in

ಫೆಬ್ರವರಿ 16ರಂದು, ಚಿತ್ರರಂಗದ ಪಿತಾಮಹ “ದಾದಾಸಾಹೇಬ್ ಫಾಲ್ಕೆ” ಖ್ಯಾತಿಯ ಧುಂಡಿರಾಜ್ ಗೋವಿಂದ್ ಫಾಲ್ಕೆ ಪುಣ್ಯತಿಥಿ 

ದಾದಾಸಾಹೇಬ್ ಫಾಲ್ಕೆ
ದಾದಾಸಾಹೇಬ್ ಫಾಲ್ಕೆ

ದಾದಾಸಾಹೇಬ್ ಫಾಲ್ಕೆ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಧುಂಡಿರಾಜ್ ಗೋವಿಂದ್ ಫಾಲ್ಕೆ ಭಾರತೀಯ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಗಾರ. ಅವರನ್ನು ಭಾರತೀಯ ಚಿತ್ರರಂಗದ ಪಿತಾಮಹ ಎಂದೂ ಕರೆಯುತ್ತಾರೆ. ಅವರ ಚೊಚ್ಚಲ ಚಿತ್ರ ರಾಜಾ ಹರಿಶ್ಚಂದ್ರ 1913 ರಲ್ಲಿ ಮೊದಲ ಭಾರತೀಯ ಚಲನಚಿತ್ರವಾಗಿತ್ತು.

1913, ಮೇ 13 ಭಾರತೀಯ ಚಿತ್ರರಂಗವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಅಂದು ಮುಂಬೈನ ಜನಸಾಗರದ ದೃಷ್ಟಿ ಒಂದೆಡೆ ಕೇಂದ್ರೀಕೃತವಾಗಿತ್ತು. ಹಣವಿದ್ದವರು ಮುಂಬೈನ ಕಾರೋನೇಷನ್ ಚಿತ್ರಮಂದಿರದಲ್ಲಿದ್ದರು. ಹಣವಿಲ್ಲದವರು ಥಿಯೇಟರ್ ಹೊರಗೆ ಕುತೂಹಲದಿಂದ ಜಮಾಯಿಸಿದ್ದರು.

ದಾದಾ ಸಾಹೇಬ್ ಫಾಲ್ಕೆ ಯೆಂದು ಪ್ರಸಿದ್ಧರಾದ, ‘ದುಂಡಿರಾಜ್ ಗೋವಿಂದ ಫಾಲ್ಕೆ’ಯವರು, ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದವರು. ಅವರು ಗತಿಸಿ ೧೨ ದಶಕಗಳಾದರೂ, ಮಹಾರಾಷ್ಟ್ರದ ಹಾಗೂ ಭಾರತದ ಬೆಳ್ಳಿ-ತೆರೆಯ ಇತಿಹಾಸದಲ್ಲಿ, ಎಂದೆಂದಿಗೂ ಮರೆಯಲಾರದ ವ್ಯಕ್ತಿಯಾಗಿ, ವಿಜೃಂಭಿಸುತ್ತಿದ್ದಾರೆ. 

ಭಾರತದಲ್ಲಿ ಚಲನಚಿತ್ರ ಲೋಕವನ್ನು ಸೃಷ್ಟಿಸಿದ ಅವರ ಮನೆಯಲ್ಲಿ ಇಟ್ಟ ಹೆಸರು, ‘ಧುಂಡಿರಾಜ್ ಗೋವಿಂದ ಫಾಲ್ಕೆ’ಯೆಂದು. ಧುಂಡಿರಾಜರು, ಬರೋಡದ, ‘ಕಲಾಭವನ’ದ ಶಿಕ್ಷಣ ಮುಗಿಸಿ, ‘ಸರಕಾರಿ ಪ್ರಾಚ್ಯವಸ್ತು ಇಲಾಖೆ’ಯಲ್ಲಿ ‘ಚಿತ್ರಕಾರ’ರಾಗಿ, ‘ಛಾಯಾಚಿತ್ರಗಾರ’ರಾಗಿ ೧೯೦೩ ರಲ್ಲಿ ‘ಖಾಯಂ ನೌಕರಿ’ಯಲ್ಲಿ ಭರ್ತಿಯಾದರು. ಧುಂಡಿರಾಜರು ‘ಫೋಟೋ-ಕೆಮಿಕಲ್ ರಂಗ’ದಲ್ಲಿ ಹಲವಾರು ಸಾಧನೆಗಳನ್ನು ಮಾಡಿದರು. ಚಲನಚಿತ್ರರಂಗದ ಮಾಯಾಲೋಕವನ್ನು ಈ ‘ಹರಿಶ್ಚಂದ್ರ ಚಿತ್ರ’ದ ಮುಖಾಂತರ, ಭಾರತೀಯ ಜನತೆಗೆ ಇತ್ತವರು, ‘ದಾದಾಸಾಹೇಬ್ ಫಾಲ್ಕೆ’ಯವರು. ಚಲನಚಿತ್ರರಂಗದ ಆವಿಷ್ಕಾರಕ್ಕಾಗಿ ತಮ್ಮ ಜೀವನವನ್ನೇ ತೇಯ್ದ ಮಹಾತ್ಯಾಗಿ, ‘ದಾದಾ ಸಾಹೇಬ್ ಫಾಲ್ಕೆ’.

