in

ಹೊಂಗೆ ಮರ: ಹೊಂಗೆ ಎಣ್ಣೆ ಉಪಯೋಗಗಳು

ಹೊಂಗೆ ಮರ: ಹೊಂಗೆ ಎಣ್ಣೆ ಉಪಯೋಗಗಳು
ಹೊಂಗೆ ಮರ: ಹೊಂಗೆ ಎಣ್ಣೆ ಉಪಯೋಗಗಳು

ಬಹಳ ಹಿಂದಿನ ಕಾಲದಿಂದಲೂ ಭಾರತೀಯರಿಗೆ ಚಿರಪರಿಚಿತವಿರುವ ಮರ. ರೈತರು ಗದ್ದೆ ಮತ್ತು ಹೊಲಗಳ ಬದಿಯಲ್ಲಿ ಬೆಳೆಸುತ್ತಾರೆ. ನೀರಿನ ನಾಲೆಗಳ ಬದಿಯಲ್ಲಿ ಸ್ವಾಭಾವಿಕವಾಗಿಯೇ ಬೆಳೆಯುತ್ತದೆ. ಎಲೆಗಳು ಹಸಿರು ಮತ್ತು ಹೊಳಪಿನಿಂದ ಜಿಡ್ಡಿನಿಂದ ಕೂಡಿರುತ್ತವೆ. ಹೂವುಗಳು ಗುಚ್ಚಾಕಾರವಾಗಿದ್ದು ಎಲೆಗಳ ನಡುವೆ ಕಂಗೊಳಿಸುತ್ತವೆ. ಹೂವುಗಳು ಗಾಢನೀಲಿವರ್ಣವನ್ನು ಹೊಂದಿರುತ್ತವೆ. ಕಾಯಿ ಗಟ್ಟಿಯಾಗಿದ್ದು ಉಬ್ಬಿರುತ್ತವೆ, ಬೀಜಗಳಿಂದ ಕಹಿಯಾದ ಎಣ್ಣೆಯನ್ನು ತೆಗೆಯುತ್ತಾರೆ.

ಹೊಂಗೆ ಮರ: ಹೊಂಗೆ ಎಣ್ಣೆ ಉಪಯೋಗಗಳು
ಹೊಂಗೆ ಮರ

ಆಯುರ್ವೇದ ಶಾಸ್ತ್ರದ ಪ್ರಕಾರ ಹೊಂಗೆ ಮರ ಒಂದು ಗಿಡ ಮೂಲಿಕೆ ಎಂದು ಗುರುತಿಸಲಾಗಿದೆ. ಬಿರು ಬೇಸಿಗೆಯ ಬಿಸಿಲಿನಲ್ಲಿ ಹೊಂಗೆ ಮರದ ನೆರಳು ಜೀವಕ್ಕೆ ಬಹಳ ತಂಪು ಎಂದು ಹೇಳುತ್ತಾರೆ. ಹಿಂದಿನ ಕಾಲದಲ್ಲಿ ಹೊಂಗೆ ಮರದ ಬೇರು, ಎಲೆಗಳು, ಹೂವುಗಳು ಮತ್ತು ಚಕ್ಕೆ ಎಲ್ಲವೂ ಔಷಧೀಯ ಪ್ರಯೋಜನಗಳಿಗಾಗಿ ಉಪಯೋಗಕ್ಕೆ ಬರುತ್ತಿದ್ದವು. ಜನರ ಬಹಳಷ್ಟು ಆರೋಗ್ಯ ಸಮಸ್ಯೆಗಳು ಹೊಂಗೆಯಿಂದ ನಿವಾರಣೆಯಾದ ಉದಾಹರಣೆಗಳು ಸಾಕಷ್ಟಿವೆ.

ಹೊಂಗೆ ಎಣ್ಣೆಯಿಂದ ಹಲವಾರು ಉಪಯೋಗಗಳಿವೆ.

ಹೊಂಗೆಯ ನೆರಳು ದಣಿವನ್ನು ಪರಿಹರಿಸುವುದಷ್ಟೇ ಅಲ್ಲದೆ ಮನಸ್ಸಿನ ದುಗುಡವನ್ನು ಕಳೆದು ಮನಸ್ಶಾಂತಿಯನ್ನು ನೀಡುವುದರಿಂದ ” ಹೊಂಗೆಯ ನೆರಳು, ತಾಯಿಯ ಮಡಿಲು” ಎಂಬ ನಾಣ್ಣುಡಿ ಪ್ರಚಲಿತದಲ್ಲಿದೆ.

