in

ಸಪ್ತ ಲೋಕಗಳು ಇರುವುದು ನಿಜಾನಾ?

ಸಪ್ತ ಲೋಕಗಳು ಇರುವುದು ನಿಜಾನಾ
ಸಪ್ತ ಲೋಕಗಳು ಇರುವುದು ನಿಜಾನಾ

ಹಿಂದೂ ಧರ್ಮವು ಹದಿನಾಲ್ಕು ಲೋಕಗಳನ್ನು ವರ್ಣಿಸುತ್ತವೆ. ಏಳು ಊರ್ಧ್ವ ಲೋಕಗಳು(ಸ್ವರ್ಗ) ಮತ್ತು ಏಳು ಅಧೋ ಲೋಕಗಳು (ಪಾತಾಳ) ಭೂಮಿಯನ್ನು ಮೇಲಿನ ಏಳು ಲೋಕಗಳಲ್ಲಿ ಅತ್ಯಂತ ಕೆಳಗಿನದ್ದೆಂದು ಪರಿಗಣಿಸಲಾಗಿದೆ. ಏಳು ಪಾರಮಾರ್ಥಿಕ ಗಳೇ ಊರ್ಧ್ವ ಲೋಕಗಳು, ಅವುಗಳೆಂದರೆ ಭು, ಭುವಾಸ್, ಸ್ವರ್, ಮಹಾಸ್, ಜನಸ್, ತಪಸ್, ಮತ್ತು ಸತ್ಯ, ಬ್ರಹ್ಮನಿಂದ ಆಳಲ್ಪಟ್ಟ ಲೋಕ; ಮತ್ತು ಅಧೋ ಲೋಕಗಳು “ಏಳು ಪಾತಾಳಲೋಕಗಳು” ಅಥವಾ ಪಾತಾಳಗಳು, ಆತಾಳ, ವಿತಾಳ, ಸುತಾಳ, ರಸಾತಾಳ, ತಲತಾಳ, ಮಹಾತಾಳ, ಪಾತಾಳ.

ಪುರಾಣ ಮತ್ತು ಶಾಸ್ತ್ರಗಳಲ್ಲಿ ಏಳು ಎಂಬ ಸಂಖ್ಯೆಗೆ ಹೆಚ್ಚಿನ ಮಹತ್ವವಿದೆ. ಜಾನಪದದಲ್ಲಿ ಇದು ಪ್ರೇರಣೆಯ ಅಂಕಿ. ಪೃಥು ಮಹಾರಾಜನು ಈ ಭೂಮಿಯನ್ನು ಏಳು ಭಾಗಗಳಾಗಿ ವಿಂಗಡಿಸಿದನಂತೆ. ಏಳು ವರ್ಷ, ಏಳು ದಿನ, ಏಳು ತಿಂಗಳು, ಏಳು ಬಣ್ಣ, ಏಳು ಸಮುದ್ರ, ಸಪ್ತ ಋಷಿಗಳು, ಸಪ್ತ ಮಾತೃಕೆಯರು, ಸಪ್ತಪದಿ, ಸಪ್ತಸ್ವರ, ಏಳುಮಲೆ, ಎಪ್ಪತ್ತೇಳು ಮಲೆ, ಏಳು ಕುಂಡಲವಾಡ, ಏಳೇಳು ಜನ್ಮ, ಏಳುಮಲ್ಲಿಗೆ ತೂಕದ ರಾಜಕುಮಾರಿ ಹೀಗೆ ಏಳು ಎಂಬ ಸಂಖ್ಯೆ ಮಹತ್ತರವಾದುದಾಗಿದೆ.

ಭೂಮಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಲೋಕಗಳನ್ನು ವಾಸ್ತವ್ಯದ ತಾತ್ಕಾಲಿಕ ಸ್ಥಳಗಳನ್ನಾಗಿ ಈ ಕೆಳಗೆ ಸೂಚಿಸಿದಂತೆ ಉಪಯೋಗಿಸಲಾಗಿತ್ತು: ಭೂಮಿಯಮೇಲೆ ಯಾರಾದರೂ ಒಬ್ಬರು ಮರಣಹೊಂದಿದ ನಂತರ, ಮರಣದ ದೇವರು ಅಧಿಕೃತವಾಗಿ ‘ಯಮ ಧರ್ಮ ರಾಜ’ – ಯಮ ಎಂದು ಕರೆಯಲ್ಪಡುವ, ನ್ಯಾಯಮೂರ್ಥಿಯ ದೇವರು. ಸತ್ತವರು ಭೂಮಿಯ ಮೇಲೆ ಇರುವಾಗ ಮಾಡಿದ ಒಳ್ಳೆಯ/ಕೆಟ್ಟ ಕಾರ್ಯಗಳನ್ನು ಸರಿದೂಗಿಸಿ ನೋಡುತ್ತಾನೆ ಮತ್ತು ಅದರಿಂದ ಅವರ ಆತ್ಮವು ಸ್ವರ್ಗಕ್ಕೆ ಹೋಗಬೇಕಾ ಅಥವಾ ನರಕಕ್ಕೆ ಹೋಗಬೇಕಾ, ಮತ್ತು ಎಷ್ಟುದಿನಗಳ ಕಾಲ, ಯಾವ ಸಾಮರ್ಥ್ಯದಲ್ಲಿ ಉಳಿಯುತ್ತದೆ ಎಂಬುದನ್ನು ತೀರ್ಮಾನಿಸುತ್ತಾನೆ.

ಸಪ್ತ ಲೋಕಗಳು ಇರುವುದು ನಿಜಾನಾ?
ನರಕ

ಧರ್ಮಶಾಸ್ತ್ರದ ಕೆಲವು ಭಾಷಾಂತರಗಳ ಹೇಳಿಕೆಯ ಪ್ರಕಾರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಸಮನಾಗಿದ್ದರೆ, ಅಂತಹವರ ಆತ್ಮವು ಸ್ವರ್ಗದಲ್ಲಾದರೂ ಅಥವಾ ನರಕದಲ್ಲಾದರೂ ಜನಿಸುತ್ತದೆ, ಆದರೆ ಎರಡರಲ್ಲು ಅಲ್ಲ, ಹೀಗಿರುವಾಗ ಮತ್ತೊಂದು ಭೋದನೆಯ ಪ್ರಕಾರ, ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಒಂದನ್ನೊಂದು ಅಳಿಸುವುದಿಲ್ಲ. ಎರಡು ಪ್ರಸಂಗಗಳಲ್ಲೂ, ಆತ್ಮವು ಇದು ಪ್ರವೇಶಿಸುವ ಲೋಕಗಳಿಗೆ ಸೂಕ್ತವಾದ ಶರೀರವನ್ನು ಸ್ವಾದೀನಪಡಿಸಿಕೊಳ್ಳುತ್ತದೆ. ಆ ಲೋಕಗಳಲ್ಲಿನ ಆತ್ಮದ ಸಮಯ ಮುಗಿದ ನಂತರ, ಇದು ಭೂಮಿಗೆ ಮರಳುತ್ತದೆ ಭೂಮಿಯ ಮೇಲೆ ಮರುಜನಿಸುತ್ತದೆ. ಕೇವಲ ಭೂಮಿಯಿಂದ, ಮತ್ತು ಕೇವಲ ಮಾನವ ಜನ್ಮದ ನಂತರ ಅಷ್ಟೆ ಆತ್ಮವು ಮೋಕ್ಷವನ್ನು ಪಡೆಯುತ್ತದೆ, ಇದು ಜನನ ಮತ್ತು ಮರಣ ಚಕ್ರದ ಬಿಡುಗಡೆಯ ಸ್ಥಿತಿ ಹಾಗೂ ಸಂಪೂರ್ಣ ಮತ್ತು ಶಾಶ್ವತ ಪರಮಾನಂದದ ಸ್ಥಿತಿಯೂ ಹೌದು ಎಂದು ಪರಿಗಣಿಸಲಾಗಿದೆ.