ಫೆಬ್ರವರಿ 16ರಂದು, ಚಿತ್ರರಂಗದ ಪಿತಾಮಹ "ದಾದಾಸಾಹೇಬ್ ಫಾಲ್ಕೆ" ಖ್ಯಾತಿಯ ಧುಂಡಿರಾಜ್ ಗೋವಿಂದ್ ಫಾಲ್ಕೆ ಪುಣ್ಯತಿಥಿ 
ದಾದಾಸಾಹೇಬ್ ಫಾಲ್ಕೆ ಪತ್ನಿ ಸರಸ್ವತೀಬಾಯಿ

‘ಧುಂಡಿರಾಜ್’, ಜನಿಸಿದ್ದು ಮಹಾರಾಷ್ಟ್ರದ ‘ನಾಸಿಕ್’ ಜಿಲ್ಲೆಯ ಗೋದಾವರಿ ನದಿಯ ಉಗಮಸ್ಥಾನವಾದ ‘ತ್ರ್ಯಂಬಕೇಶ್ವರ’ದ ವೈದಿಕ ಮನೆತನದಲ್ಲಿ. ಜನನ ೧೮೭೦ , ಏಪ್ರಿಲ್ ೩೦. ತಂದೆ ‘”ಜಿಶಾಸ್ತ್ರಿ ಫಾಲ್ಕೆ” ಸಂಸ್ಕೃತ ಶಿಕ್ಷಕರಾಗಿದ್ದರು.ಚಿಕ್ಕಂದಿನಿಂದಲೂ ಧುಂಡಿರಾಜ ತಂದೆಯವರು ಹೇಳಿಕೊಡುತ್ತಿದ್ದ ಪಾಠಗಳಲ್ಲಿ ಕಾವ್ಯ, ಪುರಾಣ, ಕಥೆ, ಅತಿಮಾನುಷ ವಿಚಾರಗಳಲ್ಲಿ ಬಹಳ ಆಸಕ್ತಿ ತೋರುತ್ತಿದ್ದರು. 

ತ್ರ್ಯಂಬಕೇಶ್ವರ ದೇಗುಲದಲ್ಲಿ ನಡೆಯುತ್ತಿದ್ದ ನೃತ್ಯ, ನಾಟಕಗಳು, ರಂಗಸಜ್ಜಿಕೆಗಳು, ವೇಷಭೂಷಣಗಳು ಚಿಕ್ಕ ಬಾಲಕನಮೇಲೆ ಅಪಾರ ಪರಿಣಾಮವನ್ನು ಬೀರಿತ್ತು. ನಟನೆ, ಹಾವ-ಭಾವಗಳ ಕಂಡಾಗ ಅವರ ಮೈ ರೋಮಾಂಚನಗೊಳ್ಳುತ್ತಿತ್ತು. ತಂದೆಯವರು ಹೇಳಿಕೊಡುತ್ತಿದ್ದ ವೈದಿಕ, ಸಂಸ್ಕೃತ ಪಾಠಗಳಲ್ಲಿ ಮುಂದಿದ್ದರೂ ನಾಟಕ, ನೃತ್ಯ, ಚಿತ್ರಕಲೆ ಇವುಗಳಲ್ಲಿ ಧುಂಡಿರಾಜನ ಆಸಕ್ತಿ ಗಮನಿಸಿದ ಅವರ ತಂದೆಯವರು ಸ್ವಲ್ಪ ಚಿಂತಿತರಾದರು. ಲಲಿತ ಕಲೆಯ ಈ ಆಸಕ್ತಿಯಲ್ಲಿ ಪ್ರಬುದ್ಧಮಾನಕ್ಕೆ ಬರಲು, ತ್ಯ್ರಂಬಕೇಶ್ವರದಂತಹ ಚಿಕ್ಕ ಜಾಗ ಉತ್ತಮವಾದದ್ದಲ್ಲವೆಂದು, ಅರಿತರೂ, ದೂರವೆನಿಸಿದ್ದ ಮುಂಬಯಿಗೆ ಒಬ್ಬನೇ ಮಗನನ್ನು ಕಳಿಸಲು ಅವರಿಗೆ ಮನಸ್ಸು ಬರಲಿಲ್ಲ.

