in ,

ಮೊಟ್ಟೆ ತಿಂದರೆ ಏನು ಪ್ರಯೋಜನ ಇದೆ?

ಮೊಟ್ಟೆ ತಿಂದರೆ ಏನು ಪ್ರಯೋಜನ ಇದೆ?

ದೇಹಕ್ಕೆ ವಿವಿಧ ರೀತಿಯ ವಿಟಮಿನ್-ಪ್ರೋಟೀನ್​ಗಳ ಅವಶ್ಯಕತೆ ಇರುತ್ತದೆ. ಅಂತಹ ಪೋಷಕಾಂಶಗಳನ್ನು ಹೊಂದಿರುವ ಆಹಾರಗಳಲ್ಲಿ ಮೊಟ್ಟೆ ಕೂಡ ಒಂದು.

ಮೊಟ್ಟೆ ಎಲ್ಲರಿಗೆ ಇಷ್ಟವಾಗುವ ಆಹಾರ .ದಿನಕೊಂದು ಮೊಟ್ಟೆ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಇದರಿಂದ ಮೂಳೆಗಳು ಬಲಗೊಳ್ಳುವುದಲ್ಲದೆ, ಕೀಲು ನೋವಿನಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ. ಮಾಂಸಾಹಾರಿಗಳು ಊಟಕ್ಕೆ ಏನೂ ಇಲ್ಲ ಎಂದರೂ ಮೊಟ್ಟೆ ಒಂದು ಇದ್ದರೆ ಸಾಕು ಅಂದುಕೊಳ್ಳುತ್ತಾರೆ. ಮೊಟ್ಟೆಯನ್ನು ಹೇಗೆ ತಿಂದರೂ ರುಚಿಯೇ. ಅದರಲ್ಲೂ ಬೇಯಿಸಿ ತಿನ್ನುವ ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಮೊಟ್ಟೆ ತಿಂದರೆ ಏನು ಪ್ರಯೋಜನ ಇದೆ?

ಮೊಟ್ಟೆಯು ವಿಶ್ವದಲ್ಲಿ ಅತೀ ಪೋಷಕಾಂಶಗಳು ಇರುವ ಆಹಾರ ಎಂದು ಪರಿಗಣಿಸಲಾಗಿದೆ. ಒಂದು ಮೊಟ್ಟೆಯಲ್ಲಿ ದಿನಕ್ಕೆ ಬೇಕಾಗಿರು ವಂತಹ ಪೋಷಕಾಂಶಗಳು ಸಿಗುತ್ತದೆ. ಇದರಲ್ಲಿನ ಕೆಲವು ಪೋಷಕಾಂಶಗಳು ಆರೋಗ್ಯಕ್ಕೆ ಒಳ್ಳೆಯದು.

ಮೊಟ್ಟೆಗಳ ವಿಷಯಕ್ಕೆ ಬಂದರೆ ಒಂದು ಸಾಧಾರಣ ಮೊಟ್ಟೆಯಲ್ಲಿ ಸುಮಾರು 6 ಗ್ರಾಂ ಗಳಷ್ಟು ಪ್ರೋಟೀನ್ ಅಂಶ ಸೇರಿದೆ ಜೊತೆಗೆ ಸಾಕಷ್ಟು ಅಮೈನೋ ಆಮ್ಲಗಳ ಅಂಶ ಕೂಡ ಸೇರಿದೆ. ನಮ್ಮ ದೇಹದ ಆರೋಗ್ಯ ಚೆನ್ನಾಗಿರಬೇಕಾದರೆ ಮೊದಲು ನಾವು ಸೇವಿಸುವ ಆಹಾರದಲ್ಲಿ ಪ್ರೊಟೀನ್ ಅಂಶಗಳು ಹೆಚ್ಚಿರಬೇಕು.

ಮೊಟ್ಟೆ ತಿಂದರೆ ಆಗುವ ಲಾಭಗಳು ಯಾವುವು ಎಂದರೆ

ಮೊಟ್ಟೆ ತಿಂದರೆ ಏನು ಪ್ರಯೋಜನ ಇದೆ?

