in

ಉಣ್ಣೆ : ಜವಳಿ ವರ್ಗದ ಫೈಬರ್ ಎಳೆಗಳು

ಉಣ್ಣೆ
ಉಣ್ಣೆ

ಉಣ್ಣೆ ಒಂದು ಜವಳಿ ವರ್ಗದ ಫೈಬರ್ ಎಳೆಗಳನ್ನು ಕುರಿ ಮತ್ತು ಕೆಲವು ನಿಶ್ಚಿತ ಪ್ರಾಣಿಗಳ, ಕೂದಲಿಂದ ಪಡೆಯುವ ದಿರಸಿನ ಉತ್ಪನ್ನವಾಗಿದೆ. ಇದರಲ್ಲಿ ಕಾಶ್ಮೀರಿ ಮೇಕೆಗಳು, ಮೊಹೆರ್ ಜಾತಿಯ ಮೇಕೆಗಳು ವಿಕುನಾಗಳು, ಅಲ್ಪಕಾ, ಎಂಬ ಜಾತಿಯ ತುಪ್ಪಳಿನ ಪ್ರಾಣಿ, ಅಲ್ಲದೇ ಒಂಟೆ ಅದರ ಕುಟುಂಬ ವರ್ಗಕ್ಕೆ ಸೇರಿದ ಪ್ರಾಣಿಗಳ ಒಳಗೊಂಡಿದೆ. ಅಂಗೊರಾ ಎಂಬ ಪ್ರಾಣಿಯು ಮೊಲಗಳ ಮೂಲ ಜಾತಿ ತಳಿಯ ಪ್ರಾಣಿಗಳನ್ನು ಉಣ್ಣೆಗಾಗಿ ಬಳಸಲಾಗುತ್ತದೆ.

ಉಣ್ಣೆಯ ಗುಣಮಟ್ಟವನ್ನು ಅದು ದೊರೆಯುವ ವಿಭಿನ್ನ ಜಾತಿಗಳ ಪ್ರಾಣಿಗಳ ಕೂದಲು,ತುಪ್ಪಳವನ್ನು ಅವಲಂಬಿಸಿದೆ, ಅದು ಗುಂಗುರುಗುಂಗುರಾದ, ಸಮರೂಪದ ಸ್ಥಿತಿಸ್ಥಾಪಕತ್ವ ಹೊಂದುವ ಅಥವಾ ಮಡಿಕೆಯಾದ ಮತ್ತು ಕೊಂಡಿಯಾಕಾರದ ಗಡಸು ಕೂದಲಿನ ಉಣ್ಣೆ ಇದರಲ್ಲಿ ತೆಗೆಯಬಹುದಾಗಿದೆ.

ಕಚ್ಚಾ ಉಣ್ಣೆಯನ್ನು ಆಯಾ ಸ್ಥಳೀಯ ಕುರಿಗಳು ಮತ್ತು ಮೇಕೆಗಳ ಅವಲಂಬಿಸಿ ಕೈಗಾರಿಕೆಗೆ ಬಳಸಲಾಗುತ್ತದೆ. ಇನ್ನು ಕೆಲವು ಗೋಂದು ಸೇರಿಸಿದ ಉಣ್ಣೆ ಅಥವಾ ನೇಯ್ಗೆ ಮಾಡಿದ ಉಣ್ಣೆಯನ್ನು ಆರಂಭಿಕ ನಾಗರಿಕತೆಯಲ್ಲಿ ಕಾಣಬಹುದಾಗಿದೆ. ಉಣ್ಣೆ ಕೂದಲು ಕತ್ತರಿಸುವ ಆಧುನಿಕ ಕಾಲಗಿಂತ ಆಗ ಕೈಯಿಂದ ಲೋಹದ ಕಬ್ಬಿಣ ಯುಗದಲ್ಲಿ ಬಾಚುವ ಮೂಲಕ ಉಣ್ಣೆ ತೆಗೆಯಲಾಗುತಿತ್ತು.

