in

ಒಂದೇ ಜೀವಕೋಶ ಹೊಂದಿರುವ ಪ್ರಾಣಿ ಅಮೀಬಾ

ಅಮೀಬಾ
ಅಮೀಬಾ

ಅಮೀಬಾ ಒಂದು ಏಕಾಣುಜೀವಿ. ಕೇವಲ ೦.೨೫ ಮಿ.ಮೀಟರ್ ನಿಂದ ೨.೫ ಮಿಲಿ ಮೀಟರ್ ನವರೇಗೆ ಇರುವ ಇದನ್ನು ಸೂಕ್ಶ್ಮದರ್ಶಕದಲ್ಲಷ್ಟೇ ನೋಡಬಹುದಾಗಿದೆ. ಕೆಲವು ನೀರು ಮತ್ತು ಚೌಗು ಪ್ರದೇಶಗಳಲ್ಲಿ ಜೀವಿಸಿದರೆ, ಕೆಲವು ಮನುಷ್ಯ ಹಾಗೂ ಪ್ರಾಣಿಗಳ ದೇಹದಲ್ಲಿ ವಾಸಿಸುತ್ತವೆ. ಕೇವಲ ಒಂದೇ ಜೀವಕೋಶವನ್ನು ಇದು ಹೊಂದಿದ್ದು, ಇದಕ್ಕೆ ಯಾವುದೇ ಆಕಾರವಿರುವುದಿಲ್ಲ. ಎಲ್ಲಾ ಜೀವಿಕೋಶಗಳಲ್ಲಿರುವ ಪ್ರೋಟೋಪ್ಲಾಸ್ಮ ಇದರಲ್ಲಿರುತ್ತದೆ. ಇದರ ಸುತ್ತ ತೆಳುವಾದ ಸ್ಥಿತಿಸ್ಥಾಪಕತ್ವ ಇರುವ ಕವಚ ಇರುತ್ತದೆ. ಈ ಕವಚದ ಮೂಲಕ ನೀರು ಮತ್ತು ಆಮ್ಲಜನಕ ಜೀವಕೋಶ ಪ್ರವೇಶಿಸುತ್ತದೆ.

