in

ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ ಗಂಗರು

ಗಂಗರು
ಗಂಗರು

ಗಂಗರು ಸುಮಾರು ೪ನೇ ಶತಮಾನದಿಂದ ಸುಮಾರು ೧೦ನೇ ಶತಮಾನದವರೆಗೆ ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ. ಇವರ ಸಮಕಾಲೀನರಾದ ಚಾಲುಕ್ಯ, ರಾಷ್ಟ್ರಕೂಟರಷ್ಟು ಪ್ರಬಲರಲ್ಲದಿದ್ದರೂ ಅವರೊಂದಿಗೆ ಸಂಬಂಧಗಳನ್ನು ಬೆಳಸಿ ಸರಿಸಮಾನರಾಗಿ ಸ್ವತಂತ್ರರಾಗಿ ಆಳ್ವಿಕೆ ನಡೆಸಿದರು. ಗಂಗರ ರಾಜಧಾನಿ ಮೊದಲು ಕುವಲಾಳದಲ್ಲಿದ್ದಿತು. ಇಂದಿನ ಕೋಲಾರ. ೮ನೆಯ ಶತಮಾನದ ದೊರೆ ಶ್ರೀಪುರುಷ ತಲಕಾಡಿನಿಂದ ಆಳಲು ತೊಡಗಿದನು. ಇದಲ್ಲದೆ ಮಾನ್ಯಪುರದಲ್ಲಿ ,ಇಂದಿನ ನೆಲಮಂಗಲ ತಾಲೂಕಿನ ಮಣ್ಣೆ. ರಾಜನಿವಾಸ ಏರ್ಪಟ್ಟಿತ್ತು. ನಂದಿಬೆಟ್ಟ ಗಂಗರಾಜ್ಯದಲ್ಲಿದ್ದ ಪ್ರಮುಖ ಗಿರಿದುರ್ಗ.ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕೊಳತೂರು ಗ್ರಾಮದ ಶ್ರೀ ಸೋಮೇಶ್ವರಸ್ವಾಮಿ ದೇವಾಲಯ.

ದಕ್ಷಿಣ ಕರ್ನಾಟಕದಲ್ಲಿ ಆಳಿದ ಗಂಗವಂಶವನ್ನು ೩೨೫ರಲ್ಲಿ ಕೊಂಗುಣಿ ವರ್ಮ ಸ್ಥಾಪಿಸಿದ. ಈ ವಂಶಜರು ೧೦ನೆಯ ಶತಮಾನದ ಕೊನೆಯವರೆಗೂ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ಕ್ರಮೇಣ ಕಾವೇರಿ ತೀರದಲ್ಲಿ ಪ್ರಬಲರಾದರು. ಹರಿವರ್ಮನ ಕಾಲದಲ್ಲಿ ತಲಕಾಡು ,ಮೈಸೂರು ಜಿಲ್ಲೆ ಇವರ ರಾಜಧಾನಿಯಾಯಿತು. ಈ ವಂಶದ ಪ್ರಮುಖ ದೊರೆಗಳಲ್ಲಿ ಅವಿನೀತ, ದುರ್ವಿನೀತ, ಭೂವಿಕ್ರಮ, ಶಿವಮಾರ ೧, ಶ್ರೀಪುರುಷ, ಪೃಥ್ವೀಪತಿ, ಎರಡನೆಯ ರಾಚಮಲ್ಲ ಮತ್ತು ಎರಡನೆಯ ಬೂತುಗರ ಹೆಸರುಗಳನ್ನು ಇಲ್ಲಿ ಸೂಚಿಸಬಹುದು. ಚಾಳುಕ್ಯ, ರಾಷ್ಟ್ರಕೂಟ ಮತ್ತು ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಇತಿಹಾಸದ ರೂಪರೇಷೆಗಳನ್ನು ನಿರ್ಮಿಸುವುದರಲ್ಲಿ ಈ ಅರಸರು ಪ್ರಮುಖಪಾತ್ರ ವಹಿಸಿದರು. ೨ನೆಯ ಪುಲಕೇಶಿ ೬೪೨ರಲ್ಲಿ ಯುದ್ಧದಲ್ಲಿ ಮಡಿದು, ಆ ರಾಜ್ಯ ಪಲ್ಲವರ ಕೈಸೇರಿದಾಗ, ಅವರೊಂದಿಗೆ ವಿವಾಹ ಸಂಬಂಧ ಬೆಳೆಸಿದ.

ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ ಗಂಗರು
ಗಂಗರು

ಈ ವಂಶದ ರಾಜರು ೧ನೆಯ ವಿಕ್ರಮಾದಿತ್ಯ ರಾಜ್ಯವನ್ನು ಪುನಃ ಗಳಿಸಲು ಹೆಚ್ಚಿನ ನೆರವು ನೀಡಿದರು. ಕಲ್ಯಾಣದ ಚಾಳುಕ್ಯರ ಕಾಲದಲ್ಲಿ ಅವರ ಸಾಮಂತರಾಗಿದ್ದ ಗಂಗರಸರ ನೆರವು ವಿಶೇಷವಾಗಿತ್ತು. ೨ನೆಯ ಶಿವಮಾರ ರಾಷ್ಟ್ರಕೂಟರೊಂದಿಗೆ ಹೋರಾಟ ನಡೆಸಿ, ಹೆಚ್ಚುಕಾಲ ಸೆರೆಯಲ್ಲಿದ್ದು ಬಹುಶಃ ಅಲ್ಲೇ ಮೃತನಾದ. ೨ನೆಯ ಬೂತುಗ ತನ್ನ ಭಾವನಾದ ರಾಷ್ಟ್ರಕೂಟ ಮೂರನೆಯ ಕೃಷ್ಣನ ಪರವಾಗಿ ಅನೇಕ ಯುದ್ಧಗಳಲ್ಲಿ ಧೈರ್ಯಪರಾಕ್ರಮಗಳಿಂದ ಹೋರಾಡಿ ಕೀರ್ತಿಶಾಲಿಯಾದ. ಕನ್ನಡದ ಆದಿಕವಿಗಳಲ್ಲೊಬ್ಬನಾದ ನೃಪತುಂಗನ ಕವಿರಾಜಮಾರ್ಗದಲ್ಲಿ ಉಕ್ತನಾದ ದುರ್ವಿನೀತನೆಂಬಾತ ಈ ವಂಶದ ದೊರೆಯಾದ ದುರ್ವಿನೀತನೇ-ಎಂಬುದು ಕೆಲವರ ವಾದ. ಶಬ್ದಾವತಾರ, ಗುಣಾಢ್ಯನ ವಡ್ಡಕಥೆಯ ಸಂಸ್ಕೃತ ಭಾಷಾಂತರ, ಭಾರವಿಯ ಕಿರಾತಾರ್ಜುನೀಯದ ಮೇಲೆ ವ್ಯಾಖ್ಯಾನ – ಇವು ಈತನ ಮುಖ್ಯ ಸಾಹಿತ್ಯಕ ಕೊಡುಗೆಗಳು. ಈ ವಂಶದ ೨ನೆಯ ಮಾರಸಿಂಹ ಮತ್ತು ೪ನೆಯ ರಾಚಮಲ್ಲರ ಮಂತ್ರಿಯಾದ ಚಾವುಂಡರಾಯನೇ ಶ್ರವಣಬೆಳಗೊಳದ ವಿಶ್ವವಿಖ್ಯಾತ ಗೊಮ್ಮಟಮೂರ್ತಿಯನ್ನು ಕಡೆಯಿಸಿದವ. ೧೦೦೪ರಲ್ಲಿ ಚೋಳರಿಂದ ಪರಾಜಿತರಾದಾಗ ಇವರ ಸ್ವತಂತ್ರ ಅಸ್ತಿತ್ವ ನಷ್ಟವಾದರೂ ೧೧೧೬ರಲ್ಲಿ ಹೊಯ್ಸಳರು ತಲಕಾಡನ್ನು ಗೆದ್ದುಕೊಂಡು ಇವರ ಧ್ಯೇಯವನ್ನು ಮುಂದುವರಿಸಿದರು.

