in

ನಿಮಗೂ ಕೂದಲು ಉದುರುತ್ತಿದೆಯಾ? ಇಲ್ಲಿದೆ ಕೂದಲು ಉದುರುವಿಕೆಗೆ ಸುಲಭ ಪರಿಹಾರ

ನಿಮಗೂ ಕೂದಲು ಉದುರುತ್ತಿದೆಯಾ? ಇಲ್ಲಿದೆ ಕೂದಲು ಉದುರುವಿಕೆಗೆ ಸುಲಭ ಪರಿಹಾರ

ನಾವು ಕೂದಲಿನ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತೇವೆ. ಉದ್ದವಾದ ಸ್ಟ್ರೈಟ್ ಹಾಗೂ ಸಿಲ್ಕಿ ಕೂದಲು ಇರಬೇಕು ಎಂದು ಕೆಲವು ಹೆಣ್ಣುಮಕ್ಕಳು ಇಷ್ಟಪಟ್ಟರೆ ಇನ್ನೂ ಕೆಲವರಿಗೆ ಬಹಳ ಉದ್ದ ಕೂದಲು ಇಲ್ಲದಿದ್ದರೂ ಪರವಾಗಿಲ್ಲ ದಪ್ಪ ಕೂದಲು ಇರಬೇಕು ಎಂದು ಇಷ್ಟಪಡುತ್ತಾರೆ. ನಾವು ಬಯಸುವಂತೆ ಕೂದಲು ಸಿಕ್ಕಿದರೂ ಕೂಡಾ ಅದನ್ನು ಹಾಗೆಯೇ ಉಳಿಸಿಕೊಳ್ಳುವುದು ಒಂದು ಸವಾಲು. ಡ್ಯಾಂಡ್ರಫ್ ನಿಂದ ತಲೆ ತುರಿಕೆ ಹಾಗು ಕಿರಿಕಿರಿ ಒಂದು ಕಡೆಯಾದರೆ ಕೂದಲು ಬಾಚಿದಾಗಲೆಲ್ಲಾ ಮುಷ್ಟಿಯಷ್ಟು ಉದುರು ಕೂದಲಿನ ಸಮಸ್ಯೆ ಇನ್ನೊಂದು ಕಡೆ.
ಕೂದಲು ಉದುರುವಿಕೆಗೆ ಹಲವು ಕಾರಣಗಳಿವೆ. ಆದರೆ ನಾವು ಅಂಗಡಿಯಲ್ಲಿ ಸಿಗುವ ಎಲ್ಲಾ ಶ್ಯಾಂಪೂ, ಹೇರ್ ಆಯಿಲ್ಗಳನ್ನು ಬಳಸಿರುತ್ತೇವೆ. ಆದರೆ ಕೆಲವು ಬಾರಿ ನಾವು ನಮ್ಮ ಮನೆಯಲ್ಲಿ ಇರುವ ಮನೆ ಮದ್ದುಗಳನ್ನು ಬಳಸುವುದರಿಂದ ಈ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಕೂದಲು ಉದುರುವ ಸಮಸ್ಯೆಗೆ ಪರಿಹಾರ ನಿಮ್ಮ ಮನೆಯ ಹಿತ್ತಲಿನಲ್ಲೇ ಇದೆ.
ಕೂದಲು ಉದುರಲು ಪ್ರಾರಂಭಿಸಿದರೆ ದುಬಾರಿ ಪಾರ್ಲರ್ ಗೆ ಹೋಗುವ ಬದಲು ಅದರ ಬಗ್ಗೆ ನಾವೇ ಸ್ವಲ್ಪ ಗಮನ ಹರಿಸಿದರೆ ಸಾಕು ಕೂದಲು ಉದುರುವುದನ್ನು ತಡೆಗಟ್ಟಬಹುದು. ಕೂದಲು ಉದುರುವುದನ್ನು ತಡೆಯಲು ಚಿಕಿತ್ಸೆ ಮಾಡುವ ಮುನ್ನ ಯಾವ ಕಾರಣದಿಂದ ಉದುರುತ್ತಿದೆ ಎಂದು ತಿಳಿದುಕೊಂಡರೆ, ಕೂದಲು ಉದುರುವುದನ್ನು ಸಾಕಷ್ಟು ತಡೆಗಟ್ಟಬಹುದು.