ಮಧುಮೇಹಕ್ಕೆ
ಒಂದು ಹಿಡಿ ಹಸಿ ಅಥವಾ ಒಣಗಿದ ಹೊಂಗೆ ಎಲೆಗಳನ್ನು ತಂದು ಸಮ ಭಾಗ ಒಣಗಿದ ಹಾಗಲಕಾಯಿ ಮತ್ತು ನೇರಳೆ ಬೀಜಗಳನ್ನು ಕೂಡಿಸಿ ನುಣ್ಣಗೆ ಚೂರ್ಣ ಮಾಡಿ ಕದಡಿ ಸೇವಿಸುವುದು.

ಜೀರ್ಣಾಂಗ ವ್ಯವಸ್ಥೆಯನ್ನು ಪ್ರಬಲಗೊಳಿಸುವುದರ ಜೊತೆಗೆ ನನ್ನ ವಿಶೇಷವಾದ ಗುಣ ಲಕ್ಷಣದಿಂದ ಹೊಟ್ಟೆ ಹಸಿವು ಆಗುವಂತೆ ಮಾಡುತ್ತದೆ.

ಹೇನು ಕೆರೆ, ಮೀಸೆ,ಗಡ್ಡ ಮತ್ತು ತಲೆಯಲ್ಲಿ ಕೂದಲಿನ ನಾಶ ತಡೆಯಲು
ಒಣಗಿದ ಹೊಂಗೆ ಬೀಜಗಳನ್ನು ನೀರಿನಲ್ಲಿ ತೇದು ಗಂಧವನ್ನು ಕೂದಲು ಉದುರುವ ಕಡೆ ಹಚ್ಚುವುದು.

ಅರ್ಧ ತಲೆ ನೋವಿಗೆ
ಒಂದೆರೆಡು ಹೊಂಗೆ ಬೀಜಗಳನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು, ತೆಳು ಬಟ್ಟೆಯಲ್ಲಿ ಹಾಕಿ 2,3 ತೊಟ್ಟು ರಸವನ್ನು ಮೂಗಿನ ಹೊಳ್ಳೆಗಳಿಗೆ ಬಿಡುವುದು.

ದಿನದಲ್ಲಿ ಎರಡು ಬಾರಿ ಊಟ ಆದ ನಂತರ ಕಾಲು ಟೀ ಚಮಚದಿಂದ ಅರ್ಧ ಟೀ ಚಮಚ ಸೇವನೆ ಮಾಡಿ ಕೇವಲ ಕೆಲವೇ ದಿನಗಳಲ್ಲಿ ಆಸ್ಟಿಯೋ ಆರ್ಥರೈಟಿಸ್ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ತಲೆಯಲ್ಲಿ ಹೇನು ಮತ್ತು ಸೀರುಗಳಿಗೆ
ರಾತ್ರಿ ಮಲಗುವಾಗ ಹೊಂಗೆ ಎಣ್ಣೆಯನ್ನು ಕೂದಲಿಗೆ ಹಚ್ಚಿ ಬಟ್ಟೆ ಕಟ್ಟಿ ಮಲಗುವುದು. ಬೆಳಿಗ್ಗೆ ಎದ್ದು ಸೀಗೇ ಪುಡಿ ಹಾಕಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡುವುದು.

ಜೇನು ಹುಳುಗಳ ಕಡಿತಕ್ಕೆ
ಜೇನು ಹುಳು ಕಡಿದಿರುವ ಕಡೆ ಹೊಂಗೆ ಎಣ್ಣೆಯನ್ನು ಹಚ್ಚುವುದು, ಕಾಡಿನ ಅಕ್ಕಪಕ್ಕದಲ್ಲಿ ವಾಸಿಸುವವರು, ಸ್ವಲ್ಪ ಹೊಂಗೆ ಎಣ್ಣೆಯನ್ನು ಮನೆಯಲ್ಲಿ ಇಟ್ಟಿರುವುದು ಒಳ್ಳೆಯದು. ಸಮಯ ಬಂದಾಗ ಉಪಯೋಗಿಸಬಹುದು.

