in

ಪಾರ್ವತಿ ದೇವಿಯ ಕಾಳಿ ಅವತಾರ

ಕಾಳಿ ಅವತಾರ
ಕಾಳಿ ಅವತಾರ

ಕಾಳಿ ದೇವಿ, ಕಾಳಿಕಾ ಎಂದೂ ಪ್ರಸಿದ್ಧ. ಇದು ಅನಂತ ಶಕ್ತಿಯನ್ನು ಹೊಂದಿರುವ ಹಿಂದೂ ದೇವತೆ. ಕಾಳಿ ಎನ್ನುವ ಹೆಸರು ಕಾಲ ಎನ್ನುವುದರಿಂದ ಬಂದಿದೆ. ಇದರರ್ಥ ಕಪ್ಪು, ಕಾಲ ,ಮರಣ, ಸಾವಿನ ದೇವರು, ಶಿವ. ಕಾಳಿ ಎನ್ನುವುದರ ಅರ್ಥ “ಕಪ್ಪಗಿರುವುದು”. ಶಿವನನ್ನು ಕಾಲ ಎನ್ನುವುದರಿಂದ -ಅನಂತ ಕಾಲ, ಕಾಳಿ ಆತನ ಪತ್ನಿ, “ಸಮಯ” ಅಥವಾ “ಸಾವು” ಎನ್ನುವ ಅರ್ಥಗಳೂ ಇವೆ. ಹೀಗೆ ಕಾಳಿಯು ಕಾಲ ಮತ್ತು ಪರಿವರ್ತನೆಯ ದೇವತೆ. ಹೀಗಿದ್ದರೂ ಕೆಲವೊಮ್ಮೆ ಕಪ್ಪಾಗಿ ಮತ್ತು ರೌದ್ರಾಕಾರವಾಗಿ ಕಾಣಿಸಿಕೊಳ್ಳುವಳು. ಅವಳ ಮೊತ್ತಮೊದಲ ಅವತಾರ ಸರ್ವನಾಶಕ ಶಕ್ತಿಸ್ವರೂಪಿಣಿಯದು, ಇನ್ನೂ ಕೆಲವು ಪ್ರಭಾವವನ್ನು ಹೊಂದಿದೆ. ವಿವಿಧ ಶಾಕ್ತ ಹಿಂದೂ ವಿಶ್ವಶಾಸ್ತ್ರಗಳಲ್ಲಿ, ಅದೇ ರೀತಿ ಶಾಕ್ತ ತಾಂತ್ರಿಕ ನಂಬಿಕೆಗಳಲ್ಲಿ ಆಕೆಯನ್ನೇ ಪರಮಸತ್ಯ ಅಥವಾ ಬ್ರಹ್ಮನ್ ಎಂದು ಪೂಜಿಸುತ್ತಾರೆ. ಅವಳನ್ನು ಭವತಾರಿಣಿ ಎಂದು ಪೂಜಿಸುತ್ತಾರೆ. ಇತ್ತೀಚಿನ ಭಕ್ತಿ ಪಂಥದವರು ಕಾಳಿಯನ್ನು ಮಂಗಳವನ್ನುಂಟುವಾಡುವ ಮಹಾಮಾತೆ ಮಹಾದೇವಿ ಎಂದು ಪರಿಗಣಿಸಿದ್ದಾರೆ.