ಹದಿಮೂರನೆಯ ಶತಮಾನದಲ್ಲಿ ಉಣ್ಣೆ ವ್ಯಾಪಾರವು ಕೆಳಮಟ್ಟದ ದೇಶಗಳಲ್ಲಿ ಜನಪ್ರಿಯವಾಯಿತು, ಇದು ಕೇಂದ್ರ ಇಟಲಿಯಲ್ಲಿಯೂ ತನ್ನ ಪ್ರಭಾವ ಬೀರಿತು. 16 ನೆಯ ಶತಮಾನದವರೆಗೂ ಇಟಲಿ ಪ್ರಧಾನ ಸ್ಥಾನ ವಹಿಸಿ ನಂತರ ಅದು ರೇಷ್ಮೆ ಕೃಷಿಯೆಡೆಗೆ ವಾಲಿತು. ಆಗಿನ ಕೈಗಾರಿಕಾ ಅಭಿವೃದ್ಧಿ-ಪೂರ್ವದ ಕಾಲದಲ್ಲಿ ವ್ಯಾಪಾರ-ಆರ್ಥಿಕತೆಯು ಇಂಗ್ಲಿಷ್ ಕಚ್ಚಾ ಉಣ್ಣೆ ರಫ್ತಿಗೆ ಸಂಬಂಧಿಸಿದ್ದಾಗಿತ್ತು. ಶೀಪ್ ವಾಕ್ಸ್ ಆಫ್ ಕ್ಯಾಸ್ಟೈಲ್ ಅಂದರೆ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ಉಣ್ಣೆಗಾಗಿ ಕುರಿ ಸಾಕಾಣಿಕೆ ವಿಫುಲವಾಗಿತ್ತು. ಹದಿನೈದನೇ ಶತಮಾನದಲ್ಲಿ ಬ್ರಿಟಿಶ್ ಕ್ರೌನ್ ಯುವರಾಣಿ ರಾಜ್ಯಕ್ಕೆ ಇದರ ರಫ್ತು ಪ್ರಮುಖ ಆದಾಯ ತರುತಿತ್ತು. ಅದರಂತೆ 1275 ರ ಸುಮಾರಿಗೆ ಉಣ್ಣೆ ರಫ್ತಿನ ಮೇಲೆ “ಗ್ರೇಟ್ ಕಸ್ಟಮ್ “ಎಂಬ ಹೆಸರಲ್ಲಿ ತೆರಿಗೆ ವಿಧಿಸಲಾಯಿತು. ಇಂಗ್ಲಿಷ್ ಆರ್ಥಿಕತೆಯ 14 ನೆಯ ಶತಮಾನದ ಅವಧಿಯಲ್ಲಿ ಇದು ಎಷ್ಟು ಪ್ರಭಾವಿತವಾಗಿತ್ತೆಂದರೆ ಹೌಸ್ ಆಫ್ ಲಾರ್ಡ್ಸ್ ನ ಹಿರಿಯ ಅಧಿಕಾರಿಯ ಆಸನ ಕೂಡಾ ಉಣ್ಣೆಯ ಕವಚದಿಂದ ನಿರ್ಮಿಸಲಾಗಿತ್ತು. ಆತ ಕುಳಿತುಕೊಳ್ಳುವ ಆಸನವನ್ನು “ವುಲ್ ಸ್ಯಾಕ್ “ಎನ್ನಲಾಗುತಿತ್ತು. ಈ ಮೂಲಕ ಆರ್ಥಿಕತೆ ಪರಿಗಣನೆಯು ಅಧಿಕಾರಿಶಾಹಿ ಸದನಗಳಲ್ಲಿ ಚರ್ಚೆಗೆ ಬರಲಾರಂಭಿಸಿದಾಗ ಉಣ್ಣೆ ಬಗ್ಗೆ ಪ್ರಸ್ತಾಪಿಸಲಾಗುತಿತ್ತು.