ಗಂಗರ ರಾಜ್ಯಕ್ಕೆ ಗಂಗವಾಡಿ ಎಂಬ ಹೆಸರಿದ್ದು ಇತ್ತೀಚಿನವರೆಗೂ ಅದು ಬಳಕೆಯಲ್ಲಿತ್ತು. ಪಶ್ಚಿಮದಲ್ಲಿ ಕದಂಬರ ಮತ್ತು ಪೂರ್ವದಲ್ಲಿ ಪಲ್ಲವರ ರಾಜ್ಯಗಳ ನಡುವಣ ಈ ರಾಜ್ಯ ಮೊದಲಿಗೆ ಅನಂತಪುರ ಮತ್ತು ಕಡಪ ಜಿಲ್ಲೆಗಳನ್ನೊಳಗೊಂಡಿದ್ದು ಕುವಲಾಲಪುರವನ್ನು (ಕೋಲಾರ) ರಾಜಧಾನಿಯಾಗಿ ಪಡೆದಿತ್ತು. ಅನಂತರ ಕಾಲದಲ್ಲಿ ತುಮಕೂರು, ಬೆಂಗಳೂರು, ಕೊಡಗು, ಮೈಸೂರು ಪ್ರದೇಶಗಳೂ ಕೊಯಮತ್ತೂರು ಮತ್ತು ಸೇಲಂ ಜಿಲ್ಲೆಗಳೂ ಅವರ ವಶವಾದುವು. ಕದಂಬರು ೪ನೆಯ ಶತಮಾನದ ಪ್ರಾರಂಭಕ್ಕೆ ಬಾದಾಮಿ ಚಾಳುಕ್ಯ ರಾಜ್ಯದಿಂದ ಬಹುಪೂರ್ಣವಾಗಿ ಸೋತ ಮೇಲೆ ಹಿಂದಿನ ಹಳೆಯ ಮೈಸೂರು ರಾಜ್ಯದ ಬಹು ಭಾಗ ಗಂಗರ ಆಧಿಪತ್ಯಕ್ಕೆ ಒಳಪಟ್ಟು ಗಂಗವಾಡಿ ೧೬೦೦೦ವೆಂದು ಪ್ರಸಿದ್ಧವಾಯಿತು. ಕಾವೇರಿತೀರದ ತಲವನಪುರಕ್ಕೆ (ತಲಕಾಡು) ಅವರ ರಾಜಧಾನಿ ಬದಲಾಯಿತು. ಅನಂತರ ಏಳನೆಯ ಶತಮಾನದಲ್ಲಿ, ಚನ್ನಪಟ್ಟಣದ ಬಳಿಯ ಮಾನ್ಯಕುಂಡವನ್ನೂ ತದನಂತರ ಬೆಂಗಳೂರು ಜಿಲ್ಲೆಯ ಮಾನ್ಯಪುರವನ್ನೂ (ಮನ್ನೆ) ಇವರು ರಾಜಧಾನಿಯನ್ನಾಗಿ ಮಾಡಿಕೊಂಡರು. ಇವರ ರಾಜ್ಯಸ್ಥಾಪನೆಗೆ ಸಹಾಯಕನಾದ ಜೈನಾಚಾರ್ಯ ಸಿಂಹನಂದಿಯ ಪ್ರಭಾವದಿಂದ ಜೈನಧರ್ಮ ಪ್ರಾಬಲ್ಯ ಪಡೆದು ಕೊನೆಯವರೆಗೂ ಅದು ಗಂಗರಸರ ಪ್ರೋತ್ಸಾಹ ಪಡೆದಿತ್ತು. ಆದರೂ ಸರ್ವಧರ್ಮಗಳಿಗೂ ಇವರು ಆಶ್ರಯದಾತರಾಗಿದ್ದರು. ವಿಷ್ಣುಗೋಪ ಇವರನ್ನು ನಾರಾಯಣನ ಪಾದಾರವಿಂದಗಳ ಪೂಜಾನಿರತರೆಂದು ವರ್ಣಿಸಿರುವುದೇ ಇವರು ವೈಷ್ಣವಧರ್ಮಕ್ಕೆ ಪ್ರೋತ್ಸಾಹ ನೀಡಿದುದಕ್ಕೆ ಸಾಕ್ಷಿ. ಗಂಗರಸ ಅವಿನೀತ ವಿದ್ಯಾಪಕ್ಷಪಾತಿ; ಗಜಶಾಸ್ತ್ರ, ಅಶ್ವವಿದ್ಯೆ ಮತ್ತು ಶರವಿದ್ಯೆಗಳಲ್ಲಿ ಪ್ರವೀಣ. ಶಾಸನಗಳ ಪ್ರಕಾರ ಈತ ಹರಚರಣಾರವಿಂದ ಪ್ರಣಿಪಾತ (ಶಿವಭಕ್ತ)ನಾಗಿದ್ದ. ಇವನ ಪುತ್ರ ದುರ್ವಿನೀತ ಸ್ವತಃ ವಿದ್ವಾಂಸನಾಗಿದ್ದುದಲ್ಲದೆ ವಿದ್ವಜ್ಜನಪಕ್ಷಪಾತಿಯಾಗಿದ್ದು ಭಾರವಿಗೆ ಆಶ್ರಯದಾತನೆಂದು ಕವಿ ದಂಡಿ ತಿಳಿಸುತ್ತಾನೆ.

