in ,

ಸಸ್ಯಾಹಾರ ಮತ್ತು ಮಾಂಸಾಹಾರ

ಸಸ್ಯಾಹಾರ ಮತ್ತು ಮಾಂಸಾಹಾರ
ಸಸ್ಯಾಹಾರ ಮತ್ತು ಮಾಂಸಾಹಾರ

ಭಾರತೀಯ ಆಹಾರ ವೈಶಿಷ್ಟ್ಯಆಹಾರದ ಶೈಲಿಗಳಲ್ಲಿ ಎಷ್ಟು ಪ್ರಕಾರಗಳು ಎಂಬ ಪ್ರಶ್ನೆಗೆ ಎಲ್ಲರೂ ಉತ್ತರಿಸುವದು ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಎರಡು ಪ್ರಕಾರಗಳ ಬಗ್ಗೆ. ಪಾಶ್ಚಿಮಾತ್ಯ ಲೋಕದಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರಗಳ ಕುರಿತು ಅನೇಕ ಚರ್ಚೆಗಳು ಇವೆ. ನಮ್ಮ ದೇಶದಲ್ಲಿಯೂ ಸಂತರು ಸಸ್ಯಾಹಾರಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಕಾಣುತ್ತದೆ. ಆದರೂ ಸಸ್ಯಾಹಾರ ಮತ್ತು ಮಾಂಸಾಹಾರದಲ್ಲಿ ಯಾವದು ಸರಿ ಎಂಬಂಥ ಚರ್ಚೆಗಳು ಹಿಂದೆ ಆಗಿಲ್ಲವಾದರೂ ಈಗ ಅಂಥ ಚರ್ಚೆಗಳು ನಡೆಯುತ್ತಿವೆ. ಇಂದು ನಮ್ಮ ದೇಶದಲ್ಲಿರುವ ಹೋಟೆಲುಗಳು ಬಹುತೇಕ ಸಸ್ಯಾಹಾರ ಮತ್ತು ಮಾಂಸಾಹಾರ ಎಂಬ ಎರಡು ಪ್ರಕಾರಗಳ ಮೇಲೆಯೇ ಅವಲಂಬಿತವಾಗಿರುತ್ತದೆ.


ಆಹಾರ ಪದ್ಧತಿ ತಿನ್ನುವವರ ಮೇಲೆ ಅವಲಂಬಿತವಾಗಿದೆ. ಯಾರೂ ಕೂಡ ಆದರ ಬಗ್ಗೆ ಮಾತಾಡುವ ಹಾಗೆ ಇಲ್ಲ. ಹಾಗೆ ನೋಡಿದರೆ ಸಸ್ಯಾಹಾರಿಗಳು ಮಾಂಸಾಹಾರಿಗಳನ್ನೂ ದೂರುವಂತಿಲ್ಲ. ಏಕೆಂದರೆ ಸಸ್ಯಗಳಿಗೂ ನಮ್ಮಂತೆ ಜೀವ ಇದೆ ಅಂತ ವಿಜ್ಞಾನ ಹೇಳುತ್ತದೆ.ಅವಕ್ಕೂ ಭಾವನೆ ಇದೆ,ನೋವು ಇದೆ ಅಂತ. ಪ್ರತಿಯೊಂದು ಸಂಪ್ರದಾಯವೂ ಒಂದೊಂದು ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವುದರ ಕುರಿತು ಒಂದು ವೈಜ್ಞಾನಿಕ ಚಿತ್ರಣ ಕಟ್ಟಿಕೊಡಲು ಸಾಧ್ಯವೇ? ಲಿಂಗಾಯತರು ಮಾಂಸವನ್ನು ನಿಷೇಧಿಸಿದ್ದಾರೆ. ಜೈನರು ಮಾಂಸದ ಜೊತೆಗೆ ಈರುಳ್ಳಿ ಬೆಳ್ಳುಳ್ಳಿ ಕೂಡ ನಿಷೇಧಿಸಿದ್ದಾರೆ. ಸಂತೋಷಿ ವ್ರತ ಹಿಡಿದವರು ಹುಳಿಯಿಲ್ಲದ ಆಹಾರ ತಿನ್ನುತ್ತಾರೆ. ಅಯ್ಯಪ್ಪನ ವ್ರತ ಹಿಡಿದವರು ಕಠಿಣ ಆಹಾರದ ವ್ರತವನ್ನು ಪಾಲಿಸುತ್ತಾರೆ. ಉಳಿದ ದಿನಗಳಲ್ಲಿ ತಿನ್ನುವ ಮಾಂಸಾಹಾರವು ವಿಶೇಷ ದಿನಗಳಲ್ಲಿ ಹೇಗೆ ವರ್ಜ್ಯವಾಗುತ್ತದೆ? ನಮ್ಮ ಆಹಾರದ ಸಂಪ್ರದಾಯಗಳಲ್ಲಿ ಈ ರೀತಿಯ ನೂರಾರು ಪ್ರಕಾರಗಳ ವಿಧಿ ನಿಷೇಧಗಳ ಸೃಷ್ಟಿಗಳ ಹಿಂದಿರುವ ರಚನೆಯ ಬಗ್ಗೆ ಕುತೂಹಲ ಖಂಡಿತಾ ಇದೆ.