ಪಾರ್ವತಿ ದೇವಿಯ ಕಾಳಿ ಅವತಾರ
ಕಾಳಿ ಅವತಾರ

ಕಾಳಿಯು ಭಗವಂತ ಶಿವನ ಜೊತೆಗಾರ್ತಿಯಾಗಿ ಪ್ರತಿನಿಧಿಸಲ್ಪಡುತ್ತಾಳೆ. ಶಿವನ ಶರೀರದ ಮೇಲೆ ಕಾಳಿ ನಿಂತಿರುತ್ತಾಳೆ. ದುರ್ಗಾ, ಭದ್ರಕಾಳಿ, ಸತಿ, ರುದ್ರಾಣಿ, ಪಾರ್ವತಿ ಮತ್ತು ಚಾಮುಂಡಾ ಮುಂತಾದ ಇನ್ನೂ ಅನೇಕ ಹಿಂದೂ ದೇವತೆಗಳ ಜೊತೆಗೂ ಆಕೆಯ ಸಂಬಂಧವಿದೆ. ದಶ ಮಹಾವಿದ್ಯಾಗಳು, ಹತ್ತು ಭೀಕರ ತಾಂತ್ರಿಕ ದೇವಿಯರಲ್ಲಿ ಆಕೆ ಮುಂಚೂಣಿಯಲ್ಲಿದ್ದಾಳೆ.

ಕಪ್ಪಿನೊಂದಿಗೆ ಕಾಳಿಯ ಸಂಬಂಧವು ಜೊತೆಗಾರ ಶಿವನೊಂದಿಗೆ ವೈರುಧ್ಯದಿಂದ ಕೂಡಿದೆ. ಶಿವನ ಶರೀರವು ಸ್ಮಶಾನದ ಬಿಳಿ ಬೂದಿಯಿಂದ ಲೇಪಿತವಾಗಿರುತ್ತದೆ ಅದರಲ್ಲಿಯೇ ಆತ ಧ್ಯಾನವನ್ನು ಮಾಡುತ್ತಾನೆ. ಮತ್ತು ಕಾಳಿ ಕೂಡ ಅಲ್ಲಿ ಜೊತೆಗಿರುತ್ತಾಳೆ. ಕಾಳಿ ಪದವು ಮೇಲಿಂದ ಮೇಲೆ ಗೊಂದಲವನ್ನು ಉಂಟುಮಾಡುತ್ತದೆ. ಕಲಿಯುಗ ಅಥವಾ ದೈತ್ಯ ಕಾಳಿಯೂ ಇದ್ದಾನೆ. ಹೇಗೆ ಇರಲಿ, ಕಾಳಿ (ಕಪ್ಪು, ಕಾಲ) ಮತ್ತು ಕಳಿ (ದುರ್ಬಲ, ಕಚ್ಚಾ, ಮೂಕ) ಇವುಗಳ ವ್ಯುತ್ಪತ್ತಿಯ ಮೂಲ ಒಂದೇ ಅಲ್ಲ, ಮತ್ತು ದೇವಿಯು ಹಿಂದೂ ಧರ್ಮದಲ್ಲಿ ಕಲಿಯುಗಕ್ಕೆ ಸಂಬಂಧಿಸಿಲ್ಲ.

ಕಾಳಿಯ ಸದ್ಯದ ರೂಪವು ಮೊದಲಿಗೆ ಕಾಣಿಸಿಕೊಳ್ಳುವುದು ಮಹಾಭಾರತ ದ ಸೌಪ್ತಿಕ ಪರ್ವದಲ್ಲಿ. ಅವಳನ್ನು “ಕಾಳ ರಾತ್ರಿ”ಎಂದು ಕರೆದಿದ್ದಾರೆ. ಮತ್ತು ಪಾಂಡವ ಸೈನಿಕರ ಕನಸಿನಲ್ಲಿ ಕಾಣಿಸಿಕೊಳ್ಳುವಳು,ದ್ರೋಣನ ಮಗ ಅಶ್ವತ್ಥಾಮನ ದಾಳಿಯ ಸಂದರ್ಭದಲ್ಲಿ ನಡೆದ ಯುದ್ದದ ನಡುವೆ ಅವಳು ಪ್ರತ್ಯಕ್ಷಳಾಗಿ ಕೊನೆಯವರೆಗೂ ಇರುವಳು.. ಅತ್ಯಂತ ಪ್ರಸಿದ್ಧವಾಗಿ ಅವಳು ಕಾಣಿಸಿಕೊಂಡಿದ್ದು ಆರನೆ ಶತಮಾನದ ದೇವಿಮಹಾತ್ಮೆ ಯಲ್ಲಿ ,ಮಹಾದೇವಿಯ ಒಂದು ಶಕ್ತಿಯಾದ ಆಕೆ ರಕ್ತಬೀಜಾಸುರನೆಂಬ ರಾಕ್ಷಸನನ್ನು ಸೋಲಿಸುತ್ತಾಳೆ. ಹತ್ತನೆ ಶತಮಾನದ ಕಾಳಿಕಾ ಪುರಾಣ ಕಾಳಿಯನ್ನು ಅಂತಿಮ ವಾಸ್ತವ ಅಥವಾ ಬ್ರಹ್ಮನ್ ಎಂದು ಪೂಜಿಸುತ್ತದೆ.

ಕಾಳಿಯ ಅತ್ಯಂತ ಪ್ರಸಿದ್ಧ ಪುರಾಣ ದುರ್ಗಾ ಮತ್ತು ಅವಳ ಸಹಾಯಕರಾದ ಮತ್ರಿಕರು ರಕ್ತಬೀಜನೆಂಬ ರಾಕ್ಷಸನನ್ನು ಸಂಹರಿಸಲು ವಿವಧ ರೀತಿಯಲ್ಲಿ ವಿವಿಧ ಆಯುಧಗಳಿಂದ ಗಾಯಗೊಳಿಸುತ್ತಾರೆ. ತಾವು ಪರಿಸ್ಥಿತಿಯನ್ನು ಬಗಡಾಯಿಸಿದೆವು ಎಂಬುದು ಅವರಿಗೆ ಬೇಗ ಅರಿವಾಗುತ್ತದೆ. ರಕ್ತಬೀಜನಿಂದ ಬಿದ್ದ ಪ್ರತಿ ಹನಿ ರಕ್ತದಿಂದ ಮತ್ತೊಬ್ಬ ರಕ್ತಬೀಜ ಹುಟ್ಟಿಕೊಳ್ಳುತ್ತಿದ್ದ. ಯುದ್ಧಭೂಮಿ ತುಂಬ ರಕ್ತಬೀಜನ ಪ್ರತಿರೂಪಿಗಳೇ ತುಂಬಿಹೋದರು.ದುರ್ಗೆಗೆ ಸಹಾಯ ಅಗತ್ಯವೆನಿಸಿತು. ಈ ರಾಕ್ಷಸರನ್ನು ನಿಗ್ರಹಿಸಲು ಅವಳು ಕಾಳಿಯನ್ನು ಕರೆದಳು. ಆ ಸಮಯದಲ್ಲಿ ದುರ್ಗೆಯೇ ಕಾಳಿಯ ರೂಪ ಧಾರಣ ಮಾಡಿದ್ದಳು ಎಂದೂ ಹೇಳುತ್ತಾರೆ.