ಕೂದಲು ಉದುರುವಿಕೆಗೆ ಪ್ರಮುಖ ಕಾರಣಗಳು :

ನಿಮಗೂ ಕೂದಲು ಉದುರುತ್ತಿದೆಯಾ? ಇಲ್ಲಿದೆ ಕೂದಲು ಉದುರುವಿಕೆಗೆ ಸುಲಭ ಪರಿಹಾರ


1.ಪರಿಸರ ಮಾಲಿನ್ಯ, ಆಹಾರಕ್ರಮ, ಒತ್ತಡ, ಇವೆಲ್ಲಾ ಕೂದಲು ಉದುರಲು ಪ್ರಮುಖ ಕಾರಣಗಳಾಗಿವೆ.

  1. ಬಹಳಷ್ಟು ಮಂದಿ ಒತ್ತಡಕ್ಕೆ ಒಳಗಾಗುತ್ತಿರುವುದರಿಂದ ಅವರ ತಲೆಯ ಕೂದಲು ಉದುರುತ್ತಿದೆ, ಆದರೆ ಕೂದಲು ಉದುರುವಿಕೆಗೆ ಒತ್ತಡ ಒಂದೇ ಕಾರಣ ಎಂಬುದಾಗಿ ಹೇಳಲು ಆಗದು.
  2. ಶರೀರದ ಹಾರ್ಮೋನ್ ಗಳ ಪ್ರಮಾಣ ಏರುಪೇರಾಗುತ್ತಲೇ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಗರ್ಭಿಣಿ ಹಾಗೂ ಬಾಣಂತಿ ಆಗಿದ್ದಾಗ ಕೂದಲು ಹೆಚ್ಚಾಗಿ ಉದುರುತ್ತದೆ.
  3. ಥೈರಾಯಿಡ್ ಏರುಪೇರಾದಾಗ, ಮುಟ್ಟಾದಾಗ ಹಾಗೂ ಇತರ ಹಾರ್ಮೋನ್ ಬದಲಾವಣೆಗೆ ಸಂಬಂಧಿಸಿದಂತೆ ಕೂದಲು ಉದುರುವಿಕೆಗೆ ಕಾರಣಗಳು ಇರಬಹುದು.
  4. ಶ್ಯಾಂಪೂ, ಕಂಡೀಷನರ್ ಹಾಗೂ ತಲೆಗೆ ಬಳಸುವ ಕೂದಲೆಣ್ಣೆಗಳೂ ಕೂಡ ಇಂದು ರಾಸಾಯನ ಮಿಶ್ರಣಗಳಿಂದ ಕೂಡಿದ್ದು ನಿಮ್ಮ ಕೂದಲು ಉದುರುವುದಕ್ಕೆ ಕಾರಣವಾಗಬಹುದು.
  5. ಸದಾ ಜಂಕ್ ಫುಡ್ ಅನ್ನೇ ಸೇವಿಸುವುದರಿಂದ ಶರೀರದಲ್ಲಿ ಪೌಷ್ಠಿಕಾಂಶದ ಕೊರತೆಯುಂಟಾಗಿ ತಲೆ ಕೂದಲು ಉದುರುವಿಕೆಗೆ ಕಾರಣವಾಗಬಹುದು.
  6. ನೀವು ಸರಿಯಾಗಿ ನಿದ್ರಿಸುತ್ತಿಲ್ಲ ಎನ್ನುವುದನ್ನು ನಿಮ್ಮ ಕಣ್ಣಿನ ಕೆಳಗಿರುವ ಕಪ್ಪು ವೃತ್ತ ಹಾಗೂ ಉದುರುತ್ತಿರುವ ಕೂದಲು ತೋರಿಸುತ್ತದೆ.
  7. ಔಷಧಿಗಳನ್ನು ಹೆಚ್ಚಾಗಿ ಬಳಸುವುದಿರಂದ ಅಥವಾ ಕೀಮೋ ಥೆರಪಿಯಂಥಹ ಚಿಕಿತ್ಸೆ ಮುಂತಾದವು ಕೂದಲು ಉದುರುವಿಕೆಗೆ ಕಾರಣವಾಗಿದ್ದು ಇದರಿಂದ ಬೊಕ್ಕ ತಲೆ ಸಮಸ್ಯೆ ಕಂಡು ಬರುವುದು.

