in

ಅರ್ಜುನನ ಪುತ್ರ ಐರಾವಣ, ನಾಗರಾಣಿ ಉಲುಪಿಯ ಮಗ

ಐರಾವಣ
ಐರಾವಣ

ಐರಾವಣ ಅಥವಾ ಐರಾವಂತ ಎಂದೂ ಹೆಸರಾಗಿರುವುದು, ಹಿಂದೂ ಮಹಾಕಾವ್ಯವಾದ ಮಹಾಭಾರತದ ಕಿರು ಪಾತ್ರವಾಗಿದೆ. ಪಾಂಡವ ರಾಜ ಅರ್ಜುನನ ಮತ್ತು ನಾಗ ರಾಣಿ ಉಲುಪಿಯ ಪುತ್ರನಾದ, ಐರಾವಣನು ಕುತ್ತಂತವರ್ ಭಕ್ತ ವೃಂದರ ಮುಖ್ಯ ದೇವನಾಗಿದ್ದನು ಇದು ಆ ಭಕ್ತ ವೃಂದದಲ್ಲಿ ನೀಡುವ ಸಾಮಾನ್ಯ ಹೆಸರೂ ಸಹ ಆಗಿದೆ ಮತ್ತು ದ್ರೌಪದಿಯ ಉಪಾಸನೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ. ಈ ಎರಡೂ ಭಕ್ತ ಗಣದವರು ದಕ್ಷಿಣ ಭಾರತ ಮೂಲದವರಾಗಿದ್ದು, ರಾಷ್ಟ್ರದ ಈ ಪ್ರದೇಶದಲ್ಲಿ ಅವನನ್ನು ಗ್ರಾಮ ದೇವರೆಂದು ಪೂಜಿಸಲಾಗುತ್ತದೆ ಮತ್ತು ಅರಾವಣ ಎಂದು ಹೆಸರಾಗಿದ್ದಾನೆ. ಅವನು ಅಲಿ ಎಂದು ಕರೆಯಲಾಗುವ ,ಹಾಗೆಯೇ ದಕ್ಷಿಣ ಭಾರತದಲ್ಲಿ ಅರಾವಣಿ ಮತ್ತು ದಕ್ಷಿಣ ಏಷ್ಯಾದಾದ್ಯಂತ ಹಿಜ್ರಾ ಹೆಸರಾಂತ ಲಿಂಗಪರಿವರ್ತಕರ ಪೋಷಕ ದೇವನಾಗಿದ್ದಾನೆ.