ಅವಳ ಹಣೆಯ ಹೊರಭಾಗವು ಹುಬ್ಬು ಗಂಟಿಕ್ಕಿ ಭೀಷಣವಾಗಿತ್ತು. ಅವಳ ಮುಖಭಾವವು ಭಯಂಕರ ಕಾಳಿಯಾಗಿ ಬದಲಾಯಿತು, ಖಡ್ಗ ಮತ್ತು ಪಾಶವನ್ನು ಅವಳು ಹಿಡಿದಿದ್ದಳು. ವಿಚಿತ್ರವಾದ ಖಟ್ವಾಂಗ (ತಲೆಬುರುಡೆಯ-ತುದಿಯ ಚಿಪ್ಪು)ವನ್ನು ಧರಿಸಿದ್ದಳು, ತಲೆಬುರುಡೆಯ ಮಾಲೆಯಿಂದ ಅಲಂಕೃತಳಾಗಿದ್ದಳು, ಹುಲಿ ಚರ್ಮವನ್ನು ಧರಿಸಿದ್ದಳು. ಅತ್ಯಂತ ದಿಗಿಲುಗೊಳಿಸುವಂಥ, ತನ್ನ ಸಣಕಲು ಮಾಂಸದ ಕಾರಣವಾಗಿ , ಅಗಲವಾಗಿ ತೆರೆದ ಬಾಯಿ, ಹೊರಚಾಚಿದ ನಾಲಿಗೆಯಿಂದಾಗಿ ಭಯಹುಟ್ಟಿಸುವಂತಿದ್ದ, ಅತ್ಯಂತ ಕೆಂಪಾದ ಕಣ್ಣುಗಳನ್ನು ಹೊಂದಿದ, ಅವಳ ಗರ್ಜನೆಯು ದಶದಿಕ್ಕುಗಳನ್ನು ವ್ಯಾಪಿಸಲು,ಬಿರುಸಿನಿಂದ ಮೇಲೆ ಬಿದ್ದು ಆ ಸೇನೆಯಲ್ಲಿದ್ದ ದೊಡ್ಡದೊಡ್ಡ ಅಸುರರನ್ನು ಕತ್ತರಿಸಿ ಹಾಕಿದಳು, ದೇವತೆಗಳ ಶತ್ರುಗಳಾದ ಆ ದಂಡನ್ನು ಭಕ್ಷಿಸಿಹಾಕಿದಳು..

ಪಾರ್ವತಿ ದೇವಿಯ ಕಾಳಿ ಅವತಾರ
ಕಾಳಿ ಅವತಾರ

ಕಾಳಿಯು ರಕ್ತಬೀಜನ ರಕ್ತವನ್ನು ಆತನ ಶರೀರದಿಂದ ಹೀರಿ ಕುಡಿದು ಆತನನ್ನು ನಾಶಮಾಡಿದಳು. ಆತನ ತದ್ರೂಪಿ ರಕ್ತಬೀಜರನ್ನು ತನ್ನ ತೆರೆದ ಬಾಯಲ್ಲಿ ತುರುಕಿಕೊಂಡಳು. ತನ್ನ ಗೆಲವಿನಿಂದ ಸಂಪ್ರೀತಳಾದ ಕಾಳಿಯು ಯುದ್ಧಭೂಮಿಯಲ್ಲಿ ನೃತ್ಯಮಾಡಲು ಆರಂಭಿಸಿದಳು. ಸತ್ತವರ ಹೆಣಗಳ ಮೇಲೆ ಹೆಜ್ಜೆ ಹಾಕಿದಳು. ಅವಳ ಪತಿ ಶಿವನು ಸತ್ತವರ ನಡುವೆ ಅವಳ ಪಾದದಡಿ ಬಿದ್ದಿದ್ದನು, ಕಾಳಿಯನ್ನು ಪ್ರತಿನಿಧಿಸುವ ಪ್ರತಿಮೆಯು ದಕ್ಷಿಣ ಕಾಳಿ ಯ ರೂಪದಲ್ಲಿ ಸಾಮಾನ್ಯವಾಗಿ ಕಣ್ಣಿಗೆ ಬೀಳುವುದು.

