in

ಅಣ್ಣಾವ್ರ ಹುಟ್ಟುಹಬ್ಬಕ್ಕೆ ಪುನೀತ್ ಪತ್ನಿ ಅಶ್ವಿನಿ ಮಾಡಿದ ಕೆಲಸವೇನು ನೋಡಿ

ಅಣ್ಣಾವ್ರ ಹುಟ್ಟುಹಬ್ಬಕ್ಕೆ ಪುನೀತ್ ಪತ್ನಿ ಅಶ್ವಿನಿ ಮಾಡಿದ ಕೆಲಸವೇನು ನೋಡಿ

ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಸಿನಿ ರಂಗದ ಹೆಮ್ಮೆ .ಅಭಿಮಾನಿಗಳನ್ನೇ ದೇವರೆಂದು ಇವರು ಕರೆದರೆ ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಅಣ್ಣಾವ್ರು ಎಂದು ಕರೆಯುತ್ತಿದ್ದರು. ಇವರ ಕುಟುಂಬವನ್ನು ಕನ್ನಡ ಜನರು ದೊಡ್ಮನೆ ಎಂದೇ ಕರೆಯುತ್ತಾರೆ. ಹೆಸರಿಗೆ ಮಾತ್ರ ಇದು ದೊಡ್ಡಮನೆಯಾಗಿರದೆ ಇಲ್ಲಿರುವ ಅಣ್ಣಾವ್ರ ಮಕ್ಕಳು ಸಹ ಈ ರೀತಿ ದೊಡ್ಡ ಮನಸ್ಸಿನ ಗುಣವನ್ನು ಹೊಂದಿ ಒಳ್ಳೆಯ ರೀತಿಯಲ್ಲಿಯೇ ಉತ್ತಮವಾದ ಆದರ್ಶ ಪೂರ್ಣ ಜೀವನವನ್ನು ನಡೆಸುತ್ತಿದ್ದಾರೆ. ದೊಡ್ಮನೆ ಯಿಂದ ಸಮಾಜಕ್ಕೆ ಆಗುತ್ತಿರುವ ಹಲವಾರು ಸಹಾಯ ಗಳ ಬಗ್ಗೆ ಈಗಾಗಲೇ ಸಾಕಷ್ಟು ವಿಷಯಗಳು ವರದಿಯಾಗಿವೆ. ಆದರೆ ಪಬ್ಲಿಸಿಟಿ ಪಡೆಯದೆ ಇನ್ನೂ ಸಹ ಗುಟ್ಟಾಗಿ ಅದೆಷ್ಟೋ ಸಹಾಯಗಳು ದೊಡ್ಮನೆ ಕುಟುಂಬಸ್ಥರಿಂದ ಹಲವು ಜನರಿಗೆ ಸಿಗುತ್ತಲೇ ಇದೆ. ಅದರಲ್ಲಿ ಇತ್ತೀಚೆಗಷ್ಟೇ ನಿಧನಹೊಂದಿದ ನಮ್ಮ ಪುನೀತ್ ರಾಜಕುಮಾರ್ ಅವರು ಜನರ ಮೇಲೆ ಹೊಂದಿದ್ದ ಕಾಳಜಿ ಹಾಗೂ ಜನರ ಮೇಲೆ ಇಟ್ಟಿದ್ದ ಪ್ರೀತಿ ಯಾವ ಮಟ್ಟದ್ದು ಎಂದು ಅವರು ನಮ್ಮನ್ನು ಅಗಲಿ ಹೋದ ಕೆಲವೇ ದಿನಗಳಲ್ಲಿ ಎಲ್ಲರಿಗೂ ತಿಳಿದಿದೆ.