ಚಲನಚಿತ್ರರಂಗದ ಮಾಯಾಲೋಕವನ್ನು ಈ ಹರಿಶ್ಚಂದ್ರ ಚಿತ್ರದ ಮುಖಾಂತರ, ಭಾರತೀಯ ಜನತೆಗೆ ಇತ್ತವರು ದಾದಾಸಾಹೇಬ್ ಫಾಲ್ಕೆ. ಚಲನಚಿತ್ರರಂಗದ ಆವಿಷ್ಕಾರಕ್ಕಾಗಿ ತಮ್ಮ ಜೀವನವನ್ನೇ ತೇಯ್ದ ಮಹಾತ್ಯಾಗಿ ದಾದಾ ಸಾಹೇಬ್ ಫಾಲ್ಕೆ.

‘ಸರಸ್ವತೀಬಾಯಿ’ ಎಂಬ ಕನ್ಯೆಯೊಡನೆ ವಿವಾಹವಾಯಿತು. ಸರಸ್ವತಿಬಾಯಿಯವರು ಕೊಟ್ಟ ಸಹಕಾರ, ಮಾಡಿದ ತ್ಯಾಗ ಮೆಚ್ಚುವಂತಹದು. ಅವರ ಪ್ರೋತ್ಸಾಹವೇ ಧುಂಡಿರಾಜರು ಮುಂದೆ ತಮ್ಮ ಜೀವನದ ಪರಮೋದ್ದೇಶದ ಸಾಧನೆಯನ್ನು ಮಾಡಲು ಸಾಧ್ಯವಾದದ್ದು.

ಫಾಲ್ಕೆಯವರ ಚಿತ್ರನಿರ್ಮಾಣದ ಪ್ರಯತ್ನದಲ್ಲಿ, ಮತ್ತೆ ಹಣ ಸಾಲದಾಯಿತು. ಪತ್ನಿ ಸರಸ್ವತೀಬಾಯಿ, ತಮ್ಮ ಒಡವೆಗಳನ್ನು ಅಡವಿಟ್ಟರು. ರಾಮ, ಕೃಷ್ಣರ ಕಥೆ ಬೇಡವೆಂದು ಕಡೆಗೆ, ‘ರಾಜಾ ಹರಿಶ್ಚಂದ್ರನ ಕಥೆ’ಯನ್ನು ಚಿತ್ರ ಮಾಡುವುದೆಂದು ‘ದಾದಾ’ ನಿರ್ಧಾರ ಮಾಡಿದರು. ಆ ಕಾಲದಲ್ಲಿ ಚಿತ್ರನಿರ್ಮಾಣದ ಕಲೆ ಯಾರಿಗೂ ತಿಳಿದಿರಲಿಲ್ಲ. ಇದರಿಂದಾಗಿ ರಾಜಾ ಹರಿಶ್ಚಂದ್ರ ಚಿತ್ರದ ಲೇಖನ, ನಿರ್ಮಾಣ ಕಾರ್ಯ, ನಿರ್ದೇಶನ, ಹಾಗೂ ನಟನೆ ಮತ್ತು, ಛಾಯಾಗ್ರಹಣವನ್ನೂ ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ ಶ್ರೇಯ, ಧುಂಡೀರಾಜರದು. ಅವರ ಮನೆಯೇ ಫಾಲ್ಕೆ ಫಿಲ್ಮ್ ಸಂಸ್ಥೆ. ಇಡೀ ಚಿತ್ರರಂಗದ ಊಟ, ಉಪಚಾರ ಸರಸ್ವತೀಬಾಯಿಯವರದ್ದು. ಕಾಳಗದ ದೃಶ್ಯ ಚಿತ್ರೀಕರಣಗೊಂಡಿದ್ದು ಸಹಾ, ಧುಂಡಿರಾಜರ ಮನೆಯಲ್ಲಿಯೇ.

ಇಪ್ಪತ್ತನೆ ಶತಮಾನದ ಭಾರತೀಯ ಚಿತ್ರರಂಗದ ಪಿತಾಮಹರಾದ ದಾದಾ ಸಾಹೇಬ್ ಫಾಲ್ಕೆ ಅವರ ಹೆಸರಲ್ಲಿರುವ ಪ್ರಶಸ್ತಿ ಪಡೆಯುವುದು, ಚಲನಚಿತ್ರ ರಂಗದ ಉತ್ತಮ ಕಲಾವಿದನೊಬ್ಬನ ಜೀವನದ ಗುರಿ. ಆ ಪ್ರಶಸ್ತಿ ಪಡೆದ ಕಲಾವಿದ ಎಲ್ಲಾ ಘಟ್ಟಗಳನ್ನೂ ದಾಟಿ ಎವರೆಸ್ಟ್ ಶಿಖರದ ತುಟ್ಟ ತುದಿ ಮುಟ್ಟಿದಂತೆ. ಇಂತಹ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಮೊದಲಿಗರು ದೇವಿಕಾರಾಣಿ ರೋರಿಚ್. 1995ರಲ್ಲಿ  ವರನಟ ಡಾ.ರಾಜ್‌ಕುಮಾರ್ ಫಾಲ್ಕೆ ಪ್ರಶಸ್ತಿ ಪಡೆದರು.