ಉಣ್ಣೆ : ಜವಳಿ ವರ್ಗದ ಫೈಬರ್ ಎಳೆಗಳು
ಉಣ್ಣೆ ವ್ಯಾಪಾರ

ಹನ್ನೆರಡನೆ ಶತಮಾನ ಮತ್ತು ಹದಿಮೂರನೆಯ ಶತಮಾನದ ಆರಂಭದಲ್ಲಿ ದೊಡ್ಡ ಪ್ರಮಾಣದ ಭೂಪ್ರದೇಶ ಖರೀದಿಸಿ ಅಲ್ಲಿ ಕುರಿ ಸಾಕಣೆ ಉಣ್ಣೆ ತೆಗೆಯುವುದು ಸಾಮಾನ್ಯವಾಗಿತ್ತು. ಆಗ ಕಾರ್ಮಿಕರ ಕೊರತೆ ಇದ್ದರೂ ಲೆಕ್ಕಿಸದೇ ಇದರ ಕೃಷಿ ಮಾಡಲಾಗುತಿತ್ತು. ಕಚ್ಚಾ ಉಣ್ಣೆಯನ್ನು ಶೇಖರಿಸಿ ಅಂಡಿಗೆಗಳಲ್ಲಿ ಹಾಕಿ ಉತ್ತರ ಸಮುದ್ರ ಬಂದರುಗಳಿಂದ ಹಡಗಿನ ಮೂಲಕ ಫ್ಲ್ಯಾಂಡರ್ಸ್ ನ ಜವಳಿ ಪಟ್ಟಣಗಳಿಗೆ ಕಳಿಸಲಾಗುತಿತ್ತು. ಸುಮಾರಾಗಿ ಯಪ್ರೆಸ್ ಮತ್ತು ಘೆಂಟ್ ಪ್ರದೇಶಗಳಿಗೆ ಕಳಿಸಿ ಅವುಗಳಿಗೆ ಬಣ್ಣ ಹಾಕಿ ಬಟ್ಟೆಗೆ ಸಿದ್ದಗೊಳಿಸುತ್ತಿದ್ದರು. ಆ ವೇಳೆಗೆ ಬ್ಲ್ಯಾಕ್ ಡೆತ್ ಎಂಬ ಇಂಗ್ಲಿಷ್ ಜವಳಿ ಉದ್ಯಮದ ಸಂಕಷ್ಟವಿದ್ದರೂ ಅದು ಕೈಗಾರಿಕೆಗೆ ಉಣ್ಣೆ ಉತ್ಪನ್ನದಲ್ಲಿ 10% ರಷ್ಟು ತನ್ನ ಕೊಡುಗೆ ನೀಡಿತ್ತು.ಹದಿನೈದನೆಯ ಶತಮಾನದಲ್ಲಿ ಇಂಗ್ಲಿಷ್ ಜವಳಿ ವ್ಯಾಪಾರ ಬೆಳವಣಿಗೆ ಕಂಡಿತ್ತು. ಆದರೆ ಉಣ್ಣೆ ರಫ್ತನ್ನು ಉತ್ತೇಜಿಸಲಾಗಿರಲಿಲ್ಲ. ಕಳೆದ ಶತಮಾನದಿಂದಲೂ ಉಣ್ಣೆಯ ವ್ಯಾಪಾರ ಅಥವಾ ಅದನ್ನು ಹೂಳುವ ಸಮಯದಲ್ಲಿ ಬಳಸುವುದನ್ನು ನಿಯಂತ್ರಿಸಲಾಗುತಿತ್ತು. ಒಂದು ದೇಶದಿಂದ ಉಣ್ಣೆಯನ್ನು ಕಳ್ಳಸಂತೆಯಲ್ಲಿ ಮಾರುವುದನ್ನು ಗೂಬೆತನ ಎನ್ನಲಾಗುತಿತ್ತಲ್ಲದೇ, ಒಂದು ಕಾಲದಲ್ಲಿ ಈ ಅಪರಾಧಕ್ಕೆ ಕೈಯೊಂದನ್ನು ಕಡಿಯಲಾಗುತಿತ್ತು. ನಂತರ ಉತ್ತಮ ಇಂಗ್ಲಿಷ್ ಉಣ್ಣೆಯು ರೇಷ್ಮೆಯೊಂದಿಗೆ ಪೈಪೋಟಿಗಿಳಿಯಬೇಕಾಯಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಸ್ಪರ್ಧೆ ಪ್ರಾರಂಭವಾಯಿತು. ನೇವಿಗೇಶನ್ ಕಾನೂನುಗಳ ಮೂಲಕ ಇದನ್ನು ನಿಯಂತ್ರಿಸಲಾಯಿತು. ನಂತರ 1699 ರಲ್ಲಿ ಇಂಗ್ಲಿಷ್ ಉಣ್ಣೆಯನ್ನು ಕೇವಲ ಇಂಗ್ಲಿಷ್ ರಿಗೆ ಮಾತ್ರ ಮಾರಾಟ ಮಾಡುವಂತೆ ಕಟ್ಟಳೆ ವಿಧಿಸಲಾಯಿತು. ಉಣ್ಣೆಯ ಉತ್ಪನ್ನಗಳಿಗೆ ಪ್ರೊತ್ಸಾಹಿಸಲು ಬಣ್ಣ ಹಾಕುವುದು ಮತ್ತು ಅದಕ್ಕೆ ಹೊಳಪು ನೀಡುವ ಭರಾಟೆ ಸುರುವಾಯಿತು. ಪ್ರತಿಯೊಂದು ಜವಳಿ ವ್ಯಾಪಾರ ಕೇಂದ್ರದಲ್ಲಿ ಉಣ್ಣೆ ಸಿದ್ದಪಡಿಸುವುದು ಉಪವೃತ್ತಿಗಳಲ್ಲಿ ವಿಂಗಡಣೆಯಾಯಿತು. ಇದನ್ನು ಇಂಗ್ಲಿಷ್ ರು “ಪುಟಿಂಗ್ ಔಟ್ ಸಿಸ್ಟೆಮ್ ” ಅಂದರೆ ಇದರ ವ್ಯಾಪಾರಿ ವಿವಿಧ ಹಂತಗಳ ವಿಭಜನೆ ಜಾರಿಯಾಯಿತು. ಅದನ್ನೇ “ಗುಡಿ ಕೈಗಾರಿಕೆ” ಎಂದೂ ಇದನ್ನು ಜರ್ಮನ್ ರು ವರ್ಗಾಸ್ ಪದ್ದತಿ ಎಂದು ಕರೆದರು. ಈ ಪದ್ದತಿಯಲ್ಲಿ ಕಚ್ಚಾ ಉಣ್ಣೆಯನ್ನು ವ್ಯಾಪಾರಿ ನೀಡಿ ಅದು ಪೂರ್ಣಗೊಂಡು ಹ್ಯಾರೀಸ್ ನೇಯ್ಗೆಗಳು ಆಗಿ ಅಂದರೆ ಸಂಪೂರ್ಣ ಸಿದ್ದಗೊಂಡ ನಂತರ ಖರೀದಿಸುತ್ತಿದ್ದ. ಕುಶಲಕಲೆಗಾರರಿಗೆ ಲಿಖಿತ ಒಪ್ಪಂದಗಳನ್ನು ಮಾಡಿಸಲಾಗುತಿತ್ತು. ಫೆರ್ನಾಂಡ್ ಬ್ವ್ರುಡೆಲ್ ಎಂಬುವವರು ಈ ಪದ್ದತಿಯು ಹದಿಮೂರನೆಯ ಶತಮಾನದಲ್ಲಿತ್ತೆಂದು ಉಲ್ಲೇಖಿಸುತ್ತಾರೆ. ಆಗಿನ ಆರ್ಥಿಕ ಅಭಿವೃದ್ಧಿಯನ್ನು 1275 ರ ಲೇಖನಗಳಲ್ಲಿ ಬರೆದಿದ್ದಾರೆ. ಆ ಪದ್ದತಿ ಸಾಕಷ್ಟು ಜನಪ್ರಿಯವಾಗಿತ್ತು. ಇದು ಕೆಲವು ಷರತ್ತು ಮತ್ತು ಕಟ್ಟಳೆಗಳಿಗೂ ಒಳಗಾಗಿತ್ತು.