ಮಹಾಭಾರತವು ಐರಾವಣನನ್ನು 18 ನೇ ದಿನದ ಕುರುಕ್ಷೇತ್ರ ಯುದ್ಧದಲ್ಲಿ ಸಾಯುವ ಮಹಾಪುರುಷನಾಗಿ ನಿರೂಪಿಸಿದ್ದು, ಇದು ಮಹಾಕಾವ್ಯದ ಮುಖ್ಯ ವಿಷಯವಾಗಿದೆ. ಆದರೆ, ದೇವಿ ಕಾಳಿಯ ಕೃಪಾಕಟಾಕ್ಷವನ್ನು ಮತ್ತು ಯುದ್ಧದಲ್ಲಿ ಪಾಂಡವರ ಜಯವನ್ನು ಖಚಿತಪಡಿಸಿಕೊಳ್ಳಲು ಸ್ವಯಂ-ತ್ಯಾಗ ಮಾಡಿದವನಾಗಿ ಅರಾವಣನನ್ನು ಗೌರವಿಸುವ ಪೂರಕವಾದ ಸಂಪ್ರದಾಯವನ್ನು ದಕ್ಷಿಣ ಭಾರತೀಯ ಭಕ್ತ ವೃಂದದವರು ಹೊಂದಿದ್ದಾರೆ. ಈ ಸ್ವಯಂ-ತ್ಯಾಗಕ್ಕೆ ಪ್ರತಿಯಾಗಿ ಕೃಷ್ಣನು ಅರಾವತನಿಗೆ ಅನುಗ್ರಹಿಸಿದ ಮೂರು ವರಗಳಲ್ಲಿ ಒಂದರ ಬಗ್ಗೆ ಕುಟ್ಟಾಂತವರ್ ಭಕ್ತ ವೃಂದದವರು ಒತ್ತು ನೀಡುತ್ತಾರೆ. ತಾನು ಸಾಯುವುದಕ್ಕೆ ಮೊದಲು ಮದುವೆಯಾಗಬೇಕೆಂದು ಅರಾವಣನು ಕೋರಿಕೆ ಸಲ್ಲಿಸುತ್ತಾನೆ. ಕೃಷ್ಣನು ಮೋಹಿನಿಯಾಗಿ ತನ್ನ ಮಹಿಳೆಯ ರೂಪದಲ್ಲಿ ಈ ವರವನ್ನು ಪೂರೈಸುತ್ತಾನೆ. ತಮಿಳುನಾಡಿನ ಕೂವಾಗಮ್ನಲ್ಲಿ ಈ ಘಟನೆಯನ್ನು ಮೊದಲು ಅರಾವಣ ಮತ್ತು ಪುರುಷ ಗ್ರಾಮಸ್ಥರೊಂದಿಗೆ, ಅರಾವಣನಿಗೆ ಹರಕೆ ಹೊತ್ತವರು ಅಲಿ ಯೊಂದಿಗೆ ವಿಧ್ಯುಕ್ತ ಮದುವೆ, ತದನಂತರ ಅರವಣನ ತ್ಯಾಗದ ಮರು-ಪಾತ್ರವಹಿಸುವಿಕೆಯೊಂದಿಗೆ ಅವರ ವೈಧವ್ಯ ಹೀಗೆ 18 ದಿನದ ಉತ್ಸವದ ರೂಪದಲ್ಲಿ ಮರು-ಪಾತ್ರವಹಿಸುತ್ತಾರೆ.

ಅರ್ಜುನನ ಪುತ್ರ ಐರಾವಣ, ನಾಗರಾಣಿ ಉಲುಪಿಯ ಮಗ
ಅರಾವಣ, ಕೃಷ್ಣ

ದ್ರೌಪದಿ ಭಕ್ತ ವೃಂದದವರು ಇನ್ನೊಂದು ವರದ ಬಗ್ಗೆ ಒತ್ತು ನೀಡುತ್ತಾರೆ. ತನ್ನ ಬೇರ್ಪಟ್ಟ ತಲೆಯ ಕಣ್ಣಿನ ಮೂಲಕ ಮಹಾಭಾರತ ಯುದ್ಧದ ಸಂಪೂರ್ಣ ಕಾಲಾವಧಿಯನ್ನು ವೀಕ್ಷಿಸಲು ಅರಾವಣನಿಗೆ ಕೃಷ್ಣನು ಅನುಮತಿ ನೀಡುತ್ತಾನೆ. ಮತ್ತೊಂದು 18 ದಿನದ ಉತ್ಸವದಲ್ಲಿ, ಮಹಾಭಾರತದ ಯುದ್ಧದ ಸಾಂಪ್ರದಾಯಿಕ ಮರು-ಪಾತ್ರವಹಿಸುವಿಕೆಯನ್ನು ವೀಕ್ಷಿಸಲು ಅರಾವಣನ ಔಪಚಾರಿಕ ತಲೆಯನ್ನು ಇರಿಸಲಾಗುತ್ತದೆ. ಅರಾವಣನ ತಲೆಯು ದ್ರೌಪದಿ ದೇವಾಲಯಗಳಲ್ಲಿ ಸಾಮಾನ್ಯವಾದ ಅಲಂಕಾರ ಸಂಕೇತವಾಗಿದೆ. ಸಾಮಾನ್ಯವಾಗಿ ಅದು ಸಾಗಿಸಬಹುದಾದ ಮರದ ತಲೆಯಾಗಿರುತ್ತದೆ; ಕೆಲವೊಮ್ಮೆ ದೇವಾಲಯದ ಪ್ರಾಂಗಣದಲ್ಲಿ ಅದರದ್ದೇ ಆದ ದೇಗುಲವಿರುತ್ತದೆ ಅಥವಾ ದೇವಾಲಯದ ಮೇಲ್ಭಾವಣಿಯ ತುದಿಗಳಲ್ಲಿ ದುಷ್ಟಶಕ್ತಿಗಳ ವಿರುದ್ಧ ರಕ್ಷಕನಾಗಿ ಇರಿಸಲಾಗುತ್ತದೆ. ಅರಾವಣನನ್ನು ಅವನ ಬೇರ್ಪಟ್ಟ ತಲೆಯ ರೂಪದಲ್ಲಿ ಪೂಜಿಸಲಾಗುತ್ತದೆ ಮತ್ತು ಅದು ರೋಗಗಳನ್ನು ವಾಸಿಮಾಡುತ್ತದೆ ಮತ್ತು ಮಕ್ಕಳಿಲ್ಲದ ಮಹಿಳೆಯರಿಗೆ ಮಕ್ಕಳನ್ನು ಕರುಣಿಸುತ್ತಾನೆ ಎಂದು ನಂಬಲಾಗಿದೆ.