ಕೂದಲು ಉದುರುವಿಕೆಗೆ ಮನೆಯಿಂದಲೇ ಸುಲಭ ಪರಿಹಾರ :

ನಿಮಗೂ ಕೂದಲು ಉದುರುತ್ತಿದೆಯಾ? ಇಲ್ಲಿದೆ ಕೂದಲು ಉದುರುವಿಕೆಗೆ ಸುಲಭ ಪರಿಹಾರ

ಈರುಳ್ಳಿ :
ಕೂದಲು ಉದುರುವಿಕೆ ತಡೆಯಲು ಈರುಳ್ಳಿ ಪರಿಣಾಮಕಾರಿ ಮನೆಮದ್ದು. ಕೂದಲಿನ ಬೆಳವಣಿಗೆಗೂ ಇವುಗಳು ಸಹಕಾರಿ, ಈರುಳ್ಳಿಯನ್ನು ಹೀಗೆ ಬಳಸಿ ಕೂದಲು ಉದುರುವುದನ್ನು ತಡೆಗಟ್ಟಿ. ತಲೆಗೆ ಶ್ಯಾಂಪೂ ಬಳಸಿ ಸ್ನಾನ ಮಾಡಿದ ಬಳಿಕ ಕೊನೆಯಲ್ಲಿ ಬಿಸಿನೀರಿಗೆ ಈರುಳ್ಳಿ ರಸ ಹಾಕಿ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿ ಮಾಡುತ್ತಾ ಬಂದರೆ ಕೂದಲು ಉದುರುವ ಸಮಸ್ಯೆ ಬಹುಬೇಗ ಕಡಿಮೆಯಾಗುತ್ತದೆ.


ಎಣ್ಣೆ ಮಸಾಜ್ :
ಕೂದಲು ಉದುರುವುದನ್ನು ತಡೆಗಟ್ಟುವಲ್ಲಿ ಎಣ್ಣೆ ಮಸಾಜ್ ಕೂಡ ಸಹಕಾರಿ. ತೆಂಗಿನೆಣ್ಣೆಯನ್ನು ಬಿಸಿ ಮಾಡಿ, ಅದು ಉಗುರು ಬೆಚ್ಚಗೆ ಇರುವಾಗ ಮೆಲ್ಲನೆ ಕೈಯಲ್ಲಿ ತೆಗೆದುಕೊಂಡು ತಲೆಕೂದಲಿನ ಬುಡಕ್ಕೆ ಹಚ್ಚಿ ಮೆಲ್ಲನೆ ಮಸಾಜ್ ಮಾಡಿ, ಹೀಗೆ ಮಾಡುವುದರಿಂದ ರಕ್ತ ಸಂಚಾರ ಹೆಚ್ಚುವುದು, ನಂತರ ಒಂದು ಟವಲ್ ಅನ್ನು ಬಿಸಿ ನೀರಿನಲ್ಲಿ ಅದ್ದಿ, ಹಿಂಡಿ ನಂತರ ತಲೆಗೆ ಸುತ್ತಿ. ಹೀಗೆ ಮಾಡುವುದರಿಂದ ಕೂದಲಿನ ಬುಡ ಎಣ್ಣೆಯನ್ನು ಹೀರಿಕೊಂಡು ಬಲವಾಗುತ್ತದೆ ಹಾಗೂ ಕೂದಲು ಉದುರುವುದು ಕಡಿಮೆಯಾಗಿ ಸೊಂಪಾಗಿ ಬೆಳೆಯುವುದು.


ರೋಸ್ಮರಿ ಎಣ್ಣೆ:
ರೋಸ್ಮರಿ ಎಣ್ಣೆಯು ಅಂಟಿ ಇನ್ಫ್ಲಾಮೇಟರಿ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ರಕ್ತಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಆದ್ದರಿಂದ ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಲು ಇದು ನೈಸರ್ಗಿಕ ಆಯ್ಕೆಯಾಗಿದೆ. ನೀವು ಮಾಡಬೇಕಾಗಿರುವುದು ನಿಮ್ಮ ಅಂಗೈಯಲ್ಲಿ ಕೆಲವು ಹನಿ ರೋಸ್ಮರಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಪ್ರತಿ ರಾತ್ರಿ ತಲೆಗೆ ಹಚ್ಚಿ ಮಸಾಜ್ ಮಾಡಿ. ಜೊತೆಗೆ ರೋಸ್ಮರಿ ಎಣ್ಣೆಯನ್ನು ಹೊಂದಿರುವ ನೈಸರ್ಗಿಕ ಶ್ಯಾಂಪೂ ಬಳಸಿ.