ಕೈಕಾಲು ಮತ್ತು ಕೀಲು ನೋವಿಗೆ
ಒಂದು ದೊಡ್ಡ ಚಮಚ ಎಣ್ಣೆಯನ್ನು ಪಾತ್ರೆಯಲ್ಲಿ ಹಾಕಿ ಮಂದಾಗ್ನಿಯಿಂದ ಕಾಯಿಸುವುದು. ಎಣ್ಣೆ ಬಿಸಿಯಾದ ಮೇಲೆ ಕೆಳಗಿಳಿಸುವಾಗ 5 ಗ್ರಾಂ ಆರತಿ ಕರ್ಪೂರವನ್ನು ಹಾಕುವುದು. ತೈಲವು ತಣ್ಣಗಾದ ನಂತರ ನೋವಿರುವ ಕಡೆ ಹಚ್ಚುವುದು.

ಹೊಂಗೆ ಮರ: ಹೊಂಗೆ ಎಣ್ಣೆ ಉಪಯೋಗಗಳು
ಹೊಂಗೆ ಎಣ್ಣೆ

ಗಡ್ಡೆಗಳ ನಿವಾರಣೆಗೆ
ಎಳ್ಳು, ಸಾಸಿವೆ, ಹೊಂಗೆ ಬೀಜ, ಎಲ್ಲಾ 10 ಗ್ರಾಂ ಸೇರಿಸಿ ಸ್ವಲ್ಪ ನೀರು ಹಾಕಿ ನುಣ್ಣಗೆ ಅರೆಯುವುದು. ಅನಂತರ ಬಹುಕಾಲದಿಂದ ವಾಸಿಯಾಗದೆ ಇರುವ ಗಡ್ಡೆ ಮತ್ತು ಕುರುಗಳಿಗೆ ಲೇಪಿಸುವುದು.

ಹಲ್ಲಿನ ಸಮಸ್ಯೆಗಳಿಗೆ
ಗೇಣುದ್ದ, ಬೆರಳು ಗಾತ್ರದ ಹೊಂಗೆ ಹಸಿ ಕಡ್ಡಿಯನ್ನು ತಂದು ಹಲ್ಲುಗಳಿಂದ ಚೆನ್ನಾಗಿ ಕಡಿದು, ಬ್ರಷಿನಂತೆ ಮಾಡಿಕೊಳ್ಳುವುದು. ಇದರಿಂದ ಹಲ್ಲುಗಳನ್ನು ತಿಕ್ಕುತ್ತಿದ್ದರೆ ಕ್ರಿಮಿಗಳು ನಾಶವಾಗುವವು. ಒಸಡುಗಳು ಗಟ್ಟಿಯಾಗುವುವು ಮತ್ತು ಬಾಯಿಯ ದುರ್ಗಂಧ ಪರಿಹಾರವಾಗುವುದು.

ಕುರುಗಳಲ್ಲಿ ಬಿದ್ದಿರುವ ಕ್ರಿಮಿಗಳ ನಾಶ ಮಾಡಲು
ಬೇವಿನ ಮತ್ತು ಹೊಂಗೆಯ ಎಲೆಗಳನ್ನು ಸಮ ತೂಕ ಸೇರಿಸಿ ಸ್ವಲ್ಪ ಅರಿಶಿನ ಕೊಂಬಿನ ಪುಡಿಯನ್ನು ಹಾಕಿ ನುಣ್ಣಗೆ ಅರೆದು ಹುಣ್ಣುಗಳಿಗೆ ಲೇಪಿಸಿ ಬಟ್ಟೆ ಕಟ್ಟುವುದು.

ಮಲೇರಿಯಾ ಜ್ವರಕ್ಕೆ
ಹೊಂಗೆ ಬೀಜಗಳನ್ನು ತಂದು ಅದರ ಮೇಲಿನ ಕೆಂಪು ಸಿಪ್ಪೆಯನ್ನು ಬೇರ್ಪಡಿಸಿ ಚೂರ್ಣ ಮಾಡುವುದು.ಒಂದು ವೇಳೆಗೆ 1/4 ಟೀ ಚಮಚ ಚೂರ್ಣವನ್ನು ಜೇನಿನೊಂದಿಗೆ ಸೇವಿಸುವುದು.