ಐರಾವಣನು ಇಂಡೋನೇಷ್ಯಾದಲ್ಲೂ ಸಹ ಜನಪ್ರಿಯನಾಗಿದ್ದಾನೆ. ಅಲ್ಲಿ ಅವನ ಹೆಸರನ್ನು ಐರಾವಣ ಎಂದು ಉಚ್ಛರಿಸಲಾಗುತ್ತದೆ. ಜಾವಾದ ಮುಖ್ಯ ದ್ವೀಪದಲ್ಲೂ ಸಹ ಐರಾವಣನ ಸುತ್ತಲೂ ಸ್ವತಂತ್ರ್ಯವಾದ ಸಂಪ್ರದಾಯಗಳು ಬೆಳೆದು ಬಂದಿದ್ದು, ಅಲ್ಲಿ ಉದಾಹರಣೆಗೆ ಅವನು ನಾಗಾದೊಂದಿಗೆ ಸಂಬಂಧವನ್ನು ಕಳೆದುಕೊಳ್ಳುತ್ತಾನೆ. ಪ್ರತ್ಯೇಕವಾದ ಜವಾನೀಸ್ ಸಂಪ್ರದಾಯಗಳು ಕೃಷ್ಣನ ಮಗಳು ತಿತಿಸಾರಿಯೊಂದಿಗೆ ಐರಾವಣನ ನಾಟಕೀಯ ಮದುವೆಯನ್ನು ಮತ್ತು ತಪ್ಪಾದ ಗುರುತಿನಿಂದ ಕಾರಣವಾದ ಸಾವನ್ನು ಪ್ರಸ್ತುತಪಡಿಸುತ್ತಾರೆ. ಕಥೆಗಳನ್ನು ಸಾಂಪ್ರದಾಯಿಕ ಜವಾನೀಸ್ ನಾಟಕ ಮಾಧ್ಯಮದ ಮೂಲಕ, ಪ್ರಮುಖವಾಗಿ ವಯಂಗ್ ಕುಲಿಟ್ ಎಂದು ಕರೆಯಲಾಗುವ ಪ್ರತಿಬಿಂಬಿದ- ಸೂತ್ರದ ನಾಟಕಗಳ ಮೂಲಕ ಹೇಳಲಾಗುತ್ತದೆ.

ದಕ್ಷಿಣ ಭಾರತದ ತಮಿಳು ಹೆಸರಾದ ಅರಾವಣ ಎಂಬ ಹೆಸರು ಅರಾವು ,ಹಾವು ಪದದಿಂದ ವ್ಯುತ್ಪತ್ತಿಯಾಗಿದೆ
ಎಂದು ಜನಪ್ರಿಯವಾಗಿ ನಂಬಲಾಗಿದೆ. ಹಾವುಗಳೊಂದಿಗೆ ಅರಾವಣನ ಸಂಬಂಧವು ಅವನ ಮೂರ್ತಿಚಿತ್ರಣದಲ್ಲೂ ಸ್ಪಷ್ಟವಾಗುತ್ತದೆ.