ಅಮೀಬ ಹೊಂಡ, ಮಡುಗಳಲ್ಲೂ ಕೆಸರು ಎಲೆ ಮುಂತಾದ ಪದಾರ್ಥಗಳ ಮೇಲೂ ಹರಿದಾಡುವ ಬಹುಸೂಕ್ಷ್ಮ ಜೀವಿ. ವ್ಯಾಸ ಸುಮಾರು 1″/100. ದೇಹರಚನೆ ಅತ್ಯಂತ ಸರಳ. ಜೀವರಸದ ಹೊರ ಆವರಣ, ಎಕ್ಟೊಪ್ಲಾಸಂ ತಿಳಿಯಾಗಿ ಪಾರದರ್ಶಕವಾಗಿದ್ದು ಒಳಾವರಣ (ಎಂಡೊ ಪ್ಲಾಸಂ) ಕಣಕಣವಾಗಿ ಹೆಚ್ಚು ದ್ರವರೂಪಿಯಾಗಿದೆ. ಒಳರಸದಲ್ಲಿ ಒಂದು ನಡುಬೀಜ (ನ್ಯೂಕ್ಲಿಯಸ್), ವರ್ತುಲಾಕಾರದ ಒಂದು ಸಂಕೋಚನಾವಕಾಶ (ಕಂಟ್ರ್ಯಾಕ್ಟೈಲ್ ವ್ಯಾಕ್ಯುಯೊಲ್) ಹಾಗೂ ಆಹಾರದಿಂದ ತುಂಬಿದ ಹಲವು ಆಹಾರ ಕುಹರಗಳೂ ಇವೆ. ಸೂಕ್ಷ್ಮದರ್ಶಕ ತೋರುವಂತೆ ಜೀವಂತ ಅಮೀಬಕ್ಕೆ ಯಾವುದೇ ನಿರ್ದಿಷ್ಟ ಆಕಾರವಿಲ್ಲ ; ಕ್ಷಣಕ್ಷಣಕ್ಕೂ ಅದರ ಆಕಾರ ಬದಲಾಗುತ್ತಿರುತ್ತದೆ. ಅದರ ದೇಹದಿಂದ ಆಗಾಗ ನೂಕಲ್ಪಡುತ್ತಿರುವ ಕೋಡುಗಳಂತಿರುವ ವಿಥ್ಯಾಪಾದಗಳೆಂಬ (ಸೂಡೊಪೋಡಿಯ) ಅಂಗಗಳೆ ಇದಕ್ಕೆ ಕಾರಣ. ಇವು ಅದರ ಚಲನಾಂಗಗಳು. ಅಮೀಬ ತನ್ನ ಇಚ್ಛೆಯಂತೆ ವಿಥ್ಯಾಪಾದಗಳನ್ನು ನೀಡಬಲ್ಲದು. ಅವನ್ನು ಬೇಡವಾದಾಗ ನಾಶಪಡಿಸಲೂ ಬಲ್ಲದು. ಆದ್ದರಿಂದ ಅವು ಸದಾಕಾಲ ಕಂಡರೂ ಶಾಶ್ವತಾಂಗಗಳಲ್ಲ. ಮಿಥ್ಯಾಪಾದಗಳು ಎಲ್ಲ ದಿಕ್ಕುಗಳಲ್ಲೂ ಹುಟ್ಟುವುದರಿಂದ ಅಮೀಬ ಬೇಕಾದ ದಿಕ್ಕಿನಲ್ಲಿ ಚಲಿಸಬಲ್ಲುದು. ಆದರೂ ಅದೊಂದು ಮಂದಗಾಮಿ ಪ್ರಾಣಿ. ವೇಗ ಮಿನಿಟಿಗೆ 3″/125 ಮಾತ್ರ. ಎಲ್ಲ ಪ್ರಾಣಿಗಳಂತೆ ಅದರ ಚಲನೆಯೂ ಉದ್ದೇಶಪೂರ್ವಕವಾದುದು. ಹೆಚ್ಚು ಪ್ರಕಾಶವಿರುವ ಸ್ಥಳವನ್ನು ತ್ಯಜಿಸಿ, ಆಹಾರವಿರುವ ದಿಕ್ಕಿಗೆ ಚಲಿಸುವುದು