ಸಸ್ಯಾಹಾರ ಮತ್ತು ಮಾಂಸಾಹಾರ
ಸಸ್ಯಾಹಾರ


ಹಾಗಾದರೆ ಸಸ್ಯಾಹಾರಿಗಳೆಂದು ಯಾರನ್ನು ಕರೆಯಬಹುದು ಎಂಬ ಪ್ರಶ್ನೆ ಸಹಜವಾಗಿ ಏಳುತ್ತದೆ. ಬರೀ ಮೊಟ್ಟೆಯನ್ನು ಸೇವಿಸುವವರನ್ನೂ ಪಾಶ್ರ್ವ ಸಸ್ಯಾಹಾರಿಗಳು ಎನ್ನುವರು. ಕೆಲವರು ಹಾಲು ಮತ್ತು ಮೊಟ್ಟೆಯನ್ನೂ ಉಪಯೋಗಿಸುತ್ತಾರೆ ಇವರನ್ನೂ ಮೇಲಿನ ಪಾಶ್ರ್ವ ಸಸ್ಯಾಹಾರಿಗಳು ಎಂದೇ ಕರೆಯಬಹುದು. ಬರೀ ಹೈನೋತ್ಪನ್ನಗಳನ್ನು ಮಾತ್ರ ಸೇವಿಸುವವರನ್ನು ಇದೇ ಕೆಟಗರಿಗೆ ಸೇರಿಸಬಹುದು. ಪಕ್ಕಾ ಸಸ್ಯಾಹಾರಿಯೆಂದರೆ, ಬರೀ ಸಸ್ಯಗಳಿಂದ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಸೇವಿಸುವವರು. ಬರೀ ಮೀನು ಮತ್ತು ಚಿಕನ್ ಸೇವಿಸುವವರನ್ನು ಸೆಮಿ-ಮಾಂಸಾಹಾರಿಗಳೆನ್ನಬಹುದು.
ಸಾಮಾನ್ಯವಾಗಿ ಸಸ್ಯಾಹಾರಿ ಗಳಿಗೆ ಮಾಂಸಾಹಾರಿಗಳ ಬಗ್ಗೆ ಒಂದು ಅಭಿಪ್ರಾಯವಿದೆ.

