in ,

ಮೈಸೂರಿನಲ್ಲಿ ಹುಟ್ಟಿದ ಮೈಸೂರ್ ಪಾಕ್

ಮೈಸೂರ್ ಪಾಕ್
ಮೈಸೂರ್ ಪಾಕ್

ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ ಮತ್ತು ಹಿಂದಿನ ಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಮೈಸೂರನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲಾಗುತ್ತದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಅರಮನೆಗಳ ನಗರ ಎಂದೂ ಕರೆಯಲಾಗುತ್ತದೆ. ಕರ್ನಾಟಕ ರಾಜ್ಯದ ಎರಡನೇ ಅತಿ ದೊಡ್ಡ ನಗರವೆಂಬ ಪ್ರಖ್ಯಾತಿಯನ್ನೂ ಪಡೆದಿದೆ.

ಮೈಸೂರು ನಗರದ ಸ್ಥಾಪನೆ ಸುಮಾರು ೧೧ನೇ ಶತಮಾನದಲ್ಲಿ ನಡೆಯಿತೆಂದು ನಂಬಲಾಗಿದೆ. ೧೪ನೆಯ ಶತಮಾನದ ಕೊನೆಯ ಹೊತ್ತಿಗೆ ಒಡೆಯರ್ ವಂಶದ ಅರಸರು ಮೈಸೂರನ್ನು ಆಳಲಾರಂಭಿಸಿದರು. ಈ ವಂಶದ ಮೊದಲ ಅರಸು “ಯದುರಾಯ”. ಹಾಗಾಗಿ ವಂಶದ ಹೆಸರು ‘ಯದುವಂಶ’ ಎಂದಾಯಿತು. ಮೊದಲಿಗೆ ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದ ಮೈಸೂರು ಸಂಸ್ಥಾನ ೧೫೬೫ ರಲ್ಲಿ ವಿಜಯನಗರದ ಪತನದ ನಂತರ ಸ್ವತಂತ್ರ ರಾಜ್ಯವಾಯಿತು. ರಣಧೀರ ಕಂಠೀರವ ನರಸರಾಜ ಒಡೆಯರ್ ಈ ಸಂಸ್ಥಾನವನ್ನು ವಿಸ್ತರಿಸಿದವರಲ್ಲಿ ಮುಖ್ಯರು. ೧೮ನೆಯ ಶತಮಾನದಲ್ಲಿ ಒಡೆಯರ್ ಅರಸರ ಪ್ರಭಾವ ಕಡಿಮೆಯಾಗಿ ಹೈದರ್ ಅಲಿ ಮತ್ತು ಟೀಪು ಸುಲ್ತಾನ್‌ರ ಆಡಳಿತ ನಡೆಯಿತು.

ಇಂತಹ ಮೈಸೂರಿನಲ್ಲಿ, ಅರಮನೆಯ ಅಡುಗೆ ಬಟ್ಟರ ಕೈಯಲ್ಲಿ ಹುಟ್ಟಿದ ಸಿಹಿತಿನಿಸು ಮೈಸೂರ್ ಪಾಕ್.

ಮೈಸೂರು ಪಾಕ – ಕರ್ನಾಟಕದ ಪ್ರಸಿದ್ಧ ಸಿಹಿ ತಿಂಡಿ. ಮೈಸೂರು ಪಾಕ್ ಒಂದು ಕರ್ನಾಟಕದ ಸಮೃದ್ಧ ಸಿಹಿ ಭಕ್ಷ್ಯ ಆಗಿದೆ, ಇದನ್ನು ತುಪ್ಪದಿಂದ ತಯಾರಿಸಲಾಗುತ್ತದೆ. ಇದು ಮೈಸೂರಿನಲ್ಲಿ ಹುಟ್ಟಿಕೊಂಡಿತು. ಇದು ಹೇರಳ ಪ್ರಮಾಣದಲ್ಲಿ ತುಪ್ಪವನ್ನು ಬಳಸಿ ಮತ್ತು ಸಕ್ಕರೆ, ಕಡಲೆ ಹಿಟ್ಟು, ಏಲಕ್ಕಿಯನ್ನು ಬಳಸಿ ಮಾಡಲಾಗುತ್ತದೆ.

