in

ನಮ್ಮ ರಾಷ್ಟ್ರ ಧ್ವಜ

ರಾಷ್ಟ್ರ ಧ್ವಜ
ರಾಷ್ಟ್ರ ಧ್ವಜ

ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಬಣ್ಣ, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರದ್ವಜ.

ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ ೨೨, ೧೯೪೭ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ ಜನವರಿ ೨೬ ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ ಬಾವುಟವಾಗಿಯೂ, ೨೬, ಜನವರಿ, ೧೯೫೦ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ. ಹಿಂದಿ ಭಾಷೆಯಲ್ಲಿ ತಿರಂಗಾ, ಕನ್ನಡದಲ್ಲಿ ತ್ರಿವರ್ಣ – ಮೂರು ವರ್ಣಗಳ ಧ್ವಜವೆಂದು ಸೂಚಿಸುವ ಪದಗಳು ಭಾರತದ ಬಾವುಟವನ್ನು ಸೂಚಿಸುವಾಗ ಬಳಕೆಯಲ್ಲಿದೆ.

ನಮ್ಮ ರಾಷ್ಟ್ರ ಧ್ವಜ
ರಾಷ್ಟ್ರ ಧ್ವಜ

ರಾಷ್ಟ್ರೀಯ ಧ್ವಜವು ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರೀಯ ನಿಧಿಯನ್ನು ಪ್ರತಿನಿಧಿಸುತ್ತದೆ. ಇದು ಸ್ವತಂತ್ರ ಭಾರತದ ಗಣರಾಜ್ಯದ ಸಂಕೇತವಾಗಿದೆ. ದೇಶ ಸ್ವತಂತ್ರವಾಗಲು ಕೆಲವು ದಿನಗಳ ಮೊದಲು, ಜುಲೈ 22, 1947 ರಂದು, ಸ್ವತಂತ್ರ ಭಾರತದ ಸಂವಿಧಾನದ ಬಗ್ಗೆ ಒಂದು ಸಭೆಯನ್ನು ಆಯೋಜಿಸಲಾಯಿತು, ಅಲ್ಲಿ ಮೊದಲ ಬಾರಿಗೆ ಎಲ್ಲರ ಮುಂದೆ ರಾಷ್ಟ್ರೀಯ ಧ್ವಜ ತ್ರಿವರ್ಣವನ್ನು ಪ್ರಸ್ತುತಪಡಿಸಲಾಯಿತು.

ಈ ನಮ್ಮ ಸ್ವಾತಂತ್ರ್ಯ ದೇಶದ ಸಂಕೇತವಾಗಿರುವ ರಾಷ್ಟ್ರದ್ವಜದ ಅವಹೇಳನ ರಾಷ್ಟ್ರದ್ರೋಹವಾಗಿರುತ್ತದೆ.
ಅದರ ಉಳಿವಿಗಾಗಿ ಬಲಿದಾನವಾಗಲು ಸದಾ ಸಿದ್ದವಾಗಿರುವ ನಾವುಗಳು ಅದರ ಮೇಲಿರುವ ಭಕ್ತಿಯನ್ನೇ ದೇಶಭಕ್ತಿ ಎನ್ನುತ್ತೇವೆ. ಅಂದಿನ ಪ್ರಧಾನಿಯಾಗಿದ್ದ ಜವಾಹರ‌ಲಾಲ್ ನೆಹರು ೧೯೪೭ ಜುಲೈ ೨೨ ರಂದು ಅಸೆಂಬ್ಲಿಯಲ್ಲಿ ನಮ್ಮ ರಾಷ್ಟ್ರ ದ್ವಜವನ್ನು ದೇಶಕ್ಕೆ ಅರ್ಪಿಸಿದರು. ನಮ್ಮ ಸರಕಾರವು ದ್ವಜ ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು. ಅದು ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯದಾದರೂ ಅಡ್ಡಿಯಿಲ್ಲ.
ಧ್ವಜ ಕೈ ನೂಲು ಮತ್ತು ಕೈ ನೇಯ್ಗೆಯದೇ ಆಗಿರಬೇಕು. ಕೇಸರಿ – ಬಿಳಿ – ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿಚಕ್ರವು ಹೆಚ್ಚು ಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದ್ದು, ಅದರಲ್ಲಿ ಇಪ್ಪತ್ತ ನಾಲ್ಕು ರೇಖೆಗಳಿವೆ. ದ್ವಜದ ಉದ್ದ ಮತ್ತು ಅಗಲ ೩:೨ ಪ್ರಮಾಣದಲ್ಲಿರ ತಕ್ಕದ್ದು ಎಂದು ತಿಳಿಸಿದೆ.
ರಾಷ್ಟ್ರಧ್ವಜ ತಯಾರಿಸುವ ಹಕ್ಕು ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಉತ್ತರ ಕರ್ನಾಟಕದಾದ್ಯಂತ ಒಟ್ಟು ೫೨ ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ. ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು. ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ.
ನಮ್ಮ ಪವಿತ್ರ ಭಾರತಾಂಬೆಯ ಕೀರ್ತಿಯು ಮುಗಿಲೆತ್ತರಕ್ಕೆ ಏರಲಿ, ಎಲ್ಲಕ್ಕಿಂತ ಶ್ರೇಷ್ಠವಾದ ನಮ್ಮ ರಾಷ್ಟ್ರದ ಧ್ಯೇಯೋದ್ದೇಶಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ, ಎಂಬ ಸಂಕೇತವನ್ನು ನಾಲ್ಕು ದಿಕ್ಕುಗಳಿಗೂ ತಿಳಿಯಪಡಿಸುವುದೇ ನಮ್ಮ ರಾಷ್ಟ್ರ ಧ್ವಜವನ್ನು ಮೇಲಕ್ಕೆ ಹಾರಿಸುವ ಉದ್ದೇಶ.