ಜನಪದರ ದೃಷ್ಠಿಯಲ್ಲಿ ಕಷ್ಟ-ಸುಖಗಳು ಬದುಕಿನ ಏಳು-ಬೀಳುಗಳಿದ್ದ ಹಾಗೆ. ಏಳು ಎಂಬ ಸಂಖ್ಯೆ ಅಪಶಕುನಕಾರಿ ಸಂಖ್ಯೆ. ಏಳೇಳು ಜನ್ಮದ ಕಷ್ಟ, ಏಳು ವನವಾಸ, ಏಳು ರಾಹುವಿನ ಸಂಖ್ಯೆ, ಏಳು ಎಂಬ ಪದವನ್ನು ಮನೆಯೊಳಗೆ ಉಚ್ಚರಿಸಬಾರದು ಎಂದು ಹೇಳುತ್ತಾರೆ. ಏಳು ಎಂಬ ಸಂಖ್ಯೆಯೊಂದಿಗೆ ಹಲವಾರು ನಂಟುಗಳಿರುವಂತೆಯೇ, ಏಳು ಪಾತಾಳಗಳು ಸಹ ಗುರುತಿಸಿಕೊಂಡಿವೆ.

ಭಾರತೀಯ ಧರ್ಮಗಳಲ್ಲಿ, ಪಾತಾಳ ಬ್ರಹ್ಮಾಂಡದ ನೆಲದಡಿಯ ಪ್ರಾಂತ್ಯಗಳು ಎಂದು ಹೇಳಲಾಗುತ್ತದೆ. ಅಂದರೆ ಭೂಮಿಯ ಕೆಳಗಿರುವ ಪ್ರದೇಶವನ್ನು ಪಾತಾಳ ಲೋಕ ಎನ್ನುತ್ತಾರೆ. ವಿಶ್ವ ವಿಜ್ಞಾನದಲ್ಲಿ, ಬ್ರಹ್ಮಾಂಡವನ್ನು ಮೂರು ಜಗತ್ತುಗಳಾಗಿ ವಿಭಜಿಸಲಾಗುತ್ತದೆ: ಸ್ವರ್ಗ ಮೇಲಿನ ಪ್ರದೇಶಗಳು, ಪೃಥ್ವಿ (ಭೂಮಿ) ಮತ್ತು ಪಾತಾಳ. ಪಾತಾಳವು ಏಳು ಪ್ರದೇಶಗಳು ಅಥವಾ ಲೋಕಗಳಿಂದ ಕೂಡಿದೆ, ಅವುಗಳಲ್ಲಿ ಏಳನೇಯ ಮತ್ತು ಅತ್ಯಂತ ಕೆಳಗಿನದನ್ನು ಪಾತಾಳ ಅಥವಾ ನಾಗಲೋಕ ಎಂದು ಕರೆಯಲಾಗುತ್ತದೆ. ದಾನವರು, ದೈತ್ಯರು, ಯಕ್ಷರು ಮತ್ತು ನಾಗರು ಪಾತಾಳ ಪ್ರದೇಶಗಳಲ್ಲಿ ಇರುತ್ತಾರೆ ಎಂದು ಹೇಳಲಾಗುತ್ತದೆ.

ವಿಷ್ಣು ಪುರಾಣದಲ್ಲಿ ನಾರದರು ಪಾತಾಳವನ್ನು ಸ್ವರ್ಗಕ್ಕಿಂತ ಸುಂದರವೆಂದು ವರ್ಣಿಸುತ್ತಾರೆ. ಅದ್ಭುತ ಆಭರಣಗಳು, ಸುಂದರ ತೋಪುಗಳು ಮತ್ತು ಸರೋವರಗಳು ಮತ್ತು ಸುಂದರ ಅಸುರ ಕನ್ಯೆಯರಿಂದ ತುಂಬಿದ್ದು, ಎಂದು ಪಾತಾಳವನ್ನು ವರ್ಣಿಸಲಾಗಿದೆ. ಇಲ್ಲಿನ ಮಣ್ಣು ಬಿಳಿ, ಕಪ್ಪು, ಕೆನ್ನೀಲಿ, ಮರಳಿನಂತೆ, ಹಳದಿ, ಕಲ್ಲಿನಿಂದ ಕೂಡಿದೆ ಮತ್ತು ಚಿನ್ನವನ್ನು ಹೊಂದಿದೆ ಎಂದು ಹೇಳುತ್ತಾರೆ.