ಫೆಬ್ರವರಿ 16ರಂದು, ಚಿತ್ರರಂಗದ ಪಿತಾಮಹ "ದಾದಾಸಾಹೇಬ್ ಫಾಲ್ಕೆ" ಖ್ಯಾತಿಯ ಧುಂಡಿರಾಜ್ ಗೋವಿಂದ್ ಫಾಲ್ಕೆ ಪುಣ್ಯತಿಥಿ 
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

1885ರಲ್ಲಿ ದಾಜಿಶಾಸ್ತ್ರಿ ಅವರಿಗೆ, ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ನೌಕರಿ ದೊರಕಿತು. ಅವರ ಕುಟುಂಬ ಮುಂಬಯಿಗೆ ವಲಸೆ ಬಂದಿತು. ಧುಂಡಿರಾಜ್ ಅವರಿಗೆ ಮುಂಬಯಿಯ ಪ್ರಸಿದ್ಧ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಚಿತ್ರಕಲಾ ತರಗತಿಗೆ ಪ್ರವೇಶ ದೊರಕಿತು. ಇದು ಅವರ ಚಿತ್ರಾಸಕ್ತಿಗೆ ಭದ್ರ ಬುನಾದಿ ಹಾಕಿತು. ಅಲ್ಲಿನ ಕಾಲಾವಧಿ ಮುಗಿದ ನಂತರ ಮುಂದಿನ ಕಲಿಕೆಗಾಗಿ ಬರೋಡದ ಕಲಾಭವನ ಸೇರಿದರು. ಅಲ್ಲಿ ಧುಂಡಿರಾಜರ ಪ್ರಾವಿಣ್ಯ, ಪಾಂಡಿತ್ಯವನ್ನು ಗುರುತಿಸಿದ ಪ್ರೊ.ಗುಜ್ಜರ್ ಎಂಬುವರು ಈ ಯುವಕನ ಪಾಂಡಿತ್ಯಕ್ಕೆ ಚಿತ್ರಕಲೆ ಸಾಲದೆಂದು, ಛಾಯಾಚಿತ್ರ ವಿಭಾಗದ ಮೇಲ್ವಿಚಾರಕನಾಗಿ ನೇಮಿಸಿದರು. ಇದು ಧುಂಡಿರಾಜರಿಗೆ ದೊರೆತ ಸುವರ್ಣಾವಕಾಶ.

ಬಾಬಾ ಸಾಹೇಬ್ ಫಾಲ್ಕೆಯವರ ಸ್ಮರಣಾರ್ಥವಾಗಿ ಭಾರತ ಸರ್ಕಾರವು ಪ್ರತಿವರ್ಷವೂ ಚಲನ-ಚಿತ್ರರಂಗದ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಭಾರತೀಯರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಾ ಬಂದಿದೆ.

ಚಿತ್ರರಂಗಕ್ಕೆ ಸತತವನ್ನೂ ಎರೆದ ಜೀವಕ್ಕೆ ಮುಪ್ಪಿನಲಿ ಕಷ್ಟ ಪಡುವ ಕಾಲ ಬಂದಿತ್ತು. ನಿರಾಸಕ್ತಿ, ವೇದನೆ, ಬಡತನ, ದಿನದ ಊಟಕ್ಕೂ ಪರದಾಡುವ ಕಾಲ ಬಂದಿತು. ಈ ಸ್ಥಿತಿಯಲ್ಲಿಯೇ 1944 ಫೆಬ್ರವರಿ 16ರಂದು ನಾಸಿಕ್ ನಲ್ಲಿ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಕೊನೆಯುಸಿರೆಳೆದರು.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

One Comment

  1. Профессиональный сервисный центр по ремонту бытовой техники с выездом на дом.
    Мы предлагаем: ремонт бытовой техники в мск
    Наши мастера оперативно устранят неисправности вашего устройства в сервисе или с выездом на дом!

18 ಶಕ್ತಿಪೀಠಗಳು

ಅಷ್ಟಾದಶ ಮಹಾ ಎಂದು ಹೆಸರಿಸಲಾದ 18 ಶಕ್ತಿಪೀಠಗಳು

ಮನೆ ನವೀಕರಣ

ಮನೆ ನವೀಕರಣ ಮಾಡುತ್ತೀರಾ ಹಾಗಾದರೆ ಕೆಲವೊಂದು ಪ್ರಮುಖ ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