ಮೂರ್ತಿಚಿತ್ರಣ ಅರಾವಣನ ಬೇರ್ಪಟ್ಟ ತಲೆಯ ರೂಪದಲ್ಲಿ ಅವನನ್ನು ದೇವಾಲಯಗಳಲ್ಲಿ ಪೂಜಿಸಲಾಗುತ್ತದೆ. ಅವನನ್ನು ಸಾಮಾನ್ಯವಾಗಿ ಮೀಸೆ, ಎದ್ದುಕಾಣುವ ಕಣ್ಣುಗಳು ಮತ್ತು ದೊಡ್ಡ ಕಿವಿಗಳೊಂದಿಗೆ ಚಿತ್ರಿಸಲಾಗುತ್ತದೆ. ಪ್ರಾಸಂಗಿಕವಾಗಿ, ಅವನು ಶಂಕುವಿನಾಕೃತಿಯ ಕಿರೀಟವನ್ನು, ತನ್ನ ಹಣೆಯಲ್ಲಿ ವೈಷ್ಣವ ತಿಲಕ ವನ್ನು ಸಾಮಾನ್ಯವಾಗಿ ಧರಿಸುತ್ತಾನೆ. ಅರಾವಣನನ್ನು ಆಗಾಗ್ಗೆ ಕಿರೀಟದ ಮೇಲ್ಭಾಗದಲ್ಲಿ ನಾಗರಹಾವಿನ ಹೆಡೆಯೊಂದಿಗೆ ಕಿರೀಟದ ಮೂಲಕ ಅದು ಹೊರ ಮೂಡಿರುವಂತೆ ಅಥವಾ ಕಿರೀಟದ ಹಿಂಭಾಗದಿಂದ ಹಾವು ಹೊರ ಸೂಸಿರುವಂತೆ ಚಿತ್ರಿಸಲಾಗುತ್ತದೆ. ಮುಖ್ಯ ಕೂವಾಗಮ್ ಪ್ರತಿಮೆಯೂ ಸಹ ಅರಾವಣನ ಕಿರೀಟದ ಮೇಲೆ ಸರ್ಪವನ್ನು ಒಳಗೊಂಡಿರುತ್ತದೆ.

ಅರಾವಣನ ಮೂರ್ತಿಶಿಲ್ಪದ ಮತ್ತೊಂದು ಪ್ರಮುಖವಾದ ವೈಶಿಷ್ಟ್ಯವು ಅತಿಮಾನುಷ ಶಕ್ತಿಯುಳ್ಳ ಕೋರೆಹಲ್ಲಿನ ಉಪಸ್ಥಿತಿಯಾಗಿದೆ. ಅಂತಹ ಅತಿಮಾನುಷ ಶಕ್ತಿಯ ಹಲ್ಲನ್ನು ಮಧ್ಯ ಕೂವಗಮ್ ಪ್ರತಿಮೆಯು ಹೊಂದಿಲ್ಲದಿದ್ದರೂ, ಅವುಗಳು ಹೆಚ್ಚಿನ ದ್ರೌಪದಿ ಆರಾಧನಾ ಪದ್ಧತಿ ಚಿತ್ರಗಳ ಸಾಮಾನ್ಯ ವೈಶಿಷ್ಟ್ಯವಾಗಿದೆ.