ಈಗ ಅದೇ ಹಾದಿಯಲ್ಲಿ ಅವರ ಮಾರ್ಗದರ್ಶನದಂತೆ ಅವರ ಪತ್ನಿಯೂ ಸಹ ನಡೆಯುತ್ತಿದ್ದಾರೆ ಎಂದೇ ಹೇಳಬಹುದು. ಅಣ್ಣಾವ್ರ ಹುಟ್ಟುಹಬ್ಬದ ದಿನದ ಪ್ರಯುಕ್ತ ಪುನೀತ್ ರಾಜಕುಮಾರ್ ಅವರ ಪತ್ನಿಯಾದ ಅಶ್ವಿನಿ ಅವರು ಡಾಕ್ಟರ್ ರಾಜಕುಮಾರ್ ಅವರ ಸ’ಮಾ’ಧಿ’ಗೆ ಭೇಟಿ ಕೊಟ್ಟ ನಂತರ ಪುನೀತ್ ಅವರ ಸ’ಮಾ’ಧಿ’ಯ ಬಳಿ ಹೋಗಿ ಪೂಜೆ ಮಾಡಿ ನಂತರ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ರಾಮನಗರದ ಬಳಿ ಇರುವ ಒಂದು ಅನಾಥಾಶ್ರಮಕ್ಕೆ ಭೇಟಿಕೊಟ್ಟಿರುವ ಅಶ್ವಿನಿ ಅವರು ಅಲ್ಲಿರುವ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಿ ಒಂದು ತಿಂಗಳು ಆಗುವಷ್ಟು ರೇಷನ್ ಅನ್ನು ಕೊಟ್ಟು ನಂತರ ಎಲ್ಲರಿಗೂ ಹಬ್ಬದ ಅಡುಗೆ ಮಾಡಿಸಿ ಕೊಟ್ಟಿದ್ದಾರೆ. ಪುನೀತ್ ಅವರು ಇದ್ದಾಗಿನಿಂದಲೂ ಸಹ ಮಾಧ್ಯಮಗಳಿಂದ ಯಾವಾಗಲೂ ದೂರ ಉಳಿಯುವ ಅಶ್ವಿನಿ ಅವರು ಯಾರಿಗೂ ತಿಳಿಯದ ಹಾಗೆ ಹಲವಾರು ರೀತಿಯಲ್ಲಿ ಸಮಾಜಸೇವೆಯನ್ನು ಮಾಡುತ್ತಿದ್ದಾರೆ.

ಪುನೀತ್ ಅವರ ಅಗಲಿಕೆಯಿಂದ ತುಂಬಾ ನೊಂ’ದು ಹೋಗಿರುವ ಅಶ್ವಿನಿ ಅವರು ಇಷ್ಟೆಲ್ಲ ನೋ’ವಿ’ನ ಜೊತೆ ಪುನೀತ್ ಅವರು ನಡೆಸುತ್ತಿದ್ದ ಕಾರ್ಯಗಳನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಪುನೀತ್ ಅವರು ಕಟ್ಟಿ ಕನಸು ಕಂಡಿದ್ದ ಮೈಸೂರಿನ ಶಕ್ತಿಧಾಮಕ್ಕೆ ತಿಂಗಳಿಗೆ ಒಮ್ಮೆಯಾದರೂ ಭೇಟಿ ಕೊಡುತ್ತಿದ್ದಾರಂತೆ ಹಾಗೂ ಅಲ್ಲಿರುವ ಹೆಣ್ಣುಮಕ್ಕಳ ಕ್ಷೇಮ ಸಮಾಚಾರಗಳನ್ನು ಆಲಿಸುತ್ತಿದ್ದಾರಂತೆ. ಇಷ್ಟೇ ಅಲ್ಲದೆ ಪಿಆರ್ಕೆ ಪ್ರೊಡಕ್ಷನ್ಸ್ ಎನ್ನುವ ಸಂಸ್ಥೆಯನ್ನು ಎನ್ನುವ ಪುನೀತ್ ರಾಜಕುಮಾರ್ ಅವರು ಶುರುಮಾಡಿದ್ದರು ಹಾಗೂ ಈ ಮೂಲಕ ಹೊಸ ಪ್ರತಿಭೆಗಳಿಗೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟು ಪ್ರೋತ್ಸಾಹಿಸಬೇಕು ಎನ್ನುವ ಕನಸನ್ನು ಹೊಂದಿದ್ದರು. ಪುನೀತ್ ಅವರು ಇದ್ದಾಗಲೇ ಇವರ ಪ್ರೊಡಕ್ಷನ್ ನಲ್ಲಿ ಮನೆದೇವ್ರು ಎಂಬ ಹೆಸರಿನ ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿತ್ತು ಹಾಗೂ ಈ ಧಾರಾವಾಹಿಯು ಸಾಕಷ್ಟು ಜನಮನ್ನಣೆ ಗಳಿಸಿತ್ತು.