ಅದರ ಸ್ವಭಾವ. ಆಹಾರ ಸಿಕ್ಕಾಗ ಅದರ ಸುತ್ತಲೂ ಮಿಥ್ಯಾಪಾದಗಳನ್ನು ಪಸರಿಸಿ ಅದನ್ನು ಪೂರ್ತಿಯಾಗಿ ಆವರಿಸುವುದು. ಹೀಗೆ ಆವರಿಸಲ್ಪಟ್ಟ ಆಹಾರ ಒಳಜೀವರಸವನ್ನು ಸೇರಿ, ತನ್ನೊಡನೆ ಸೇರಿದ ನೀರು, ಸ್ರಾವಗಳನ್ನೊಳಗೊಂಡು ಆಹಾರಕುಹರವಾಗಿ ರೂಪುಗೊಳ್ಳುವುದು. ಹೀಗೆ ಬಂಧಿತವಾದ ಆಹಾರ ಜೀರಕರಸದಿಂದ ಪಚನವಾಗಿ ಒಳಜೀವರಸದಲ್ಲಿ ಲೀನವಾಗಿ ಅಮೀಬದ ಬೆಳೆವಣಿಗೆಗೆ ಕಾರಣವಾಗುವುದು. ಅಮೀಬ ಶ್ವಾಸೋಚ್ಛ್ವಾಸ ಕ್ರಿಯೆಗಾಗಿ ತನ್ನ ಸುತ್ತಮುತ್ತಲಿರುವ ನೀರಿನಲ್ಲಿ ಬೆರೆತ ಆಮ್ಲಜನಕವನ್ನೆ ಉಪಯೋಗಿಸುವುದು. ಆಮ್ಲಜನಕ ದೇಹವನ್ನು ಪ್ರವೇಶಿಸಿ ಆಹಾರದ್ರವ್ಯಗಳ ಮೇಲೆ ಪ್ರತಿಕ್ರಿಯೆ ಮಾಡಿ, ನೀರು ಮತ್ತು ಶಕ್ತಿಯನ್ನು ಹೊರಹೊಮ್ಮಿಸುವುದು. ಈ ಶಕ್ತಿಯಿಂದಲೇ ಅಮೀಬ ತನ್ನ ಚಟುವಟಿಕೆಗಳನ್ನೆಲ್ಲ ನಡೆಸುವುದು. ಈ ಕ್ರಿಯೆಯಲ್ಲಿ ಹುಟ್ಟಿದ ಇಂಗಾಲದ ಡೈಆಕ್ಸೈಡ್ ದೇಹದಿಂದ ನೇರವಾಗಿ ಹೊರಗೆ ಹೋಗುವುದು, ಇಲ್ಲವೆ ಸಂಕೋಚನಕುಹರದಲ್ಲಿ ಸಂಗ್ರಹವಾಗುವುದು. ಇವುಗಳ ಜೊತೆಗೆ ದೇಹದಲ್ಲಿ ಸದಾಕಾಲ ಪ್ರವೇಶಿಸುತ್ತಿರುವ ಹೊರಗಿನ ನೀರೂ ಸಂಕೋಚನಕುಹರವನ್ನು ಸೇರುವುದು. ಸಂಕೋಚನಕುಹರ ಹೀಗೆ ತುಂಬಿಕೊಳ್ಳುತ್ತ ಬಹಳ ದೊಡ್ಡದಾಗಿ ಒಮ್ಮೆಲೇ ಸಂಕೋಚಹೊಂದಿ ಒಳಗಿನ ಪದಾರ್ಥಗಳನ್ನೆಲ್ಲ ಹೊರಗೆ ಎಸೆಯುವುದು. ಜಲನಿಯಂತ್ರಣ ಹೀಗೆ ಸಂಕೋಚನಕುಹರದ ಮುಖ್ಯ ಕಾರ್ಯ. ಈ ಜಲ ಪರಿಕ್ರಮಣ ಶ್ವಾಸೋಚ್ಛ್ವಾಸ ಹಾಗೂ ವಿಸರ್ಜನಕ್ರಿಯೆಗಳಲ್ಲಿ ಅಪ್ರತ್ಯಕ್ಷವಾಗಿ ಭಾಗವಹಿಸುವುದು.