ಅರಾವಣ-ತಲೆಯ ಪ್ರತಿಮೆಗಳು ಒಂದೋ ಬಣ್ಣದಲ್ಲಿ ಚಿತ್ರಿಸಲಾಗಿರುತ್ತದೆ ಅಥವಾ ಉತ್ಸವಗಳಿಗೆ ಬಣ್ಣ ರಹಿತವಾದ ಚಲಿಸಲಾಗುವಂತಹವುಗಳಾಗಿರುತ್ತದೆ. ಅವುಗಳನ್ನು ಒಟ್ಟಿಗೆ ಅರಾವಣನ ದೇವಾಲಯಗಳಲ್ಲಿ ಇರಿಸಲಾಗಿರುತ್ತದೆ. ಕೂವಗಮ್, ಕೋಥಡೈ, ಕೋಥಟ್ಟೈ ಮತ್ತು ಪಿಲ್ಲೈಯಾರ್ಕುಪ್ಪಮ್‌ಗಳು ಕೆಂಪು ಮುಖವಾಗಿ ಬಣ್ಣಬಳಿದ ಮತ್ತು ಬಹು-ವರ್ಣದ ಅಲಂಕರಣದ ಪ್ರತಿಮೆಗಳನ್ನು ಹೊಂದಿರುತ್ತದೆ. ಬಣ್ಣ ರಹಿತವಾದ ಕಪ್ಪು ಕಲ್ಲಿನ ಅರಾವಣ-ತಲೆಯ ಚಿತ್ರಗಳನ್ನು ಕೋಥಟ್ಟೈ, ಮಧುಕರೈ ಮತ್ತು ಪಿಲ್ಲೈಯಾರ್ಕುಪ್ಪಮ್‌ಗಳಲ್ಲಿ ನೋಡಬಹುದು.

ಅರ್ಜುನನ ಪುತ್ರ ಐರಾವಣ, ನಾಗರಾಣಿ ಉಲುಪಿಯ ಮಗ
ಅರಾವಣ

ಕೆಲವು ಚಿತ್ರಕಲೆಗಳು ಅರಾವಣನ ತ್ಯಾಗವನ್ನು ಸಹ ರೂಪಿಸುತ್ತವೆ. ಈ ದೃಶ್ಯಗಳಲ್ಲಿ, ಅವನ ತಲೆಯನ್ನು ಇನ್ನೇನು ಛೇದನ ಮಾಡುವಾಗ ಅವನು ಆಗಾಗ್ಗೆ ಕಾಳಿಗೆ ತಲೆಬಾಗುವ ಅಥವಾ ಸೌಕಾರ್‌ಪೇಟ್ ಚಿತ್ರಕಲೆಯಲ್ಲಿ ತೋರುವಂತೆ, ಸ್ವಯಂ-ಶಿರಚ್ಛೇದನ ಮಾಡಿಕೊಂಡಿರುವ ಅರಾವಣನು ಖಡ್ಗ ಮತ್ತು ತನ್ನ ಬೇರ್ಪಡಿತ ತಲೆಯನ್ನು ದೇವಿಗೆ ಅರ್ಪಿಸುತ್ತಿರುವಂತೆ ಚಿತ್ರಿಸಲಾಗಿದೆ.