ದೇಹದಲ್ಲಿ ಕುರುಗಳು ಆಗಿದ್ದರೆ ಹೊಂಗೆ ಎಲೆ, ಬೇವಿನ ಎಲೆ ಅರಿಷಿನವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನ ಅರೆದು ಕುರುಗಳು ಇರುವ ಕಡೆ ಹಚ್ಚುವುದರಿಂದ ಕಡಿಮೆ ಆಗುವುದು.

ಕಣ್ಣು ರೆಪ್ಪೆಗಳ ಮೇಲಿನ ಕೂದಲುಗಳ ನಾಶ ತಪ್ಪಿಸಲು
ಹೊಂಗೆ ಬೀಜ, ತುಳಸಿ ಎಲೆ ಮತ್ತು ಮಲ್ಲಿಗೆ ಮೊಗ್ಗು ಸಮ ತೂಕ ಸೇರಿಸಿ, ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ಹಾಕಿ ಮಂದಾಗ್ನಿಯಲ್ಲಿ ಚೆನ್ನಾಗಿ ಕಾಯಿಸಿ ನೀರು ಇಂಗಿ ಗಟ್ಟಿಯಾದ ಮೇಲೆ ಒಂದು ಬಟ್ಟಲಿನಲ್ಲಿ ಸಂಗ್ರಹಿಸಿ ಕೂದಲು ಉದುರಿರುವ ಕಡೆ ಹೊಂಗೆ ಬೀಜ, ತುಳಸಿ ಎಲೆ ಮತ್ತು ಮಲ್ಲಿಗೆ ಮೊಗ್ಗು ಸಮ ತೂಕ ಸೇರಿಸಿ, ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ಹಾಕಿ ಮಂದಾಗ್ನಿಯಲ್ಲಿ ಚೆನ್ನಾಗಿ ಕಾಯಿಸಿ ನೀರು ಇಂಗಿ ಗಟ್ಟಿಯಾದ ಮೇಲೆ ಒಂದು ಬಟ್ಟಲಿನಲ್ಲಿ ಸಂಗ್ರಹಿಸಿ ಕೂದಲು ಉದುರಿರುವ ಕಡೆ ಹಚ್ಚುವುದು.

ಗಜಕರ್ಣ, ಇಸುಬು ಮತ್ತು ತುರಿಕೆಗೆ
ಒಂದು ಬಟ್ಟು ಹೊಂಗೆ ಎಣ್ಣೆಗೆ ಗಂಧಕ ಮತ್ತು ಕರ್ಪೂರ ಹತ್ತು ಗ್ರಾಂ ಮತ್ತು ನಿಂಬೆ ಹಣ್ಣಿನ ರಸ 20 ಗ್ರಾಂ ಸೇರಿಸಿ, ಮಿಶ್ರ ಮಾಡಿ ಹಚ್ಚುವುದು.

ಕುಷ್ಠ ರೋಗಕ್ಕೆ
ಹೊಂಗೆ ಎಣ್ಣೆಯನ್ನು ಹುಣ್ಣುಗಳಿಗೆ ಧಾರಾಳವಾಗಿ ಹಚ್ಚುವುದು ಮತ್ತು ಹಸಿ ಹೊಂಗೆ ರಸ, 1 ಟೀ ಚಮಚದಲ್ಲಿ ಸೈಂಧವ ಲವಣ ಮತ್ತು ಚಿತ್ರಮೂಲ ಬೇರಿನ ಚೂರ್ಣ 1/2 ಟೀ ಚಮಚ ಸೇರಿಸಿ ಹಸುವಿನ ಮೊಸರಿನಲ್ಲಿ ಕದಡಿ ಕುಡಿಸುವುದು, ಪ್ರತಿನಿತ್ಯ ಎರಡು ವೇಳೆ ಮಾತ್ರ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಇಂದಿನ ಮಧ್ಯರಾತ್ರಿಯಿಂದಲೇ ಮುಂದಿನ 59ವರ್ಷ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ

ಇಂದಿನ ಮಧ್ಯರಾತ್ರಿಯಿಂದಲೇ ಮುಂದಿನ 59ವರ್ಷ 6 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ

ಅಶ್ವಗಂಧ ಔಷಧಿ ಗಿಡ

ಅಶ್ವಗಂಧ ಔಷಧಿ ಗಿಡ ಬೆಳೆಯುವ ವಿಧಾನ ಮತ್ತು ಆರೋಗ್ಯಕ್ಕೆ ಹೇಗೆ ಉಪಯೋಗವಾಗುತ್ತದೆ?