ಧ್ವಜದ ಬಣ್ಣಗಳ ವಿಶೇಷತೆ :

ನಮ್ಮ ರಾಷ್ಟ್ರ ಧ್ವಜ
ರಾಷ್ಟ್ರ ಧ್ವಜ


ಕೇಸರಿ:- ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆವ ಬಲಿದಾನಗಳ ಸಂಕೇತವಾಗಿದೆ.

ಬಿಳಿಬಣ್ಣ :- ಪವಿತ್ರ ಮನಸ್ಸಿನವರೊಂದಿಗೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತವಾಗಿದೆ.

ಹಸಿರು ಬಣ್ಣ :- ಪ್ರಕೃತಿಯೊಡನೆ ಮನುಷ್ಯನಿಗಿರಬೇಕಾದ ಅವಿನಾಭಾವ ಸಂಬಂಧವನ್ನು ತಿಳಿಸುತ್ತಾ, ಹಸಿರು ಜೀವರಾಶಿಗಳನ್ನು ಅವಲಂಬಿಸಿರುವ ಮನುಷ್ಯ ಮತ್ತು ಭೂಮಿಯ ಅನೂಹ್ಯ ಬಾಂಧವ್ಯಗಳ ಸಂಕೇತವಾಗಿದೆ.

ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ಜನಗಣ ಮನವನ್ನು ಹಾಡಲೇಬೇಕು

ಧ್ವಜದ ಬಳಕೆ :
ಧ್ವಜದ ಪ್ರದರ್ಶನ ಮತ್ತು ಬಳಕೆಯನ್ನು ಧ್ವಜ ಸಂಹಿತೆ, 2002 ರಿಂದ ನಿಯಂತ್ರಿಸಲಾಗುತ್ತದೆ.
ಲಾಂಛಾನಗಳು ಮತ್ತು ಹೆಸರುಗಳು ಕಾಯ್ದೆ, 1950 ಮತ್ತು ರಾಷ್ಟ್ರೀಯ ಗೌರವ ಕಾಯ್ದೆ, 1971ರ ಅವಮಾನಗಳ ತಡೆಗಟ್ಟುವಿಕೆ. ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನಗಳು, ಅದರ ಮೇಲೆ ಒಟ್ಟು ಅನಾನುಕೂಲಗಳು ಅಥವಾ ಅಸಮಾಧಾನಗಳು, ಹಾಗೆಯೇ ಧ್ವಜ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಅದನ್ನು ಬಳಸುವುದು ಕಾನೂನಿನ ಮೂಲಕ ಶಿಕ್ಷಾರ್ಹ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡೂ.