ಲೋಳೆಸರ:
ಮನೆಯಲ್ಲಿ ಸುಲಭವಾಗಿ ಬೆಳೆಯುವ ಸಸ್ಯವು ನಿಮ್ಮ ಚರ್ಮಕ್ಕೆ ಪ್ರಯೋಜನಕಾರಿಯಾಗುವುದಲ್ಲದೆ ನಿಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಅಲೋವೆರಾ ಹಚ್ಚುವುದರಿಂದ ತಲೆಹೊಟ್ಟು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಮತ್ತು ನೆತ್ತಿಯ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ನಿಮ್ಮ ಆಯ್ಕೆಯ ಎಣ್ಣೆಯಲ್ಲಿ ನೀವು ಸ್ವಲ್ಪ ಅಲೋವೆರಾ ರಸವನ್ನು ಬೆರೆಸಬಹುದು.

ಮೊಟ್ಟೆಯ ಹಳದಿ:
ಮೊಟ್ಟೆಯ ಹಳದಿ ಲೋಳೆ ನಿಮ್ಮ ಕೂದಲಿಗೆ ಅದ್ಭುತಗಳನ್ನು ಮಾಡುತ್ತದೆ. ಅದು ಮಾತ್ರವಲ್ಲದೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಒಡೆದ ಮೊಟ್ಟೆಯನ್ನು ನಿಮ್ಮ ನೆತ್ತಿಯ ಮೇಲೆ ನೇರವಾಗಿ ಹಚ್ಚಬಹುದು. ಇಪ್ಪತ್ತು ನಿಮಿಷಗಳ ಬಳಿಕ ಅದನ್ನು ತಣ್ಣೀರಿನಿಂದ ತೊಳೆಯಿರಿ. ನಿಮ್ಮ ಕೂದಲನ್ನು ಶ್ಯಾಂಪೂ ಮಾಡಲು ಮರೆಯಬೇಡಿ ಏಕೆಂದರೆ ಇದು ತೀವ್ರವಾದ ವಾಸನೆಯನ್ನು ಹೊಂದಿರುತ್ತದೆ. ಸಸ್ಯಾಹಾರಿಗಳಾದವರು ಮೊಸರು ಬಳಸಬಹುದು.

ಬೇವಿನ ಬಳಕೆ:

ಕೂದಲು ಉದುರುವುದು ಹಾಗೂ ತಲೆಹೊಟ್ಟಿನ ಸಮಸ್ಯೆಗೆ ಬೇವು ಅತ್ಯಂತ ಉತ್ತಮ ಆಯುರ್ವೇದ ಔಷಧಿ. ಇದನ್ನು ಕೂದಲ ಬುಡಕ್ಕೆ ಹಚ್ಚುವುದರಿಂದ ರಕ್ತಸಂಚಲನ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಬಾಲನೆರೆ, ಕೂದಲು ಉದುರಿ ತೆಳ್ಳಗಾಗುವುದನ್ನು ಇದು ತಪ್ಪಿಸುತ್ತದೆ. ನೀರಿನಲ್ಲಿ ಬೇವಿನ ಎಲೆ ಹಾಕಿ ಚೆನ್ನಾಗಿ ಕುದಿಸಿ ಅದರ ನೀರನ್ನು ಕೂದಲ ಬುಡಕ್ಕೆ ಹಚ್ಚಿ ಒಣಗಿದ ಮೇಲೆ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಅಲ್ಲದೇ ಕೂದಲ ಬೆಳವಣಿಗೆಯೂ ಹೆಚ್ಚುತ್ತದೆ.

What do you think?

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

ತೆಂಗಿನೆಣ್ಣೆಯ ಬಗ್ಗೆ ನಿಮಗೆ ತಿಳಿಯದ ವಿಷಯ

ತೆಂಗಿನೆಣ್ಣೆಯ ಬಗ್ಗೆ ನಿಮಗೆ ತಿಳಿಯದ ವಿಷಯ

ನಿಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯವನ್ನು ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ನಿಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯವನ್ನು ಸೇವಿಸೋದ್ರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