ಒಂದೇ ಜೀವಕೋಶ ಹೊಂದಿರುವ ಪ್ರಾಣಿ ಅಮೀಬಾ
ಅಮೀಬ

ಅಮೀಬ ಪೂರ್ಣ ಬೆಳೆವಣಿಗೆ ಹೊಂದಿದಮೇಲೆ ನಿರ್ಲಿಂಗರೀತಿಯ ವಂಶಾಭಿವೃದ್ದಿಗೆ ಸಿದ್ಧವಾಗುವುದು. ಈ ಕ್ರಿಯೆಯಲ್ಲಿ ನಡುಬೀಜ ಸರಿಯಾಗಿ ಎರಡು ಸೀಳಾಗುವುದು. ಜೀವರಸ ಎರಡು ಭಾಗವಾಗುವುದು. ಪರಿಣಾಮವಾಗಿ ಎರಡು ಚಿಕ್ಕ ಅಮೀಬ ಪ್ರಾಣಿಗಳು ನಿರ್ಮಾಣವಾಗುವುವು. ಇವು ಕೂಡ ತಮ್ಮ ತಾಯಿಯಂತೆ ಚಲಿಸುತ್ತ, ಆಹಾರವನ್ನು ಸೇವಿಸುತ್ತ ಬೆಳೆದು ದೊಡ್ಡವಾಗಿ ಸಂತಾನ ಪಡೆಯುವುವು. ಇಂಥ ಸಂತಾನೋತ್ಪತ್ತಿ ಮಾದರಿಗೆ ದ್ವಿದಳನ (ಬೈನರಿ ಫಿಷನ್) ಎಂದು ಹೆಸರು. ಇಲ್ಲಿ ತಾಯಿಯೇ ಒಡೆದು ಎರಡಾಗುವುದರಿಂದ ಅದು ಇಲ್ಲವಾಗುವುದಾದರೂ ತನ್ನ ಸಂತಾನರೂಪದಲ್ಲಿ ಮುಂದುವರಿಯುವುದರಿಂದ ಅದು ಅಮರವೆಂದೇ ಹೇಳಬೇಕು. ಅಮೀಬ ಸೂಕ್ಷ್ಮ ಪ್ರಾಣಿಯಾದರೂ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಬಲ್ಲುದು. ನೀರು ಬತ್ತಿದಾಗ ಇಲ್ಲವೆ ಅತಿ ಚಳಿಯಾದಾಗ, ತನ್ನ ಮಿಥ್ಯಾಪಾದಗಳನ್ನು ಒಳಸೇದಿಕೊಂಡು, ದುಂಡಗಾಗಿ, ತನ್ನ ಸುತ್ತಲೂ ಸಂರಕ್ಷಕ ಕವಚವನ್ನು ನಿರ್ಮಿಸಿಕೊಳ್ಳುವುದು. ಈ ಪರಿಸ್ಥಿತಿ ಅನುಕೂಲ ಪರಿಸ್ಥಿತಿ ಒದಗಿದೊಡನೆ ರಕ್ಷಾ ಕವಚವನ್ನು ಒಡೆದು ಅಮೀಬ ಹೊರಬಂದು, ಮೊದಲಿನಂತೆ ಜೀವಿಸಲು ತೊಡಗುವುದು. ಕೆಲವು ವೇಳೆ ಈ ಅವಸ್ಥೆಯಲ್ಲಿಯೇ ಅದರ ನಡುಬೀಜ ಎಷ್ಟೋಸಲ ವಿಭಾಗವಾಗುವುದು. ಪ್ರತಿಯೊಂದು ಚಿಕ್ಕ ಭಾಗದ ಸುತ್ತಲೂ ಜೀವರಸ ಸಂಗ್ರಹವಾಗಿ ಎಷ್ಟೋ ಬೀಜಕಣಗಳು (ಸ್ಪೋರಸ್ಸ) ಉತ್ಪನ್ನವಾಗುವುವು. ಪರಿಸ್ಥತಿ ಅನುಕೂಲವಾಗಿ ರಕ್ಷಾಕವಚ ಒಡೆದಾಗ ಹೊರಬರುವ ಪ್ರತಿಯೊಂದು ಬೀಜಕಣವೂ ಚಿಕ್ಕ ಚಿಕ್ಕ ಅಮೀಬದ ರೂಪತಾಳುವುದು. ಇಂಥ ಸಂತಾನೋತ್ಪತ್ತಿಕ್ರಮಕ್ಕೆ ಬಹುದಳನ (ಮಲ್ಟಿಪಲ್ ಫಿಷನ್) ಎಂದು ಹೆಸರು. ಈ ಮಾದರಿಯಲ್ಲಿ ಒಂದುಸಾರಿಗೆ ಸುಮಾರು 500ರ ವರೆಗೆ ಚಿಕ್ಕ ಮರಿಗಳು ಹುಟ್ಟಿಕೊಳ್ಳುತ್ತವೆ.