ನಮ್ಮ ರಾಷ್ಟ್ರ ಧ್ವಜ
ಧ್ವಜದ ಬಳಕೆ

ದ್ವಜವನ್ನು ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿದಾನಗತಿಯಲ್ಲಿ ಇಳಿಸಬೇಕು.
ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ತನಕ ಮಾತ್ರ ಹಾರಿಸಬೇಕು.
ರಾಷ್ಟ್ರ ದ್ವಜವನ್ನು ಕೆಲವು ಕಡೆ ಎಲ್ಲ ದಿನಗಳಲ್ಲೂ, ಇನ್ನು ಕೆಲವು ಕಡೆ ಕೇವಲ ವಿಶೇಷ ದಿನಗಳಲ್ಲಿ ಮಾತ್ರ ಹಾರಿಸಲಾಗುತ್ತದೆ.
ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಮತ್ತು ಗಾಂಧಿಜಯಂತಿ ಹಾಗೂ ರಾಷ್ಟ್ರೀಯ ವಿಶೇಷ ದಿನಗಳ ಜೊತೆಗೆ ಸರಕಾರದ ನಿರ್ದೇಶನದ ಮೇರೆಗೆ ರಾಷ್ಟ್ರಮಟ್ಟದ ಆಚರಣೆಯ ಸಂದರ್ಭಗಳಲ್ಲಿ ರಾಷ್ಟ್ರದ್ವಜವನ್ನು ಹಾರಿಸಬಹುದು.
ದ್ವಜ ಏರಿಸುವಾಗ ದ್ವಜದ ಹಸಿರು ಬಣ್ಣ ಕೆಳಗೆ ಇರುವಂತೆ ಕೇಸರಿ ಬಣ್ಣ ಮೇಲೆ ಇರುವಂತೆ ಹಾರಿಸತಕ್ಕದ್ದು.
ರಾಷ್ಟ್ರದ್ವಜವನ್ನು ಉರಿಸುವುದಾಗಲಿ, ಕೆಡಿಸುವುದಾಗಲಿ, ಕಾಲಡಿಯಲ್ಲಿ ಹಾಕುವುದಾಗಲಿ, ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ, ಮಾತು, ಬರಹ ಅಥವಾ ಕೃತ್ಯದ ಮೂಲಕ ಅಗೌರವ ತೋರಿದರೆ ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿ ಪಡಿಸಲಾಗುವುದು.
ಹವಾಮಾನದ ವೈಪರೀತ್ಯದಿಂದ ಧ್ವಜವು ಹಾಳಾಗದಂತೆ ಹಾರುತ್ತಿರುವ ದ್ವಜವನ್ನು ಕಾಪಾಡಬೇಕು.
ವೇದಿಕೆಯ ಮೇಲೆ ಬಳಸುವಂತಿದ್ದಲ್ಲಿ ಸಭಿಕರ ಎದುರಿಗೆ ನಿಂತು ಭಾಷಣ ಮಾಡುವವರ ಬಲಕ್ಕೆ ಧ್ವಜ ಕೋಲಿನಿಂದ ಅದನ್ನು ಹಾರಿಸತಕ್ಕದು
ಸಮ್ಮೇಳನಗಳು ಇತರ ಕಾರ್ಯಕ್ರಮಗಳು ನಡೆಯುವಾಗ ವೇದಿಕೆಯ ಮೇಲಿರುವ ಅಧ್ಯಕ್ಷ ಸ್ಥಾನಕ್ಕಿಂತ ಎತ್ತರದಲ್ಲಿ ನಮ್ಮ ರಾಷ್ಟ್ರದ್ವಜ ಹಾರಾಡತಕ್ಕದ್ದು

ಶಾಲೆ ಕಾಲೇಜುಗಳು, ಕ್ರೀಡಾ ಶಿಬಿರಗಳು, ಸ್ಕೌಟ್ಸ್ ಶಿಬಿರಗಳು ನಂತರ ವಿಶೇಷ ಸಂದರ್ಭಗಳಲ್ಲಿ ಮಕ್ಕಳ ಮನಸ್ಸಿನಲ್ಲಿ ವಿಶೇಷ ಗೌರವ ಮೂಡಿಸಲು ರಾಷ್ಟ್ರದ್ವಜ ಹಾರಿಸಬಹುದು.