ಸಸ್ಯಾಹಾರ ಮತ್ತು ಮಾಂಸಾಹಾರ
ಮಾಂಸಾಹಾರ

ಮಾಂಸಾಹಾರಿಗಳಿಗೆ ಅತಿಹೆಚ್ಚು ವೈವಿಧ್ಯಮಯ ಅಡುಗೆಗಳಿವೆ, ಅವರು ಎಲ್ಲಿ ಹೋದರು, ಯಾವುದೇ ಪ್ರದೇಶಕ್ಕೆ ಹೋದರೂ ಹೇಗೋ ಊಟದ ಸಮಸ್ಯೆಯಾಗುವುದಿಲ್ಲ, ಸಸ್ಯಹಾರಿಗಳಿಗೆ ತುಂಬಾ ಕಷ್ಟ. ಹಣ್ಣು ಹಂಪಲು ತಿಂದು ಸಮಾಧಾನ ಮಾಡಿಕೊಳ್ಳಬೇಕು ಎಂದು. ನಾಗರೀಕತೆ ಅಭಿವೃದ್ಧಿಗೊಂಡ ಮನುಷ್ಯ ತಾರ್ಕಿಕವಾಗಿ ಚಿಂತನೆ ಮಾಡುತ್ತಾ, ಎಲ್ಲವನ್ನೂ ವೈಜ್ಞಾನಿಕ ದೃಷ್ಟಿಯಿಂದ ನೋಡಲು ಕಲಿತ ಮನುಷ್ಯ ನಂತರದ ದಿನಗಳಲ್ಲಿ ಆಹಾರವನ್ನೂ ವಿಶ್ಲೇಷಿಸಿ ನೋಡುವ ಪರಿಪಾಠ ಶುರುಮಾಡಿಕೊಂಡ. ವೈದ್ಯಕೀಯ ಲೋಕದ ತಜ್ಞರು ಕೂಡ ಮಾಂಸಾಹಾರದಲ್ಲಿ ವಿಫುಲವಾದ ಪ್ರೋಟಿನ್ ಅಂಶವಿದೆಯಾದ್ದರಿಂದ, ಬಲಿಷ್ಟವಾದ ಆರೋಗ್ಯದ ದೃಷ್ಟಿಯಿಂದ ಮಾಂಸಾಹಾರ ಮಾನವನಿಗೆ ಯೋಗ್ಯ ಎಂದು ಮಾತನಾಡುತ್ತಾರೆ. ಜೊತೆಗೆ ಪೂರ್ಣಪ್ರಮಾಣದಲ್ಲಿ ಮಾಂಸಾಹಾರ ಸೇವಿಸುವುದು ಒಳ್ಳೆಯದಲ್ಲ ಎಂಬ ಮಾತನ್ನೂ ಹೇಳುತ್ತಾರೆ. ಅಂದರೆ ನಾವು ತಿನ್ನುವ ಆಹಾರದಲ್ಲಿ 10% ಮಾಂಸವಿದ್ದಲ್ಲಿ ಅದು ಅರೋಗ್ಯಕ್ಕೆ ಒಳ್ಳೆಯದು ಎಂಬ ಅಭಿಪ್ರಾಯ. ಈ ವಿಷಯದ ಮೇಲೇ ಬೇಕಾದಷ್ಟು ಸಂಶೋಧನೆಗಳು ನಡೆದಿವೆಯಾದರೂ ಯಾರೂ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದ್ದಾರೆ. ಬ್ರಿಟನ್ನಲ್ಲಿ ಮಾನವರ ಮೇಲೇ ನಡೆಸಿದ ಪ್ರಯೋಗದಲ್ಲಿ ಕಂಡುಬಂದ ಅಂಶಗಳೆಂದರೆ, ಮಾಂಸಾಹಾರ ಮಾಡುವ ವ್ಯಕ್ತಿಯ ಸರಾಸರಿ ಆಯುಷ್ಯ ಕಡಿಮೆಯಾಗುತ್ತದೆ. ಇವರಿಗೆ ಹೃದಯ ಸಂಬಂಧಿ ರೋಗಗಳು ಹೆಚ್ಚು ಭಾದಿಸುತ್ತವೆ. ಈ ವಿಚಾರದಲ್ಲಿ ಸಸ್ಯಾಹಾರಿಗಳಿಗೆ ಹೃದಯ ತೊಂದರೆಗಳು ಹೋಲಿಸಿದಲ್ಲಿ ಮಾಂಸಾಹಾರಿಗಳಿಗಿಂತ ಕಡಿಮೆ. ಇದೇ ಪ್ರಯೋಗದಲ್ಲಿ 6000 ಜನರಿಗೆ ಸಸ್ಯಹಾರವನ್ನು ಮತ್ತು 6000 ಜನರಿಗೆ ಮಾಂಸಾಹಾರವನ್ನು ಸತತವಾಗಿ 12 ವರ್ಷಗಳವರೆಗೆ ನೀಡಲಾಯಿತು. ನಂತರದ ಫಲಿತಾಂಶ 40% ಸಸ್ಯಾಹಾರಿಗಳು ಕ್ಯಾನ್ಸರ್ ರೋಗ ಬರುವ ಸಾಧ್ಯತೆಯಿಂದ ದೂರವುಳಿದಿದ್ದರು ಮತ್ತು 20%ನಷ್ಟು ಇತರೆ ರೋಗಗಳಿಂದ ಮುಕ್ತರಾಗಿದ್ದರು.
ಪ್ರಾಣಿಗಳು ಜೀವಧಾರಣೆಗಾಗಿ ಆಹಾರವನ್ನು ಸೇವಿಸುತ್ತವೆ. ಆ ಆಹಾರವು ಇಷ್ಟವಾದದ್ದಾಗಿರಬೇಕು, ಹಿತಕಾರಿಯೂ ಆಗಿರಬೇಕು. ನಾಲಿಗೆಯು ನಮಗೆ ಇಷ್ಟಾನಿಷ್ಟವನ್ನು ತಿಳಿಸಿಕೊಡುತ್ತದೆ. ಇಷ್ಟವಾದದ್ದೆಲ್ಲ ಹಿತವನ್ನು ಉಂಟು ಮಾಡಲಾರದು ಎಂಬುದು ತಿಳಿದ ಸಂಗತಿಯೇ. ವಿಹಿತವಾದದ್ದು ಹಿತವನ್ನು ಉಂಟು ಮಾಡುತ್ತದೆ.


ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಸಸ್ಯಾಹಾರ ಸೇವನೆಯಿಂದ ಮತ್ತು ಸಸ್ಯಾಹಾರಿಗಳಿಗೆ ತಮ್ಮ ದೇಹ ತೂಕವನ್ನು ಕಡಿಮೆ ಮಾಡಿ ಕೊಲೆಸ್ಟ್ರಾಲ್ ನ್ನು ನಿಯಂತ್ರಿಸಿಕೊಳ್ಳಬಹುದು ಎಂದು ಅಧ್ಯಯನ ಹೇಳುತ್ತದೆ. ಸಸ್ಯಾಹಾರ ಸೇವನೆಯಿಂದ ದೇಹದಲ್ಲಿ ಕೊಬ್ಬಿನ ಅಂಶವನ್ನು ನಿಯಂತ್ರಿಸಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅಲ್ಲದೆ ಇತರ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಬಹುದು. ಮಾಂಸಾಹಾರ ಸೇವಿಸುವವರಿಗೆ ಹೋಲಿಸಿದರೆ ಸಸ್ಯಾಹಾರಿಗಳು ಮಧುಮೇಹ ಮತ್ತು ಹೃದಯ ಸಂಬಂಧಿ ರೋಗಗಳಿಂದ ದೂರವುಳಿಯಬಹುದು ಎಂದು ಅಧ್ಯಯನದಿಂದ ತಿಳಿದು ಬಂದ ವಿಷಯ. ನಮ್ಮ ಬಾಯಿ, ಹಲ್ಲು ಹಾಗೂ ಪಚನಾಂಗಗಳು ಮಾಂಸಾಹಾರಕ್ಕೆ ಹೇಳಿ ಮಾಡಿಸಿದ್ದಲ್ಲ. ಮಾಂಸಾಹಾರವು ಬೇಗ ಜೀರ್ಣವಾಗುದಿಲ್ಲವಾದ ಕಾರಣ ಉದರ ಸಂಬಂಧಿ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ , ಗ್ಯಾಸ್ಟ್ರಿಕ್ ಸಮಸ್ಯೆಗಳು. ಆಹಾರ ಪದ್ದತಿಯಲ್ಲಿ ಯಾವ ಆಹಾರ ಶ್ರೇಷ್ಟ ಎಂಬುದನ್ನು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ, ಕಡಿಮೆ ಅಪಾಯವುಳ್ಳ ಸಸ್ಯಾಹಾರವೇ ಶ್ರೇಷ್ಟವಾದದು ಹಾಗೂ ಸಸ್ಯಾಹಾರದಲ್ಲೂ ಮಾಂಸಗಳಲ್ಲಿರುವಷ್ಟೇ ಪ್ರೋಟಿನ್ ಅಂಶಗಳು ವಿಫುಲವಾಗಿ ಲಭ್ಯ ಎಂಬ ವಾದವೂ ಇದೆ. ಗೋಧಿ, ದ್ವಿದಳ ಧಾನ್ಯಗಳು, ಹಸಿರುಸೊಪ್ಪುಗಳು, ನೆಲ್ಲಿ, ಬಾಳೆಹಣ್ಣು, ಡ್ರೈ ಫ್ರೂಟ್ಸ್ ಇತ್ಯಾದಿಗಳನ್ನು ಸಮತೋಲನದಲ್ಲಿ ಸೇವಿಸಿದಾಗ ಮಾಂಸದಲ್ಲಿರುವಷ್ಟೆ ಪ್ರಮಾಣದ ಜೀವಸತ್ವಗಳು ಲಭ್ಯವಿರುತ್ತದೆ ಎಂದು ನಿಸ್ಸಂಶಯವಾಗಿ ದೃಡಪಟ್ಟಿದೆ.