ಮೈಸೂರಿನಲ್ಲಿ ಹುಟ್ಟಿದ ಮೈಸೂರ್ ಪಾಕ್
ಮೈಸೂರ್ ಪಾಕ್

ಪಾಕ್ ಅಥವಾ ಪಾಕ, ನಿಖರವಾಗಿ, ಸಂಸ್ಕೃತ ಮತ್ತು ಇತರೆ ಭಾರತೀಯ ದೇಶೀಯ ಭಾಷೆಗಳ, ಸಿಹಿ ಎಂದು ಅರ್ಥ ಕೊಡುತ್ತದೆ. ಇದು ಸಾಂಪ್ರದಾಯಿಕವಾಗಿ ಮದುವೆ ಮತ್ತು ದಕ್ಷಿಣ ಭಾರತದ ಇತರ ಹಬ್ಬಗಳಲ್ಲಿ ಬಡಿಸಲಾಗುತ್ತದೆ, ಮತ್ತು ಜೊತೆಗೆ ಶ್ರೀಮಂಥಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಕನ್ನಡದಲ್ಲಿ ಪಾಕ ಶಾಸ್ತ್ರ ಅಂದರೆ ಸಣ್ಣ ಪಾಕ ಅಡುಗೆ ಪ್ರಕ್ರಿಯೆಗಳು ಅಥವಾ ಅಡುಗೆ ತಂತ್ರಗಳು ಎಂದು ಅರ್ಥ.

ವಿಶಿಷ್ಟ ಬಗೆಯ ಮೈಸೂರ್ ಪಾಕ್ ಜನ್ಮ ತಾಳಿದ್ದು ಮೈಸೂರಿನ ಅರಮನೆಯ ಪಾಕಶಾಲೆಯಲ್ಲಿ ಎಂದರೆ ಅಚ್ಚರಿಯಾಗಬಹುದು. ಅದು ಹೇಗೆ ಜನ್ಮ ತಾಳಿತು ಎಂಬುವುದು ಕೂಡ ಕುತೂಹಲಕಾರಿಯೇ, ಇಷ್ಟಕ್ಕೂ ಮೈಸೂರ್ ಪಾಕ್ ನಂತಹ ಸಿಹಿ ತಿನಿಸನ್ನು ತಯಾರು ಮಾಡಿದವರು ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರು.

ರಾಜ ಕುಟುಂಬಕ್ಕೆ ಬೇಕಾದ ಸಿಹಿ ಮತ್ತು ಖಾರವನ್ನು ಇವರೇ ತಯಾರಿಸುತ್ತಿದ್ದರು. ಒಮ್ಮೆ ಮಹಾರಾಜರು ತಿಂಡಿ ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಕಾಕಾಸುರ ಮಾದಪ್ಪನವರಿಗೆ ಹೊಸದಾದ ಯಾವುದಾದರೊಂದು ತಿಂಡಿ ತಯಾರಿಸುವಂತೆ ಆಜ್ಞೆ ಮಾಡಿದರು.

ಇವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆ ಯಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದರು. ರಾಜ ಕುಟುಂಬಕ್ಕೆ ಬೇಕಾದ ಸಿಹಿ ಮತ್ತು ಖಾರವನ್ನು ಇವರೇ ತಯಾರಿಸುತ್ತಿದ್ದರು. ಒಮ್ಮೆ ಮಹಾರಾಜರು ತಿಂಡಿ ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಕಾಕಾಸುರ ಮಾದಪ್ಪನವರಿಗೆ ಹೊಸದಾದ ಯಾವುದಾದರೊಂದು ತಿಂಡಿ ತಯಾರಿಸುವಂತೆ ಆಜ್ಞೆ ಮಾಡಿದರು.
ಮಹಾರಾಜರು ಹೇಳಿದ ಮೇಲೆ ಮುಗಿಯಿತು. ಮರು ಮಾತನಾಡುವ ಹಾಗಿಲ್ಲ. ಹೀಗಾಗಿ ಏನು ಹೊಸ ತಿಂಡಿ ತಯಾರಿಸುವುದು ಎಂದು ಅವರು ಆಲೋಚಿಸ ತೊಡಗಿದರು. ತಮಗೆ ತೋಚಿದ ತಿಂಡಿ ತಯಾರಿಸಲು ‘ಕಾಕಾಸುರ ಮಾದಪ್ಪ’ ಮುಂದಾದರು.ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಕೊಟ್ಟರು.