ಮಹಾಭಾರತದ ಪ್ರಥಮ ಪುಸ್ತಕವಾದ ಆದಿ ಪರ್ವದಲ್ಲಿ ಐರಾವಣನ ಪೋಷಕರ ಮದುವೆಯನ್ನು ನಮೂದಿಸಲಾಗಿದ್ದರೂ, ಐರಾವಣನ ಜನ್ಮ ಮತ್ತು ಸಾವುಗಳೆರಡನ್ನೂ ನಂತರದ ಆರನೇ ಪುಸ್ತಕವಾದ ಭೀಷ್ಮ ಪರ್ವ,ಭೀಷ್ಮನ ಪುಸ್ತಕದಲ್ಲಿ ನಮೂದಿಸಲಾಗಿದೆ. ಈ ಮಹಾಕಾವ್ಯದ ಆರನೇ ಪುಸ್ತಕದಲ್ಲಿ, ಪಾಂಡವರ ಮೂರನೇ ಸಹೋದರನಾದ ಅರ್ಜುನನನ್ನು ಇಂದ್ರಪ್ರಸ್ಥದಿಂದ ಪಾಂಡವ ಸಹೋದರರ ಸರ್ವಸಮಾನ ಪತ್ನಿಯಾದ ದ್ರೌಪದಿಯೊಂದಿಗಿನ ಮದುವೆಯ ನಿಯಮಗಳನ್ನು ಮೀರಿದ್ದಕ್ಕಾಗಿ ಒಂದು ವರ್ಷದ ಪ್ರಾಯಶ್ಚಿತ್ತದ ತೀರ್ಥಯಾತ್ರೆಗೆ ಹೋಗಲು ಗಡೀಪಾರು ಮಾಡಲಾಗುತ್ತದೆ. ಅರ್ಜುನನು ಪ್ರಸ್ತುತ ಭಾರತದ ಉತ್ತರ-ಪೂರ್ವ ಪ್ರಾಂತ್ಯಕ್ಕೆ ತಲುಪುತ್ತಾನೆ ಮತ್ತು ನಾಗರಾಜನ ವಿಧವಾ ಪತ್ನಿಯಾದ ಉಲುಪಿಯೊಂದಿಗೆ ಪ್ರೇಮಪಾಶದಲ್ಲಿ ಸಿಲುಕುತ್ತಾನೆ. ಇಬ್ಬರೂ ಮದುವೆಯಾಗುತ್ತಾರೆ ಮತ್ತು ಐರಾವಣ ಎಂಬ ಹೆಸರಿನ ಮಗನನ್ನು ಹೊಂದುತ್ತಾರೆ; ನಂತರ, ಅರ್ಜುನನು ಐರಾವಣ ಮತ್ತು ಉಲುಪಿಯನ್ನು ನಾಗಗಳ ನಿವಾಸಸ್ಥಾನವಾದ ನಾಗಲೋಕದಲ್ಲಿ ಬಿಟ್ಟು ತೀರ್ಥಯಾತ್ರೆಯನ್ನು ಮುಂದುವರೆಸುತ್ತಾನೆ. ಐರಾವಣನನ್ನು ಪರಕ್ಷೇತ್ರೆಯಲ್ಲಿ ಜನಸಿದವನೆಂದು ವಿವರಿಸಲಾಗುತ್ತದೆ, ಪ್ರಾಸಂಗಿಕವಾಗಿ “ಮತ್ತೋರ್ವ ವ್ಯಕ್ತಿಗೆ ಸೇರಿದ ಪ್ರಾಂತ್ಯ”, ಹಿಲ್ಟೆಬೀಟೆಲ್ ವ್ಯಾಖ್ಯಾನಿಸುವಂತೆ “ಮತ್ತೊಬ್ಬ ಪತ್ನಿಯೊಂದಿಗೆ”. ಐರಾವಣನು ನಾಗಲೋಕದಲ್ಲಿ ತಾಯಿಯ ರಕ್ಷಣೆಯಲ್ಲಿ ಬೆಳೆಯುತ್ತಾನೆ, ಆದರೆ ಅರ್ಜುನನೊಂದಿಗಿನ ದ್ವೇಷದಿಂದಾಗಿ ಅವನ ತಾಯಿಯ ಚಿಕ್ಕಪ್ಪನು ಇವನನ್ನು ತಿರಸ್ಕರಿಸುತ್ತಾನೆ. ಪ್ರಬುದ್ಧಾವಸ್ಥೆಯನ್ನು ತಲುಪಿದ ಬಳಿಕೆ, ಐರಾವಣನು ತನ್ನ ತಂದೆಯೊಂದಿಗೆ ಒಗ್ಗೂಡುವ ಆಕಾಕ್ಷೆಯೊಂದಿಗೆ, ಅರ್ಜುನನ ತಂದೆಯಾದ ದೇವ ಇಂದ್ರನ ವಾಸಸ್ಥಾನವಾದ ಇಂದ್ರಲೋಕಕ್ಕೆ ತೆರಳುತ್ತಾನೆ. ತನ್ನ ಪ್ರೌಢ ಪುತ್ರನನ್ನ ನೋಡಿದ ಅರ್ಜುನನು ಕುರುಕ್ಷೇತ್ರ ಯುದ್ಧದಲ್ಲಿ ಅವನ ಸಹಾಯವನ್ನು ಕೋರುತ್ತಾನೆ.