ಒಂದೇ ಜೀವಕೋಶ ಹೊಂದಿರುವ ಪ್ರಾಣಿ ಅಮೀಬಾ
ಅಮೀಬಾ

ಅಯೋಬಾಸ್ ಅವಳಿ ವಿದಳನದ ಅಲೈಂಗಿಕ ಪ್ರಕ್ರಿಯೆಯ ಮೂಲಕ ಸಂತಾನೋತ್ಪತ್ತಿ ಮಾಡುತ್ತದೆ. ಬೈನರಿ ವಿದಳನದಲ್ಲಿ, ಒಂದೇ ಜೀವಕೋಶವು ಎರಡು ಒಂದೇ ಕೋಶಗಳನ್ನು ರೂಪಿಸುತ್ತದೆ. ಮಿಟೋಸಿಸ್ನ ಪರಿಣಾಮವಾಗಿ ಈ ರೀತಿಯ ಸಂತಾನೋತ್ಪತ್ತಿ ಸಂಭವಿಸುತ್ತದೆ. ಮಿಟೋಸಿಸ್ನಲ್ಲಿ, ನಕಲಿ ಡಿಎನ್ಎ ಮತ್ತು ಅಂಗಕಗಳು ಎರಡು ಮಗಳ ಕೋಶಗಳ ನಡುವೆ ವಿಂಗಡಿಸಲಾಗಿದೆ. ಈ ಕೋಶಗಳು ತಳೀಯವಾಗಿ ಒಂದೇ ಆಗಿರುತ್ತವೆ. ಕೆಲವು ಅಮೀಬಾಗಳು ಅನೇಕ ವಿದಳನದಿಂದ ಪುನರುತ್ಪಾದಿಸುತ್ತವೆ. ಬಹು ವಿದಳನದಲ್ಲಿ, ಅಮೀಬಾ ಅದರ ದೇಹದ ಸುತ್ತಲೂ ಗಟ್ಟಿಯಾಗುತ್ತದೆ ಎಂದು ಮೂರು-ಲೇಯರ್ಡ್ ಗೋಡೆಯ ಜೀವಕೋಶಗಳನ್ನು ಸ್ರವಿಸುತ್ತದೆ. ಪರಿಸ್ಥಿತಿಗಳು ಕಠಿಣವಾದಾಗ ಈ ಕೋಶವು ಸಿಸ್ಟ್ ಎಂದು ಕರೆಯಲ್ಪಡುತ್ತದೆ, ಅಮೀಬಾವನ್ನು ರಕ್ಷಿಸುತ್ತದೆ. ಚೀಲದಲ್ಲಿ ಸಂರಕ್ಷಿಸಲ್ಪಟ್ಟ, ನ್ಯೂಕ್ಲಿಯಸ್ ಹಲವಾರು ಬಾರಿ ವಿಭಜಿಸುತ್ತದೆ. ಈ ಅಣು ವಿಭಜನೆಯನ್ನು ಅದೇ ಸಂಖ್ಯೆಯ ಕಾಲ ಸೈಟೋಪ್ಲಾಸಂ ವಿಭಜನೆಯಿಂದ ಅನುಸರಿಸಲಾಗುತ್ತದೆ. ಅನೇಕ ಮರಿ ಕೋಶಗಳ ಉತ್ಪಾದನೆಯು ಪರಿಸ್ಥಿತಿಗಳು ಮತ್ತೊಮ್ಮೆ ಅನುಕೂಲಕರವಾದಾಗ ಮತ್ತು ಚೀಲ ಛಿದ್ರಗೊಂಡಾಗ ಬಿಡುಗಡೆಯಾಗುವ ಬಹು ವಿಕಸನದ ಫಲಿತಾಂಶವಾಗಿದೆ.

ಕೆಲವು ಸಂದರ್ಭಗಳಲ್ಲಿ, ಅಮೋಬಗಳು ಬೀಜಕಗಳನ್ನು ಉತ್ಪತ್ತಿ ಮಾಡುವ ಮೂಲಕ ಸಂತಾನೋತ್ಪತ್ತಿ ಮಾಡುತ್ತವೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ವಿಜಯಪುರ

ವಿಜಯಪುರದಲ್ಲಿ ಚಾರಿತ್ರಿಕ ಮಹತ್ವದ ಅನೇಕ ಸಂಗತಿಗಳು ಇದೆ

ರಕ್ತ ಕಣಗಳು

ದೇಹದಲ್ಲಿನ ರಕ್ತ ಕಣಗಳು