ಉಣ್ಣೆ : ಜವಳಿ ವರ್ಗದ ಫೈಬರ್ ಎಳೆಗಳು
ಉಣ್ಣೆ ಬಟ್ಟೆ

ತೊಡುವ ಉಡುಪಲ್ಲದೇ ಉಣ್ಣೆಯನ್ನು ಬ್ಲ್ಯಾಂಕೆಟ್ ಗಳಿಗಾಗಿ. ಕುದರೆ ಮೇಲಿನ ರಗ್ ಗಳಿಗಾಗಿ, ಆಸನದ ಬಟ್ಟೆಗಳಿಗಾಗಿ, ಕಾರ್ಪೆಟ್ ತಯಾರಿಕೆಗೆ, ಗೋಂದು ಹಾಕಿದ ಉಣ್ಣೆ, ಉಣ್ಣೆ ಪ್ರತ್ಯೇಕತೆಗೆ ಪೀಠೋಪಕರಣ ದಿಂಬುಗಳಿಗಾಗಿ ಇದನ್ನು ಬಳಸುತ್ತಾರೆ. ಗೋಂದು ಮಿಶ್ರಿತ ಉಣ್ಣೆಯನ್ನು ಪಿಯಾನೊ ಅಡ್ಡ ಹಲಗೆಗಳಿಗೆ ಮತ್ತು ಅಡ್ಡ ವಾಸನೆಗಳ ತಡೆಗೆ ಇದನ್ನು ಹಾಗು ಯಂತ್ರೋಪಕರಣ ಒರೆಸುವ ಸ್ಟಿರಿಯೊ ಸ್ಪೀಕರ್ ಗಳ ಒರೆಸಲು ಬಳಸಲಾಯಿತು. ಪ್ರಾಚೀನ ಗ್ರೀಕ್ ರು ತಮ್ಮ ಗುಡಿಸಲುಗಳ ನ್ನು ಗೋಂದು ಮಿಶ್ರಿತ ಗೋಂದುಗಳಿಂದ ನಿರ್ಮಿಸುತ್ತಿದ್ದರು. ಸ್ತನಕ್ಕೆ ಹಾಕುವ ಕವಚಗಳನ್ನು ಉಣ್ಣೆಯಿಂದ ತಯಾರಿಸುತ್ತಾರೆ. ಸಾಂಪ್ರದಾಯಕವಾಗಿ ಪಾರದರ್ಶಕ ಒಳ ವಸ್ತ್ರ ಉಡುಪುಗಳಿಗೆ ಹೊದಿಕೆಯಾಗಿ ಉಣ್ಣೆಯನ್ನು ಬಳಸುತ್ತಾರೆ. ಉಣ್ಣೆ ಎಳೆಗಳು ತೇವ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದ್ದು ಇದು ಹೈಗ್ರೊಸ್ಕೊಪಿಕ್, ಒದ್ದೆ ವಸ್ತ್ರಗಳ ಮುಚ್ಚಲು, ಒಳ ಉಡುಪು ಸರಿಯಾಗಿರಲು ಉಣ್ಣೆ ಉಪಯೋಗಿಸುತ್ತಾರೆ. ಉಣ್ಣೆಯನ್ನು ತುಪ್ಪಳದ ಕೊಬ್ಬಿನ ಮೂಲಕ ಸಂಸ್ಕರಸಲಾಗುತ್ತದೆ, ಇದು ನೀರು ಹಿಡಿಯುವುದಿಲ್ಲ. ಗಾಳಿಯಿಂದ ರಕ್ಷಣೆ, ಕೆಲಮಟ್ಟಿಗೆ ಬ್ಯಾಕ್ಟೀರಿಯಾಗಳನ್ನೂ ತಡೆಯುತ್ತದೆ. ದೇಹದ ದುರ್ವಾಸನೆ ಹೋಗಲಾಡಿಸುತ್ತದೆ. ಕೆಲವು ಆಧುನಿಕ ವಸ್ತ್ರಡೈಪರ್ ಗಳು ಉಣ್ಣೆ ಎಳೆಗಳ ಬಳಸಿ ರಕ್ಷಿಸಲು ಬಳಸಲಾಗುತ್ತದೆ. ಹಲವಾರು ವಾಣಿಜ್ಯಕ ಹೆಣಿಗೆ ವಿಧಗಳು ಮಾರುಕಟ್ಟೆಯಲ್ಲಿವೆ. ಮೊದಲ ಹಂತದ ಅಧ್ಯಯನಗಳ ಪ್ರಕಾರ ಉಣ್ಣೆಯ ಒಳ ಉಡುಪುಗಳು ಉಷ್ಣತೆ ಮತ್ತು ಬೆವರಿನ ದುಷ್ಪರಿಣಾಮಗಳ ತಡೆಯಲು ಸಮರ್ಥವಾಗಿದೆ.

ಮೆರಿನೊ ಉಣ್ಣೆಯನ್ನು ಮಕ್ಕಳ ಹಾಸಿಗೆ ಕೂಸುಗಳ ಕವಚ ಬ್ಲ್ಯಾಂಕೆಟ್ ಗಳು ಮತ್ತು ಕೂಸು ಮಲಗುವ ಚೀಲಗಳ ತಯಾರಿಕೆಗೆ ಬಳಸಲಾಗುತ್ತದೆ. ಉಣ್ಣೆಯು ಪ್ರಾಣಿಗಳ ಪ್ರೊಟೀನ್ ಆಗಿದ್ದರಿಂದ ಉತ್ತಮ ಗೊಬ್ಬರಕ್ಕಾಗಿಯೂ, ಭೂಮಿ ಫಲವತ್ತತೆಗೆಯೂ ಬಳಸಿದಾಗ ಅದು ನೈಟ್ರೊಜನ್ ಮತ್ತು ಅಮಿನೊ ಆಮ್ಲಗಳನ್ನು ಬಿಡುಗಡೆ ಮಾಡುತ್ತದೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ದೊಡ್ಡವರಲ್ಲಿ ಕೂಡ ಕಂಡುಬರುವ ಜಂತುಹುಳು

ಮಕ್ಕಳಲ್ಲಿ, ದೊಡ್ಡವರಲ್ಲಿ ಕೂಡ ಕಂಡುಬರುವ ಜಂತುಹುಳು

ಹಿಂದೂ ಪುರಾಣದಲ್ಲಿ ಬರುವ ಆರುಣಿ, ನಚಿಕೇತ

ಹಿಂದೂ ಪುರಾಣದಲ್ಲಿ ಬರುವ ಆರುಣಿ, ನಚಿಕೇತ