ಭಾರತದ ಎಲ್ಲಾ ರಾಷ್ಟ್ರೀಯ ಧ್ವಜಗಳ ಇತಿಹಾಸ :
1904-06 – ಭಾರತದ ರಾಷ್ಟ್ರೀಯ ಧ್ವಜದ ಇತಿಹಾಸವು ಸ್ವಾತಂತ್ರ್ಯ ಪೂರ್ವದ ಅವಧಿಗೆ ಸಂಬಂಧಿಸಿದೆ. 1904-06ರ ಸುಮಾರಿಗೆ ರಾಷ್ಟ್ರಧ್ವಜವು ಮೊದಲು ಜನರ ಮುಂದೆ ಕಾಣಿಸಿಕೊಂಡಿತು. ಆ ಸಮಯದಲ್ಲಿ ಇದನ್ನು ಸ್ವಾಮಿ ವಿವೇಕಾನಂದರ ಐರಿಶ್ ಶಿಷ್ಯ ಸಿಸ್ಟರ್ ನಿವೇದಿತಾ ನಿರ್ಮಿಸಿದರು. ಸ್ವಲ್ಪ ಸಮಯದ ನಂತರ ಈ ಧ್ವಜವನ್ನು ಸಿಸ್ಟರ್ ನಿವೇದಿತಾ ಧ್ವಜ ಎಂದು ಕರೆಯಲಾಯಿತು. ಈ ಧ್ವಜದ ಬಣ್ಣಗಳು ಹಳದಿ ಮತ್ತು ಕೆಂಪು ಬಣ್ಣದ್ದಾಗಿದ್ದವು. ಇದರಲ್ಲಿ ಕೆಂಪು ಬಣ್ಣವು ಸ್ವಾತಂತ್ರ್ಯದ ಸಂಕೇತವಾಗಿತ್ತು ಮತ್ತು ಹಳದಿ ಬಣ್ಣವು ವಿಜಯದ ಸಂಕೇತವಾಗಿತ್ತು. ಇದನ್ನು ಬಂಗಾಳಿ ಭಾಷೆಯಲ್ಲಿ ಬರೆಯಲಾಗಿದೆ ‘ವೊಂಡೆ ಮಾಟೋರಂ’ ಅಂದರೆ ವಂದೇ ಮಾತರಂ. ಇದರ ಮೇಲೆ ಭಗವಾನ್ ಇಂದ್ರನ ಆಯುಧ ವಜ್ರಾ ಮತ್ತು ಸುರಕ್ಷಿತ ಕಮಲದ ಚಿತ್ರವನ್ನೂ ಮಾಡಲಾಯಿತು. ಸಿಡಿಲು ಶಕ್ತಿಯ ಸಂಕೇತವಾಗಿತ್ತು ಮತ್ತು ಕಮಲವು ಶುದ್ಧತೆಯ ಸಂಕೇತವಾಗಿತ್ತು.

ಸಿಸ್ಟರ್ ನಿವೇದಿತಾ ರಚಿಸಿದ ನಂತರ, 1906 ರಲ್ಲಿ, ಮತ್ತೊಮ್ಮೆ ಹೊಸ ಧ್ವಜವನ್ನು ರಚಿಸಲಾಯಿತು. ಇದು ಮೂರು ಬಣ್ಣಗಳನ್ನು ಒಳಗೊಂಡಿತ್ತು, ಮೇಲ್ಭಾಗದಲ್ಲಿ ನೀಲಿ, ನಂತರ ಹಳದಿ ಮತ್ತು ಕೆಳಭಾಗದಲ್ಲಿ ಕೆಂಪು. ಇದರಲ್ಲಿ, ಮೇಲ್ಭಾಗದಲ್ಲಿರುವ ನೀಲಿ ಪಟ್ಟಿಯಲ್ಲಿ 8 ವಿಭಿನ್ನ ರೀತಿಯ ನಕ್ಷತ್ರಗಳನ್ನು ತಯಾರಿಸಲಾಯಿತು. ಕೆಳಗಿನ ಕೆಂಪು ಪಟ್ಟಿಯಲ್ಲಿ, ಒಂದು ಬದಿಯಲ್ಲಿ ಸೂರ್ಯ ಮತ್ತು ಇನ್ನೊಂದು ಬದಿಯಲ್ಲಿ ಚಂದ್ರ ಮತ್ತು ಇನ್ನೊಂದು ಬದಿಯಲ್ಲಿ ನಕ್ಷತ್ರವಿತ್ತು. ಪಿಲಿ ಬೆಲ್ಟ್ನಲ್ಲಿ ದೇವನಾಗರಿ ಲಿಪಿಯಿಂದ ವಂದೇ ಮಾತರಂ ಬರೆಯಲಾಗಿದೆ.
ಅದೇ ವರ್ಷದಲ್ಲಿ, ಈ ಧ್ವಜದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಯಿತು, ಅದರಲ್ಲಿ ಕೇವಲ ಮೂರು ಬಣ್ಣಗಳಿವೆ, ಆದರೆ ಆ ಬಣ್ಣಗಳನ್ನು ಬದಲಾಯಿಸಲಾಯಿತು. ಇದು ಕೇಸರಿ, ಹಳದಿ ಮತ್ತು ಹಸಿರು ಬಣ್ಣಗಳನ್ನು ಹೊಂದಿತ್ತು, ಇದನ್ನು ಕಲ್ಕತ್ತಾ ಧ್ವಜ ಎಂದು ಕರೆಯಲಾಯಿತು. ಅದರ ಮೇಲೆ 8 ಅರ್ಧ ಅರಳಿದ ಕಮಲಗಳನ್ನು ತಯಾರಿಸಲಾಯಿತು, ಆದ್ದರಿಂದ ಇದನ್ನು ಲೋಟಸ್ ಫ್ಲ್ಯಾಗ್ ಎಂದೂ ಹೆಸರಿಸಲಾಯಿತು. ಇದನ್ನು ಸಚೀಂದ್ರ ಪ್ರಸಾದ್ ಬೋಸ್ ಮತ್ತು ಸುಕುಮಾರ್ ಮಿತ್ರ ತಯಾರಿಸಿದ್ದಾರೆ. ಈ ಧ್ವಜವನ್ನು ಸುರೇಂದ್ರನಾಥ ಬ್ಯಾನರ್ಜಿ ಅವರು ಆಗಸ್ಟ್ 7, 1906 ರಂದು ಕಲ್ಕತ್ತಾದ ಪಾರ್ಸಿ ಬಗಾನ್ ಚೌಕದಲ್ಲಿ ಹಾರಿಸಿದರು. ಆ ಸಮಯದಲ್ಲಿ ಬಂಗಾಳವನ್ನು ವಿಭಜಿಸಲಾಯಿತು, ಅದನ್ನು ವಿರೋಧಿಸಿ ಈ ಪ್ರದರ್ಶನವನ್ನು ನಡೆಸಲಾಯಿತು.