ಭಾಗವತ ಪುರಾಣವು ಏಳು ಕೆಳಗಿನ ಲೋಕಗಳನ್ನು ಭೂಮಿಯ ಕೆಳಗಿನ ಗ್ರಹಗಳು ಅಥವಾ ಗ್ರಹಗಳ ವ್ಯವಸ್ಥೆಗಳೆಂದು ಪರಿಗಣಿಸುತ್ತದೆ. ಈ ಲೋಕಗಳು ಸ್ವರ್ಗವನ್ನು ಒಳಗೊಂಡ ಬ್ರಹ್ಮಾಂಡದ ಮೇಲಿನ ಲೋಕಗಳಿಗಿಂತ ಭವ್ಯವಾಗಿವೆ ಎಂದು ವರ್ಣಿಸಲಾಗಿದೆ. ಭಾಗವತ ಪುರಾಣದಲ್ಲಿ ವಿವರಿಸಲಾದ ಕೆಳಗಿನ ಏಳು ಲೋಕಗಳೆಂದರೆ: ಅತಳ, ವಿತಳ, ಸುತಳ, ತಲಾತಳ, ಮಹಾತಳ, ರಸಾತಳ, ಮತ್ತು ಪಾತಾಳ.

ಖಗೋಳಶಾಸ್ತ್ರದ ಸೂರ್ಯ ಸಿದ್ಧಾಂತವು, ದಕ್ಷಿಣ ಗೋಲಾರ್ಧವನ್ನು ಪಾತಾಳವೆಂದು ಮತ್ತು ಉತ್ತರ ಗೋಲಾರ್ಧವನ್ನು ಜಂಬೂದ್ವೀಪವೆಂದು ಸೂಚಿಸುತ್ತದೆ.

ಸಪ್ತ ಲೋಕಗಳು ಇರುವುದು ನಿಜಾನಾ?
ಮಹಾವಿಷ್ಣು ವಾಮನನಾಗಿ

ಮಹಾವಿಷ್ಣು ವಾಮನನಾಗಿ ಬಲಿ ಚಕ್ರವರ್ತಿಯ ತಲೆ ಮೇಲೆ ಮೂರನೇ ಹೆಜ್ಜೆಯಿಟ್ಟು ಪಾತಾಳಕ್ಕೆ ತಳ್ಳಿದ ಎಂದು ಪುರಾಣದಲ್ಲಿ ಹೇಳಲಾಗುತ್ತದೆ. ಅಂದರೆ ಈಗಿನ ದಕ್ಷಿಣ ಅಮೆರಿಕದ ಪೆರು ದೇಶ, ಎಂದು ಅದನ್ನೇ ಕರೆಯಲಾಗುತ್ತದೆ ಎಂದು ತಿಳಿಸಲಾಗಿದೆ. ಏಶಿಯಾ, ಯುರೋಪ್ ಹಾಗೂ ಆಫ್ರಿಕಾ ಖಂಡಗಳು ಬಲಿ ಚಕ್ರವರ್ತಿಯು ಆಳ್ವಿಕೆಯಲ್ಲಿತ್ತು. ಬಲಿ ಉತ್ತಮ ರಾಜನಾಗಿದ್ದರೂ ದೇವತೆಗಳ ವಿರೋಧಿಯಾಗಿ ಬೆಳೆಯತ್ತಿದ್ದ‌. ಮುಂದೆ ಇವನಿಂದ ಅಪಾಯ ತಪ್ಪಿದ್ದಲ್ಲ ಎಂದು ತಿಳಿದು ದೇವತೆಗಳು ಕಾಪಾಡುವಂತೆ ಮಹಾವಿಷ್ಣುವಿಗೆ ಮೊರೆಯಿಟ್ಟರು.