೧.ಬೇಯಿಸಿದ ಮೊಟ್ಟೆಯಿಂದ ಕಣ್ಣುಗಳಿಗೆ ಅತ್ಯುತ್ತಮ ಪ್ರಯೋಜನ ಲಭಿಸುತ್ತದೆ.

೨.ಮೊಟ್ಟೆಯಲ್ಲಿ ಸೆಲೆನಿಯಮ್ ಎಂಬ ಅಂಶ ಕಂಡುಬರುತ್ತದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಮೊಟ್ಟೆಗಳಲ್ಲಿರುವ ಸೆಲೆನಿಯಮ್ ಸೋಂಕುಗಳ ವಿರುದ್ಧ ಹೋರಾಡಲು ಕೂಡಾ ಸಹಾಯ ಮಾಡುತ್ತದೆ. ಥೈರಾಯ್ಡ್ ಮತ್ತು ಹಾರ್ಮೋನುಗಳನ್ನು ನಿಯಂತ್ರಿಸುವಲ್ಲಿಯೂ ಮೊಟ್ಟೆ ಪ್ರಮುಖ ಪಾತ್ರ ವಹಿಸುತ್ತದೆ.

೩.ಬೆಳಗ್ಗೆ ಒಂದು ಮೊಟ್ಟೆ ತಿಂದರೆ ಇದು ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ. 

೪.ಮೊಟ್ಟೆಯಲ್ಲಿ ಪ್ರೋಟೀನ್ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಮೊಟ್ಟೆಯನ್ನು ತಿನ್ನುವುದರಿಂದ ಪುರುಷರ ದೈಹಿಕವಾಗಿ ಸದೃಢರಾಗುತ್ತಾರೆ.

೩. ಪ್ರತಿ ನಿತ್ಯ ಒಂದು ಮೊಟ್ಟೆ ತಿಂದರೆ ಮಾಂಸಖಂಡಗಳು ಬಲವಾಗುತ್ತವೆ. ಮೊಟ್ಟೆ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.

೪.ಕೋಲೈನ್ ಎಂಬ ಬಿ-ಕಾಂಪ್ಲೆಕ್ಸ್ ವಿಟಮಿನ್ ಸಮೃದ್ದವಾಗಿರುವ ನೈಸರ್ಗಿಕ ಆಹಾರದಲ್ಲಿ ಮೊಟ್ಟೆಯ ಹಳದಿಭಾಗ ಪ್ರಮುಖವಾಗಿದೆ. ಕೋಲೈನ್ ಮೆದುಳಿನ ಕ್ಷಮತೆಯನ್ನು ಹೆಚ್ಚಿಸುವ ಹಾಗೂ ಉರಿಯೂತವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಆಹಾರದ ಮೂಲಕ ಲಭಿಸುವ ಕೋಲೈನ್ ವಿಶೇಷವಾಗಿ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಮೆದುಳಿನ ಬೆಳವಣಿಗೆಗೆ ನೆರವಾಗುತ್ತದೆ ಹಾಗೂ ಇದೇ ಕಾರಣಕ್ಕೆ ಗರ್ಭವತಿಯರು ಹೆಚ್ಚು ಹೆಚ್ಚಾಗಿ ಮೊಟ್ಟೆಗಳನ್ನು ಸೇವಿಸಲು ಸಲಹೆ ಮಾಡಲಾಗುತ್ತದೆ

 ೫.ಮೊಟ್ಟೆಯಲ್ಲಿ ವಿಟಮಿನ್ ಬಿ12 ಹೇರಳವಾಗಿರುವುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

೬.ತೂಕವನ್ನು ನಿಯಂತ್ರಿಸಲು ಬಯಸಿದರೆ, ಖಂಡಿತವಾಗಿಯೂ ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿ. ಮೊಟ್ಟೆಗಳಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳಿವೆ, ಮೊಟ್ಟೆಗಳನ್ನು ತಿನ್ನುವುದರಿಂದ ಉತ್ತಮ ಕೊಲೆಸ್ಟ್ರಾಲ್ ಕೂಡ ಹೆಚ್ಚಾಗುತ್ತದೆ. 