ದಕ್ಷಿಣ ಕರ್ನಾಟಕ ಮತ್ತು ತಮಿಳುನಾಡಿನ ಉತ್ತರಭಾಗಗಳನ್ನು ಆಳಿದ ಒಂದು ರಾಜಮನೆತನ ಗಂಗರು
ಗಂಗರು

ಮತ್ತೊಬ್ಬ ದೊರೆ ಶ್ರೀಪುರುಷ ಗಜಶಾಸ್ತ್ರವೆಂಬ ವಿದ್ವತ್ಪೂರ್ಣ ಕೃತಿಯ ರಚನೆಮಾಡಿ ತನ್ನ ಪಾಂಡಿತ್ಯಪ್ರದರ್ಶನ ಮಾಡಿದ್ದಾನೆ. ಆತ ವಿದ್ವಾಂಸರಿಗೆ ಆಶ್ರಯದಾತನೂ ಆಗಿದ್ದ. ಎರಡನೆಯ ಶಿವಮಾರ ಆಗಿಂದಾಗ್ಗೆ ರಾಷ್ಟ್ರಕೂಟ ಸಾಮ್ರಾಜ್ಯದ ಕೋಪಕ್ಕೆ ಪಾತ್ರನಾಗಿ ಸೆರೆವಾಸ ಮಾಡುತ್ತಿದ್ದರೂ ಉಳಿದ ಕಾಲದ ಬಹುಭಾಗ ರಣರಂಗಗಳಲ್ಲಿದ್ದು ಭೀಮಕೋಪನೆಂಬ ಬಿರುದು ಧರಿಸಿದ್ದರೂ ಕೆಲವಾರು ಜೈನಬಸದಿಗಳನ್ನು ನಿರ್ಮಿಸಿದ. ಈತ ಮನ್ಮಥನನ್ನು ನಾಚಿಸುವಷ್ಟು ಸುಂದರ; ಇವನ ಜ್ಞಾಪಕಶಕ್ತಿ ಅಸಾಧಾರಣ ; ಈತ ಕುಶಾಗ್ರಮತಿ, ಸಕಲವಿದ್ಯಾಪ್ರವೀಣ-ಎಂದೆಲ್ಲ ಹೊಗಳಲಾಗಿದೆ. ಗಜಾಷ್ಟಕ ಮತ್ತು ಸೇತುಬಂಧನವೆಂಬ ಕೃತಿಗಳು ಈತನವೆಂದು ನಂಬಲಾಗಿದೆ. ಇಮ್ಮಡಿ ನೀತಿಮಾರ್ಗ ವೀರಸೇನಾನಿಯಾಗಿದ್ದುದಲ್ಲದೆ ಸಂಗೀತನೃತ್ಯಗಳಲ್ಲಿ ಭರತನೆಂದೂ ವ್ಯಾಕರಣ ರಾಜ ನೀತಿಶಾಸ್ತ್ರಪರಿಣತನೆಂಬುದೂ ಶಾಸನದ ಉಕ್ತಿ. ಗಂಗರ ಇತಿಹಾಸದಲ್ಲೇ ವೈಶಿಷ್ಟ್ಯ ಪೂರ್ಣನಾದ ಇಮ್ಮಡಿ ಬೂತುಗ ಜೈನಧರ್ಮ ಮತ್ತು ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿದ್ದ. ಮಂತ್ರಿಯಾಗಿ ಈ ವಂಶಕ್ಕೆ ಸೇವೆ ಸಲ್ಲಿಸಿದ ಚಾವುಂಡರಾಯ ಅಪ್ರತಿಮ ಸೇನಾನಿ, ಅದ್ವಿತೀಯ ರಾಜಕಾರಣಿ, ವಿದ್ಯಾಪಕ್ಷಪಾತಿ; ತರ್ಕ, ವ್ಯಾಕರಣ, ಗಣಿತ, ವೈದ್ಯಶಾಸ್ತ್ರ ಮತ್ತು ಸಾಹಿತ್ಯಗಳಲ್ಲಿ ಪಾರಂಗತ. ಚಾವುಂಡರಾಯಪುರಾಣವನ್ನು ರಚಿಸಿದವನೀತನೇ. ಈಗಿನ ಬಾಗಿಲಕೋಟೆ ಜಿಲ್ಲೆಯ ಬಾದಾಮಿ ಇವರ ಪ್ರಮುಖ ರಾಜಧಾನಿ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ಗಂಡನಿಂದ ದೂರವಾದ ಕಿರುತೆರೆ ನಟಿ ಕೋಳಿ ರಮ್ಯಾ ಈಗ ಲವರ್ ಜೊತೆ ಸುತ್ತಾಟ.

ಗಂಡನಿಂದ ದೂರವಾದ ಕಿರುತೆರೆ ನಟಿ ಕೋಳಿ ರಮ್ಯಾ ಈಗ ಲವರ್ ಜೊತೆ ಸುತ್ತಾಟ.

ಮಳೆಗಾಲ ಆಹಾರಗಳು

ಮಳೆಗಾಲದಲ್ಲಿ ಹಿರಿಯರು, ಕಿರಿಯರು ತಿನ್ನಬಹುದಾದ ಆಹಾರಗಳು