ಈ ಮೂಲಕ ಐರಾವಣನು ಅಂತಿಮವಾಗಿ ತನ್ನ ಸೋದರ ಸಂಬಂಧಿಗಳು ಮತ್ತು ವಿರೋಧಿಗಳಾದ ಕೌರವರ ವಿರುದ್ಧ ತನ್ನ ತಂದೆ ಮತ್ತು ಪಾಂಡವರಿಗೆ ಸಹಾಯ ಮಾಡಲು ಯುದ್ಧ ಭೂಮಿಯಾದ ಕುರುಕ್ಷೇತ್ರವನ್ನು ತಲುಪುತ್ತಾನೆ. ಯುದ್ಧದ ಮೊದಲನೇ ದಿನದಂದು, ಹಿಂದಿನ ಅವತಾರದಲ್ಲಿ ಕ್ರೋಧಾವಸನೆಂಬ ದೈತ್ಯನಾಗಿದ್ದ ಕ್ಷತ್ರಿಯರಾಜನಾದ ಶ್ರುತಾಯುಷನೊಂದಿಗೆ ಸೆಣಸುತ್ತಾನೆ. ಅರ್ಜುನನನು ನಂತರ ಶ್ರುತಾಯುಷನನ್ನು ಕೊಲ್ಲುತ್ತಾನೆ. ಯುದ್ಧದ ಏಳನೇ ದಿನದಂದು, ಐರಾವಣನು ಅವಂತಿಯ ರಾಜರಾದ ವಿಂಧ ಮತ್ತು ಅನುವಿಂಧರನ್ನು ಪರಾಭವಗೊಳಿಸುತ್ತಾನೆ, ಅವರನ್ನು ನಂತರ ಅರ್ಜುನನು ಕೊಲ್ಲುತ್ತಾನೆ.

ಯುದ್ಧದ ಎಂಟನೇ ದಿನದಂದು, ಗಾಂಧಾರ ರಾಜಕುಮಾರ, ರಾಜ ಸುವಲನ ಪುತ್ರರು ಮತ್ತು ಕೌರವರ ವಿಶ್ವಾಸಘಾತುಕ ಸೋದರಮಾಮನಾದ ಶಕುನಿಯ ಕಿರಿಯ ಪುತ್ರರೊಂದಿಗೆ ಐರಾವಣನು ಸೆಣಸಾಡುತ್ತಾನೆ. ಸಹೋದರರಾದ ಗಯಾ, ಗವಾಕ್ಷ, ವೃಶ್ವ, ಚರ್ಮಾವತ, ಆರ್ಜವ ಮತ್ತು ಸುಕರು ಐರಾವಣನ ಮೇಲೆ ಸಂಪೂರ್ಣ ಕೌರವ ಸೈನ್ಯದ ನೆರವಿನಿಂದ ಆಕ್ರಮಣ ಮಾಡುತ್ತಾರೆ, ಆದರೆ ಐರಾವಣನ ನಾಗಾ ಸೈನ್ಯವು ಎಲ್ಲ ವಿರೋಧಿಗಳನ್ನು ಸಂಹಾರ ಮಾಡುತ್ತದೆ. “ಶತ್ರುಗಳ ಶಿಕ್ಷಕ”ನಾದ ಐರಾವಣನು ಮಾಯಾಯಲ್ಲಿ ಪರಿಣಿತನಾಗಿದ್ದು, ಖಡ್ಗದ ಯುದ್ಧದಲ್ಲಿ ಕೌರವ ಸಹೋದರರಲ್ಲಿ ಐವರನ್ನು ಸಂಹಾರ ಮಾಡುತ್ತಾನೆ; ವೃಷವ ಮಾತ್ರ ಸಾವಿನಿಂದ ಪಾರಾಗುತ್ತಾನೆ.