ದೇವಿ ಮಹಾತ್ಮೆಯ ಕಥೆಯ ಪಾಠದಲ್ಲಿ, ಕಾಳಿಯನ್ನು ಮಾತ್ರಿಕ ಎಂದೂ ಮತ್ತು ಶಕ್ತಿ ಅಥವಾ ಶಕ್ತಿಯ ದೇವಿ ಎಂದೂ ವರ್ಣಿಸಲಾಗಿದೆ. ಚಾಮುಂಡಿ ಎಂಬ ವಿಶೇಷಣವೂ ಆಕೆಗಿದೆ, ಹೇಗೆಂದರೆ. ಅವಳು ಚಂಡ ಮತ್ತು ಮುಂಡ ರಾಕ್ಷಸರನ್ನು ಸಂಹಾರ ಮಾಡಿದವಳು.ಚಾಮುಂಡ ವನ್ನು ಆಗಾಗ್ಗೆ ಕಾಳಿಯೊಂದಿಗೆ ಗುರುತಿಸುತ್ತಾರೆ. ಅವಳು ಕಾಣುವುದಕ್ಕೆ ಮತ್ತು ಸ್ವಭಾವದಲ್ಲಿ ಹಾಗೆಯೇ ಇದ್ದಾಳೆ.

ಶಿವ ಮತ್ತು ಕಾಳಿಯ ನಡುವೆ ಒಂದು ನೃತ್ಯ ಸ್ಪರ್ಧೆ ನಡೆದುದನ್ನು ಒಂದು ದಕ್ಷಿಣ ಭಾರತದ ಪರಂಪರೆಯು ಹೇಳುತ್ತದೆ. ಶುಂಭ ಮತ್ತು ನಿಶುಂಭ ಎಂಬಿಬ್ಬರು ರಾಕ್ಷಸರನ್ನು ಸೋಲಿಸಿದ ಬಳಿಕ, ಕಾಳಿಯು ಕಾಡೊಂದರಲ್ಲಿ ನೆಲೆಯಾಗುತ್ತಾಳೆ. ಭೀಕರರಾದ ಸಂಗಾತಿಗಳೊಂದಿಗೆ ಅವಳು ಸುತ್ತಲಿನ ಪ್ರದೇಶವನ್ನು ಭಯಭೀತಗೊಳಿಸುತ್ತಾಳೆ. ಶಿವನ ಭಕ್ತರಲ್ಲಿ ಒಬ್ಬರು ಕಠಿಣ ತಪಸ್ಸನ್ನು ಆಚರಿಸುತ್ತಿದ್ದಾಗ ಅವರ ಏಕಾಗ್ರತೆಗೆ ಇದರಿಂದ ಅಡ್ಡಿಯಾಗುತ್ತದೆ. ಮತ್ತು ಅವರು ಈ ವಿನಾಶಕಾರಿಣಿಯಾದ ದೇವಿಯನ್ನು ಆ ಅರಣ್ಯದಿಂದ ದೂರಮಾಡುವಂತೆ ಶಿವನನ್ನು ಕೋರುತ್ತಾರೆ. ಶಿವನು ಅಲ್ಲಿಗೆ ಬಂದಾಗ ಕಾಳಿಯು ಆತನಿಗೆ ಬೆದರಿಕೆ ಒಡ್ಡುತ್ತಾಳೆ. ಆ ಪ್ರದೇಶವು ತನ್ನದೇ ಸ್ವಂತದ್ದು ಎಂದು ಹೇಳುತ್ತಾಳೆ. ಆಗ ಶಿವನು ಅವಳಿಗೆ ನೃತ್ಯ ಸ್ಪರ್ಧೆಗೆ ಆಹ್ವಾನಿಸುತ್ತಾನೆ ಮತ್ತು ಪರಿಶ್ರಮದ ತಾಂಡವ ನೃತ್ಯವನ್ನು ಮಾಡುವುದು ಅವಳಿಗೆ ಅಸಾಧ್ಯವಾಗಿ ಅವಳನ್ನು ಸೋಲಿಸುತ್ತಾನೆ. ಈ ಪ್ರಕರಣದಲ್ಲಿ ಕಾಳಿಯು ಸೋಲಿಸಲ್ಪಟ್ಟರೂ ಮತ್ತು ಉಪಟಳ ನೀಡುವ ಸ್ವಭಾವವನ್ನು ನಿಯಂತ್ರಿಸಿಕೊಳ್ಳುವ ಬಲವಂತಕ್ಕೆ ಒಳಗಾದರೂ ಇನ್ನೂ ಕೆಲವು ಪ್ರತಿಮೆಗಳು ಅಥವಾ ಇತರ ಪುರಾಣಗಳು ಅವಳನ್ನು ಇದೇ ರೀತಿಯಲ್ಲಿ ಚಿತ್ರಿಸಿದ್ದು ಇವೆ.