೭.ಗರ್ಭಿಣಿಯರು ಮೊಟ್ಟೆ ತಿನ್ನುವುದರಿಂದ ಗರ್ಭದಲ್ಲಿರುವ ಶಿಶುವಿಗೆ ಪೋಷಕಾಂಶ ಹಾಗೂ ಖನಿಜಾಂಶ ಪೂರೈಕೆಯಾಗಿ ಆರೋಗ್ಯಯುತವಾಗಿ ಬೆಳೆಯಲು ಸಹಾಯವಾಗುತ್ತದೆ.

೮.ಮೊಟ್ಟೆಗಳಲ್ಲಿ ಕೋಲಿನ್ ಅಂಶ ಕಂಡುಬರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕುದಿಸಿ ತಿಂದರೆ ಅದರಲ್ಲಿ ಇರುವ ವಿಟಮಿನ್ ಗಳು ಮಿದುಳುಗಳನ್ನು ಸಕ್ರಿಯಗೊಳಿಸಿ ಮಾನಸಿಕ ಒತ್ತಡವನ್ನು ನಿವಾರಿಸುತ್ತದೆ. ಮಕ್ಕಳು ಪ್ರತಿದಿನ ಬೇಯಿಸಿದ ಮೊಟ್ಟೆಗಳನ್ನು ಸೇವಿಸಿದರೆ ವೇಗವಾಗಿ ಸ್ಮರಣೆ ಶಕ್ತಿಯನ್ನು ಹೊಂದಿರುತ್ತಾರೆ. 

೯.ತೀವ್ರ ನಿಶಕ್ತತೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ಮೊಟ್ಟೆ ತಿನ್ನುವುದರಿಂದ ಸದೃಢರಾಗಿ ಆರೋಗ್ಯಯುತ ದೇಹ ಹೊಂದಬಹುದು.

೧೦.ಮೊಟ್ಟೆಗಳಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಡಿ ಇದ್ದು ಮೊಟ್ಟೆಗಳನ್ನು ಆಹಾರದಲ್ಲಿ ಸೇವಿಸಿದ ಬಳಿಕ ಸೂರ್ಯನ ಬೆಳಕಿನಲ್ಲಿ ಅಡ್ಡಾಡುವ ಮೂಲಕ ದೇಹದ ಅಗತ್ಯದ ವಿಟಮಿನ್ ಡಿ ಪಡೆಯಲು ಸಾಧ್ಯವಾಗುತ್ತದೆ. ಒಂದು ವೇಳೆ ನಿಮಗೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದು ಸಾಧ್ಯವಾಗದೇ ಹೋದರೂ ಮೊಟ್ಟೆಯಲ್ಲಿರುವ ನೈಸರ್ಗಿಕ ವಿಟಮಿನ್ ಡಿ ದೇಹದಲ್ಲಿ ಈ ಪೋಷಕಾಂಶದ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ

೧೧.ಮೊಟ್ಟೆಯಲ್ಲಿ ಅಗತ್ಯವಾಗಿರುವ ವಿಟಮಿನ್ ಹಾಗೂ ಮಿನರಲ್ಸ್ ಇರುವುದರಿಂದ ಮಿದುಳು ಬೆಳೆಯಲು ಸಹಕರಿಸಿ ಬುದ್ದಿವಂತರನ್ನಾಗಿಸುತ್ತದೆ.

೧೨.ಪ್ರತಿದಿನ ಒಂದು ಮೊಟ್ಟೆ ತಿನ್ನುವುದರಿಂದ ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.

೧೩.ಪ್ರತಿದಿನ ಒಂದು ಮೊಟ್ಟೆ ತಿನ್ನುವುದರಿಂದ ಹೃದಯದ ಸ್ವಾಸ್ಥ್ಯ ಹೆಚ್ಚುತ್ತದೆ.