1921 – ಭಾರತದ ರಾಷ್ಟ್ರೀಯ ಧ್ವಜದಲ್ಲಿ ದೇಶದ ಏಕತೆಯನ್ನು ಸ್ಪಷ್ಟವಾಗಿ ಬಿಂಬಿಸಬೇಕೆಂದು ಮಹಾತ್ಮ ಗಾಂಧಿ ಬಯಸಿದ್ದರು, ಈ ಕಾರಣದಿಂದಾಗಿ ಒಂದು ಧ್ವಜವನ್ನು ರಚಿಸಲಾಯಿತು. ಈ ಧ್ವಜವು 3 ಬಣ್ಣಗಳನ್ನು ಹೊಂದಿತ್ತು, ಮೇಲ್ಭಾಗದಲ್ಲಿ ಬಿಳಿ ಮತ್ತು ಕೊನೆಯ ಕೆಂಪು ಬಣ್ಣದಲ್ಲಿ ಹಸಿರು. ಈ ಧ್ವಜದಲ್ಲಿ, ಬಿಳಿ ಬಣ್ಣವು ದೇಶದ ಅಲ್ಪಸಂಖ್ಯಾತರನ್ನು, ಹಸಿರು ಮುಸ್ಲಿಂ ಜಾತಿಯನ್ನು ಮತ್ತು ಕೆಂಪು ಬಣ್ಣವನ್ನು ಹಿಂದೂ ಮತ್ತು ಸಿಖ್ ಜಾತಿಗಳನ್ನು ಪ್ರತಿನಿಧಿಸುತ್ತದೆ. ನೂಲುವ ಚಕ್ರವನ್ನು ಮಧ್ಯದಲ್ಲಿ ಸೇರಿಸಲಾಯಿತು, ಇದು ಇಡೀ ಜಾತಿಯ ಏಕತೆಯನ್ನು ತೋರಿಸುತ್ತದೆ. ಈ ಧ್ವಜವನ್ನು ಕಾಂಗ್ರೆಸ್ ಪಕ್ಷವು ಅಂಗೀಕರಿಸಲಿಲ್ಲ, ಆದರೆ ಇನ್ನೂ ಇದು ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯತೆಯ ಸಂಕೇತವಾಗಿ ಉಳಿದಿದೆ.
ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಕೋಲಾರದ ಕೋಟಿಲಿಂಗೇಶ್ವರ

ಕೋಲಾರದ ಕೋಟಿಲಿಂಗೇಶ್ವರ

ಹಲ್ಲಿ

ಹಲ್ಲಿ ಕಾಟ ಮನೆಯಲ್ಲಿದ್ದರೆ ತಪ್ಪಿಸಿಕೊಳ್ಳುವುದು ಹೇಗೆ?