ವಿಷ್ಣು ವಾಮನಾವತಾರಿಯಾಗಿ ಮಹಾನ್ ಶಕ್ತಿಶಾಲಿಯಾದ ಮತ್ತು ದಾನಿಯಾದ ರಾಕ್ಷಸ ದೊರೆ ಬಲಿಯಿಂದ ಮೂರು ಹೆಜ್ಜೆಗಳು ಭೂಭಾಗ ದಾನ ಪಡೆದು ಮೂರು ಹೆಜ್ಜೆಗಳಿಗೆ ಈಗಿನ ಏಶಿಯಾ, ಯುರೋಪ್, ಮತ್ತು ಆಫ್ರಿಕಾ ಖಂಡಗಳು ಅಳೆದ. ಹಾಗೇ ಮೂರು ಹೆಜ್ಜೆಗಳಲ್ಲಿ ದಾನ ನೀಡಿದ ಭೂಭಾಗದಲ್ಲಿ ಬಲಿಚಕ್ರವರ್ತಿಗೆ ಇರಲು ಹಕ್ಕಿಲ್ಲದೆ ಇರುವುದರಿಂದ, ಬಲಿಯನ್ನು ದಟ್ಟವಾದ ಕಾಡುಗಳಿಂದ ಕೂಡಿದ ದಕ್ಷಿಣ ಅಮೆರಿಕಕ್ಕೆ ಕಳುಹಿಸಿದ ಎಂದು ಹೇಳಲಾಗಿದೆ.

ವಿಷ್ಣು, ಬಲಿಯ ಚಲನವಲನಗಳ ಮಾಹಿತಿ ಪಡೆಯಲು ಅಸುರರು, ದೈತ್ಯರು,ದಾನವರನ್ನು ಕಳುಹಿಸಿದರು. ಅದು ಭಾರತದ ಪೂರ್ವದಿಂದ ದಕ್ಷಿಣ ಅಮೆರಿಕದ ಈಗಿನ ಪೆರು ಎಂದರೆ ಸುತಲ ಸಮುದ್ರಮಾರ್ಗದಲ್ಲಿ ಕಳುಹಿಸಿದ ಎಂದು ಹೇಳಲಾಗಿದೆ. ನಮಗೆ ಪಾತಾಳ ಅಂದಕ್ಷಣ ನೀರಿನ ಕೆಳಗೆ ಹೋಗಬೇಕು ಮತ್ತೊಂದು ಪಾತಾಳ ಎಲ್ಲಿದೆ ಅಂದಕ್ಷಣ ಭೂಮಿಯ ಕೆಳಗಿದೆಯೆಂದು ಕಾಲು ಒತ್ತಿ ತೋರಿಸುತ್ತೇವೆ. ಅಂದರೆ ಭಾರತದಲ್ಲಿ ಒಂದು ರಂಧ್ರವನ್ನು ಕೊರೆದರೆ ಅದು ದಕ್ಷಿಣ ಅಮೆರಿಕಾಗೆ ತಲುಪುತ್ತದೆ ಎಂದು ಹೇಳಲಾಗುತ್ತದೆ.

ಬಲಿಯ ಆಪ್ತಮಯ ಶ್ರೇಷ್ಠ ವಾಸ್ತುಶಿಲ್ಪಿ ಮಾಯನ್ಸ್, ನಾಗರಿಕತೆಯು ಇವನ ಹೆಸರಿಂದಲೇ ಬಂದಿದ್ದು. ಮಯ ಅತುಲ,ತಲಾತಲ ಎಂಬ ಪ್ರದೇಶಗಳನ್ನು ಕಟ್ಟಿದ. ಬಲಿಗಾಗಿ ಆಶ್ಮನಗರವನ್ನು ನಿರ್ಮಿಸಿದ. ಇದರ ಅವಶೇಷಗಳನ್ನು ಹಲವು ಪ್ರದೇಶಗಳಲ್ಲಿ ಈಗಲೂ ನೋಡಬಹುದು ಎಂದು ಹೇಳುತ್ತಾರೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ನಂದಿಯ ದೇವಸ್ಥಾನ

ಬೆಂಗಳೂರಿನಲ್ಲಿ ಶಿವನ ಪರಿಚಾರಕ ನಂದಿಯ ದೇವಸ್ಥಾನ : ದೊಡ್ಡ ಬಸವನ ಗುಡಿ

ಐರಾವತೇಶ್ವರ ದೇವಾಲಯ

ದ್ರಾವಿಡ ವಾಸ್ತುಶಿಲ್ಪದ ಹಿಂದೂ ದೇವಾಲಯ : ಐರಾವತೇಶ್ವರ ದೇವಾಲಯ