ಈ ಧಾರಾವಾಹಿಯ ಮೂಲಕ ಹಲವಾರು ಹೊಸ ಪ್ರತಿಭೆಗಳು ಬೆಳಕಿಗೆ ಬಂದಿದ್ದರು. ಈಗ ಪುನೀತ್ ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಅವರು ಅವರ ಕನಸುಗಳಿಗೆ ನೀರೆರೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ನಾಲ್ಕು ಹೊಸ ಸಿನಿಮಾಗಳನ್ನು ಮಾಡುವ ನಿರ್ಧಾರ ಮಾಡಿರುವ ಅಶ್ವಿನಿ ಅವರು ಸಿನಿಮಾ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹಾಗೂ ಇದೆಲ್ಲದರ ನಡುವೆ ಅಣ್ಣಾವ್ರ ಹುಟ್ಟುಹಬ್ಬದ ದಿನ ಪುನೀತ್ ರಾಜಕುಮಾರ್ ಅವರು ಪ್ರತಿವರ್ಷವೂ ಅವರ ಪಿಆರ್ ಕೆ ಪ್ರೊಡಕ್ಷನ್ ಎನ್ನುವ ಹೆಸರಿನ ಯುಟ್ಯೂಬ್ ಚಾನೆಲ್ ಅಲ್ಲಿ ಅಣ್ಣಾವ್ರ ಸಿನಿಮಾದ ಹಾಡನ್ನು ಹಾಡಿ ರಿಲೀಸ್ ಮಾಡುತ್ತಿದ್ದರು. ಈಗ ಅವರು ಇಲ್ಲದೆ ಇರುವ ಕಾರಣ ಅಶ್ವಿನಿ ಅವರೇ ಪುನೀತ್ ರಾಜಕುಮಾರ್ ಅವರು ಯಾವಾಗಲೂ ಹಾಡುತ್ತಿದ್ದ ಅವರ ತಂದೆ ಹಾಡನ್ನು ರಿಲೀಸ್ ಮಾಡಿದ್ದಾರೆ. ತಮಗಾಗಿರುವ ನೋ’ವ’ನ್ನು ಬಚ್ಚಿಟ್ಟು ಅಭಿಮಾನಿಗಳನ್ನು ರಂಜಿಸಲು ಯಾವಾಗಲೂ ತುಡಿಯುವ ದೊಡ್ಮನೆ ಕುಟುಂಬಕ್ಕೆ ಪುನೀತ್ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸೋಣ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕನಸಿನಲ್ಲಿ ಸತ್ತ ವ್ಯಕ್ತಿಗಳು ಬಂದರೆ ಏನು ಅರ್ಥ. ..

ಕನಸಿನಲ್ಲಿ ಸತ್ತ ವ್ಯಕ್ತಿಗಳು ಬಂದರೆ ಏನು ಅರ್ಥ. ..

ಸೀತೆ ಮತ್ತು ರಾಮ

ಪಂಚಕನ್ಯೆಯರಲ್ಲಿ ಇನ್ನೊಬ್ಬರು ಸೀತೆ ,ಅಥವಾ ಮಹಾಭಾರತದಲ್ಲಿ ಬರುವ ಕುಂತಿ