ಮೈಸೂರಿನಲ್ಲಿ ಹುಟ್ಟಿದ ಮೈಸೂರ್ ಪಾಕ್
ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್


ಇದರ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು ಬೆನ್ನು ತಟ್ಟಿ ಪ್ರಶಂಶಿಸಿದರು. ಆದರೆ, ಈ ಹೊಸ ತಿಂಡಿಗೆ ಏನಾದರೊಂದು ಹೆಸರಿಡಬೇಕಲ್ಲವೆ? ಏನು ಹೆಸರು ಇಡುವುದೆಂದು ಮಹಾರಾಜರು ಆಲೋಚಿಸಿದರು. ಆಗ ಅವರಿಗೊಂದು ಯೋಚನೆ ಬಂದಿತು. ರುಚಿ ಶುಚಿಯಾದ ಅಡುಗೆಗೆ ‘ನಳಪಾಕ’ ಎಂದು ಕರೆಯುತ್ತೇವೆ. ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ ‘ಮೈಸೂರು ಪಾಕ’ ಎಂದು ಹೆಸರಿಡೋಣ ಎಂದು ನಿರ್ಧರಿಸಿದರು.

ಈ ಸಿಹಿಯ ರಚನೆ ಮಿಠಾಯಿಗಳಿಗೆ ಹೋಲುತ್ತದೆ. ತಯಾರಿಸಲು ಬೇಕಾದ ಸಾಮಾಗ್ರಿಗಳು-ಕಡಲೆಹಿಟ್ಟು, ಸಕ್ಕರೆ, ತುಪ್ಪ, ರಿಫೈನ್ಡ್ ಎಣ್ಣೆ.

ಕನ್ನಡದಲ್ಲಿ ಪಾಕ ಎಂದರೆ ನೀರಿನ ಸಮಾನ ಪ್ರಮಾಣದಲ್ಲಿ ಸಕ್ಕರೆಯನ್ನು ಕುದಿಸಿದಾಗ ಸಿಗುವ ಸಿಹಿಯಾದ ಜಿಗುಟಾದ ಸಿರಪ್; ನಿರ್ದಿಷ್ಟವಾಗಿ ಮೈಸೂರು ಪಾಕ್, ಸರಳ ಸಿರಪ್ ಅನ್ನು ಸಾಫ್ಟ್ ಬಾಲ್ ಹಂತದವರೆಗೂ ಕಾಯಿಸಲಾಗುತ್ತದೆ. ಸಿರಪ್ ಜಿಲೇಬಿ, ಬಾದಾಮ್ ಪುರಿ ಮತ್ತು ಹಲವಾರು ಭಾರತೀಯ ಸಿಹಿ ಭಕ್ಷ್ಯಗಳಲ್ಲಿ, ಮೈಸೂರು ಪಾಕ್ ಮತ್ತು ಇತರರು ಪ್ರಾಥಮಿಕ ಸಿಹಿಕಾರಕ ವಸ್ತುವಾಗಿ ಬಳಸಲಾಗುತ್ತದೆ. ಸಿರಪ್ ಅನ್ನು ಏಲಕ್ಕಿ ಮತ್ತು ಗುಲಾಬಿ, ಜೇನು ಇತ್ಯಾದಿ ಹಲವಾರು ಮಸಾಲೆ ಪರಮಸತ್ವಗಳ ಸುವಾಸನೆ ಹೊಂದಿರುತ್ತದೆ, ಪಾಕ ಸಿರಪ್ ತಯಾರಿಕೆ ಒಂದು ಕುಶಲ ಕಲಾ ಮತ್ತು ಕೆಲವು ಅಡುಗೆ ಭಟ್ಟರು ಅದನ್ನು ರಹಸ್ಯವಾಗಿ ಇಟ್ಟಿರುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅನ್ನ ದೇವರು

ಅನ್ನ ದೇವರು

ಕೇದಗೆ ಹೂವು

ಕೇದಗೆ ಹೂವು