ಇದರಿಂದ ಕಂಗೆಟ್ಟ ಹಿರಿಯ ಕೌರವನಾದ ದುರ್ಯೋಧನನು ಐರಾವಣನನ್ನು ಕೊಲ್ಲಲು ಋಷ್ಯಶೃಂಗನ ಮಗನಾದ ರಾಕ್ಷಸ ಅಲಂವುಷನಿಗೆ ಆದೇಶಿಸುತ್ತಾನೆ. ಈ ಬಾರಿ ಅಲಂಬುಷ ಹಾಗೂ ಐರಾವಣನ ಇಬ್ಬರೂ ಯುದ್ಧದಲ್ಲಿ ಮಾಯೆಯನ್ನು ಬಳಸುತ್ತಾರೆ. ಅಲಂಬುಷನು ಐರಾವಣನನ್ನು ಬಿಲ್ಲಿನಿಂದ ಆಕ್ರಮಣ ಮಾಡುತ್ತಾನೆ, ಆದರೆ ಪ್ರತಿಯಾಗಿ ಐರಾವಣನು ಅಲಂಬುಷನ ಬಿಲ್ಲನ್ನು ಮುರಿಯುತ್ತಾನೆ ಮತ್ತು ರಾಕ್ಷಸನನ್ನು ಹಲವು ಭಾಗಗಳಾಗಿ ಸಂಹರಿಸುತ್ತಾನೆ. ಆದರೆ ಅಲಂಬುಷನ ದೇಹವು ತನ್ನಷ್ಟಕ್ಕೇ ಮರುರೂಪುಗೊಳ್ಳುತ್ತದೆ. ಆಗ ಐರಾವಣನು ಶೇಷ (ಅನಂತ) ಸರ್ಪದ ರೂಪವನ್ನು ತಾಳುತ್ತಾನೆ ಮತ್ತು ಅವನ ಸರ್ಪ ಸೈನ್ಯವು ಅವನನ್ನು ರಕ್ಷಿಸಲು ಸುತ್ತವರಿಯುತ್ತದೆ. ಇದಕ್ಕ ಪ್ರತಿಯಾಗಿ ಅಲಂಬುಷನು ಸರ್ಪಗಳ ಅನಂತ ವೈರಿಯಾದ ಗರುಡ (ಹದ್ದು)ನ ರೂಪವನ್ನು ತಾಳುತ್ತಾನೆ ಮತ್ತು ಸರ್ಪದ ಸೈನ್ಯವನ್ನು ನಾಶ ಮಾಡುತ್ತಾನೆ. ಅಂತಿಮವಾಗಿ, ಅಲಂಬುಷನು ಐರಾವಣನ ಶಿರಚ್ಛೇದವನ್ನು ಮಾಡುವ ಮೂಲಕ ಸಂಹಾರ ಮಾಡುತ್ತಾನೆ, ಆದರೂ ನಂತರ ಅವನ ಸೋದರ ಸಂಬಂಧಿಯಾದ ಘಟೋತ್ಕಜನು ಅಂತಿಮವಾಗಿ ಅಲಂಬುಷನನ್ನು ಕೊಲ್ಲುತ್ತಾನೆ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಅಪ್ಪು ಸರ್ ಅವರ ಹಣವನ್ನೆಲ್ಲ ಅಶ್ವಿನಿ ಮೇಡಂ ಏನ್ ಮಾಡಿದ್ದಾರೆ ಬೇರಗಾಗುತ್ತೀರಾ.

ಅಪ್ಪು ಸರ್ ಅವರ ಹಣವನ್ನೆಲ್ಲ ಅಶ್ವಿನಿ ಮೇಡಂ ಏನ್ ಮಾಡಿದ್ದಾರೆ ಬೇರಗಾಗುತ್ತೀರಾ.

ಹೆಸರು ಕಾಳು

ಪ್ರೋಟಿನ್ ಭರಿತ ಹೆಸರು ಕಾಳು