೧೪.ವಾರಕ್ಕೊಮ್ಮೆ ಮೊಟ್ಟೆಯ ಬಿಳಿ ಭಾಗವನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಮಂದವಾಗಿ ಆಕರ್ಷಕವಾಗಿ ಕಾಣುತ್ತದೆ.

೧೫.ಬೇಯಿಸಿದ ಮೊಟ್ಟೆಯಲ್ಲಿರುವ ವಿಟಮಿನ್ ಡಿ ಹಾಗೂ ಇತರ ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟುಗಳು ಇರುತ್ತದೆ. ಇದರಿಂದಾಗಿ ಉಗುರುಗಳ ಉತ್ತಮ ಬೆಳವಣಿಗೆ ಹಾಗೂ ಆರೋಗ್ಯಕರವಾಗಿರಲು ನೆರವಾಗುತ್ತವೆ.

೧೬. ಬೆಳಗ್ಗೆ ಒಂದು ಅಥವಾ ಎರಡು ಮೊಟ್ಟೆಯ ಬಿಳಿಭಾಗವನ್ನು ತಿಂದರೆ ಅದು ದಿನಪೂರ್ತಿ ಚಟುವಟಿಕೆಯಿಂದ ಕೆಲಸ ಮಾಡಲು ದೇಹಕ್ಕೆ ಚೈತನ್ಯ ತುಂಬುತ್ತದೆ.

೧೭.ಸರಿಯಾಗಿ  ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ರಕ್ತ ಹೆಪ್ಪುಗಟ್ಟುವುದನ್ನು ತಡೆಯಬಹುದು.

೧೮.ವಾರಕ್ಕೊಂದಾದರೂ ಬೇಯಿಸಿದ ಮೊಟ್ಟೆಯನ್ನು ಸೇವಿಸುವ ಮೂಲಕ ಸ್ತನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗಿಸಬಹುದು. 

೧೯.ಮೊಟ್ಟೆಯ ಬಿಳಿಯನ್ನು ಮುಖಕ್ಕೆ ಲೇಪಿಸಿ, ಒಣಗಿದ ನಂತರ ತಂಪಾದ ನೀರಿನಿಂದ ತೊಳೆದರೆ, ಮುಖದ ಮೇಲಿನ ಕಲೆಗಳು, ನೆರಿಗೆಗಳು ಕಡಿಮೆಯಾಗುತ್ತವೆ. ಫೇಶಿಯಲ್ ರೀತಿ ಕೆಲಸ ಮಾಡುತ್ತದೆ.

೨೦.ಶೀತಕ್ಕೆ ಬೇಯಿಸಿದ ಮೊಟ್ಟೆ ತಿನ್ನುವುದು ಒಳ್ಳೆಯದು.

 ಆದರೆ ಮೊಟ್ಟೆಯು ಕೊಬ್ಬನ್ನು ಹೊಂದಿದೆ ಮತ್ತು ಇದರಲ್ಲಿ ಕೊಲೆಸ್ಟ್ರಾಲ್ ಕೂಡ ಇದೆ ಎಂದು ಹೆಚ್ಚಿನವರು ಭಾಗಿಸುವರು. ಆದರೆ ಮೊಟ್ಟೆಯಲ್ಲಿ ಇರುವಂತಹ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕೇವಲ ಕೊಲೆಸ್ಟ್ರಾಲ್ ಗೆ ಸೂಕ್ಷ್ಮವಾಗಿ ಇರುವಂತಹ ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಮಾತ್ರ ಹಾನಿಕರ.

ಧನ್ಯವಾದಗಳು.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

GIPHY App Key not set. Please check settings

ಪುನೀತ್ ರಾಜ್‍ಕುಮಾರ್

ನಿನ್ನನು ಪಡೆದ ನಾವೇ ಪುನೀತರು, ಪುನೀತ್ ರಾಜಕುಮಾರ

ಅಗಸ್ತ್ಯ ಮುನಿ

ಅಗಸ್ತ್ಯ ಮುನಿಗಳ ಬಗ್ಗೆ ಏಷ್ಟು ಮಂದಿಗೆ ಗೊತ್ತು?