ಬಾಲ ಶಿವನು ಕಾಳಿಯನ್ನು ಶಾಂತಗೊಳಿಸಿದ ಇನ್ನೊಂದು ಪುರಾಣದ ಚಿತ್ರಣವೂ ಇದೆ. ಅದೇ ರೀತಿಯ ಈ ಕಥೆಯಲ್ಲಿ ಕಾಳಿಯು ತನ್ನ ಶತ್ರುಗಳನ್ನು ಯುದ್ಧಭೂಮಿಯಲ್ಲಿ ಸೋಲಿಸುತ್ತಾಳೆ ಮತ್ತು ನಿಯಂತ್ರಣ ಮೀರಿ ನರ್ತಿಸುವುದಕ್ಕೆ ಆರಂಭಿಸುತ್ತಾಳೆ. ಸತ್ತವರ ರಕ್ತವನ್ನು ಕುಡಿಯುತ್ತಾಳೆ, ಅವಳನ್ನು ಶಾಂತಗೊಳಿಸಲು ಮತ್ತು ಜಗತ್ತಿನ ಸ್ಥಿರತೆಯನ್ನು ರಕ್ಷಿಸಲು ದೊಡ್ಡದಾಗಿ ಅಳುತ್ತಿರುವ ಶಿಶುವಿನ ರೂಪದಲ್ಲಿ ಶಿವನನ್ನು ಅಲ್ಲಿಗೆ ಕಳುಹಿಸುತ್ತಾರೆ. ಮಗುವಿನ ಸಂಕಟವನ್ನು ಕಂಡ ಕಾಳಿಯು ತನ್ನ ನರ್ತನವನ್ನು ನಿಲ್ಲಿಸಿ ಅಸಹಾಯಕ ಶಿಶುವಿನ ರಕ್ಷಣೆಗೆ ಮುಂದಾಗುತ್ತಾಳೆ. ಅವಳು ಅವನನ್ನು ಎತ್ತಿಕೊಳ್ಳುತ್ತಾಳೆ, ಅವನ ಹಣೆಗೆ ಮುತ್ತಿಕ್ಕುತ್ತಾಳೆ, ಶಿಶುರೂಪಿ ಶಿವನಿಗೆ ಎದೆಹಾಲನ್ನು ಕುಡಿಸಲು ಮುಂದಾಗುತ್ತಾಳೆ. ಈ ಪುರಾಣವು ಕಾಳಿಯನ್ನು ಅವಳ ಪರೋಪಕಾರಿ ಮತ್ತು ಮಾತೃಸ್ವರೂಪದಲ್ಲಿ ಚಿತ್ರಿಸುತ್ತದೆ. ಹಿಂದೂಧರ್ಮದಲ್ಲಿ ಗೌರವಿಸಲ್ಪಡುವ ಕೆಲವು ಅಂಶಗಳು ಪಶ್ಚಿಮದಲ್ಲಿ ಬಹಳ ಸಲ ಗೌರವಿಸಲ್ಪಡುವುದಿಲ್ಲ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

53 Comments

ಕವಿ ಪೊನ್ನ

ಹಳೆಗನ್ನಡದ ಕವಿ ಪೊನ್ನ

ಅಸಿಡಿಟಿ ಸಮಸ್ಯೆ

ಈಗೀನ ಜೀವನಶೈಲಿಯಲ್ಲಿ ಹೊಟ್ಟೆಯ ಅಸಿಡಿಟಿ ಸಮಸ್ಯೆ