ಮಧುಮೇಹ ಮತ್ತು ಹೃದ್ರೋಗಿಗಳು ಮಾಂಸಾಹಾರ ಸೇವನೆ ಕಡಿಮೆ ಮಾಡಿ ಅಧಿಕ ಹಣ್ಣು, ತರಕಾರಿ, ಧಾನ್ಯ ಮತ್ತು ದ್ವಿದಳ ಧಾನ್ಯಗಳನ್ನು ಸೇವಿಸುವುದರಿಂದ ಅವುಗಳಲ್ಲಿ ಕೊಬ್ಬಿನ ಅಂಶ ಕಡಿಮೆಯಿದ್ದು ಫೈಟೊಕೆಮಿಕಲ್ಸ್ ಮತ್ತು ನಾರಿನಂಶ ಹೆಚ್ಚಿರುವುದರಿಂದ ಗ್ಲೈಸೆಮಿಕ್ ನಿಯಂತ್ರಣದಲ್ಲಿದ್ದು ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ. ಮಾಂಸಾಹಾರದಿಂದ ಸಿಗುವ ಪೋಷಕಾಂಶವೆಲ್ಲವೂ ಸಸ್ಯಾಹಾರದಿಂದಲೂ ಸಿಗುತ್ತದೆ. ಒಂದೇ ಅಪವಾದ ಎಂದರೆ ವಿಟಮಿನ್ ಬಿ12. ಯಾರಾದರೂ ಕಡಿಮೆ ಮಾಂಸ ಸೇವಿಸುತ್ತಿದ್ದರೆ ಅಥವಾ ಸೇವಿಸದೆ ಇದ್ದಲ್ಲಿ ಮಾತ್ರ.


ಇಲ್ಲಿ ಸಸ್ಯಾಹಾರ ಒಳ್ಳೆಯದು, ಮಾಂಸಾಹಾರ ಕೆಟ್ಟದ್ದು ಅನ್ನುವ ಅನಿಸಿಕೆ ಇಲ್ಲ. ಯಾವುದಾದರೂ ಸರಿ ಅತಿಯಾದರೆ ಅಮೃತ ಕೂಡಾ ವಿಷ ಅನ್ನುವ ಮಾತು ಇದೆ.ಮಿತವಾಗಿ ತಿಂದರೆ ಎಲ್ಲವೂ ಒಳ್ಳೆಯದೇ.


ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ದುಷ್ಯಂತ,ಶಕುಂತಲೆ

ದುಷ್ಯಂತ,ಶಕುಂತಲೆ ಪ್ರೇಮಕಥೆ

ರಾಗಿ

ರಾಗಿ ತಿನ್ನುವವರಿಗೆ ಗೊತ್ತು, ಇದರ ಮಹತ್ವ ‘ರಾಗಿ ತಿಂದವ ನಿರೋಗಿ’