಅಪ್ಪು ಅವರು ಇದ್ದಿದ್ದರೆ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆದರೆ ಈ ಬಾರಿ ಅಪ್ಪು ಅವರು ಇಲ್ಲ. ಆ ನೋವಿನ ಜೊತೆಯಲ್ಲೇ ವಂದಿತಾ ಹುಟ್ಟುಹಬ್ಬ ನಡೆದಿದೆ. ಇಂದು ರಾಘಣ್ಣ ಅವರು ತಮ್ಮನ ಮಗಳಿಗೆ ವಿಶ್ ಮಾಡಿ, ಸೋಷಿಯಲ್ ಮೀಡಿಯಾ ಮೂಲಕ ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ ರಾಘಣ್ಣ.
“ಹುಟ್ಟುಹಬ್ಬದ ಶುಭಾಶಯಗಳು ವಂದಿತಾ ಮಗಳೇ..ಅಪ್ಪ, ತಾತ ಹಾಗೂ ಅಜ್ಜಿಯ ಆಶೀರ್ವಾದ ಸದಾ ನಿನ್ನ ಮೇಲಿರಲಿ ಎಂದು ಆಶಿಸುತ್ತೇನೆ..” ಎಂದು ಬರೆದುಕೊಂಡಿದ್ದಾರೆ ರಾಘಣ್ಣ. ಇದರ ಜೊತೆಗೆ ಅಪ್ಪು ಅವರ ಮನೆಯಲ್ಲಿ ಸರಳವಾಗಿ ಅಪ್ಪು ಅವರ ಮಗಳ ಹುಟ್ಟು ಹಬ್ಬವನ್ನು ಆಚರಿಸಲಾಗಿದ್ದು, ರಾಘಣ್ಣ ಅವರು ಅಪ್ಪು ಮಗಳಿಗೆ ಒಂದು ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಫೋಟೋ ಸದ್ಯಕ್ಕೆ ವೈರಲ್ ಆಗಿದೆ. ವಂದಿತಾ ಈಗ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಅಕ್ಕನ ಹಾಗೆ ಅವರು ಸಹ ಚೆನ್ನಾಗಿ ಓದಿ, ಒಳ್ಳೆಯ ರೀತಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕು, ತಂದೆ ಹೇಳಿಕೊಟ್ಟ ದಾರಿಯಲ್ಲಿ ಸಾಗಬೇಕು ಅಂದುಕೊಂಡಿದ್ದಾರೆ. ವಂದಿತಾ ಅವರ ಹುಟ್ಟುಹಬ್ಬದಂದು ಅವರ ಮುಂದಿನ ಜೀವನ ಚೆನ್ನಾಗಿರಲಿ ಎಂದು ಆಶಿಸೋಣ.
ಇನ್ನೂ ವಂದಿತ ಅವರ ಹುಟ್ಟು ಹಬ್ಬದ ಆಚರಣೆಯ ಸಮಯದಲ್ಲಿ ಅಪ್ಪು ಅವರನ್ನು ನೆನೆದು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವುಕರಾಗಿದ್ದಾರೆ. ಮಗಳ ಹುಟ್ಟು ಹಬ್ಬಕ್ಕೆ ಅಶ್ವಿನಿ ಅವರು ಮಗಳಿಗೆ ಒಂದು ಸುಂದರವಾದ ವಜ್ರದ ನೆಕ್ ಲೆಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಪ್ಪು ಮಗಳಾದ ವಂದಿತ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
Hey! Do you know if they make any plugins to help with SEO?
I’m trying to get my site to rank for some targeted keywords but
I’m not seeing very good gains. If you know of any please share.
Appreciate it! You can read similar article here: Eco blankets